Asianet Suvarna News Asianet Suvarna News

ಕಾಂಗ್ರೆಸ್ ಸರ್ಕಾರ ಪತನ ಬಿಜೆಪಿಗರ ಕನಸು: ಶಾಸಕ ಕೊತ್ತೂರು ಮಂಜುನಾಥ್‌

ಈ ಹಿಂದೆ ಲೋಕಸಭಾ ಚುನಾವಣೆಯಲ್ಲಿ ಚುನಾವಣೆಯ ನಂತರ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದು ಭವಿಷ್ಯ ನುಡಿದಿದ್ದು ಹುಸಿಯಾಗಿದೆ, ಅದು ಎಂದಿಗೂ ಸಾಧ್ಯವಿಲ್ಲ ಎಂದು ಶಾಸಕ ಕೊತ್ತೂರು ಮಂಜುನಾಥ್‌ ಹೇಳಿದರು. 

Fall of Congress government is BJPs dream Says MLA Kothur Manjunath gvd
Author
First Published Aug 1, 2024, 9:52 PM IST | Last Updated Aug 2, 2024, 10:31 AM IST

ಕೋಲಾರ (ಆ.01): ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂಬುವುದು ಬಿಜೆಪಿಗರ ಕನಸು ಅಷ್ಟೇ, ಈ ಹಿಂದೆ ಲೋಕಸಭಾ ಚುನಾವಣೆಯಲ್ಲಿ ಚುನಾವಣೆಯ ನಂತರ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದು ಭವಿಷ್ಯ ನುಡಿದಿದ್ದು ಹುಸಿಯಾಗಿದೆ, ಅದು ಎಂದಿಗೂ ಸಾಧ್ಯವಿಲ್ಲ ಎಂದು ಶಾಸಕ ಕೊತ್ತೂರು ಮಂಜುನಾಥ್‌ ಹೇಳಿದರು. ನಗರದ ಕೂಡ ಕಚೇರಿಯಲ್ಲಿ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಕೇಂದ್ರ ಸರ್ಕಾರವು ನಮ್ಮ ಕೋಲಾರ ಜಿಲ್ಲೆಗೆ ಏನು ಮಾಡುವುದು ಬೇಡ ಯಾವುದೇ ಅಭಿವೃದ್ದಿ ಕೆಲಸಗಳು ಬಂದಿಲ್ಲ, ಅದು ಬರುವ ವಿಶ್ವಾಸವು ನಮಗಿಲ್ಲ, ನಮ್ಮ ಜಿಲ್ಲೆಯ ಅಭಿವೃದ್ದಿ ರಾಜ್ಯ ಸರ್ಕಾರ ಮಾಡಲಿದೆ, ಬಿಜೆಪಿ ಸದಸ್ಯರು ರಾಜ್ಯದಲ್ಲಿ ಕೇಂದ್ರದಿಂದ ಅಭಿವೃದ್ದಿ ಕೆಲಸಗಳನ್ನು ತರಲು ಒತ್ತಡ ಹೇರಬೇಕು. ಅದಕ್ಕೆ ನಮ್ಮ ಸಹಕಾರ ಇರುತ್ತದೆ ಎಂದರು.

ಅಪಪ್ರಚಾರ ಮಾಡಬೇಡಿ: ಕೇಂದ್ರ-ರಾಜ್ಯದಲ್ಲಿ ಸರ್ಕಾರಗಳು ರಚನೆಯಾಗಿದೆ. ಸಾರ್ವಜನಿಕರ ಕೆಲಸಗಳನ್ನು ಮಾಡಲು ಬಿಡಬೇಕು. ಸರ್ಕಾರದಿಂದ ಏನಾದರೂ ತಪ್ಪುಗಳು ಆಗಿದ್ದರೆ ಜನರಿಗೆ ಸರ್ಕಾರದ ತಪ್ಪುಗಳನ್ನು ತಿಳಿಸಲಿ ಅದನ್ನು ಬಿಟ್ಟು ಸರ್ಕಾರ ಪತನವಾಗುತ್ತೆ ಎಂದು ಅಪಪ್ರಚಾರ ಮಾಡುವುದನ್ನು ಬಿಡಬೇಕು, ಜನರು ಮತ ನೀಡಿದ್ದಾರೆ. ಅವರ ಸೇವೆ ಮಾಡಬೇಕಾಗಿರುವುದು ಜನಪ್ರತಿನಿಧಿಗಳ ಕರ್ತವ್ಯವಾಗಿದೆ ಎಂದರು, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಯವರನ್ನು ಕೇಂದ್ರ ಸರ್ಕಾರವು ಪರಿಗಣಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿರುವುದಕ್ಕೆ ಪ್ರತಿಕ್ರಿಯಿಸಿದ ಶಾಸಕರು.

