ನನ್ಮನೆ ದೋಸೆ ತುತಾದರೆ ಬಾಲಕೃಷ್ಣರ ಬಾಣಲೆ ತೂತು: ಮಾಜಿ ಶಾಸಕ ಮಂಜುನಾಥ್
ನಾಲಿಗೆ ಬಿಗಿ ಹಿಡಿದು ಶಾಸಕ ಬಾಲಕೃಷ್ಣ ಮಾತನಾಡಬೇಕು. ನನಗೂ ಅವರ ಅಪ್ಪನಾಗಿ ಮಾತನಾಡಲು ಬರುತ್ತದೆ, ನಮ್ಮನೆ ದೋಸೆ ತೂತಾದರೆ ಬಾಲಕೃಷ್ಣರ ಮನೆಯ ಬಾಣಲೆಯೇ ತೂತಾಗಿದೆ. ಹಲ್ಲು ಬಿಗಿ ಹಿಡಿದು ಮಾತನಾಡಿ ಎಂದು ಶಾಸಕರ ವಿರುದ್ಧ ಮಾಜಿ ಶಾಸಕ ಎ.ಮಂಜುನಾಥ್ ತೀವ್ರ ವಾಗ್ದಾಳಿ ನಡೆಸಿದರು.
ಮಾಗಡಿ (ಫೆ.17): ನಾಲಿಗೆ ಬಿಗಿ ಹಿಡಿದು ಶಾಸಕ ಬಾಲಕೃಷ್ಣ ಮಾತನಾಡಬೇಕು. ನನಗೂ ಅವರ ಅಪ್ಪನಾಗಿ ಮಾತನಾಡಲು ಬರುತ್ತದೆ, ನಮ್ಮನೆ ದೋಸೆ ತೂತಾದರೆ ಬಾಲಕೃಷ್ಣರ ಮನೆಯ ಬಾಣಲೆಯೇ ತೂತಾಗಿದೆ. ಹಲ್ಲು ಬಿಗಿ ಹಿಡಿದು ಮಾತನಾಡಿ ಎಂದು ಶಾಸಕರ ವಿರುದ್ಧ ಮಾಜಿ ಶಾಸಕ ಎ.ಮಂಜುನಾಥ್ ತೀವ್ರ ವಾಗ್ದಾಳಿ ನಡೆಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕರು ನನ್ನ ವೈಯಕ್ತಿಕ ವಿಚಾರ ಮಾತನಾಡಿದ್ದಾರೆ. ನಾನು ಸಾಲ ಮಾಡಿದ್ದೇನೆ. ನಾನು ಬಡವನ ಮಗ ನನ್ನ ಸಾಲಕ್ಕೆ ಆಧಾರವಾಗಿ ವ್ಯವಹಾರ ಮಾಡಿದ್ದೇನೆ. ನನ್ನ ಸಾಲವನ್ನು ಬಾಲಕೃಷ್ಣ ತೀರಿಸುತ್ತಾರಾ?
ನನ್ನ ಸಾಲದ ಬಗ್ಗೆ ಪಟ್ಟಿ ಕೊಡುತ್ತಾರಂತೆ, ಇವರ ಸಾಲದ ಬಗ್ಗೆಯೂ ದೊಡ್ಡಪಟ್ಟಿ ಇದೆ. ಇವರು ಕೂಡ ಸಾಲ ಮಾಡಿರುವುದು ಗೊತ್ತಿದೆ. ಎಷ್ಟೋ ಜನಕ್ಕೆ ಮೋಸ ಮಾಡಿರುವುದೂ ಗೊತ್ತಿದ್ದು, ನನ್ನ ಬಗ್ಗೆ ವೈಯಕ್ತಿಕವಾಗಿ ಮಾತನಾಡಿದ್ದಾರೆ, ಅವರ ವೈಯಕ್ತಿಕ ವಿಚಾರಗಳನ್ನು ನಾನೂ ಮಾತನಾಡುವೆ. ನಾನು ಸ್ವಂತ ಹಣದಿಂದ ರಾಜಕೀಯ ಮಾಡಿದ್ದು, ನೀನು ಎಷ್ಟೋ ಜನಕ್ಕೆ ಮೋಸ ಮಾಡಿರುವ ಸಾಕ್ಷಿ ನನ್ನ ಬಳಿಯೂ ಇದೆ. ನಾನೂ ಪಟ್ಟಿ ಬಿಡುಗಡೆ ಮಾಡುತ್ತೇನೆ ಎಂದು ಏಕವಚನದಲ್ಲೇ ಬಾಲಕೃಷ್ಣ ವಿರುದ್ಧ ಹರಿಹಾಯ್ದರು.
