Asianet Suvarna News Asianet Suvarna News

ಶಾಸಕ ಯತ್ನಾಳ್ ಒಬ್ಬ ಸುಸಂಸ್ಕೃತ ರಾಜಕಾರಣಿ: ವಿ.ಸೋಮಣ್ಣ

ನಾನು, ಹೇಳುವುದನ್ನೆಲ್ಲಾ 6ನೇ ತಾರೀಕಿನ ಬಳಿಕ ಹೇಳುವುದಾಗಿ ಮಾಜಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ. ಸಿದ್ಧಗಂಗಾ ಮಠದಲ್ಲಿ ಗುರುಭವನ ಉದ್ಘಾಟನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಕೆಲ ನಾಯಿ‌ ನರಿಗಳಿಂದ ಸ್ವಲ್ಪ ವ್ಯತ್ಯಾಸವಾಗಿದೆ. 
 

Ex Minister V Somanna Talks Over MLA Basanagouda Patil Yatnal At Tumakuru gvd
Author
First Published Dec 7, 2023, 10:03 PM IST

ತುಮಕೂರು (ಡಿ.07): ನಾನು, ಹೇಳುವುದನ್ನೆಲ್ಲಾ 6ನೇ ತಾರೀಕಿನ ಬಳಿಕ ಹೇಳುವುದಾಗಿ ಮಾಜಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ. ಸಿದ್ಧಗಂಗಾ ಮಠದಲ್ಲಿ ಗುರುಭವನ ಉದ್ಘಾಟನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಕೆಲ ನಾಯಿ‌ ನರಿಗಳಿಂದ ಸ್ವಲ್ಪ ವ್ಯತ್ಯಾಸವಾಗಿದೆ. ಕಾಲ ಬಂದಾಗ ಮಾತನಾಡೋಣ ಎಂದರು. ನಾನು, ಯಾವತ್ತು ಅಧೈರ್ಯವಂತ ಆಗಿಲ್ಲ. ಜಿ.ಪರಮೇಶ್ವರ್ ಜೊತೆಗೆ ಉತ್ತಮ ಸ್ನೇಹವಿದೆ. ಅವರು ನನ್ನ ಬಗ್ಗೆ ಹೇಳಿದ್ದಾರೆ. ಅದು ಅವರ ದೊಡ್ಡತನ ಎಂದ ಸೋಮಣ್ಣ ನಾವೆಲ್ಲಾ 50 ವರ್ಷದ ಸ್ನೇಹಿತರು. ರಾಜಕಾರಣ ಬೇರೆ, ವೈಯಕ್ತಿಕ ಬೇರೆ ಎಂದರು. 

ನ.30 ರಂದು ಹೈ ಕಮಾಂಡ್ ಟೈಮ್ ಕೊಟ್ಟಿತ್ತು. ಅವತ್ತು ನಾನು ಹೋಗಲಿಲ್ಲ ಎಂದರು. ಯತ್ನಾಳ್ ಒಬ್ಬ ಸುಸಂಸ್ಕೃತ ರಾಜಕಾರಣಿ ಎಂದು ಪ್ರಶಂಸಿಸಿದ ಸೋಮಣ್ಣ ನೇರವಾಗಿ ಹೇಳುವಂತಹವರು ಯಾರಿದ್ದಾರೆ. ಅವರ ನೋವನ್ನು ನೇರವಾಗಿ ತೋಡಿಕೊಂಡಿದ್ದಾರೆ ಎಂದ ಅವರು ಯತ್ನಾಳ್ ಅವರನ್ನು ಇತ್ತೀಚೆಗೆ ಭೇಟಿಯಾಗಿಲ್ಲ, ಕಾಲ ಬಂದಾಗ ಎಲ್ಲಾ ಸರಿ ಹೋಗುತ್ತದೆ ಎಂದರು. ಸತ್ಯವನ್ನು ಮರೆ ಮಾಚಲು ಸಾಧ್ಯವಿಲ್ಲ. ಎರಡು ಮೂರು ದಿನ ಕಾಯುತ್ತೇನೆ. ಆಮೇಲೆ ಹೊರಗೆ ಹಾಕುತ್ತೇನೆ ಎಂದರು. ನನ್ನನ್ನು ನಡೆವಳಿಯನ್ನು ಇನ್ನೊಬ್ಬರೊಂದಿಗೆ ಹೋಲಿಕೆ ಮಾಡಬೇಡಿ ಎಂದರು. ಬೆಂಗಳೂರಿನಲ್ಲಿ 14-15 ವರ್ಷ ಮಂತ್ರಿಯಾಗಿದ್ದೇ ಅನ್ನುವುದಕ್ಕಿಂತ ಧ್ವನಿ ಇಲ್ಲದವರಿಗೆ ಕೆಲಸ ಮಾಡಿದ್ದೇನೆ. 

