ಆಗಸ್ಟ್ ತಿಂಗಳಿಂದ ಇಂದಿರಾ ಕ್ಯಾಂಟೀನ್ ಆರಂಭ: ಶಾಸಕ ಜೆ.ಟಿ.ಪಾಟೀಲ್ ಭರವಸೆ
ಪಟ್ಟಣದಲ್ಲಿ ಆಗಸ್ಟ್ ತಿಂಗಳಿಂದ ಇಂದಿರಾ ಕ್ಯಾಂಟೀನ್ ಪ್ರಾರಂಭವಾಗಲಿದೆ ಎಂದು ಶಾಸಕ ಜೆ.ಟಿ.ಪಾಟೀಲ್ ಹೇಳಿದರು. ಪಟ್ಟಣದಲ್ಲಿರುವ ಶಾಸಕರ ಖಾಸಗಿ ಬ್ಯಾಂಕ್‌ನಲ್ಲಿ ಶನಿವಾರ, ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಹು ವರ್ಷಗಳಿಂದ ಸಾರ್ವಜನಿಕರ ಸ್ಥಗಿತವಾಗಿದ್ದ ಇಂದಿರಾ ಕ್ಯಾಂಟೀನ್ ಅನ್ನು ಮತ್ತೆ ತೆರೆಯಲು ಆಗಲೇ ಟೆಂಡರ್ ಪ್ರಕ್ರಿಯೆ ನಡೆದಿದ್ದು, ಶೀಘ್ರದಲ್ಲೇ ಆರಂಭಿಸಲಾಗುವುದು ಎಂದು ಹೇಳಿದರು.
ಬೀಳಗಿ (ಜು.2) : ಪಟ್ಟಣದಲ್ಲಿ ಆಗಸ್ಟ್ ತಿಂಗಳಿಂದ ಇಂದಿರಾ ಕ್ಯಾಂಟೀನ್ ಪ್ರಾರಂಭವಾಗಲಿದೆ ಎಂದು ಶಾಸಕ ಜೆ.ಟಿ.ಪಾಟೀಲ್ ಹೇಳಿದರು. ಪಟ್ಟಣದಲ್ಲಿರುವ ಶಾಸಕರ ಖಾಸಗಿ ಬ್ಯಾಂಕ್‌ನಲ್ಲಿ ಶನಿವಾರ, ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಹು ವರ್ಷಗಳಿಂದ ಸಾರ್ವಜನಿಕರ ಸ್ಥಗಿತವಾಗಿದ್ದ ಇಂದಿರಾ ಕ್ಯಾಂಟೀನ್ ಅನ್ನು ಮತ್ತೆ ತೆರೆಯಲು ಆಗಲೇ ಟೆಂಡರ್ ಪ್ರಕ್ರಿಯೆ ನಡೆದಿದ್ದು, ಶೀಘ್ರದಲ್ಲೇ ಆರಂಭಿಸಲಾಗುವುದು ಎಂದು ಹೇಳಿದರು.
ಇಂದಿರಾ ಕ್ಯಾಂಟೀನ್‌ಗೆ ಬಹು ಬೇಡಿಕೆ ಇದ್ದು, ಈ ಬಾರಿ ಅಲ್ಪ ಮೊತ್ತದಲ್ಲಿ ಟಿಫಿನ್, ಊಟ, ಚಹಾ ಸೇರಿದಂತೆ ಮೂರೂ ಹೊತ್ತು ಗುಣಮಟ್ಟದ ಆಹಾರ ಒದಗಿಸಲು ಸಕಲ ವ್ಯವಸ್ಥೆ ಕೈಗೊಳ್ಳಲಾಗುತ್ತಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
'ಕರ್ನಾಟಕದ ಎಲ್ಲಾ ವಿಶ್ವವಿದ್ಯಾನಿಲಯಗಳಲ್ಲೂ ಇಂದಿರಾ ಕ್ಯಾಂಟೀನ್ ಪ್ರಾರಂಭಿಸಿ'
ಎರಡು ದಿನಕ್ಕೊಮ್ಮೆ ನೀರು:
ಪಟ್ಟಣದ ನಿವಾಸಿಗಳಿಗೆ ಈಗಾಗಲೇ ನಾಲ್ಕು ದಿನಕೊಮ್ಮೆ ಬರುತ್ತಿರುವ ಕುಡಿಯುವ ನೀರು ಇನ್ನು ಮುಂದೆ ಎರಡು ದಿನಕ್ಕೊಮ್ಮೆ ಪೂರೈಕೆ ಮಾಡಲಾಗುವುದು. ಪಟ್ಟಣ ಪಂಚಾಯತಿಯಲ್ಲಿ ಪಟ್ಟಣಕ್ಕೆ ಕುಡಿಯುವ ನೀರು ಪೂರೈಸಲು ಬೇಕಾಗುವಷ್ಟುಹಣವಿದ್ದು ಅದರ ಬಳಕೆ ಮಾಡಿಕೊಂಡು ಪಟ್ಟಣದ ನಿವಾಸಿಗಳಿಗೆ ಕುಡಿಯುವ ನೀರು ಪೂರೈಸಲಾಗುವುದು ಎಂದು ಶಾಸಕ ಜೆ.ಟಿ.ಪಾಟೀಲ್ ಹೇಳಿದರು.
