ನದಿಯ ನೀರು ಹೆಚ್ಚಾಗಲಿದ್ದು ಸುರಕ್ಷಿತ ಸ್ಥಳಗಳಿಗೆ ತೆರಳಿ; ವಿಜಯಾನಂದ ಕಾಶಪ್ಪನವರ

ನಿರಂತರ ಮಳೆಯಿಂದ ಮಲಪ್ರಭೆ ನದಿಯ ನೀರು ಅಪಾಯ ಮಟ್ಟಮೀರಿ ಹರಿದು ನದಿಯ ಎಡ ಮತ್ತು ಬಲ ದಂಡೆಯಲ್ಲಿರುವ ಅನೇಕ ಗ್ರಾಮಗಳಿಗೆ ನೀರು ನುಗ್ಗಿ ನೆರೆ ಸ್ಥಿತಿ ನಿರ್ಮಾಣವಾಗಿರುವ ತಾಲೂಕಿನ ಹೂವನೂರ, ಹಿರೇಮಳಗಾವಿ, ಪಾಪಥನಾಳ ಸೇರಿದಂತೆ ಅನೇಕ ಗ್ರಾಮಗಳಿಗೆ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು

Move to safe places krishna malaprabha River water increase says Vijaynand kasheppanavar rav

ಹುನಗುಂದ (ಸೆ.11) : ನಿರಂತರ ಮಳೆಯಿಂದ ಮಲಪ್ರಭೆ ನದಿಯ ನೀರು ಅಪಾಯ ಮಟ್ಟಮೀರಿ ಹರಿದು ನದಿಯ ಎಡ ಮತ್ತು ಬಲ ದಂಡೆಯಲ್ಲಿರುವ ಅನೇಕ ಗ್ರಾಮಗಳಿಗೆ ನೀರು ನುಗ್ಗಿ ನೆರೆ ಸ್ಥಿತಿ ನಿರ್ಮಾಣವಾಗಿರುವ ತಾಲೂಕಿನ ಹೂವನೂರ, ಹಿರೇಮಳಗಾವಿ, ಪಾಪಥನಾಳ ಸೇರಿದಂತೆ ಅನೇಕ ಗ್ರಾಮಗಳಿಗೆ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಗುರುವಾರ ಭೇಟಿ ನೀಡಿ ಪರಿಶೀಲಿಸುವುದರ ಜೊತೆಗೆ ನದಿಯ ನೀರು ಇನ್ನು ಹೆಚ್ಚಾಗುವ ಸಾಧ್ಯತೆ ಇದ್ದು, ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಪ್ರವಾಹ ಪೀಡಿತ ಗ್ರಾಮಸ್ಥರಿಗೆ ಮನವಿ ಮಾಡಿದರು.