ಅಂಬೇಡ್ಕರ್ ಮೀಸಲು ಮಾತ್ರವಲ್ಲ, ಮೂಲಭೂತ ಹಕ್ಕು ನೀಡಿದ್ದಾರೆ: ಬರಗೂರು ರಾಮಚಂದ್ರಪ್ಪ

ನನ್ನ ನೇರ ನುಡಿಯ ಸಂಸ್ಕಾರ ಸಿದ್ಧಗಂಗಾ ಮಠದಿಂದ ಬಂತು ಎಂದರು. ವರಿಷ್ಠರು ಯಾವ ರೀತಿ ನಡೆದುಕೊಳ್ಳಬೇಕು ಅಂತ ಹೇಳುತ್ತಾರೆ ಗೊತ್ತಿಲ್ಲ. ಅರ್ಹತೆ ಗುರುತಿಸುವ ಮಾನದಂಡ ಈ ರೀತಿ ಆಗಿರಬಾರದು. ಅರ್ಹತೆ ಯಾರ ಮನೆಯ ಸ್ವತ್ತಲ್ಲ ಎಂದ ಸೋಮಣ್ಣ ಅರ್ಹತೆ ಇಲ್ಲದವರು ಹೇಗೆ ಬೇಕಾದರೂ ನಡೆಕೊಳ್ಳಬಹುದು ಅಂತಿಲ್ಲ ಎಂದರು. ಆಗಿರುವ ತಪ್ಪನ್ನು ಹೈಕಮಾಂಡ್ ಯಾವ ರೀತಿ ಸರಿ ಪಡಿಸುತ್ತಾರೆ ಅನ್ನೋದು ಗೊತ್ತಿಲ್ಲ ಎಂದ ಅವರು ಅನಾವಶ್ಯಕ ನಮ್ಮನ್ನು ಯಾರೋ ಸಣ್ಣಪುಟ್ಟವರ ಜೊತೆಗೆ ಹೋಲಿಕೆ ಮಾಡಬೇಡಿ ಎಂದರು. ಮೇಲೆ ಆಕಾಶವಿದೆ ಅಂತ ಆಕಾಶಕ್ಕೆ ಉಗುಳಿದೆ. ಅದು ನನ್ನ ಮೇಲೆ ಬಿದ್ದಿದೆ. ಅದನ್ನು ಒರಸಿಕೊಂಡು ಹೋಗುವ ಕೆಲಸ ಮಾಡುತ್ತೇವೆ ಎಂದರು.

