Asianet Suvarna News Asianet Suvarna News

Exit Polls Survey ತ್ರಿಪುರಾ, ನಾಗಾಲ್ಯಾಂಡ್‌ನಲ್ಲಿ ಬಿಜೆಪಿಗೆ ಗೆಲುವು, ಮೆಘಾಲಯ ಕೈಜಾರಿದ ದ್ರಾಕ್ಷಿ!

ತ್ರಿಪುರ, ನಾಗಾಲ್ಯಾಂಡ್ಹಾಗೂ ಮೆಘಾಲಯ ಚುನಾವಣೋತ್ತರ ಸಮೀಕ್ಷೆ ಪ್ರಕಟಗೊಂಡಿದೆ. ಬಿಜೆಪಿ ತ್ರಿಪುರಾ ಹಾಗೂ ನಾಗಲ್ಯಾಂಡ್‌ನಲ್ಲಿ ಅಧಿಕಾರಕ್ಕೇರುವ ಸೂಚನೆ ನೀಡಿದ್ದರೆ, ಮೆಘಾಲಯದಲ್ಲಿ ಅಧಿಕಾರ ಕಳೆದುಕೊಳ್ಳುವ ಸೂಚನೆ ಸಿಕ್ಕಿದೆ. ಸಮೀಕ್ಷಾ ವರದಿ ಇಲ್ಲಿದೆ.
 

Exit Polls Survey result BJP may form governments in Tripura and Nagaland but set back in Meghalaya says report ckm
Author
First Published Feb 27, 2023, 8:14 PM IST

ನವದೆಹಲಿ(ಫೆ.27): ತ್ರಿಪುರಾ, ನಾಗಾಲ್ಯಾಂಡ್ ಹಾಗೂ ಮೆಘಾಲಯ ಅಧಿಕಾರ ಯಾರ ಕೈಗೆ? ಈ ಕುತೂಹಲಕ್ಕೆ ಮತದಾನದ ಬೆನ್ನಲ್ಲೇ ಚುನಾವಣೋತ್ತರ ಸಮೀಕ್ಷೆಗಳು ಉತ್ತರ ನೀಡುವ ಪ್ರಯತ್ನ ಮಾಡಿದೆ. ಸಮೀಕ್ಷೆಗಳ ಪ್ರಕಾರ, 3 ರಾಜ್ಯಗಳ ಪೈಕಿ ಎರಡು ರಾಜ್ಯದಲ್ಲಿ ಬಿಜೆಪಿ ಅಧಿಕಾರ ಹಿಡಿಯಲಿದೆ ಎಂದಿದೆ. ಆದರೆ ಈಗಾಗಲೇ ಮೈತ್ರಿ ಸರ್ಕಾರವಿರುವ ಮೆಘಾಲಯದಲ್ಲಿ ಸರ್ಕಾರ ಕಳೆದುಕೊಳ್ಳುವ ಆತಂಕವಿದೆ ಎಂದಿದೆ. ತ್ರಿಪುರಾ ಹಾಗೂ ನಾಗಲ್ಯಾಂಡ್‌ನಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ರಚಿಸಲಿದೆ ಎಂದು ಬಹುತೇಕ ಸಮೀಕ್ಷೆಗಳು ವರದಿ ನೀಡಿದೆ. 

