'ಮುಂದಿನ ಸಭೆಯಲ್ಲಿ ಐದು ಗ್ಯಾರಂಟಿ ಜಾರಿ'

ನಮ್ಮ ಪಕ್ಷದ ಪ್ರಣಾಳಿಕೆಯಂತೆ 6 ಗ್ಯಾರಂಟಿಗಳನ್ನು ವಿಧಾನಸಭೆಯ ಮೊದಲ ಸಂಪುಟದ ಸಭೆæಯಲ್ಲಿ ತೀರ್ಮಾನಿಸಿದ್ದು, ಅವುಗಳನ್ನು ಮುಂದಿನ ಸಭೆಯಲ್ಲಿ ಜಾರಿಗೆ ತರುವ ಭರವಸೆ ಇದೆ: ಎಸ್‌.ಜಿ.ನಂಜಯ್ಯನಮಠ 

Five Guarantees will be implement in the Next Meeting Says SG Nanjyanamatha grg

ಬಾಗಲಕೋಟೆ(ಮೇ.23): ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಅಭೂತಪೂರ್ವ ಬಹುಮತ ನೀಡಿದ ಮತದಾರರಿಗೆ ಹಾಗೂ ಬಾಗಲಕೋಟೆ ಜಿಲ್ಲೆಯ ಐದು ಮತಕ್ಷೇತ್ರದಲ್ಲಿ ಪಕ್ಷದ ಗೆಲುವಿಗೆ ಶ್ರಮಿಸಿದ ಕಾರ್ಯಕರ್ತರಿಗೆ ಕೃತಜ್ಞತೆಗಳ ಸಲ್ಲಿಸುತ್ತೇನೆ ಎಂದು ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್‌ ಸಮಿತಿಯ ಅಧ್ಯಕ್ಷ ಎಸ್‌.ಜಿ.ನಂಜಯ್ಯನಮಠ ಹೇಳಿದರು.

ನವನಗರದ ಪತ್ರಿಕಾಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಪಕ್ಷದ ಪ್ರಣಾಳಿಕೆಯಂತೆ 6 ಗ್ಯಾರಂಟಿಗಳನ್ನು ವಿಧಾನಸಭೆಯ ಮೊದಲ ಸಂಪುಟದ ಸಭೆæಯಲ್ಲಿ ತೀರ್ಮಾನಿಸಿದ್ದು, ಅವುಗಳನ್ನು ಮುಂದಿನ ಸಭೆಯಲ್ಲಿ ಜಾರಿಗೆ ತರುವ ಭರವಸೆ ಇದೆ ಎಂದು ಹೇಳಿದರು.

ಗ್ಯಾರಂಟಿ ಬಗ್ಗೆ ಕಾಂಗ್ರೆಸ್‌ನಿಂದ ಜನರಿಗೆ ಮೋಸ: ಮಾಜಿ ಸಿಎಂ ಬೊಮ್ಮಾಯಿ

ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆæ.ಶಿವಕುಮಾರ ಸೇರಿದಂತೆ 8 ಸಚಿವರು ಯಾವುದೇ ನೆಪ ಹೇಳದೆ, ಜಂಟಿ ಸಮಿತಿ ಪರಿಶೀಲನೆ ಎಂಬ ನೆಪ ಹೇಳಿ ಮುಂದೂಡದೆ ಮೊದಲ ಸಂಪುಟ ಸಭೆಯಲ್ಲಿಯೇ ಚುನಾವಣಾ ಸಂದರ್ಭದಲ್ಲಿ ಜನರಿಗೆ ಭರವಸೆ ನೀಡಿದಂತೆ ಗ್ಯಾರಂಟಿಗಳನ್ನು ಜಾರಿಗೊಳಿಸಿದ್ದಕ್ಕಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದರು.

ವಾರದ ಒಳಗೆ ಮಂತ್ರಿ ಮಂಡಳ ರಚನೆ ಆಗುವ ಸಾಧ್ಯತೆ ಇದ್ದು, ಜೂನ್‌ 1 ರಿಂದ ಗ್ಯಾರಂಟಿಗಳು ಜನರಿಗೆ ತಲುಪಿಸುವ ವಿಶ್ವಾಸ ಹೊಂದಲಾಗಿದೆ. ಆ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ಮತಕ್ಷೇತ್ರದಲ್ಲಿ ಬ್ಲಾಕ್‌ ಮಟ್ಟದವರೆಗೆ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪಿಸಲು ಮನೆ ಮನೆಗೆ ಭೇಟಿ ನೀಡಲು ಯೋಚನೆ ಹೊಂದಲಾಗಿದೆ. ಆಯಾ ಕ್ಷೇತ್ರ ದಲ್ಲಿ ತಂಡಗಳನ್ನು ರಚನೆ ಮಾಡಿ ಪ್ರತಿಯೊಬ್ಬ ಫಲಾನು ಭವಿಗಳಿಗೆ ಯೋಜನೆ ತಲುಪಿ ಸುವ ಕಾರ್ಯ ಮಾಡಲಾ ಗುವುದು ಎಂದರು.

