Asianet Suvarna News Asianet Suvarna News

ಆಪ್‌, ಕೇಜ್ರಿವಾಲ್‌ ಫೇಸ್‌ಬುಕ್‌ ಪುಟ ವಿದೇಶದಿಂದ ನಿರ್ವಹಣೆ!

ಆಮ್ ಆದ್ಮಿ ಪಕ್ಷದ ಅಧಿಕೃತ ಫೇಸ್‌ಬುಕ್ ಪುಟಗಳು, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಎಎಪಿ ನಾಯಕ ಅತಿಶಿ ಮರ್ಲೆನಾ, ಎಎಪಿ ಆರ್‌ಎಸ್ ಸಂಸದ ರಾಘವ್ ಚಡ್ಡಾ ಮತ್ತು ಇತರರ ಅಡ್ಮಿನ್‌ಗಳು ಯುಎಸ್, ಕತಾರ್ ಮತ್ತು ಲಿಥುವೇನಿಯಾದಲ್ಲಿ ವಾಸಿಸುತ್ತಿದ್ದಾರೆ ಎಂದು ವರದಿಯಾಗಿದೆ.

Facebook pages being run from abroad Serious allegations against all AAP leaders and party san
Author
Bengaluru, First Published Aug 18, 2022, 9:48 AM IST

ನವದೆಹಲಿ (ಆ.18): ಆಮ್‌ ಆದ್ಮಿ ಪಕ್ಷ ಮತ್ತು ಅದರ ಮುಖ್ಯಸ್ಥರ ಫೇಸ್‌ಬುಕ್‌ ಪೇಜ್‌ಗಳನ್ನು ಕೇವಲ ಭಾರತದ ಅಡ್ಮಿನ್‌ಗಳು ಮಾತ್ರವಲ್ಲದೇ ವಿದೇಶದಿಂದಲೂ ನಿರ್ವಹಣೆ ಮಾಡಲಾಗುತ್ತಿದೆ ಎಂಬ ವಿಚಾರ ಬೆಳಕಿಗೆ ಬಂದಿದೆ. ಪಕ್ಷದ ಫೇಸ್‌ಬುಕ್‌ ಪೇಜ್‌ಗಳನ್ನು ಅಮೆರಿಕ, ಕತಾರ್‌ ಮತ್ತು ಲಿಥುವೇನಿಯಾ ದೇಶಗಳಿಂದಲೂ ನಿರ್ವಹಣೆ ಮಾಡಲಾಗುತ್ತಿದೆ ಎಂದು ವಾಹಿನಿಯೊಂದು ವರದಿ ಮಾಡಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌, ಆಪ್‌ ನಾಯಕ ಅತಿಶಿ ಮರ್ಲೇನಾ, ರಾಜ್ಯಸಭಾ ಸಂಸದ ರಾಘವ್‌ ಛಡ್ಡಾ ಸೇರಿದಂತೆ ಇತರರ ಖಾತೆಗಳನ್ನು ವಿದೇಶಗಳಲ್ಲಿರುವ ಅಡ್ಮಿನ್‌ಗಳು ನಿರ್ವಹಣೆ ಮಾಡುತ್ತಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್‌ ಅವರ ಖಾತೆಯನ್ನು 26 ಅಡ್ಮಿನ್‌ಗಳು ಭಾರತದಿಂದ ಹಾಗೂ ತಲಾ ಓರ್ವರು ಅಮೆರಿಕ ಮತ್ತು ಕತಾರ್‌ನಿಂದ ನಿರ್ವಹಣೆ ಮಾಡುತ್ತಿದ್ದಾರೆ ಎಂದು ಅದು ಹೇಳಿದೆ. ಆದರೆ, ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆ ವಿದೇಶಗಳಲ್ಲಿರುವ ಅಡ್ಮಿನ್‌ಗಳು ಹಾಗೂ ಭಾರತದ 16 ಅಡ್ಮಿನ್‌ಗಳನ್ನು ತೆಗೆದುಹಾಕಲಾಗಿದೆ ಎಂದು ವರದಿ ತಿಳಿಸಿದೆ. ಆದರೆ ಆಪ್‌ ಈ ಬಗ್ಗೆ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.