ತ್ರಿಪುರಾ ರಾಜ್ಯದ ಮತದಾನ ಫೆಬ್ರವರಿ 16ಕ್ಕೆ ನಡೆದಿತ್ತು. ಆದರೆ ಮೆಘಾಲಯ ಹಾಗೂ ನಾಗಾಲ್ಯಾಂಡ್ ರಾಜ್ಯದ ಮತದಾನ ಇಂದು ಪೂರ್ಣಗೊಂಡಿದೆ. ತ್ರಿಪುರಾದಲ್ಲಿ ಶೇಕಡಾ 88ರಷ್ಟು ಮತದಾನವಾಗಿತ್ತು. ಇನ್ನು ಮೆಘಾಲಯದಲ್ಲಿ 3,419 ಕೇಂದ್ರಗಳಲ್ಲಿ ಮತದಾನ ನಡೆದಿತ್ತು. ಮೇಘಾಲಯದಲ್ಲಿ ಹಾಲಿ ಬಿಜೆಪಿ-ಎನ್‌ಪಿಪಿ ಅಧಿಕಾರದಲ್ಲಿದೆ.ಆದರೆ ಸಮೀಕ್ಷೆಗಳ ಪ್ರಕಾರ ಮೆಘಾಲಯ ಬಿಜೆಪಿ ಕೈತಪ್ಪುವ ಸೂಚನೆ ನೀಡಿದೆ. ಬಿಜೆಪಿ ಹಾಗೂ ಎನ್‌ಪಿಪಿ ಸ್ವತಂತ್ರವಾಗಿ ಸ್ಪರ್ಧಿಸಿದೆ. ಇದರ ಜೊತೆಗೆ ತೃಣಮೂಲ ಕಾಂಗ್ರೆಸ್ ಕೂಡ ಸ್ಪರ್ಧಿಸಿದೆ. ಮೆಘಾಲಯದ 59 ಸ್ಥಾನಗಳಿಗೆ ಚುನಾವಣೆ ನಡೆದಿದೆ.ಈ ಪೈಕಿ ಸರ್ಕಾರ ರಚಿಸಲು 30 ಸ್ಥಾನ ಗೆಲ್ಲಬೇಕಿದೆ.

ತ್ರಿಪುರಾದಲ್ಲಿ ಶೇ.81 ರಷ್ಟು ಮತದಾನ: ಮಾ.2ಕ್ಕೆ ಫಲಿತಾಂಶ ಪ್ರಕಟ

ಮೇಘಾಲಯದ ಚುನಾವವಣೋತ್ತರ ಸಮೀಕ್ಷೆ( ಮ್ಯಾಟ್ರಿಜ್ ಎಜೆನ್ಸಿ)
ಬಿಜೆಪಿ: 6-11 ಸ್ಥಾನ
ಟಿಎಂಸಿ: 8-13 ಸ್ಥಾನ
ಕಾಂಗ್ರೆಸ್:3-6 ಸ್ಥಾನ
ಇತರರು :10-19 ಸ್ಥಾನ 

ನಾಗಾಲ್ಯಾಂಡ್‌ನಲ್ಲಿ ಹಾಲಿ ಅಧಿಕಾರದಲ್ಲಿರುವ ಎನ್‌ಡಿಪಿಪಿ ಹಾಗೂ ಬಿಜೆಪಿ ಮೈತ್ರಿಕೂಟ ಭಾರಿ ಬಹುಮತದೊಂದಿಗೆ ಸರ್ಕಾರ ರಚಿಸಲಿದೆ ಎಂದು ಸಮೀಕ್ಷೆ ಹೇಳುತ್ತಿದೆ.  ನಾಗಾಲ್ಯಾಂಡ್‌ನ 60 ವಿಧಾನಸತ್ರಾ ಕ್ಷೇತ್ರಗಳ ಪೈಕಿ 59 ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಒಂದು ಸ್ಥಾನಕ್ಕೆ ಅವಿರೋಧವಾಗಿ ಅಭ್ಯರ್ಥಿ ಆಯ್ಕೆಯಾಗಿದ್ದಾರೆ. ನಾಗಾಲ್ಯಾಂಡ್ ಸರ್ಕಾರ ರಚಿಸಲು ಬೇಕಿರುವ ಮ್ಯಾಜಿಕ್ ನಂಬರ್ 31

ನಾಗಾಲ್ಯಾಂಡ್ ಚುನಾವವಣೋತ್ತರ ಸಮೀಕ್ಷೆ( ಮ್ಯಾಟ್ರಿಜ್ ಎಜೆನ್ಸಿ)
ಬಿಜೆಪಿ(NDA): 39
ಎನ್‌ಪಿಎಫ್: 3
ಕಾಂಗ್ರೆಸ್: 2
ಇತರರ:15

ಕೇರಳದಲ್ಲಿ ಕುಸ್ತಿ ತ್ರಿಪುರಾದಲ್ಲಿ ದೋಸ್ತಿ; ಕಾಂಗ್ರೆಸ್- ಸಿಪಿಐ(ಎಂ) ಮೈತ್ರಿ

ತ್ರಿಪುರಾ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಹಿಡಿಯಲಿದೆ ಎಂದು ಸಮೀಕ್ಷೆಗಳು ಹೇಳುತ್ತಿವೆ. 60 ಸ್ಥಾನಗಳಿಗೆ ಮತದಾನ ನಡೆದಿತ್ತು. ಈ ಪೈಕಿ ಸರ್ಕಾರ ರಚಿಸಲು ಬೇಕಿರುವ ಮ್ಯಾಜಿಕ್ ನಂಬರ್ 31. 

