Asianet Suvarna News Asianet Suvarna News

Election Result 2022 ಬಿಜೆಪಿ ಬಾಪ್‌, ಪಂಜಾಬ್‌ಗೆ ಆಪ್‌

ಉತ್ತರ ಪ್ರದೇಶದಲ್ಲಿ ಕ್ಲಿಕ್ ಆದ ಮೋದಿ-ಯೋಗಿ ವರ್ಚಸ್ಸು

ಗೋವಾ, ಮಣಿಪುರದಲ್ಲೂ ಬಿಜೆಪಿ ಅಧಿಕಾರಕ್ಕೆ

ಪೂರ್ಣ ಪ್ರಮಾಣದ ರಾಜ್ಯದಲ್ಲಿ ಅಧಿಕಾರ ಹಿಡಿದ ಆಪ್

five state assembly election results uttar pradesh goa manipur uttarakhand punjab san
Author
Bengaluru, First Published Mar 11, 2022, 12:20 AM IST | Last Updated Mar 11, 2022, 12:59 AM IST

ನವದೆಹಲಿ (ಮಾ.10): ಜಿದ್ದಾಜಿದ್ದಿಯಿಂದ ಕೂಡಿದ್ದ ಹಾಗೂ ಲೋಕಸಭೆ ಚುನಾವಣೆಯ ಸೆಮಿಫೈನಲ್‌ನಂತೆ ಬಿಂಬಿತವಾಗಿದ್ದ ಪಂಚರಾಜ್ಯ ವಿಧಾನಸಭೆ ಚುನಾವಣೆಯಲ್ಲಿ (Five State Assembly Election) ಬಿಜೆಪಿ (BJP) ಭರ್ಜರಿ ಜಯಭೇರಿ ಬಾರಿಸಿದೆ. ಚುನಾವಣೆ ಎದುರಿಸಿದ 5 ರಾಜ್ಯಗಳ ಪೈಕಿ ಉತ್ತರಪ್ರದೇಶ (Uttar Pradesh), ಉತ್ತರಾಖಂಡ (Uttarakhand), ಮಣಿಪುರ (Manipu) ಹಾಗೂ ಗೋವಾದಲ್ಲಿ (Goa) ಐದು ವರ್ಷಗಳಿಂದ ಅಧಿಕಾರದಲ್ಲಿದ್ದ ಬಿಜೆಪಿ, ಆಡಳಿತ ವಿರೋಧಿ ಅಲೆಯನ್ನು ಮೆಟ್ಟಿನಿಂತು ಆ ನಾಲ್ಕೂ ರಾಜ್ಯಗಳಲ್ಲೂ ವಿಜಯ ಪತಾಕೆ ಹಾರಿಸಿದೆ. ಇದರೊಂದಿಗೆ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ( Prime Minister Narendra Modi) ಹಾಗೂ ಬಿಜೆಪಿಯ ಹವಾ ಇನ್ನೂ ಇದೆ ಎಂಬುದು ಸ್ಪಷ್ಟವಾಗಿ ಸಾಬೀತಾಗಿದೆ.

ಎರಡು ಪಕ್ಷಗಳ ಆಡುಂಬೊಲವಾಗಿದ್ದ ಪಂಜಾಬ್‌ನಲ್ಲಿ (Punjab ) ಪರಾರ‍ಯಯ ಶಕ್ತಿಯಾಗಿ ಆಮ್‌ ಆದ್ಮಿ ಪಕ್ಷ (ಆಪ್‌) ಭರ್ಜರಿಯಾಗಿ ಉದಯಿಸಿದ್ದು, ಐತಿಹಾಸಿಕ ದಿಗ್ವಿಜಯ ಸಾಧಿಸಿ ಗದ್ದುಗೆಗೆ ಏರಿದೆ. ಪರಂಪರಾಗತ ಎದುರಾಳಿಗಳಾದ ಕಾಂಗ್ರೆಸ್‌ ( Congress ) ಹಾಗೂ ಅಕಾಲಿ ದಳ ( Akali Dal )ಎರಡಕ್ಕೂ ಮಣ್ಣು ಮುಕ್ಕಿಸಿದೆ. ದೆಹಲಿಯಂತಹ (Dehli) ಮಹಾನಗರಕ್ಕೆ ಸೀಮಿತವಾಗಿದ್ದ ಆಪ್‌ (Aam Admi Party), ಇದೇ ಮೊದಲ ಬಾರಿಗೆ ಪೂರ್ಣ ಪ್ರಮಾಣದ ರಾಜ್ಯವೊಂದರಲ್ಲಿ ಭಾರಿ ಬಹುಮತದೊಂದಿಗೆ ಅಧಿಕಾರಕ್ಕೇರಿದೆ.