ಸಿದ್ದರಾಮಯ್ಯಗೆ ಸರ್ಕಾರ 5 ವರ್ಷ ನಡೆಯುತ್ತೆ ಅನ್ನೋದೆ ಖಾತ್ರಿಯಿಲ್ಲ: ಭಗವಂತ ಖೂಬಾ
ನನ್ನ ಬಳಿ ಪಡೆದಿರುವ ಹಣ ವಾಪಸ್ ನೀಡಿ: 2008ರ ವಿಧಾನಸಭಾ ಚುನಾವಣೆಯಲ್ಲಿ ನನ್ನ ಮನೆಗೆ ಬಂದು ಬಾಲಕೃಷ್ಣ ಚುನಾವಣೆಗೆ ಹಣ ಪಡೆದಿದ್ದಾರೆ. ಈ ಹಣವನ್ನು ವಾಪಸ್ ಕೊಡಲಿ. ನನಗೆ ಕೊಡಲಾಗದಿದ್ದರೆ ಮಾಗಡಿಯ ಕಲ್ಯಾಗೇಟ್ ಗಣೇಶ ದೇವಸ್ಥಾನಕ್ಕೆ ಬಂದು ಕೊಡಲಿ. ನೀನು ಎರಡು ಬಾರಿ 13 ಸಾವಿರ ಮತ್ತು 11 ಸಾವಿರ ಮತಗಳಿಂದ ನನ್ನನ್ನು ಚುನಾವಣೆಯಲ್ಲಿ ಸೋಲಿಸಿದ್ದರೆ, ಕ್ಷೇತ್ರದ ಜನತೆ ನಿನ್ನನ್ನು 52 ಸಾವಿರ ಮತಗಳಿಂದ ಸೋಲಿಸಿರುವುದು ಗೊತ್ತಿದೆ. ನಾನು ನಿನ್ನ ರೀತಿ ಮೋಸ ಮಾಡಿ ರಾಜಕೀಯ ಮಾಡುತ್ತಿಲ್ಲ ಎಂದು ಮಂಜುನಾಥ್ ಹೇಳಿದರು.
ಕಾಂಗ್ರೆಸ್ ಸರ್ಕಾರದಿಂದ ಬಯಲುಸೀಮೆಗೆ ವಂಚನೆ: ಮಾಜಿ ಸಚಿವ ಡಾ.ಕೆ.ಸುಧಾಕರ್
ರಿಯಲ್ ಎಸ್ಟೇಟ್ ಮಾಡಿ ಕೇಸ್ ಹಾಕಿಸಿಕೊಂಡಿಲ್ವಾ?: ನನ್ನ ಬಗ್ಗೆ ರಿಯಲ್ ಎಸ್ಟೇಟ್ ಮಾಡಿ ಜನಗಳಿಗೆ ಮೋಸ ಮಾಡಿದ್ದಾರೆ ಎಂದು ಹೇಳಿಕೆ ಕೊಡುತ್ತಾರೆ. ಇವರು ಕೂಡ ತಮ್ಮ ಹೆಂಡತಿ ಹೆಸರಿನಲ್ಲಿ ರಿಯಲ್ ಎಸ್ಟೇಟ್ ಮಾಡಿ ಪೊಲೀಸ್ ಠಾಣೆಯಲ್ಲಿ ಕೇಸ್ ಹಾಕಿಸಿಕೊಂಡು ಬೇಲ್ ಮೇಲೆ ಆಚೆ ಬಂದಿದ್ದಾರೆ. ಇವರ ಬೆಂಗಳೂರಿನ ಮನೆ 17 ಕೋಟಿಗೆ ಆಕ್ಸಿಸ್ ಬ್ಯಾಂಕಿನಲ್ಲಿ ಹರಾಜಿಗೆ ಬಂದಿತ್ತು, ಇಂಗ್ಲೀಷ್ ಪತ್ರಿಕೆಯಲ್ಲಿ ಫೋಟೋ ಸಮೇತ ಪ್ರಕಟಣೆ ಮಾಡಿದ್ದರು. ಐದು ವರ್ಷದ ನನ್ನ ಶಾಸಕತ್ವದ ಅವಧಿಯಲ್ಲಿ ಒಂದು ಕೂಡ ಕಳ್ಳ ಬಿಲ್ ಮಾಡಿಸಿಕೊಂಡಿಲ್ಲ. ನಿಮ್ಮ ಅವಧಿಯಲ್ಲಿ 600 ಕೋಟಿ ಹಗರಣ ರಾಜ್ಯಸಭಾ ಚುನಾವಣೆಯಲ್ಲಿ 10 ಕೋಟಿಗೆ ಮಾರಾಟವಾಗಿರುವುದು ಗೊತ್ತಿಲ್ಲವೇ ? ನಿಮ್ಮ ಕುಟುಂಬದ ಮೇಲಿನ ಗೌರವಕ್ಕೆ ವೈಯಕ್ತಿಕವಾಗಿ ಮಾತನಾಡುತ್ತಿರಲಿಲ್ಲ. ಇನ್ನು ಮುಂದೆ ಏಕವಚನದಲ್ಲೇ ದಾಳಿ ಮಾಡುತ್ತೇನೆಂದು ಗುಡುಗಿದರು.