ಶಿವಕುಮಾರ ಸ್ವಾಮೀಜಿ ಅದ್ಯಯನ ಪೀಠ ಸ್ಥಾಪನೆಗೆ ಕ್ರಮ: ಬೆಂಗಳೂರು ವಿ.ವಿ.ಯಲ್ಲಿ ಶಿವಕುಮಾರ ಸ್ವಾಮೀಜಿ ಅಧ್ಯಯನ ಪೀಠ ಸ್ಥಾಪನೆ ಸಂಬಂಧ ನಾನು ಹಾಗೂ ಸಚಿವ ರಾಜಣ್ಣ ಇಬ್ಬರು ಮುಂದಾಳತ್ವ ವಹಿಸುವುದಾಗಿ ತಿಳಿಸಿದರು. ತುಮಕೂರಿನಲ್ಲಿ ನಡೆದ ಗುರುಭವನ ಉದ್ಘಾಟನಾ ವೇಳೆ ಮಾತನಾಡಿದ ಮಾಜಿ ಸಚಿವ ಸೋಮಣ್ಣ, ಬೆಂಗಳೂರು ವಿ.ವಿ.ಯಲ್ಲಿ ಶಿವಕುಮಾರ ಸ್ವಾಮೀಜಿ ಅಧ್ಯಯನ ಪೀಠ ಸ್ಥಾಪಿಸುವಂತೆ ಸಲ್ಲಿಸಿದ ಮನವಿ ಹಿನ್ನೆಲೆ ಉತ್ತರಿಸಿದರು. ಸೋಮಣ್ಣ ಹಾಗೂ ಅವರ ಶ್ರೀಮತಿ ಸಿದ್ದಗಂಗಾಮಠಕ್ಕೆ ಗುರುಭವನ ಕಟ್ಟಿಸಿದ್ದಾರೆ. ಗುರುಭವನ ಉದ್ಘಾಟನೆಗೆ ನನ್ನನ್ನು, ರಾಜಣ್ಣನ್ನು ಕರೆದಿದ್ದರು. 

ರಾಷ್ಟ್ರೀಯ ಹೆದ್ದಾರಿಯ 24 ಸ್ಥಳಗಳಲ್ಲಿ ಫುಟ್ ಓವರ್ ಬ್ರಿಡ್ಜ್ ನಿರ್ಮಾಣ: ಸಚಿವ ಸತೀಶ್‌ ಜಾರಕಿಹೊಳಿ

ನಾವು, ಅಧಿವೇಶನದಲ್ಲಿ ಇದ್ದರೂ ಅನುಮತಿ ತೆಗೆದುಕೊಂಡು ಬಂದಿದ್ದೇವೆ ಎಂದರು. ಸೋಮಣ್ಣ ಕಾಂಗ್ರೆಸ್ ಬರುವ ವಿಚಾರ ವರಿಷ್ಟರು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು. ಭ್ರೂಣ ಮಾರಾಟ ವಿಚಾರ ತನಿಖೆ ಮಾಡುತ್ತಿದ್ದೇವೆ. ಪ್ರಕರಣ ಸಿಐಡಿ ತನಿಖೆಗೆ ನೀಡುತ್ತೇವೆ ಎಂದ ಅವರು ಇಡೀ ರಾಜ್ಯಾದ್ಯಂತ ಶಿಶು ಮಾರಾಟವಾಗಿದೆ. ತನಿಖೆಯಲ್ಲಿ ಸತ್ಯಾಸತ್ಯತೆ ಗೊತ್ತಾಗಲಿದೆ ಎಂದರು. ಮಾಡಾಳು ವಿರುಪಾಕ್ಷಪ್ಪ ಪ್ರಕರಣ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡುವ ಬಗ್ಗೆ ಪ್ರತಿಕ್ರಿಯಿಸಿದ ಅವರು ಅನುಮತಿ ಕೇಳಿದರೆ ಕೊಡುವುದಾಗಿ ತಿಳಿಸಿದರು. ಎತ್ತಿನಹೊಳೆ ಯೋಜನೆ 2023ಕ್ಕೆ ಮುಗಿಬೇಕು.‌ ಬೇಗ ಮುಗಿಸಿ ಅಂತ ಒತ್ತಡ ಹಾಕುತ್ತಿದ್ದೇವೆ ಎಂದರು.

Follow Us:
Download App:
  • android
  • ios