4 ಕಡೆ ಬಿಜೆಪಿ ದಿಗ್ವಿಜಯ: ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ನೀಡಿದ್ದ ಪ್ರಬಲ ಸ್ಪರ್ಧೆ ಮೆಟ್ಟಿನಿಂತ ಬಿಜೆಪಿ ಸತತ 2ನೇ ಬಾರಿ ಅಧಿಕಾರಕ್ಕೆ ಬಂದಿದೆ. ಕಳೆದ 35 ವರ್ಷಗಳಲ್ಲಿ ಮತ್ತೊಂದು ಅವಧಿಗೆ ಪುನರಾಯ್ಕೆಯಾದ ಮೊದಲ ಪಕ್ಷ ಎಂಬ ದಾಖಲೆ ಬರೆದಿದೆ. ಉತ್ತರಪ್ರದೇಶದಲ್ಲಿ ಗೆದ್ದವರು ಲೋಕಸಭೆ ( Loksabha ) ಚುನಾವಣೆಯಲ್ಲೂ ಗೆಲ್ಲುತ್ತಾರೆ ಎಂಬ ಮಾತಿದೆ. ಇದಕ್ಕೆ ಪೂರಕವಾಗಿಯೇ ಈಗ ಈ ವಿದ್ಯಮಾನ ನಡೆದಿದ್ದು, ಉತ್ತರಪ್ರದೇಶದ ವಾರಾಣಸಿಯಿಂದ ( Varanasi ) ಸಂಸದರಾಗಿರುವ ಹಾಗೂ 2024ರ ಮಹಾಚುನಾವಣೆ ( 2024 Loksabha Election) ಮೇಲೆ ಕಣ್ಣಿಟ್ಟಿರುವ ಪ್ರಧಾನಿ ನರೇಂದ್ರ ಮೋದಿ ಪಾಲಿಗೆ ಇದು ಮಹತ್ವದ ಯಶಸ್ಸಾಗಿದೆ. ಅಂತೆಯೇ ಹಾಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರ ವರ್ಚಸ್ಸು ಭಾರೀ ಪ್ರಮಾಣದಲ್ಲಿ ಹೆಚ್ಚಿದೆ.

ಉತ್ತರಾಖಂಡದಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಆಗಬಹುದು ಎಂಬ ಸಮೀಕ್ಷೆಗಳು ಹಾಗೂ ಊಹಾಪೋಹ ಸುಳ್ಳಾಗಿವೆ. ಸ್ವತಃ ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ ( Pushkar Singh Dhami ) ಸೋತರೂ 50ರ ಸನಿಹಕ್ಕೆ ಬಿಜೆಪಿ ಸೀಟು ಗಳಿಸಿದ್ದು, ಕಾಂಗ್ರೆಸ್ಸನ್ನು ಮಣ್ಣು ಮುಕ್ಕಿಸಿದೆ ಹಾಗೂ ಸತತ 2ನೇ ಬಾರಿ ಅಧಿಕಾರಕ್ಕೆ ಬಂದಿದೆ. ಉತ್ತರಾಖಂಡ ಇತಿಹಾಸದಲ್ಲೇ ಒಂದು ಪಕ್ಷ ಪುನರಾಯ್ಕೆಯಾಗಿದ್ದು ಇದೇ ಮೊದಲು.

News Hour ಪಂಚರಾಜ್ಯದ ಮಹಾತೀರ್ಪು, ಉತ್ತರಪ್ರದೇಶದಲ್ಲಿ ಬಿಜೆಪಿ ಬಲಿಷ್ಠ, ಪಂಜಾಬ್ ನಲ್ಲಿ ಕಾಂಗ್ರೆಸ್ ಧೂಳಿಪಟ!
ಇದೇ ರೀತಿ ಮಣಿಪುರದಲ್ಲಿ ಕೂಡ ನಿರೀಕ್ಷೆಯಂತೆ ಬಿಜೆಪಿ ಸರಳ ಬಹುಮತ ಪಡೆದು ಸತತ 2ನೇ ಬಾರಿ ಅಧಿಕಾರಕ್ಕೆ ಬಂದಿದೆ. ಕಳೆದ ಸಲ ಹೆಚ್ಚು ಸ್ಥಾನ ಪಡೆದರೂ ಅಧಿಕಾರ ವಂಚಿತವಾಗಿದ್ದ ಕಾಂಗ್ರೆಸ್‌ ಈ ಬಾರಿ ಇನ್ನಷ್ಟುಪ್ರಪಾತಕ್ಕೆ ಬಿದ್ದಿದೆ.

UP Elections 2022: ನವಾಬ್ VS ಅವಾಮ್ ಫೈಟ್ ನಲ್ಲಿ ಗೆದ್ದ ಅಜಂ!
ಗೋವಾದಲ್ಲಿ ಬಿಜೆಪಿ ಬಹುಮತದ ಅಂಚಿಗೆ ಬಂದು ನಿಲ್ಲಬಹುದು ಎಂಬ ಸಮೀಕ್ಷೆಗಳ ಅಂದಾಜು ನಿಜವಾಗಿದ್ದು, ಕೊಂಚ ಪ್ರಯಾಸಪಟ್ಟರೂ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಬಹುಮತಕ್ಕೆ ಕೇವಲ 1 ಸ್ಥಾನ ಕೊರತೆ ಇದ್ದು, ಬಿಜೆಪಿಗೆ ಮೂವರು ಪಕ್ಷೇತರರು ಹಾಗೂ ಇಬ್ಬರು ಎಂಜಿಪಿ ಶಾಸಕರು ಬೆಂಬಲ ಪ್ರಕಟಿಸಿದ್ದಾರೆ. ಇದರಿಂದಾಗಿ ಬಿಜೆಪಿ ಹ್ಯಾಟ್ರಿಕ್‌ ಸರ್ಕಾರ ರಚಿಸಲು ಸಜ್ಜಾಗಿದೆ. ಆದರೆ ನೆಲೆಯೂರಲು ಯತ್ನಿಸಿದ್ದ ತೃಣಮೂಲ ಕಾಂಗ್ರೆಸ್‌ ಶೂನ್ಯ ಸಂಪಾದನೆ ಮಾಡಿದೆ. ಬಿಜೆಪಿ ಮಣಿಸಲು ಯತ್ನಿಸಿದ್ದ ಕಾಂಗ್ರೆಸ್‌ ಹಾಗೂ ಮಿತ್ರರು 12 ಸ್ಥಾನ ಮಾತ್ರ ಗಳಿಸಿದ್ದಾರೆ.

Latest Videos
Follow Us:
Download App:
  • android
  • ios