ಬಾದಾಮಿಯಿಂದಲೇ ಸ್ಪರ್ಧಿಸುವಂತೆ ಸಿದ್ದರಾಮಯ್ಯಗೆ ಅಭಿಮಾನಿಗಳ ಆಗ್ರಹ
ಕ್ಷೇತ್ರ ಆಯ್ಕೆಯ ಗೊಂದಲದಲ್ಲಿದ್ದ ಸಿದ್ದರಾಮಯ್ಯನವರಿಗೆ ನಾವು ಬಾದಾಮಿ ಕ್ಷೇತ್ರ ದಿ.ಬೆಸ್ಟ್ ಎಂದು ಹೇಳಿದ್ದೆವು. ಈಗಲೂ ಕೂಡಾ ನಾವು ಅದನ್ನೇ ಹೇಳುತ್ತಿದ್ದೇವೆ. ನೀವು ಬಾದಾಮಿಯಿಂದ ಸ್ಪರ್ಧಿಸಿ ನಿಮ್ಮನ್ನು ಗೆಲ್ಲಿಸುವ ಜವಾಬ್ದಾರಿ ನಮ್ಮ ಕಾರ್ಯಕರ್ತರ ಮೇಲಿದೆ ಎಂದು ಮನವಿ ಮಾಡುತ್ತಿದ್ದೇವೆ: ಅಭಿಮಾನಿಗಳು
ಬಾದಾಮಿ(ಜ.10): ಇಲ್ಲಿನ ಶಾಸಕರು ಆಗಿರುವ ಮಾಜಿ ಸಿಎಂ ಸಿದ್ದರಾಮಯ್ಯನವರು ಸೋಮವಾರ ಕೋಲಾರ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಘೋಷಣೆ ಮಾಡುತ್ತಿದ್ದಂತೆ ಇತ್ತ ಬಾದಾಮಿ ಕ್ಷೇತ್ರದಲ್ಲಿ ಸಂಚಲನ ಸೃಷ್ಟಿಯಾಗಿದ್ದು ಸಿದ್ದರಾಮಯ್ಯ ಅಭಿಮಾನಿಗಳಿಗೆ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ಮನಸ್ಸಿಗೆ ಬಹಳ ನೋವುಂಟು ಮಾಡಿದೆ. ಮೊದಲಿನಿಂದಲೂ ಬಾದಾಮಿ ಕ್ಷೇತ್ರ ದೂರವಾಗುತ್ತೆ, ಅಲ್ಲಿನ ಜನರು ಒಳ್ಳೆಯವರು, ನನಗೆ ಮೇಲಿಂದ ಮೇಲೆ ಬಂದು ಹೋಗಲು ತೊಂದರೆ ಆಗುತ್ತೆ ಅಂತೆಲ್ಲ ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ, ಇಂದಿನ ಅವರ ನಿರ್ಧಾರ ನಮ್ಮ ಮನಸ್ಸಿಗೆ ಬಹಳ ನೋವುಂಟು ಮಾಡಿದೆ ಎಂದು ಅಭಿಮಾನಿಗಳು ಮತ್ತು ಕಾರ್ಯಕರ್ತರು ಹೇಳಿದ್ದಾರೆ.
ಕ್ಷೇತ್ರ ಆಯ್ಕೆಯ ಗೊಂದಲದಲ್ಲಿದ್ದ ಸಿದ್ದರಾಮಯ್ಯನವರಿಗೆ ನಾವು ಬಾದಾಮಿ ಕ್ಷೇತ್ರ ದಿ.ಬೆಸ್ಟ್ ಎಂದು ಹೇಳಿದ್ದೆವು. ಈಗಲೂ ಕೂಡಾ ನಾವು ಅದನ್ನೇ ಹೇಳುತ್ತಿದ್ದೇವೆ. ನೀವು ಬಾದಾಮಿಯಿಂದ ಸ್ಪರ್ಧಿಸಿ ನಿಮ್ಮನ್ನು ಗೆಲ್ಲಿಸುವ ಜವಾಬ್ದಾರಿ ನಮ್ಮ ಕಾರ್ಯಕರ್ತರ ಮೇಲಿದೆ ಎಂದು ಮನವಿ ಮಾಡುತ್ತಿದ್ದೇವೆ. ನಿಮ್ಮಂಥ ರಾಜಕಾರಣಿ ಬಾದಾಮಿ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದರೆ ನಮ್ಮ ಬಾದಾಮಿ ಕ್ಷೇತ್ರ ಇನ್ನು ಹೆಚ್ಚಿನ ಅಭಿವೃದ್ಧಿ ಆಗಲು ಸಾಧ್ಯವಿದೆ. ನಿಮ್ಮ ಕೋಲಾರ ಕ್ಷೇತ್ರ ಆಯ್ಕೆ ನಮಗೆ ನೋವು ತಂದಿದೆ. ನೀವು ಬಾದಾಮಿ ಕ್ಷೇತ್ರದಿಂದ ಸ್ಪರ್ಧಿಸಬೇಕು. ಇಲ್ಲದಿದ್ದರೆ ನಮ್ಮ ಹೋರಾಟ ಆರಂಭವಾಗಲಿದೆ. ನಿಮ್ಮ ಆಯ್ಕೆ ಬದಲಿಸಿಕೊಳ್ಳಿ. ಇಲ್ಲದಿದ್ದರೆ ಬರಲಿರುವ ದಿನಗಳಲ್ಲಿ ಕ್ಷೇತ್ರದಿಂದ 500ಕ್ಕೂ ಹೆಚ್ಚು ವಾಹನಗಳಲ್ಲಿ ಬಂದು ನಿಮ್ಮ ನಿವಾಸದ ಮುಂದೆ ಸಾವಿರಾರು ಜನ ಕಾರ್ಯಕರ್ತರು ಮತ್ತು ಅಭಿಮಾನಗಳು ಸೇರಿ ಧರಣಿ ನಡೆಸಿ ಮತ್ತೆ ಬಾದಾಮಿ ಕ್ಷೇತ್ರಕ್ಕೆ ಕರೆತರುತ್ತೇವೆ ಎಂದು ಅಭಿಮಾನಿಗಳು ಸಿದ್ದರಾಮಯ್ಯಗೆ ಆಗ್ರಹಿಸಿದ್ದಾರೆ.