ಬೆಳಗಾವಿ: ಪ್ರವಾಹದಿಂದ 1,879 ಕೋಟಿ ಹಾನಿ, ಪರಿಹಾರಕ್ಕೆ ಮನವಿ, ಸಚಿವ ಕಾರಜೋಳ

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿರಂತರ ಮಳೆಯಿಂದ ಮಲಪ್ರಭೆ(Malaprabhe) ನದಿಯ ನೀರಿನ ಮಟ್ಟದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ನದಿಯ ತೀರದಲ್ಲಿರುವ ತಾಲೂಕಿನ 26ಕ್ಕೂ ಹೆಚ್ಚು ಗ್ರಾಮಗಳಿಗೆ ನೀರು ಪ್ರವೇಶಿಸಿ ಜನ ಜೀವನ ಅಸ್ತವ್ಯಸ್ಥಗೊಳಿಸಿದ್ದಲ್ಲದೇ ರೈತರು ಬೆಳೆದ ಅನೇಕ ಬೆಳೆಗಳು ನೀರು ಪಾಲಾಗಿ ಕೋಟ್ಯಂತರ ರುಪಾಯಿ ಬೆಳೆ ಹಾನಿ ಸಂಭವಿಸಿದೆ. ಕೃಷ್ಣೆ ಮತ್ತು ಮಲಪ್ರಭೆ ನದಿಯ ತೀರಿದಲ್ಲಿರುವ ಜನರು ಪ್ರತಿ ವರ್ಷ ನಿರಂತರವಾಗಿ ಪ್ರವಾಹ ಪರಸ್ಥಿತಿಯನ್ನು ಎದುರಿಸುತ್ತಿದ್ದು, 2009, 2010 ಮತ್ತು 2019 ರಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿತ್ತು. ಸದ್ಯ ಮಲಪ್ರಭೆ ಅಚ್ಚುಕಟ್ಟು ಪ್ರದೇಶದಲ್ಲಿ ಅತೀಯಾದ ಮಳೆಯಿಂದ ಪ್ರತಿ ವರ್ಷ ಪ್ರವಾಹ ಸ್ಥಿತಿ ಸೃಷ್ಟಿಯಾಗುತ್ತಿದ್ದು, ಇದರಿಂದ ಜನ ಜಾನುವಾರುಗಳಿಗೆ ಅಪಾರ ನಷ್ಟವಾಗುತ್ತಿದೆ. ಹಿರೇಮಳಗಾವಿ ಗ್ರಾಮದ 18 ವರ್ಷದ ಯುವಕ ಪಂಪ್‌ಸೆಟ್‌ ಆನ್‌ ಮಾಡಲು ತೆರಳಿದ ಸಂದರ್ಭದಲ್ಲಿ ಕಾಲು ಜಾರಿ ನದಿಯ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಪ್ರತಿ ವರ್ಷ ಇಂತಹ ಘಟನೆಗಳು ಇಲ್ಲಿ ನಡಿತ್ತಾನೆ ಇರುತ್ತವೆ ಎಂದು ತಿಳಿಸಿದರು.

ಒತ್ತಾಯ ಪೂರ್ವಕವಾಗಿ ಗ್ರಾಮಗಳ ಸ್ಥಳಾಂತರ:

ಕೃಷ್ಣೆ ಮತ್ತು ಮಲಪ್ರಭೆ(Krishna and Malaprabha) ನದಿ(River)ಯ ದಡದಲ್ಲಿರುವ 26 ಗ್ರಾಮಗಳು ಪ್ರತಿ ವರ್ಷ ಪ್ರವಾಹವನ್ನು ಎದುರಿಸುತ್ತಿದ್ದು, ಅವುಗಳ ಶಾಶ್ವತ ಪರಿಹಾರಕ್ಕೆ ಯೋಚಿಸದೇ ಶಾಸಕ ದೊಡ್ಡನಗೌಡ ಪಾಟೀಲರು(Doddanagowda Patil) 2009ರಲ್ಲಿ 9 ಗ್ರಾಮಗಳನ್ನು ಒತ್ತಾಯ ಪೂರ್ವಕವಾಗಿ ಗ್ರಾಮಸ್ಥರನ್ನು ಎದುರಿಸಿ ಬೆದರಿಸಿ ಸ್ಥಳಾಂತರಿಸಿದ್ದರ ಪರಿಣಾಮವೇ ಇವತ್ತು ಆ ಗ್ರಾಮಗಳಲ್ಲಿ ಮತ್ತೇ ಪ್ರವಾಹ ಸೃಷ್ಟಿಯಾಗಿ ಅನೇಕ ತೊಂದರೆಯನ್ನು ಎದರಿಸುವಂತಾಗಿದೆ.

