Karnataka Politics: ನೈತಿಕತೆ ಇಲ್ಲದ ಬಿಜೆಪಿಗೆ ಸೋಲಿನ ಭೀತಿ; ಮಧು ಬಂಗಾರಪ್ಪ
ಮಾಜಿ ಮುಖ್ಯಮಂತ್ರಿ ದೇವರಾಜ ಅರಸು, ಎಸ್.ಬಂಗಾರಪ್ಪ ಹೆಸರು ಹೇಳುವ ನೈತಿಕತೆ ಇಲ್ಲದ ಬಿಜೆಪಿಗೆ ಮುಂಬರುವ ವಿಧಾನಸಭಾ ಚುನಾವಣೆ ಸೋಲಿನ ಭೀತಿಯಲ್ಲಿ ಹಿಂದುಳಿದ ವರ್ಗಗಳ ನಾಯಕರನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡಲು ಹೊರಟಿರುವುದು ಅವರ ದುಸ್ಥಿತಿಗೆ ಕಾರಣವಾಗಿದೆ ಎಂದು ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ ಲೇವಡಿ ಮಾಡಿದರು.
ಸೊರಬ (ನ.19) : ಮಾಜಿ ಮುಖ್ಯಮಂತ್ರಿ ದೇವರಾಜ ಅರಸು, ಎಸ್.ಬಂಗಾರಪ್ಪ ಹೆಸರು ಹೇಳುವ ನೈತಿಕತೆ ಇಲ್ಲದ ಬಿಜೆಪಿಗೆ ಮುಂಬರುವ ವಿಧಾನಸಭಾ ಚುನಾವಣೆ ಸೋಲಿನ ಭೀತಿಯಲ್ಲಿ ಹಿಂದುಳಿದ ವರ್ಗಗಳ ನಾಯಕರನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡಲು ಹೊರಟಿರುವುದು ಅವರ ದುಸ್ಥಿತಿಗೆ ಕಾರಣವಾಗಿದೆ ಎಂದು ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ ಲೇವಡಿ ಮಾಡಿದರು.
ತಾಲೂಕಿನ ಕುಬಟೂರು ಗ್ರಾಮದ ಬಂಗಾರ ನಿವಾಸ ಆವರಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಆಡಳಿತ ಪಕ್ಷದ ಒಬ್ಬ ಮುಖ್ಯಮಂತ್ರಿ ಕಾಂಗ್ರೆಸ್‌ನ ಹಿಂದುಳಿದ ವರ್ಗದ ಮಾಜಿ ಮುಖ್ಯಮಂತ್ರಿ ಹೆಸರು ಪ್ರಸ್ತಾವಿಸಿ, ಹಾಡಿ ಹೊಗಳಿರುವುದು ಬಿಜೆಪಿಯ ರಾಜಕೀಯ ದುಸ್ಥಿತಿಯನ್ನು ಜನರೆದುರು ಅನಾವರಣಗೊಳಿಸಿದೆ ಎಂದರು.
ಶರಾವತಿ ಮುಳುಗಡೆ ಸಂತ್ರಸ್ತರ ವಿಚಾರದಲ್ಲಿ ಕೈ-ಕಮಲ ರಾಜಕಾರಣ
ಕಾಂಗ್ರೆಸ್ ಪಕ್ಷ ಹಿಂದುಳಿದ ವರ್ಗ, ಎಸ್ಸಿ-ಎಸ್ಟಿ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದೆಯೆ ಹೊರತು ಯಾರನ್ನೂ ಬೆಳೆಸಲಿಲ್ಲ ಎಂದು ಇತ್ತೀಚೆಗೆ ಆನವಟ್ಟಿಯಲ್ಲಿ ನಡೆದ ಜನಸಂಕಲ್ಪ ಯಾತ್ರೆ ಸಂದರ್ಭದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಬಾಲಿಶ ಹೇಳಕೆ ನೀಡಿದ್ದಾರೆ. ಹಿಂದುಳಿದ ವರ್ಗದ ನಾಯಕರಾದ ದೇವರಾಜ ಅರಸು, ಎಸ್.ಬಂಗಾರಪ್ಪ ಮತ್ತು ವೀರಪ್ಪ ಮೊಯ್ಲಿ ಅವರನ್ನು ಮುಖ್ಯಮಂತ್ರಿ ಮಾಡಿದ್ದು ಕಾಂಗ್ರೆಸ್ ಪಕ್ಷವೇ ಹೊರತು ಬಿಜೆಪಿಯಲ್ಲ. ಈಗಿನ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ದಲಿತ ನಾಯಕರು ಎಂದು ಹೇಳಿದ ಅವರು, ಬಸವರಾಜ ಬೊಮ್ಮಾಯಿಯವರೇ ಬಿಜೆಪಿ ಪಕ್ಷದಿಂದ ಹಿಂದುಳಿದ ವರ್ಗದ ಹಾಗೂ ಎಸ್.ಸಿ/ಎಸ್.ಟಿ ಜನಾಂಗದ ಎಷ್ಟುಜನರಿಗೆ ಅಧಿಕಾರ ನೀಡಿ ಗೌರವಿಸಿದ್ದೀರಿ ಹೇಳಿ ಎಂದು ಪ್ರಶ್ನಿಸಿದರು.