Haveri: ಕೈಯಲ್ಲೇ ಬ್ಲಾಸ್ಟ್ ಆಯ್ತು ಮೊಬೈಲ್: ಸ್ವಲ್ಪದರಲ್ಲೇ ಇಬ್ಬರು ಯುವಕರು ಅಪಾಯದಿಂದ ಪಾರು!

ಕುಮಾರಸ್ವಾಮಿ ಅವರಿಗೆ ಬಿಜೆಪಿ ಸಂಬಂಧ ಹೊಸದೇನಲ್ಲ. ಅವರಿಬ್ಬರು ಗಂಡ ಹೆಂಡತಿ ಇದ್ದಂತೆ. ಗಂಡ ಹೆಂಡತಿ ಜಗಳ ಉಂಡು ಮಲಗುವವರೆಗೆ ಎಂಬ ಗಾದೆ ಇದ್ದಂತೆ ಎಂದರು. ೨೦೦೮ರಲ್ಲಿ ಮಾಜಿ ಮುಖ್ಯ ಮಂತ್ರಿ ಯಡಿಯೂರಪ್ಪರೊಂದಿಗೆ ಕೈಜೋಡಿಸಿ ಬಿಜೆಪಿ ಮತ್ತು ಬಿಜೆಪಿ ಮೈತ್ರಿ ಸರ್ಕಾರವನ್ನು ಆಗಲೇ ರಚಿಸಿದ್ದಾಗಲೇ ಕುಮಾರಸ್ವಾಮಿ ಅವರು ನಮ್ಮನ್ನು ಪರಿಗಣಿಸುತ್ತಿಲ್ಲ ಎಂಬ ಹಾಡನ್ನು ಆಗಲೇ ಹಾಡಿದ್ದರು ಅದು ಇವರಿಗೆ ಹೊಸದೆನೆಲ್ಲಾ ಬಿಡಿ ಎಂದು ವ್ಯಂಗ್ಯವಾಡಿದರು.

ಪಾದಯಾತ್ರೆ ಮಾಹಿತಿ ಇರಲಿಲ್ಲವೇ?: ಕುಮಾರ ಸ್ವಾಮಿಯವರಿಗೆ ಬಿಜೆಪಿಯವರ ಪಾದಯಾತ್ರೆ ಗಮನಕ್ಕೆ ಬಂದಿರಲಿಲ್ಲವೇ ಅವರು ಸ್ಪರ್ಧೆ ಮಾಡಿರುವ ಮಂಡ್ಯ ಕ್ಷೇತ್ರದ ಮೇಲೆಯೇ ಪಾದಯಾತ್ರೆ ಮಾಡುತ್ತಿದ್ದಾರೆ ಅವರಿಗೆ ತಿಳಿದಿಲ್ಲ ಎಂಬುವುದು ಹಾಸ್ಯಸ್ಪದವಾಗಲಿದೆ ಎಂದರು.

