Gadag: ಪೊಲೀಸರ ಮೇಲೆ ಕಲ್ಲೆಸೆದು ಎಸ್ಕೇಪ್ ಆಗಲು ಯತ್ನಿಸಿದ್ದ 'ನಕಲಿ ಪೊಲೀಸ್' ಮೇಲೆ ಫೈರಿಂಗ್!

ಪೊಲೀಸ್ ಅಂತಾ ಹೇಳಿಕೊಂಡು ದರೋಡೆ ಮಾಡಿ ಸಿಕ್ಕಿಹಾಕಿಕೊಂಡಿದ್ದ ರೌಡಿಶೀಟರ್ ಸ್ಥಳ ಮಹಜರು ವೇಳೆ ಪೊಲೀಸರ ಮೇಲೆ ಹಲ್ಲೆ ಮಾಡಿರೋ ಘಟನೆ ಗದಗ ಜಿಲ್ಲೆಯ ಲಕ್ಕುಂಡಿ, ಕಣಗಿನಹಾಳ ರಸ್ತೆ ಬಳಿ ನಡೆದಿದೆ.

Firing on the fake police who tried to escape by throwing stones at the police at gadag gvd

ಗದಗ (ಆ.01): ಪೊಲೀಸ್ ಅಂತಾ ಹೇಳಿಕೊಂಡು ದರೋಡೆ ಮಾಡಿ ಸಿಕ್ಕಿಹಾಕಿಕೊಂಡಿದ್ದ ರೌಡಿಶೀಟರ್ ಸ್ಥಳ ಮಹಜರು ವೇಳೆ ಪೊಲೀಸರ ಮೇಲೆ ಹಲ್ಲೆ ಮಾಡಿರೋ ಘಟನೆ ಗದಗ ಜಿಲ್ಲೆಯ ಲಕ್ಕುಂಡಿ, ಕಣಗಿನಹಾಳ ರಸ್ತೆ ಬಳಿ ನಡೆದಿದೆ. ಆತ್ಮ ರಕ್ಷಣೆಗೆ ಗದಗ ಗ್ರಾಮಾಂತರ ಪೊಲೀಸರೂ ರೌಡಿಶೀಟರ್ ಸಂಜಯ್ ಮೇಲೆ ಎರಡು ಸುತ್ತು ಗುಂಡು ಹಾರಿಸಿದ್ದು, ಗಾಯಾಳು ಸಂಜಯ್ ಕೊಪ್ಪದ್‌ಗೆ ಜಿಲ್ಲಾಸ್ಪತ್ರೆಯ ಕಾರಾಗೃಹ ಕೊಠಡಿಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.  ರೌಡಿಶೀಟರ್ ಸಂಜಯ್ ಕಳೆದ ತಿಂಗಳು ಮೂರನೇ ತಾರೀಕು ಕಣಗಿನಹಾಳ ರಸ್ತೆಯಲ್ಲಿ ನಿಂತಿದ್ದ ವ್ಯಕ್ತಿಗೆ ಧಮ್ಕಿ ಹಾಕಿದ್ದ. ಅಲ್ದೆ, ನಾನು ಪೊಲೀಸ್ ಇಲ್ಲಿ ನಿಲ್ಲಂಗಿಲ್ಲ. 