ತ್ರಿಪುರ ಚುನಾವವಣೋತ್ತರ ಸಮೀಕ್ಷೆ( ಮ್ಯಾಟ್ರಿಜ್ ಎಜೆನ್ಸಿ)

ಬಿಜೆಪಿ(NDA): 40
ಟಿಎಂಪಿ: 12
ಸಿಪಿಎಂ:8
ಇತರರು:0

ಮೂರು ರಾಜ್ಯಗಲ್ಲಿ ಇತರ ಸಮೀಕ್ಷಾ ಎಜೆನ್ಸಿ ನಡೆಸಿದ ವರದಿ ಇಲ್ಲಿವೆ.

ತ್ರಿಪುರಾ (ಒಟ್ಟು ಸ್ಥಾನ 60/ಬಹುಮತಕ್ಕೆ 31)
ಇಂಡಿಯಾ ಟುಡೆ 
ಬಿಜೆಪಿ: 36-45 
ಕಾಂಗ್ರೆಸ್‌: 0 
ಎಡಪಕ್ಷ: 6-11

ಟೈಮ್ಸ್‌ ನೌ
ಬಿಜೆಪಿ: 21-27
ಕಾಂಗ್ರೆಸ್‌: 0 
ಎಡಪಕ್ಷ: 18-24 
 
ಝೀ ನ್ಯೂಸ್‌
ಬಿಜೆಪಿ: 29-36
ಕಾಂಗ್ರೆಸ್‌: 0 
ಎಡಪಕ್ಷ: 13-21 
 
ಜನ್‌ ಕೀ ಬಾತ್‌
ಬಿಜೆಪಿ: 29-40
ಕಾಂಗ್ರೆಸ್‌: 0 
ಎಡಪಕ್ಷ: 9-16

ನಾಗಾಲ್ಯಾಂಡ್‌ (ಒಟ್ಟು ಸ್ಥಾನ 60/ಬಹುಮತಕ್ಕೆ 31)
ಇಂಡಿಯಾ ಟುಡೆ 38-48(ಬಿಜೆಪಿ), 1-2(ಕಾಂಗ್ರೆಸ್), 3-8(ಎನ್‌ಪಿಎಫ್‌)
ಟೈಮ್ಸ್‌ ನೌ 39-49(ಬಿಜೆಪಿ), 0(ಕಾಂಗ್ರೆಸ್), 4-8(ಎನ್‌ಪಿಎಫ್‌)
ಝೀ ನ್ಯೂಸ್‌ 35-43(ಬಿಜೆಪಿ), 1-3(ಕಾಂಗ್ರೆಸ್), 2-5(ಎನ್‌ಪಿಎಫ್‌)
ಜನ್‌ ಕೀ ಬಾತ್‌ 35-45(ಬಿಜೆಪಿ), 0(ಕಾಂಗ್ರೆಸ್), 6-10(ಎನ್‌ಪಿಎಫ್‌)

ಮೇಘಾಲಯ (ಒಟ್ಟು ಸ್ಥಾನ 60/ಬಹುಮತಕ್ಕೆ 31)
ಇಂಡಿಯಾ ಟುಡೆ 4-8(ಬಿಜೆಪಿ), 6-12(ಕಾಂಗ್ರೆಸ್), 18-24(ಎನ್‌ಪಿಪಿ)
ಟೈಮ್ಸ್‌ ನೌ 3-6(ಬಿಜೆಪಿ), 2-5(ಕಾಂಗ್ರೆಸ್), 18-26(ಎನ್‌ಪಿಪಿ)
ಝೀ ನ್ಯೂಸ್‌ 6-11(ಬಿಜೆಪಿ), 3-6(ಕಾಂಗ್ರೆಸ್), 21-26(ಎನ್‌ಪಿಪಿ)
ಜನ್‌ ಕೀ ಬಾತ್‌ 3-7ಬಿಜೆಪಿ), 6-11(ಕಾಂಗ್ರೆಸ್), 11-16(ಎನ್‌ಪಿಪಿ)

Follow Us:
Download App:
  • android
  • ios