ಕೂಡ ಆದಾಯ ಕ್ರೋಡೀಕರಿಸಲಿ: ಕೋಲಾರ ನಗರಾಭಿವೃದ್ದಿ ಪ್ರಾಧಿಕಾರದಲ್ಲಿ ಒಟ್ಟು ೩೩೮ ನಿವೇಶನಗಳಿವೆ. ಮುಂದಿನ ದಿನಗಳಲ್ಲಿ ನಿವೇಶಗಳನ್ನು ಸಾರ್ವಜನಿಕರಿಗೆ ಹಂಚಿಕೆ ಮಾಡಿ ಆದಾಯ ಕ್ರೋಡೀಕರಿಸಿಕೊಂಡು ಹೊಸದಾಗಿ ಜಾಗವನ್ನು ಖರೀದಿಸಿ ಸಾರ್ವನಿಕರಿಕೆ ಹಂಚಿಕೆ ಮಾಡುವ ಮೂಲಕ ಅಭಿವೃದ್ದಿಪಡಿಸಲಾಗುವುದು ಎಂದು ಶಾಸಕ ಕೊತ್ತೂರು ಮಂಜುನಾಥ್ ತಿಳಿಸಿದರು. ಕೂಡ ಅಭಿವೃದ್ದಿ ಕಾಮಗಾರಿಗಳಿಗೆ ಅನುದಾನ ಕೊರತೆ ಇರುವುದನ್ನು ಕ್ರೋಡೀಕರಿಸಿಕೊಂಡು ಪ್ರಥಮವಾಗಿ ಈಗಾಗಲೇ ನಿರ್ಮಿಸಿರುವ ಲೇಔಟ್‌ನ ಅಭಿವೃದ್ದಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು.

Gadag: ಪೊಲೀಸರ ಮೇಲೆ ಕಲ್ಲೆಸೆದು ಎಸ್ಕೇಪ್ ಆಗಲು ಯತ್ನಿಸಿದ್ದ 'ನಕಲಿ ಪೊಲೀಸ್' ಮೇಲೆ ಫೈರಿಂಗ್!

ಯುಜಿಡಿ ಪೈಪುಗಳ ಅಳವಡಿಕೆ: ಈಗಾಗಲೇ ೩ ಕೋಟಿ ರೂ ಅನುದಾನ ಯುಜಿಡಿ ಪೈಪುಗಳ ಕಾಮಗಾರಿಗಳು ಪ್ರಗತಿಯಲ್ಲಿದ್ದು, ೩೦ನೇ ತಾರೀಕು ಡೆಡ್‌ಲೈನ್ ಆಗಿದೆ, ಉಳಿದಂತೆ ಅಭಿವೃದ್ದಿ ಕಾಮಗಾರಿಗಳಿಗೆ ೧೦ ಕೋಟಿ ರು.ಗಳ ಟೆಂಡರ್ ಲೋಕೋಪಯೋಗಿ ಇಲಾಖೆಗೆ ನೀಡಿದ್ದು ಆ.೧೨ ಕೊನೆಯ ದಿನಾಂಕವಾಗಿದೆ. ಸಾರ್ವಜನಿಕರಿಗೆ ಅಗತ್ಯವಾದ ರಸ್ತೆಗಳು, ಬೀದಿ ದೀಪಗಳು, ಕುಡಿಯುವ ನೀರು, ಸೇರಿದಂತೆ ಮೂಲ ಭೂತ ಸೌಲಭ್ಯಗಳನ್ನು ಕಲ್ಪಿಸಲು ಮುಂದಾಗುವುದು ಎಂದು ಹೇಳಿದರು. ಈ ವೇಳೆ ಎಂಎಲ್ಸಿ ಎಂ.ಎಲ್.ಅನಿಲ್ ಕುಮಾರ್, ಕೂಡ ಅಧ್ಯಕ್ಷ ಮಹಮ್ಮದ್ ಹನೀಫ್, ಕೂಡ ಮಾಜಿ ಅಧ್ಯಕ್ಷ ಅಬ್ದುಲ್‌ಖಯ್ಯೂಂ, ಗ್ಯಾರೆಂಟಿ ಅನುಷ್ಟಾನ ಸಮಿತಿ ಅಧ್ಯಕ್ಷ ವೈ.ಶಿವಕುಮಾರ್, ಮೈಲಾಂಡ್ಲಹಳ್ಳಿ ಮುರಳಿ ಇದ್ದರು.

Latest Videos
Follow Us:
Download App:
  • android
  • ios