ಶಾಶ್ವತ ಪರಿಹಾರಕ್ಕೆ ಸಿದ್ಧ: ನಿರಂತರ ಪ್ರವಾಹ ಸ್ಥಿತಿಯನ್ನು ಎದುರಿಸುತ್ತಿರುವ ಕೃಷ್ಣೆ ಮತ್ತು ಮಲಪ್ರಭೆ ನದಿ ದಡದ ಗ್ರಾಮಗಳನ್ನು ಶಾಶ್ವತ ಮುಳಗಡೆ ಘೋಷಿಸುವುದು,ಭೂಮಿಯನ್ನು ಕಳೆದುಕೊಂಡ ಮತ್ತು ಬೆಳೆ ಹಾನಿಗೆ ಸೂಕ್ತ ಪರಿಹಾರ ಕೊಡಿಸುವ ಮೂಲಕ ಈ ಭಾಗದ ರೈತರ ಮತ್ತು ಜನರ ಕಷ್ಟಕ್ಕೆ ಶಾಶ್ವತ ಪರಿಹಾರ ಕೊಡಿಸಲು ನಾನು ಸಿದ್ಧ. ಈ ಸಂದರ್ಭದಲ್ಲಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಗಂಗಾಧರ ದೊಡಮನಿ, ಕಾಂಗ್ರೆಸ್‌ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ವಿಜಯಮಹಾಂತೇಶ ಗದ್ದನಕೇರಿ, ನಗರಸಭೆ ಸದಸ್ಯ ಸುರೇಶ ಜಗ್ಲಿ, ಗ್ರಾಪಂ ಸದಸ್ಯ ಬಸವರಾಜ ನಾಗಠಾಣ, ಕಾಂಗ್ರೆಸ್‌ ಎಸ್‌.ಸಿ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಹೊಸಮನಿ, ಅಂದಾನಪ್ಪ ಕಳ್ಳಿಗುಡ್ಡ, ಶ್ರೀಕಾಂತ ಹಿರೇಮಠ ಸೇರಿದಂತೆ ಅನೇಕರು ಇದ್ದರು.

ಅಥಣಿ: ಪ್ರವಾಹ ಆಯ್ತು ಈಗ ಸಾಂಕ್ರಾಮಿಕ ರೋಗ ಭೀತಿ

ಮಲಪ್ರಭೆ ನದಿಯ ನೀರಿನಿಂದ ಹುನಗುಂದ ಮತಕ್ಷೇತ್ರದ 26ಕ್ಕೂ ಹೆಚ್ಚು ಗ್ರಾಮಗಳಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದ್ದರೂ ಜಿಲ್ಲೆಯ ಉಸ್ತುವಾರಿ ಸಚಿವರು ಮತ್ತು ಮುಖ್ಯಮಂತ್ರಿಗಳು ಹಾಗೂ ಕ್ಷೇತ್ರದ ಶಾಸಕ ದೊಡ್ಡನಗೌಡ ಪಾಟೀಲರು ಶೇ.40 ಪರ್ಸೆಂಟ್‌ನಲ್ಲಿ ಬಿಜಿ ಇದ್ದಾರೆ. ಇನ್ನು ಕೇವಲ ಎಂಟು ತಿಂಗಳ ಸರ್ಕಾರ ಉಳಿದಿದೆ. ಜನರ ಸಂಕಷ್ಟಸ್ಥಿತಿಯನ್ನು ನೋಡದೇ ಹಣ ಗಳಿಸುವಲ್ಲಿ ತಲ್ಲಿಣರಾಗಿದ್ದಾರೆ.

ವಿಜಯಾನಂದ ಕಾಶಪ್ಪನವರ ಮಾಜಿ ಶಾಸಕರು ಹುನಗುಂದ.

ಅಳಲು ತೊಡಿಕೊಂಡ ಮಹಿಳೆಯರು: ಹೊಳೆ ನೀರಿನಿಂದ ಪ್ರತಿ ವರ್ಷ ನಾವು ಪಡಬಾರದ ಕಷ್ಟಪಡತೀವ್ರಿ ಸಾಹೀಬ್ರ. ನಮ್ಮ ಕಷ್ಟನೋಡಕಾ ಬಂದೀರಲ್ಲ ನಮಗ ಶಾಶ್ವತ ಪರಿಹಾರ ಕೊಡಿಸಿ. ಇಲ್ಲಕಾ ನಮ್ಮನೆಲ್ಲ ಈ ತುಂಬಿದ ಹೊಳಿಯಾಗ ನುಗಿಸಿ ಹೋಗ್ರಿ. ಸಾಕಾಗಿ ಬಿಟ್ಟಿದೇ ಈ ಹೊಳಿ ನೀರಿನ ಸಲುವಾಗಿ ಎಂದು ಹೂವನೂರ ಗ್ರಾಮದ ಎಸ್‌.ಸಿ.ಕಾಲೋನಿಯ ಮಹಿಳೆಯರು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಮುಂದೆ ಅಳಲು ತೋಡಿಕೊಂಡರು.

Latest Videos
Follow Us:
Download App:
  • android
  • ios