ಮೀಡಿಯಾ ಹೌಸ್‌ ಇಂಡಿಯನ್‌ ಅಫೇರ್ಸ್‌ ಈ ಕುರಿತಾಗಿ ವರದಿ ಮಾಡಿದ್ದು, ಎಎಪಿ ಮತ್ತು ಅದರ ನಾಯಕರ ಅಧಿಕೃತ ಫೇಸ್‌ಬುಕ್ ಪುಟಗಳ ತನಿಖೆಯ ಸಮಯದಲ್ಲಿ, ಇಂಡಿಯನ್‌ ಅಫೇರ್ಸ್‌ ಟೀಮ್‌ ಕೆಲವು ಆಘಾತಕಾರಿ ಆಘಾತಕಾರಿ ಸಂಗತಿಗಳನ್ನು ಬೆಳಕಿಗೆ ತಂದಿದೆ. ಎಎಪಿ ಮುಖ್ಯಸ್ಥ ಮತ್ತು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಅಧಿಕೃತ ಫೇಸ್‌ಬುಕ್ ಪುಟದಲ್ಲಿ ಭಾರತದಿಂದ 26, ಯುನೈಟೆಡ್ ಸ್ಟೇಟ್ಸ್‌ನ ಒಬ್ಬರು ಮತ್ತು ಕತಾರ್‌ನ ಒಬ್ಬರು ಅಡ್ಮಿನ್‌ಗಳನ್ನು ಹೊಂದಿದ್ದಾರೆ ಎಂಬುದು ಬಹಿರಂಗವಾಗಿದೆ. ಸದ್ಯಕ್ಕೆ, ಭಾರತದಿಂದ ಕೇವಲ 10 ನಿರ್ವಾಹಕರು ಪುಟವನ್ನು ನಿರ್ವಹಿಸುತ್ತಾರೆ. ಕತಾರ್ ಮತ್ತು ಅಮೆರಿಕ ಮೂಲಕ ಮೂಲದ ನಿರ್ವಾಗಕರು ಹಾಗೂ ಭಾರತದ 16 ಮಂದಿ ಅಡ್ಮಿನ್‌ ಅನ್ನು ಇದರಿಂದ ತೆಗೆದುಹಾಕಲಾಗಿದೆ. ಆಮ್ ಆದ್ಮಿ ಪಕ್ಷದ ಫೇಸ್‌ಬುಕ್ ಪುಟವನ್ನು, ಭಾರತದ 34 ಮತ್ತು ಲಿಥುವೇನಿಯಾದ ಒಬ್ಬ ನಿರ್ವಾಹಕರು ನಿರ್ವಹಿಸುತ್ತಿದ್ದಾರೆ. ಬಹಿರಂಗಗೊಂಡ ನಂತರ, ಭಾರತದ ಕೇವಲ 13 ನಿರ್ವಾಹಕರು ಈಗ ಪಕ್ಷದ ಪುಟವನ್ನು ನಿರ್ವಹಿಸುತ್ತಿದ್ದಾರೆ.

ರಾಘವ್ ಚಡ್ಡಾ ಪ್ರಕರಣದಲ್ಲಿ, ಭಾರತದಿಂದ ನಾಲ್ವರು ಮತ್ತು ಯುನೈಟೆಡ್ ಸ್ಟೇಟ್ಸ್‌ನಿಂದ ಒಬ್ಬರು ಅಡ್ಮಿನ್‌ಗಳು ನಿವರ್ಹಣೆ ಮಾಡುತ್ತಿದ್ದಾರೆ. ಅಚ್ಚರಿಯ ವಿಚಾರವೆಂದರೆ, ಪ್ರಸ್ತುತ ಭಾರತದ ಒಬ್ಬ ಅಡ್ಮಿನ್‌ಅನ್ನು ಈ ಪುಟದ ನಿರ್ವಹಣೆಯಿಂದ ತೆಗೆದುಹಾಕಲಾಗಿದೆ. ಅತಿಶಿ ಪುಟದ ನಿರ್ವಾಹಕ ವಿಭಾಗದಲ್ಲಿ ಯಾವುದೇ ಬದಲಾವಣೆಗಳಿಲ್ಲ. ಆದಾಗ್ಯೂ, ಅಮನ್ ಅರೋರಾ ಪ್ರಕರಣದಲ್ಲಿ, ಕೆನಡಾದಿಂದ ನಿರ್ವಾಹಕರನ್ನು ತೆಗೆದುಹಾಕಲಾಗಿದೆ.

