ಬಿಜೆಪಿಯಲ್ಲಿ ಭುಗಿಲೆದ್ದ ಬಣ ರಾಜಕಾರಣ..!
ಕೇವಲ ಗುತ್ತಿಗೆ ಮಾಡುವ ಹಿಂಬಾಲಕ ಕಾರ್ಯಕರ್ತರನ್ನು ಇಟ್ಟುಕೊಂಡು ಪಾರ್ಟಿಯನ್ನೇ ಕ್ಷೇತ್ರದಲ್ಲಿ ನಿರುದ್ಯೋಗಂ ರಾಜಕೀಯ ಲಕ್ಷಣ ಎಂಬಂತೆ ವರ್ತಿಸಿದವರು ತಮ್ಮ ನಡೆ ಬಗ್ಗೆ ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಪಿ.ಎಚ್.ಪೂಜಾರ ತಿರುಗೇಟು ನೀಡಿದ ಡಾ.ವೀರಣ್ಣ ಚರಂತಿಮಠ
ಬಾಗಲಕೋಟೆ(ಜು.04): ಬಿಜೆಪಿಯಲ್ಲಿ ಯಾವುದೇ ಬಣವಿಲ್ಲ. ಆದರೆ, ನಾಲ್ಕು ಜನ ಗುತ್ತಿಗೆ ಹಿಂಬಾಲಕರನ್ನು ಇಟ್ಟುಕೊಂಡು ಬಣ ರಾಜಕಾರಣ ಮಾಡುತ್ತಿರುವವರು ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ಎಂದು ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ವಾಗ್ದಾಳಿ ನಡೆಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇವಲ ಗುತ್ತಿಗೆ ಮಾಡುವ ಹಿಂಬಾಲಕ ಕಾರ್ಯಕರ್ತರನ್ನು ಇಟ್ಟುಕೊಂಡು ಪಾರ್ಟಿಯನ್ನೇ ಕ್ಷೇತ್ರದಲ್ಲಿ ನಿರುದ್ಯೋಗಂ ರಾಜಕೀಯ ಲಕ್ಷಣ ಎಂಬಂತೆ ವರ್ತಿಸಿದವರು ತಮ್ಮ ನಡೆ ಬಗ್ಗೆ ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ತಿರುಗೇಟು ನೀಡಿದರು.
ಆಗಸ್ಟ್ ತಿಂಗಳಿಂದ ಇಂದಿರಾ ಕ್ಯಾಂಟೀನ್ ಆರಂಭ: ಶಾಸಕ ಜೆ.ಟಿ.ಪಾಟೀಲ್ ಭರವಸೆ
ಈ ಹಿಂದೆ ಟಿಕೆಟ್ ಸಿಕ್ಕಾಗ ತತ್ವ ಸಿದ್ಧಾಂತಗಳನ್ನು ಗಾಳಿಗೆ ತೂರಿ ಪಕ್ಷದಿಂದ ಏಕೆ ಹೊರಗೆ ಹೋದರು? ಪಕ್ಷದಲ್ಲಿಯೇ ಸಮಾಧಾನದಿಂದ ಇದ್ದು ನನ್ನ ಪರವಾಗಿ ಚುನಾವಣೆ ಮಾಡಬಹುದಿತ್ತಲ್ಲವೇ? ಹಿಂದೆ ನಾವು ಅವರ ಚುನಾವಣೆ ಮಾಡಿದ್ದೇವೆ. 40 ವರ್ಷದ ಪಕ್ಷದಲ್ಲಿದ್ದೇನೆ. ಪಕ್ಷ ಕಟ್ಟಿದ್ದೇನೆ ಎನ್ನುವವರು ತಮ್ಮ ಅವಧಿಯಲ್ಲಿ ಯಾವ ಕಾರ್ಯಕರ್ತರಿಗೆ ಯಾವ ಸ್ಥಾನಮಾನ ಕಲ್ಪಿಸಿದ್ದೀರಿ ಉತ್ತರಿಸಲಿ ಎಂದು ಸವಾಲು ಹಾಕಿದರು.
ತಮ್ಮ ಅವಧಿಯಲ್ಲಿ ನಗರಸಭೆ, ಕ್ಷೇತ್ರದ ಅಮೀನಗಡ, ಕಮತಗಿ ಪಟ್ಟಣ ಪಂಚಾಯತಿಗಳನ್ನು ಬಿಜೆಪಿ ತೆಕ್ಕೆಗೆ ತೆಗೆದುಕೊಂಡು ಎಲ್ಲ ಕಾರ್ಯಕರ್ತರಿಗೆ ಅಧಿಕಾರ ಕೊಡಿಸಿದೆವು. ಅಲ್ಲದೇ, ಬಹಳಷ್ಟು ಕಾರ್ಯಕರ್ತರಿಗೆ ಎಲ್ಲ ಸಲಹಾ ಸಮಿತಿಗಳಲ್ಲಿ ಸ್ಥಾನ ಕಲ್ಪಿಸುವ ಮೂಲಕ ಕಾರ್ಯಕರ್ತರಿಗೆ ಗೌರವ ನೀಡಲಾಗಿದೆ. ಪಕ್ಷ ನಿಷ್ಠೆಯಿಂದ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕ್ಷೇತ್ರದ ಸಮಗ್ರ ಅಭಿವೃದ್ಧಿ ಮಾಡಿದ್ದೇವೆ. ಎಂದು ತಮ್ಮ ಅಧಿಕಾರಾವಧಿಯನ್ನು ವೀರಣ್ಣ ಚರಂತಿಮಠ ಸಮರ್ಥಿಸಿಕೊಂಡರು.