ಬಿಜೆಪಿ ಪಕ್ಷದಿಂದ ಆನವಟ್ಟಿಯಲ್ಲಿ ಹಮ್ಮಿಕೊಂಡಿದ್ದ ಜನಸಂಕಲ್ಪ ಯಾತ್ರೆಯಲ್ಲಿ ಬರಿಯ ಖಾಲಿ ಕುರ್ಚಿಗಳು ಕಂಡಿವೆ. ಹಾಗಾಗಿ ಆನವಟ್ಟಿಯಲ್ಲಿ ನಡೆದದ್ದು ಜನಸಂಕಲ್ಪ ಯಾತ್ರೆ ಅಲ್ಲ, ಖಾಲಿ ಕುರ್ಚಿಗಳ ಯಾತ್ರೆಯಾಗಿತ್ತು. ಜನಸಾಮಾನ್ಯರ ಖಾಸಗಿ ಸ್ವತ್ತುಗಳ ವ್ಯವಹಾರದಲ್ಲೂ ಕೂಡ ಶಾಸಕರ ಪಿಎ ಮೂಗು ತೂರಿಸುತ್ತಿದ್ದು, ಶಾಸಕರು ತಮ್ಮ ಆಪ್ತ ಸಹಾಯಕನನ್ನು ಹದ್ದುಬಸ್ತಿನಲ್ಲಿ ಇಡದಿದ್ದರೆ ತಾಲೂಕಿನ ಜನತೆ ಬುದ್ಧಿ ಕಲಿಸುವ ದಿನಗಳು ದೂರ ಉಳಿದಿಲ್ಲ. ತಾವು ಕೂಡ ಜನತೆಯ ಪರವಾಗಿ ಕಾನೂನಾತ್ಮಕವಾಗಿ ಶಾಸಕರ ಪಿಎ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಕಾಂಗ್ರೆಸ್ ಸೋಲಿನ ಭಯದಿಂದ ಆರೋಪ ಮಾಡುತ್ತಿದೆ: ಯಡಿಯೂರಪ್ಪ ಕಿಡಿ
ಸಭೆಯಲ್ಲಿ ಆನವಟ್ಟಿಬ್ಲಾಕ್ ಅಧ್ಯಕ್ಷ ಆರ್.ಸಿ. ಪಾಟೀಲ್, ಜಿ.ಪಂ. ಮಾಜಿ ಸದಸ್ಯ ಶಿವಲಿಂಗೇಗೌಡ, ಮಾಜಿ ತಾ.ಪಂ. ಉಪಾಧ್ಯಕ್ಷ ಸುರೇಶ್ ಹಾವಣ್ಣನವರ್, ಎಸ್‌ಟಿ ಘಟಕ ಅಧ್ಯಕ್ಷ ಸಂಜೀವ ತರಕಾರಿ, ಯೂತ್ ಅಧ್ಯಕ್ಷ ಹಬಿಬುಲ್ಲಾ ಹವಾಲ್ದಾರ್, ವೀರೇಂದ್ರ ಪಾಟೀಲ್ ಜಡೆ ಮೊದಲಾದವರಿದ್ದರು.