ನಿಮಗೆ ಸಿಗ್ತಿರೋ ಉಚಿತ ಭಾಗ್ಯಗಳ ಬಗ್ಗೆ ಹೇಳ್ತೀರಾ, ಮಖ್ಯ ನ್ಯಾಯಮೂರ್ತಿಗೇ ಪ್ರಶ್ನಿಸಿದ ಜಯಂತ್‌ ಚೌಧರಿ!

ಆಪ್‌ ನಾಯಕರು ವಿದೇಶಗಳಲ್ಲಿ ತಮ್ಮ ಬೆಂಬಲಿಗರನ್ನು ಹೊಂದಿದ್ದಾರೆ ಮತ್ತು ಅವರು ಪುಟವನ್ನು ನಿರ್ವಹಿಸುವಲ್ಲಿ ಸಹಾಯ ಮಾಡುತ್ತಿರಬಹುದು ಎಂಬುದು ಅರ್ಥವಾಗುವಂತಹದ್ದಾಗಿರಬಹುದು. ಆದರೆ, ದಿ ಇಂಡಿಯನ್ ಅಫೇರ್ಸ್ ಇದನ್ನು ಬಹಿರಂಗಪಡಿಸಿದ ನಂತರ ಪಕ್ಷದ ನಾಯಕರು ಈ ಅಡ್ಮಿನ್‌ಗಳನ್ನು ತೆಗೆದಯಹಾಕಿದ್ದು ಕುತೂಹಲಕ್ಕೆ ಕಾರಣವಾಗಿದೆ. ಇದಲ್ಲದೇ, ಕೇಜ್ರಿವಾಲ್ ಅವರ ಆಪ್ತ ಸಹಾಯಕ ಮತ್ತು ಪಂಜಾಬ್‌ನ ಭಗವಂತ್ ಮಾನ್ ಸರ್ಕಾರದ ಸಚಿವ ಅಮನ್ ಅರೋರಾ ಅವರ ಫೇಸ್‌ಬುಕ್ ಪೇಜ್‌ ಕೆನಡಾದಿಂದ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಲಾಗಿದೆ.

ಚುನಾವಣೆಯಲ್ಲಿ ಬಿಟ್ಟಿ ಭಾಗ್ಯಗಳ ಘೋಷಣೆ, ಕೇಂದ್ರ ಚುನಾವಣಾ ಆಯೋಗಕ್ಕೆ ಸುಪ್ರೀಂ ಛೀಮಾರಿ!

ರಾಜಕೀಯ ಮಾಹಿತಿ ಹಂಚಿಕೊಳ್ಳುವ ಆತಂಕ: ದೆಹಲಿಯ ಸಿಎಂ ಕೇಜ್ರಿವಾಲ್ ಅವರು ಪ್ರಜಾಪ್ರಭುತ್ವದ ಬಗ್ಗೆ ಆಗಾಗ ಮಾತನಾಡುತ್ತಿರುತ್ತಾರೆ. ಆದರೆ ಅದೇ ಪ್ರಜಾಪ್ರಭುತ್ವದ ದೇಶವೊಂದರ ಮಾಹಿತಿಯ ವಿಚಾರದಲ್ಲಿ ರಾಜಿ ಆಗುತ್ತಿರುವುದು ಅಚ್ಚರಿಗೆ ಕಾರಣವಾಗಿದೆ. ಅವರು ಅಮೆರಿಕ, ಕತಾರ್ ಮತ್ತು ಕೆನಡಾ ದೇಶಗಳೊಂದಿಗೆ ದೇಶದ ರಾಜಕೀಯ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದಾರೆ. ನಂತರ ಅದನ್ನು ಪ್ರಜಾಪ್ರಭುತ್ವ ಎಂದು ಕರೆಯುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಈ ಮಾಹಿತಿಯನ್ನು ನಿಮ್ಮ ವಿರುದ್ಧ ಬಳಸಲಾಗುವುದಿಲ್ಲ ಎಂಬ ಭರವಸೆ ಇದೆಯೇ ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ.

Follow Us:
Download App:
  • android
  • ios