ನಿರುದ್ಯೋಗಿ ಆಗಿ ಬಂದಿಲ್ಲ:
ನಾನು ರಾಜಕೀಯಕ್ಕೆ ಆಕಸ್ಮಿಕವಾಗಿ ಬಂದೆ. ತಮ್ಮನ್ನು ಕಾಂಗ್ರೆಸ್‌ನವರೂ ಕರೆದಿದ್ದರು. ಆದರೆ, ಬಿಎಸ್‌ವೈ ಮತ್ತು ಅನಂತಕುಮಾರ್ ಅವರ ಮೇಲಿನ ಗೌರವದಿಂದ ಬಿಜೆಪಿಗೆ ಬರಬೇಕಾಯಿತೇ ಹೊರತು ರಾಜಕೀಯಕ್ಕೆ ನಿರುದ್ಯೋಗಿಯಾಗಿ ಬಂದಿಲ್ಲ. ಕ್ಷೇತ್ರದ ಅಭಿವೃದ್ಧಿ ಹಾಗೂ ಜನಸೇವೆಗಾಗಿ ಬಂದಿದ್ದೇನೆ ಎಂದು ಡಾ.ವೀರಣ್ಣ ಚರಂತಿಮಠ ಅವರು ಪೂಜಾರ್‌ಗೆ ತಿರುಗೇಟು ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಪರಿಷತ್ ಮುಖಂಡರಾದ ಜಿ.ಎನ್.ಪಾಟೀಲ, ಟವಳಿ, ವಿಧಾನ ಪರಿಷಷತ್ ಮಾಜಿ ಸದಸ್ಯ ನಾರಾಯಣಸಾ ಭಾಂಡಗೆ ಮತ್ತಿತರರು ಇದ್ದರು.
ಕಾನೂನು ಚೌಕಟ್ಟಿನಲ್ಲೇ ಶಿವಾಜಿ, ಬಸವಣ್ಣ ಮೂರ್ತಿ ಪ್ರತಿಷ್ಠಾಪನೆ:
ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿ ಪ್ರತಿಷ್ಠಾಪನೆಗೆ ಪಿ.ಎಚ್.ಪೂಜಾರ ಮತ್ತವರ ಬೆಂಬಲಿಗರು ಪೊಲೀಸ್ ಇಲಾಖೆಗೆ ಫೋನ್ ಮಾಡಿ ಅಡ್ಡಿಪಡಿಸಿದ್ದಾರೆ. ಮುಂಬರುವ ದಿನಗಳಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಹಾಗೂ ವಿಶ್ವಗುರು ಬಸವಣ್ಣನವರ ಮೂರ್ತಿಗಳನ್ನು ಕಾನೂನಿನ ಚೌಕಟ್ಟಿನಲ್ಲೇ ಪ್ರತಿಷ್ಠಾಪನೆ ಮಾಡಲಾಗುವುದು ಎಂದು ಮಾಜಿ ಶಾಸಕ ವೀರಣ್ಣ ಚರಂತಿಮಠ ತಿಳಿಸಿದರು. ಬಿಜೆಪಿ ಪಕ್ಷದಲ್ಲಿ ತಮ್ಮ ಅವಧಿಯಲ್ಲಿ ಕಾರ್ಯಕರ್ತರಿಗೆ ಸಿಕ್ಕಷ್ಟುಗೌರವ ಪೂಜಾರ ಕಾಲದಲ್ಲಿ ಸಿಕ್ಕಿಲ್ಲ ಎಂದು ಹೇಳಿದರು.