ಮುಂದಿನ ಸಂಪುಟದ ದಿನವೇ 5 ಗ್ಯಾರಂಟಿ ಜಾರಿ: ಸಿಎಂ ಸಿದ್ದರಾಮಯ್ಯ

ವಿಜಯರಥಯಾತ್ರೆ:

ಜಿಲ್ಲೆಯ ಎಲ್ಲ ಮತಕ್ಷೇತ್ರದಲ್ಲಿ ಬ್ಲಾಕ್‌ ಮಟ್ಟದವರೆಗೆ ಯೋಜನೆಗಳು ಅರ್ಹ ಫಲಾನು ಭವಿಗಳಿಗೆ ತಲುಪಿಸಲು ಮನೆ ಮನೆಗೆ ಭೇಟಿ ನೀಡಲು ಯೋಚನೆ ಹೊಂದಲಾಗಿದೆ. ಬಾಗಲಕೋಟೆ ಜಿಲ್ಲಾ ಕೇಂದ್ರದಿಂದ ವಿಜಯರಥಯಾತ್ರೆಯ ಮೂಲಕ ಜನ ಸಾಮಾನ್ಯರಿಗೆ ಸರ್ಕಾರದ ಯೋಜನೆಗಳನ್ನು ತಲುಪಸುವ ಪ್ರಯತ್ನ ಮಾಡುವುದಾಗಿ ತಿಳಿಸಿದರು.

ಜಿಲ್ಲೆಯಲ್ಲಿ 5 ಸ್ಥಾನವನ್ನು ಕಾಂಗ್ರೆಸ್‌ ಪಕ್ಷವು ಗೆದ್ದಿದ್ದು ಎಲ್ಲರೂ ಸಹ ಸಚಿವರಾಗುವ ಅರ್ಹತೆ ಉಳ್ಳವರಾಗಿದ್ದಾರೆ. ಯಾರಿಗೆ ಸಚಿವ ಸ್ಥಾನ ಕೊಟ್ಟರೂ ಉತ್ತಮ ಕಾರ್ಯ ನಿರ್ವಹಣೆ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿಯ ಭ್ರಷ್ಟಾಚಾರ ಹಾಗೂ ದುರಾಡಳಿತದಿಂದ ಜನರು ಬೇಸತ್ತಿದ್ದರು. ಕಾಂಗ್ರೆಸ್‌ ಪಕ್ಷವು ಚುನಾವಣಾ ಪ್ರಣಾಳಿಕೆಯಲ್ಲಿ ಗ್ಯಾರಂಟಿ ಕಾರ್ಡ್‌ಗಳ ಬಗ್ಗೆ ವಿಶ್ವಾಸವಿಟ್ಟು ಕಾಂಗ್ರೆಸ್‌ ಪಕ್ಷವನ್ನು ಅಭೂತಪೂರ್ವ ಜಯಗಳಿಸಿಕೊಟ್ಟಿದ್ದಾರೆ. ಜನರ ನಿರೀಕ್ಷೆ ಹುಸಿಯಾಗದಂತೆ ಕಾರ್ಯಕರ್ತರು, ಬ್ಲಾಕ್‌ ಅಧ್ಯಕ್ಷರು, ಮುಂಚೂಣಿ ಅಧ್ಯಕ್ಷರುಗಳು, ಜವಾಬ್ದಾರಿ ನಿಭಾಯಿಸಲಿದ್ದಾರೆಂದರು. ಸುದ್ದಿಗೋಷ್ಠಿಯಲ್ಲಿ ಮಹಿ ಳಾ ಘಟಕದ ಜಿಲ್ಲಾಧ್ಯಕ್ಷೆ ರಕ್ಷಿತಾ ಈಟಿ, ಸಿಕಂದರ್‌ ಅಥಣಿ, ಆನಂದ ಶಿಲ್ಪಿ, ರಜಾಕ್‌ ಇದ್ದರು.

Latest Videos
Follow Us:
Download App:
  • android
  • ios