Asianet Suvarna News Asianet Suvarna News

ಅಪ್ಪ-ಮಕ್ಕಳದ್ದು ಭ್ರಷ್ಟಾಚಾರ ಬಿಟ್ಟರೆ ಬೇರೇನೂ ಉದ್ಯೋಗ ಇಲ್ಲ : ಎಚ್‌ಡಿಕೆ ವಿರುದ್ಧ ಕಾಶೆಪ್ಪನವರ ಕಿಡಿ

ಅಪ್ಪ-ಮಕ್ಕಳದ್ದು ಭ್ರಷ್ಟಾಚಾರ ಬಿಟ್ಟರೆ ಬೇರೇನೂ ಉದ್ಯೋಗ ಇಲ್ಲ. ಜೆಡಿಎಸ್‌ ಅಪ್ಪ-ಮಗನ ಪಕ್ಷ. ಸುಮ್ಮನೆ ಆರೋಪ ಮಾಡುತ್ತಾರೆ ಎಂದು ಕಾಂಗ್ರೆಸ್‌ ಸರ್ಕಾರ ಈಗ ಶೇ.45 ಸರ್ಕಾರ ಎಂಬ ಕುಮಾರಸ್ವಾಮಿ ಆರೋಪಕ್ಕೆ ಶಾಸಕ ವಿಜಯಾನಂದ ಕಾಶಪ್ಪವನರ ಕಿಡಿಕಾರಿದರು.

Father and son have no job MLA Kasheppas rant against JDS family at bagalkote rav
Author
First Published Jun 15, 2023, 10:49 AM IST | Last Updated Jun 15, 2023, 10:49 AM IST

ಬಾಗಲಕೋಟೆ (ಜೂ.15) ಅಪ್ಪ-ಮಕ್ಕಳದ್ದು ಭ್ರಷ್ಟಾಚಾರ ಬಿಟ್ಟರೆ ಬೇರೇನೂ ಉದ್ಯೋಗ ಇಲ್ಲ. ಜೆಡಿಎಸ್‌ ಅಪ್ಪ-ಮಗನ ಪಕ್ಷ. ಸುಮ್ಮನೆ ಆರೋಪ ಮಾಡುತ್ತಾರೆ ಎಂದು ಕಾಂಗ್ರೆಸ್‌ ಸರ್ಕಾರ ಈಗ ಶೇ.45 ಸರ್ಕಾರ ಎಂಬ ಕುಮಾರಸ್ವಾಮಿ ಆರೋಪಕ್ಕೆ ಶಾಸಕ ವಿಜಯಾನಂದ ಕಾಶಪ್ಪವನರ ಕಿಡಿಕಾರಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರನು ರಾಜ್ಯದ ಜನ ಎಲ್ಲಿ ಕೂರಿಸಿದ್ದಾರೆ ಅನ್ನೋದನ್ನು ಅರ್ಥ ಮಾಡಿಕೊಳ್ಳಬೇಕು. ಬೇಜವಾಬ್ದಾರಿ ಮಾತು ಬರುತ್ತೆ ಅಂತ ಏನೇನೋ ಮಾತನಾಡಿದರು, ಜನರೇ ತಕ್ಕ ಉತ್ತರ ಕೊಟ್ಟಿದ್ದಾರೆ. 19 ಸೀಟು ಕೊಡುವ ಮೂಲಕ ಎಲ್ಲಿ ಕೂರಿಸಬೇಕೋ ಅಲ್ಲಿ ಕೂರಿಸಿದ್ದಾರೆ. ಹಿಂದೆ ಬಿಜೆಪಿ ಜೊತೆ ಎಷ್ಟುಸಾರಿ ಶಾಮೀಲಾಗಿದ್ದಾರೆ? ಎಷ್ಟುಕಡೆ ಅಭ್ಯರ್ಥಿ ಹಾಕಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಸೋಲಿಸಲು ಕೆಲಸ ಮಾಡಿಲ್ವ? ಅವಾಗ ನಾವು ಶಾಮೀಲಾದ್ವ? ಇವರೆಷ್ಟುಪರ್ಸೆಂಟೇಜ… ಕಮಿಷನ್‌ ಹೊಡೆದಿದ್ದಾರೆ ಕೇಳಿ, ಏನು ಸತ್ಯವಿದೆ ಕುಮಾರಸ್ವಾಮಿ ಹೇಳಲಿ. ಅದಕ್ಕೆ ಕುಮಾರಸ್ವಾಮಿ ಬೇಡವೇ ಬೇಡ ಅಂತ ಮೂಲೆಗೆ ಒಟ್ಟಿದ್ದಾರೆ. ಇನ್ನಾದರೂ ಅರ್ಥ ಮಾಡಿಕೊಂಡು, ತಪ್ಪು ಹೇಳಿಕೆ ನೀಡೋದು ಬಿಡಿ ಎಂದು ಹೇಳಿದರು.