ರೇಣುಕಾಚಾರ್ಯರಂತಹವರಿಗೆ ಕಾಂಗ್ರೆಸ್‌ನಲ್ಲಿ ಜಾಗವಿಲ್ಲ: ಸಚಿವ ಮಲ್ಲಿಕಾರ್ಜುನ
ಮಾನೆ ಹೊರ ಹಾಕಿದ್ದಕ್ಕೆ ಸ್ಪಷ್ಟೀಕರಣ:
ಈಚೆಗೆ ಬಿಜೆಪಿ ಸಮಾವೇಶದಲ್ಲಿ ನಡೆದ ಘಟನೆ ಕುರಿತು ಪಕ್ಷದ ವರಿಷ್ಠರು ವಿವರಣೆ ಕೇಳಿದ್ದು, ನೀಡಿದ್ದೇವೆ. ಅಂದಿನ ಸಮಾವೇಶದಲ್ಲಿ ಪ್ರಧಾನ ಮಂತ್ರಿ 9 ವರ್ಷಗಳ ಸಾಧನೆಗಳ ಕುರಿತು ಹೇಳುವ ಕಾರ್ಯಕ್ರಮ ಅದಾಗಿತ್ತು. ಸಮಾವೇಶಕ್ಕೆ ಪಕ್ಷ ವಿರೋಧಿ ಚಟುವಟಿಕೆ ತೋರಿದ್ದ ನಾಲ್ವರು ಬಂದಿದ್ದರು. ನಮ್ಮ ಕಾರ್ಯಕರ್ತರು ಅವರಿದ್ದರೆ ಕಾರ್ಯಕ್ರಮಕ್ಕೆ ಚ್ಯುತಿ ಬರುತ್ತದೆ ಎಂದು ಅಸಮಾಧನಗೊಂಡಿದ್ದರು. ಸಮಾವೇಶ ಸುವ್ಯವಸ್ಥಿತವಾಗಿ ನಡೆಯಬೇಕು, ಯಾವುದೇ ಗೊಂದಲ ಉಂಟಾಗಬಾರದೆಂಬ ಉದ್ದೇಶದಿಂದ ಡಾ.ಶೇಖರ ಮಾನೆ ಅವರನ್ನು ಹೊರ ಹೋಗಲು ಹೇಳಿದೆ ಹೊರತು ಮರಾಠಾ ಸಮಾಜವಾಗಲಿ, ಭಾವಸಾರ ಕ್ಷತ್ರೀಯ ಸಮಾಜದ ವಿರುದ್ಧ ನಡೆಯಿಂದಲ್ಲ ಎಂದು ಡಾ.ಚರಂತಿಮಠ ಸ್ಪಷ್ಟೀಕರಣ ನೀಡಿದರು. ಪರಿಷತ್ ಚುನಾವಣೆಗೂ ಮುಂಚೆಯೇ ಅರುಣ ಲೋಕಾಪುರ ಅವರನ್ನು ಪರಿಷತ್‌ದಿಂದ ಹೊರ ಹಾಕಲಾಗಿತ್ತು. ಈ ಕುರಿತು ಹೇಳುವವರು ಎಲ್ಲವನ್ನೂ ಅರಿತು ಹೇಳಿಕೆ ನೀಡಬೇಕು. 2013ರಲ್ಲಿ ಜಿ.ಎಸ್.ನ್ಯಾಮಗೌಡರಿಗೆ ವಿರೋಧ ಮಾಡಿಲ್ಲ. ಅವರೂ ನನ್ನ ಬಗ್ಗೆ ಆರೋಪ ಮಾಡಿಲ್ಲ, ಯತ್ನಾಳ ಪರ ಮಾಡಿದ್ದರು. ಆದರೆ, ಪೂಜಾರ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರಲ್ಲದೆ, ಪೂಜಾರ್ ಅವರಿಗೆ ಎಂಎಲ್‌ಸಿ ಟಿಕೆಟ್ ಕೊಡಿಸಿ ಗೆಲ್ಲಿಸಿದೆವು. ಗೆದ್ದ ನಂತರ ಇವರ ವರ್ತನೆಯೇ ಬೇರೆಯಾಯಿತು ಎಂದು ಬೇಸರ ವ್ಯಕ್ತಪಡಿಸಿದರು.
ಬಿಜೆಪಿ ಸಮಾವೇಶದಲ್ಲಿ ಡಾ.ಶೇಖರ ಮಾನೆ ಅವರನ್ನು ಹೊರ ಹೋಗುವಂತೆ ಹೇಳಿದ ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಅವರ ಮನೆ ಎದುರು ಭಾವಸಾರ P್ಷÜತ್ರೀಯ, ಮರಾಠಾ ಸಮುದಾಯದ ಕೆಲವರು ತಳವಾರ ಮತ್ತಿತರ ಸಾಮಗ್ರಿಗಳೊಂದಿಗೆ ಪ್ರತಿಭಟನೆ ನಡೆಸಲಾಗುವುದೆಂಬ ಹೇಳಿಕೆ ನೀಡಿದ್ದಾರೆ. ಇದು ಸರಿಯಲ್ಲ. ಖಂಡನೀಯ ಅಂತ ವಿಧಾನ ಪರಿಷತ್ ಮಾಜಿ ಸದಸ್ಯ ನಾರಾಯಣಸಾ ಭಾಂಡಗೆ ತಿಳಿಸಿದ್ದಾರೆ.