ನೀನು ಕಳ್ಳನಿರಬಹುದು ಅಂತಾ ಅಮಾಯಕ ವ್ಯಕ್ತಿಗೆ ಹೆದರಿಸಿದ್ದ. ಜೊತೆಗೆ ಹಲ್ಲೆ ಮಾಡಿ, ಮೈ ಮೇಲೆ ಹಾಕಿದ್ದ 5 ಲಕ್ಷ 85 ಸಾವಿರ ಮೌಲ್ಯದ ಚಿನ್ನಾಭರಣ ದೋಚಿದ್ದ. ಇದೇ ಪ್ರಕರಣಕ್ಕೆ ಸಬಂಧಿಸಿದಂತೆ ತನಿಖೆ ನಡೆಸಿದ್ದ ಗ್ರಾಮಾಂತರ ಪೊಲೀಸರು ಆರೋಪಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ರು. ಆಗಷ್ಟೇ ಒಂದನೇ ತಾರೀಕು ಬೆಳಗ್ಗೆ ಆರೋಪಿ ಜೊತೆಗೆ ಸ್ಥಳ ಮಹಜರಿಗೆ ಹೋಗಿದ್ದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಎಸ್ಕೇಪ್ ಆಗೋದಕ್ಕೆ ಆರೋಪಿ ಸಂಜಯ್ ಪ್ಲಾನ್ ಹಾಕಿದ್ದ. 

ಸ್ಥಳಕ್ಕೆ ಹೋಗ್ತಿದ್ದಂತೆ ರೌಡಿಶೀಟರ್ ಸಂಜಯ್, ಪೊಲೀಸ್ ಪ್ರಕಾಶ್ ಗಾಣಿಗೇರ್ ಮೇಲೆ ಕಲ್ಲೆಸೆದು ಎಸ್ಕೇಪ್ ಆಗಲು ಮುಂದಾಗಿದ್ದ. ಈ ವೇಳೆ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಸಂಗಮೇಶ್ ಶಿವಯೋಗಿ ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ. ಗಾಯಗೊಂಡು ಬಿದ್ದ ರೌಡಿಶೀಟರ್ ಸಂಜಯ್ ನನ್ನ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ.  ಘಟನೆಯಲ್ಲಿ ಪೊಲೀಸ್ ಸಿಬ್ಬಂದಿ ಪ್ರಕಾಶ್ ಅವರಿಗೂ ಕಾಲು ಹಾಗೂ ಕೈಗೆ ಗಾಯಗಳಾಗಿದ್ದು, ಅವರನ್ನ ಜಿಲ್ಲಾಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡ್ಲಾಗ್ತಿದೆ. ಎಸ್ ಎಸ್ ಪಿ ಎಂಬಿ ಸಂಕದ್ ಸೇರಿದಂತೆ ಹಿರಿಯ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಗಳು ಸಿಬ್ಬಂದಿ ಆರೋಗ್ಯ ವಿಚಾರಿಸಿದ್ದಾರೆ. 

ಸಿಎಂ ಬಳಿ ನಾನು ಅತ್ತಿದ್ದೇನೆಂತೆ, ನಾವು ಸೆಡ್ಡು ಹೊಡೆಯೋರು: ಶಾಸಕ ಶಾಮನೂರು ಶಿವಶಂಕರಪ್ಪ

ಇನ್ನು, ಆರೋಪಿ ಸಂಜಯ್ ವಿರುದ್ಧ ಗದಗ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಯಲ್ಲಿ 12 ಕ್ಕೂ ಹೆಚ್ಚು ಪ್ರಕರಣ ದಾಖಲಾಗಿವೆ. ಹಾಫ್ ಮರ್ಡರ್, ರಾಬರಿ ಸೇರಿದಂತೆ ವಿವಿಧ ಗಂಭೀರ ಪ್ರಕರಣದಲ್ಲಿ ಸಂಜಯ್ ಪೊಲೀಸರಿಗೆ ಬೇಕಾಗಿದ್ದಾನೆ. ಪೊಲೀಸರ ಮೇಲೆ ಹಲ್ಲೆ ಮಾಡಿದ ಪ್ರಕರಣ ಸೇರಿದಂತೆ ಎಲ್ಲ ಪ್ರಕರಣಗಳನ್ನೂ ಗಂಭೀರವಾಗಿ ಪರಿಗಣಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಅಂತಾ ಎಸ್ ಪಿ ಬಿಎಸ್ ನೇಮಗೌಡ ಮಾಹಿತಿ ನೀಡಿದ್ದಾರೆ.

Latest Videos
Follow Us:
Download App:
  • android
  • ios