ವಿಜಯೇಂದ್ರಗೆ ಸಿಕ್ಕಿರುವುದು ಅಧಿಕಾರ ಅಲ್ಲ, ಜವಾಬ್ದಾರಿ: ಸಿ.ಟಿ.ರವಿ

ವಿಜಯೇಂದ್ರ ಅವರಿಗೆ ಸಿಕ್ಕಿರುವುದು ಅಧಿಕಾರ ಅಲ್ಲ. ಜವಾಬ್ದಾರಿ ಎಂದು ಮಾಜಿ ಸಚಿವ ಸಿ.ಟಿ.ರವಿ ತಿಳಿಸಿದ್ದಾರೆ. ಜತೆಗೆ, ಕುಟುಂಬ ರಾಜಕಾರಣ ಟೀಕೆ ಬಗ್ಗೆ ನಿಮ್ಮನ್ನು ಕಾಡುತ್ತಿರುವ ಪ್ರಶ್ನೆಗಳು ನನ್ನನ್ನೂ ಕಾಡುತ್ತಿವೆ ಎಂದೂ ಅವರು ಮಾರ್ಮಿಕವಾಗಿ ಹೇಳಿದ್ದಾರೆ. 

Ex MLA CT Ravi Talks Over BJP State President BY Vijayendra gvd

ಬೆಂಗಳೂರು (ನ.12): ವಿಜಯೇಂದ್ರ ಅವರಿಗೆ ಸಿಕ್ಕಿರುವುದು ಅಧಿಕಾರ ಅಲ್ಲ. ಜವಾಬ್ದಾರಿ ಎಂದು ಮಾಜಿ ಸಚಿವ ಸಿ. ಟಿ.ರವಿ ತಿಳಿಸಿದ್ದಾರೆ. ಜತೆಗೆ, ಕುಟುಂಬ ರಾಜಕಾರಣ ಟೀಕೆ ಬಗ್ಗೆ ನಿಮ್ಮನ್ನು ಕಾಡುತ್ತಿರುವ ಪ್ರಶ್ನೆಗಳು ನನ್ನನ್ನೂ ಕಾಡುತ್ತಿವೆ ಎಂದೂ ಅವರು ಮಾರ್ಮಿಕವಾಗಿ ಹೇಳಿದ್ದಾರೆ. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಕೇಳಿ ತೆಗೆದುಕೊಳ್ಳುವ ಹುದ್ದೆ ಅಲ್ಲ. ನಾನು ಯಾವುದೇ ಹುದ್ದೆಯ ಆಕಾಂಕ್ಷಿಯಲ್ಲ. ಕಳೆದ ಎರಡೂವರೆ ದಶಕಗಳಿಂದ ಪಕ್ಷದಿಂದ ನಾನು ಏನನ್ನೂ ಕೇಳಿ ಪಡೆದಿಲ್ಲ. ಪಕ್ಷ ಕೊಟ್ಟ ಜವಾಬ್ದಾರಿಗಳನ್ನು ನಿರ್ವಹಿಸಿದ್ದೇನೆ ಎಂದರು. ವಿಜಯೇಂದ್ರ ಅವರಿಗೆ ಅಭಿನಂದಿಸಿದ್ದೇನೆ. ಅವರೊಂದಿಗೆ ವ್ಯಕ್ತಿಗತ ನೆಲೆಯಲ್ಲಿ ಉತ್ತಮ ಸಂಬಂಧ ಹೊಂದಿದ್ದೇನೆ. ಭಿನ್ನಾಭಿಪ್ರಾಯ ಅಥವಾ ಅಸಮಾಧಾನ ನನ್ನ ಡಿಕ್ಷನರಿಯಲ್ಲೇ ಇಲ್ಲ. ನಿನ್ನೆಯೇ ಅವರೊಂದಿಗೆ ಫೋನ್‌ನಲ್ಲಿ ಮಾತನಾಡಿ ಅಭಿನಂದನೆ ಸಲ್ಲಿಸಿದ್ದೇನೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಕೇಳದ ಮೇಲೆ ಅಸಮಾಧಾನವಿಲ್ಲ: ವಿಜಯೇಂದ್ರ ಆಯ್ಕೆ ಬಗ್ಗೆ ನಿಮಗೆ ಅಸಮಾಧಾನ ಇದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ರವಿ, ನಾನು ಸೈದ್ಧಾಂತಿಕ ಕಾರಣಕ್ಕೆ ರಾಜಕೀಯ ಬಂದಿದ್ದು. ವೈಯಕ್ತಿಕವಾಗಿ ನಾನು ಏನಾಗಬೇಕು ಎಂಬುದನ್ನು ಪಕ್ಷ ನಿರ್ಣಯ ಮಾಡಲಿದೆ. ನಾವು ಪಕ್ಷವನ್ನು ಗಟ್ಟಿಗೊಳಿಸುವ ಕೆಲಸ ಮಾಡಬೇಕು. ನಾನು ಯಾವುದೇ ಹುದ್ದೆ ಕೇಳೇ ಇಲ್ಲ ಎಂದ ಮೇಲೆ ಅಸಮಾಧಾನದ ಪ್ರಶ್ನೆ ಬರುವುದಿಲ್ಲ ಎಂದು ಹೇಳಿದರು. 

ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಲು ವಿಜಯೇಂದ್ರ ಜೊತೆ ಪ್ರವಾಸ: ನಳಿನ್‌ ಕಟೀಲ್‌

ನಾನು ಸನ್ಯಾಸಿ ಅಲ್ಲ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ನರೇಂದ್ರ ಮೋದಿ ಅವರು ಮತ್ತೆ ದೇಶದ ಪ್ರಧಾನಿಯಾಗಬೇಕು. ಇದಕ್ಕಾಗಿ ಪಕ್ಷದ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ನನ್ನ ಶಕ್ತಿ ಮೀರಿ ಕೆಲಸ ಮಾಡುತ್ತೇನೆ. ಯಾವುದಕ್ಕೂ ನಾನು ಡಿಸ್ಟರ್ಬ್‌ ಆಗುವುದಿಲ್ಲ. ವೈಯಕ್ತಿಕ ರಾಜಕಾರಣದ ವಿಚಾರದಲ್ಲಿ ನಾನು ಸನ್ಯಾಸಿ ಅಲ್ಲ. ಸದ್ಯಕ್ಕೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ ಎಂದು ಹೇಳಿದರು.

ಪ್ರಶ್ನೆ ನನ್ನನ್ನೂ ಕಾಡುತ್ತಿದೆ: ವಿಜಯೇಂದ್ರ ಆಯ್ಕೆ ಬಗ್ಗೆ ಕಾಂಗ್ರೆಸ್‌ ಕುಟುಂಬ ರಾಜಕಾರಣ ಎಂದು ಟೀಕಿಸುತ್ತಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಕೆಲವು ಸಂಗತಿಗಳನ್ನು ಈಗ ನಾನು ಮಾತನಾಡಿದರೆ ತಪ್ಪು ಅರ್ಥ ಕಲ್ಪಿಸಲಾಗುತ್ತದೆ. ಈ ಸಂದರ್ಭದಲ್ಲಿ ನಾನು ಉತ್ತರಿಸುವುದಿಲ್ಲ. ನಿಮ್ಮ ಕಾಡುತ್ತಿರುವ ರೀತಿ ನನ್ನನ್ನೂ ಪ್ರಶ್ನೆ ಕಾಡುತ್ತಿದೆ ಎಂದರು.

ಪಕ್ಷದ ನಿರ್ಣಯ: ವಿಜಯೇಂದ್ರ ನಿಷ್ಠಾವಂತ ಅಲ್ಲ ಎನ್ನುವಿರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ರವಿ, ಅದರ ವಿಶ್ಲೇಷಣೆ ನಾನು ಮಾಡಬಾರದು. ಅದರಲ್ಲೂ ನಿಮ್ಮ ನಡುವೆ ಮಾಡಬಾರದು. ಯಾವ ಸಂದರ್ಭಕ್ಕೆ ಯಾರು ಸೂಕ್ತ ಎಂಬುದನ್ನು ಪಕ್ಷ ನಿರ್ಣಯ ಮಾಡುತ್ತದೆ. ಪಕ್ಷದಲ್ಲಿ ಯೋಗತ್ಯೆ ಇರುವ ಬಹಳ ಮಂದಿ ಇರಬಹುದು. ಆದರೆ, ಪಕ್ಷ ತೀರ್ಮಾನ ಮಾಡುತ್ತದೆ ಎಂದು ಹೇಳಿದರು. ನಾನು ಪಕ್ಷದ ಹಿತದ ವಿರುದ್ಧ ಯಾವುದೇ ಚಿಂತನೆ ಮಾಡಿಲ್ಲ. ಮಾಡುವುದೂ ಇಲ್ಲ. ಸಂಭ್ರಮದಲ್ಲಿ ಇದ್ದಾಗ ಯಾರ ಮನಸನ್ನೂ ಕೆಡಿಸುವ ರೀತಿ ನಡೆದುಕೊಳ್ಳುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಸದ್ಯಕ್ಕೆ ನಂದಿನಿ ಹಾಲಿನ ದರ ಏರಿಕೆ ಇಲ್ಲ: ಸಚಿವ ಕೆ.ವೆಂಕಟೇಶ್ ಸ್ಪಷ್ಟನೆ

ನಾನು 1988ರಿಂದ ಬೂತ್‌ ಅಧ್ಯಕ್ಷನ ಹುದ್ದೆಯಿಂದ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆವರೆಗೆ ಹಂತ ಹಂತವಾಗಿ ಹತ್ತಾರು ಜವಾಬ್ದಾರಿಗಳನ್ನು ನಿರ್ವಹಿಸಿದ್ದೇನೆ. ನಾನು ಕೇಳದೆ ಪಕ್ಷ ಜವಾಬ್ದಾರಿಗಳನ್ನು ನೀಡಿದೆ. ಈಗ ಪಕ್ಷ ವಿಜಯೇಂದ್ರ ಅವರಿಗೆ ಜವಾಬ್ದಾರಿ ನೀಡಿದೆ. ವೈಚಾರಿಕ ನೆಲೆಯಲ್ಲಿ ಪಕ್ಷವನ್ನು ಮತ್ತಷ್ಟು ವಿಸ್ತರಿಸಿ ಸಶಕ್ತ ಸಂಘಟನೆ ಮಾಡಿ ಮುಂದಿನ ಲೋಕಸಭಾ ಹಾಗೂ ಮುಂಬರುವ ಚುನಾವಣೆಗಳಲ್ಲಿ ಒಳ್ಳೆಯ ಫಲಿತಾಂಶ ಬರುವಂತೆ ಕೆಲಸ ಮಾಡಬೇಕು. ವಿಜಯೇಂದ್ರ ಅವರಿಗೆ ಪಕ್ಷವನ್ನು ಯಶಸ್ಸಿನತ್ತ ಬೆಳೆಸುವ ನಿಟ್ಟಿನಲ್ಲಿ ಭಗವಂತ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.

Latest Videos
Follow Us:
Download App:
  • android
  • ios