ಸಿದ್ದರಾಮಯ್ಯ ಕಾಣುತ್ತಿರುವ ಸಿಎಂ ಕುರ್ಚಿ ಕನಸು ನನಸಾಗೋದಿಲ್ಲ: ಸಚಿವ ಕಾರಜೋಳ
ಯುವ ಮುಖಂಡರಾದ ಹೊಳೆಬಸು ಶೆಟ್ಟರ, ಬಾದಾಮಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನಮಂತಗೌಡ ಯಕ್ಕಪ್ಪನವರ, ಗುಳೇದಗುಡ್ಡ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂಜಯ ಬರಗುಂಡಿ, ಎಂ.ಬಿ. ಹಂಗರಗಿ, ಪಿ.ಆರ್.ಗೌಡರ, ಮಲ್ಲಣ್ಣ ಯಲಿಗಾರ, ರಾಜಮಹ್ಮದ್ ಬಾಗವಾನ, ಯಲ್ಲವ್ವ ಗೌಡರ, ಮಂಜುಳಾ ತಿಮ್ಮಾಪುರ, ನಾಗಪ್ಪ ಅಡಪಟ್ಟಿ, ಹನಮಂತ ದೇವರಮನಿ, ರೇವಣಸಿದ್ದಪ್ಪ ನೋಟಗಾರ, ಶಶಿ ಉದಗಟ್ಟಿ, ಎಫ್.ಆರ್.ಪಾಟೀಲ, ಎಂ.ಎಂ.ಮೇಟಿ, ಬಸವರಾಜ ಡೊಳ್ಳಿನ, ಗಂಗಾಧರ ವಡ್ಡರ, ಎಸ್.ಎ.ನೀರಲಗಿ, ಕೋನಪ್ಪ ಕಾಟನ್ನವರ, ಸಿದ್ದು ಗೌಡರ, ಶಿವು ಮಣ್ಣೂರ, ಮಧು ಯಡ್ರಾಮಿ, ಸಣ್ಣಬೀರಪ್ಪ ಪೂಜಾರಿ, ಬಸವರಾಜ ಕಟ್ಟಿಕಾರ, ವೆಂಕಣ್ಣ ಹೋರಕೇರಿ, ಶೇಖಪ್ಪ ಪವಾಡಿನಾಯಕರ ಬಸವರೆಡ್ಡಿ ಬ್ಯಾಹಟ್ಟಿ, ಬೀಮನಗೌಡ ಗೌಡಪ್ಪನವರ, ಶಿವಾನಂದ ಮುಧೋಳ, ರಾಮಣ್ಣ ಡೊಳ್ಳಿನ, ಶಿವಾನಂದ ಉದ್ದನ್ನವರ, ಚಂದ್ರಶೇಖರ ಉಚಿಡಿ, ರಮೇಶ ಬೂದಿಹಾಳ, ಅಯ್ಯನಗೌಡ ಜಾಬಣ್ಣವರ, ಮುನ್ನಾಬಾಯಿ ಸತಾರಕರ, ಪಾಂಡು ಕಟ್ಟಿಮನಿ, ಪರಶುರಾಮ ರೋಣದ, ಮುದಕಣ್ಣ ಹೆರಕಲ್ಲ, ಕರಿಗೌಡ ಮುಷ್ಟಿಗೇರಿ, ಪ್ರಕಾಶ ಗೌಡರ, ಬಸವರಾಜ ಗೋನಾಳ, ಇತರರು ಇದ್ದರು.