ಪಟ್ಟಣದ ಹೊರ ವಲಯದಲ್ಲಿರುವ ಆಶ್ರಯ ಕಾಲೋನಿ ವಸತಿ ಯೋಜನೆ ಮನೆಗಳ ಕುರಿತು ಬೆಂಗಳೂರಿನಲ್ಲಿ ಎರಡು ಬಾರಿ ಸಭೆ ಮಾಡಿದ್ದು, ಶೀಘ್ರವೇ ಟೆಂಡರ್ ಕರೆದು ಉತ್ತಮ ಗುತ್ತಿಗೆದಾರರಿಗೆ ವಹಿಸಿ ನೀರು, ಬೆಳಕು, ಚರಂಡಿ ಸೇರಿದಂತೆ ವಿವಿಧ ಮೂಲ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ. ಫಲಾನುಭವಿಗಳಿಗೆ ಶೀಘ್ರವಾಗಿ ವಸತಿ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ತಾಲೂಕಾಧ್ಯಕ್ಷ ಹಣಮಂತ ಕಾಖಂಡಕಿ, ಹಿರಿಯರಾದ ರಾಮನಗೌಡ ಜಕ್ಕನಗೌಡರ್, ಈರಯ್ಯ ಗೋಠೆ, ಸಂಗಪ್ಪ ಕದಂಗಲ್, ಅಜ್ಜು ಭಾಯಿ ಸರ್ಕಾರ, ಸಿದ್ದು ಸಾರಾವರಿ, ಅಶೋಕ ಜೋಶಿ, ಬಿ.ಪಿ.ಪಾಟೀಲ, ಮಹಾದೇವ ಬೋರ್ಜಿ, ಶಿವಪ್ಪ ಗಾಳಿ, ಸಿದ್ದು ಮೇಟಿ ಸೇರಿದಂತೆ ಇತರರು ಇದ್ದರು.
ಇಂದಿರಾ ಕ್ಯಾಂಟಿನ್ ಗೆ ದಿಢೀರ್ ಭೇಟಿ ನೀಡಿದ ಚಿಕ್ಕಮಗಳೂರು ಜಿಲ್ಲಾಧಿಕಾರಿ, ಸ್ವಚ್ಚತೆ ಕಾಪಾಡಲು ಸೂಚನೆ
ಹೆಚ್ಚುವರಿ ಬಸ್ ಸೌಲಭ್ಯ
ಬೀಳಗಿ ಮತಕ್ಷೇತ್ರದಲ್ಲಿ ಬರುವ ಬಾಗಲಕೋಟೆ, ಬದಾಮಿ, ಬೀಳಗಿ ತಾಲೂಕಿನ ಸಾರ್ವಜನಿಕರ ಸಾರಿಗೆಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ನಿನ್ನೆ ದಿನ ಬಾಗಲಕೋಟೆ ಸಾರಿಗೆ ವಿಭಾಗೀಯ ಕಚೇರಿಯಲ್ಲಿ ಉನ್ನತ ಅಧಿಕಾರಿಗಳ ಸಭೆ ಕರೆದು ಹೆಚ್ಚುವರಿ ಬಸ್ ಸೌಲಭ್ಯ ಹಾಗೂ ಹುಬ್ಬಳ್ಳಿ ವಿಜಯಪುರ ಬಸ್‌ಗಳು ಬೀಳಗಿ ಪಟ್ಟಣದಲ್ಲಿ ಬಂದು ಹೋಗುವಂತೆ ಸಭೆಯಲ್ಲಿ ಚರ್ಚಿಸಲಾಗಿದೆ. ಸಾರ್ವಜನಿಕರ ಬೇಡಿಕೆಯಂತೆ ಬಸ್ ಸೌಲಭ್ಯವನ್ನು ಕಲ್ಪಿಸಲಾಗುತ್ತದೆ ಎಂದು ಶಾಸಕ ಜೆ.ಟಿ.ಪಾಟೀಲ್ ಹೇಳಿದರು.