ಕಾಂಗ್ರೆಸ್‌ ಆಡಳಿತದಲ್ಲಿ ಹೆಚ್ಚು ಅಭಿವೃದ್ಧಿ; ವಿಜಯಾನಂದ ಕಾಶೆಪ್ಪನವರ

ಪಠ್ಯ ಪುಸ್ತಕ ಮುಟ್ಟಿದ್ದೆ ಬಿಜೆಪಿ:

ಪಠ್ಯ ಪುಸ್ತಕ ಪರಿಷ್ಕರಣೆಗೆ ಬಿಜೆಪಿ ವಿರೋಧದ ವಿಚಾರವಾಗಿ ಮಾತನಾಡಿದ ಅವರು, ಪಠ್ಯ ಪುಸ್ತಕ ಮುಟ್ಟಿದ್ದೆ ಬಿಜೆಪಿ. ಈ ಹಿಂದೆ ಯಾವ ಸರ್ಕಾರ ಮುಟ್ಟಿತ್ತು? ಹಿಂದಿನ ಶಿಕ್ಷಣ ಸಚಿವ ನಾಗೇಶ ಅದೇ ಪಠ್ಯ ಪುಸ್ತಕ ಓದಿ ಪಾಸಾಗಿ ಸಚಿವರಾಗಿದ್ದನ್ನು ಮರೆತಿದ್ದಾರೆ. ಪಠ್ಯ ಪುಸ್ತಕ ಮುಟ್ಟಿದವ್ರು ಅವ್ರು (ಬಿಜೆಪಿ), ಅವ್ರು ತಪ್ಪು ಮಾಡಿದ್ದನ್ನು ಸರಿಪಡಿಸ್ತಿದೀವಿ ಅಷ್ಟೇ. ಇತಿಹಾಸ ತಿರುಚುವ ಕೆಲಸ ಮಾಡಿದ್ದಾರೆ. ಇತಿಹಾಸ ತಿರುಚ ಬೇಡ್ರಪ್ಪ, ಯಾರು ಈ ನಾಡಿಗಾಗಿ, ದೇಶಕ್ಕಾಗಿ ಸ್ಮರಿಸಿದ್ದಾರೆ, ದುಡಿದಿದ್ದಾರೆ ಅಂತವ್ರು ನಮ್ಮ ಮಕ್ಕಳಿಗೆ ಇತಿಹಾಸ ಹೇಳಬೇಕು. ಬಿಜೆಪಿಯವರಿಗೆ ಇತಿಹಾಸವೇ ಗೊತ್ತಿಲ್ಲ. ಇನ್ನು ಇತಿಹಾಸ ಹೇಗೆ ರಚಿಸ್ತಾರೆ? ಅದಕ್ಕೆ ಬಿಜೆಪಿಗರನ್ನು ಜನ ಮನೆಗೆ ಕಳುಹಿಸಿದ್ದಾರೆ ಎಂದರು.

ಹೊಯ್ಕೊಳ್ಳುವ ಕೆಲಸ ಬಿಜೆಪಿಗರದ್ದು:

ಐದು ಗ್ಯಾರಂಟಿಗಳು ಎಂಪಿ ಕಲೆಕ್ಷನ್‌ವರೆಗೆ ಎಂಬ ಬಿಜೆಪಿಗರ ಟೀಕೆಗೆ ಪ್ರತಿಕ್ರಿಯಿಸಿದ ಅವರು, ವಿರೋಧಿಗಳಿಗೆ ಮಾತನಾಡಲು ಅಸ್ತ್ರವೇ ಇಲ್ಲ. ಸರ್ಕಾರ ಬಂದು 15 ದಿನ ಆಗಿರಲಿಲ್ಲ ಎಲ್ಲಿ ಗ್ಯಾರಂಟಿ ಅಂತಾ ಹೊಯ್ಕೊಂಡರು. ಗ್ಯಾರಂಟಿಗಳನ್ನು ಕೊಟ್ಟಮೇಲೆ ಇದಕ್ಕೂ ಹೊಯ್ಕೊಳ್ಳೋದು, ಹೊಯ್ಕೊಳ್ಳುವ ಕೆಲಸ ಬಿಜೆಪಿಗರದ್ದು, ನಾವು ಕೆಲಸ ಮಾಡುವವರು, ಜನರಿಗೆ ಕೊಟ್ಟಮಾತಿನಂತೆ ಕೆಲಸ ಮಾಡೋರು ಎಂದು ಹೇಳಿದರು.

ಲೋಕಸಭೆ ಚುನಾವಣೆಗೆ ಕಾಶಪ್ಪನವರ ಕುಟುಂಬದಿಂದ ಭರ್ಜರಿ ತಯಾರಿ ನಡೆದಿದೆ ಎಂಬ ಪ್ರಶ್ನೆ ಉತ್ತರಿಸಿದ ಪ್ರತಿಕ್ರಿಯಿಸಿದ ಅವರು, ನೋಡೋಣ ಅದನ್ನು ಪಕ್ಷ ನಿರ್ಧಾರ ಮಾಡುತ್ತದೆ. ಯಾರು ಅಭ್ಯರ್ಥಿ ಆಗ್ತಾರೆ ಅನ್ನೋದನ್ನು ನಾನು ಹೇಳೋಕೆ ಆಗಲ್ಲ. ಅವರವರ ಭಾವಕ್ಕೆ, ಅವರವರ ಭಕುತಿಗೆ ಅಷ್ಟೇ ಎಂದು ಹೇಳಿದರು.

ನದಿಯ ನೀರು ಹೆಚ್ಚಾಗಲಿದ್ದು ಸುರಕ್ಷಿತ ಸ್ಥಳಗಳಿಗೆ ತೆರಳಿ; ವಿಜಯಾನಂದ ಕಾಶಪ್ಪನವರ

ಸಚಿವ ಸ್ಥಾನದ ಅವಕಾಶ ಇನ್ನೂ ಇದೆ

ಮಂತ್ರಿಯಾಗಿ ಕ್ಷೇತ್ರಕ್ಕೆ ಬರ್ತೀನಿ ಅಂದಿದ್ರಿ ಎಂಬ ಪ್ರಶ್ನೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಹೌದು ಅಂದಿದ್ದೆ, ಅವಕಾಶ ಇನ್ನೂ ಇದೆ. ಅವಕಾಶ ಮುಗಿದಿಲ್ಲ. ವಿನಯ… ಕುಲಕರ್ಣಿ ಅವರು ಕೂಡಾ 3 ಬಾರಿ ಗೆದ್ದಂತಹ ಶಾಸಕರು. ಅವರಿಗೂ ಸಚಿವ ಸ್ಥಾನ ಬರಬೇಕಾಗಿತ್ತು. ನನ್ನ ಜಿಲ್ಲೆಯಲ್ಲಿ ಯಾರೂ ಆಗಿಲ್ಲ ಅಂತ ನಮ್ಮ ಸಮುದಾಯ, ನನ್ನ ತಂದೆ ನಂತರ ನಮ್ಮ ಸಮಾಜದಲ್ಲಿ ಯಾರೂ ಆಗಿಲ್ಲ ಅನ್ನೋದು ಜನತೆಯ ಕೂಗಿದೆ. ಭರವಸೆ ಇತ್ತು, ಮುಂದಿನ ದಿನಗಳಲ್ಲಿ ಅವಕಾಶ ಕೊಡೋದಾಗಿ ನಾಯಕರು ಹೇಳಿದ್ದಾರೆ ಎಂದು ಕಾಶಪ್ಪನವರ ತಿಳಿಸಿದರು.

Latest Videos
Follow Us:
Download App:
  • android
  • ios