Asianet Suvarna News Asianet Suvarna News

ಕಾಂಗ್ರೆಸ್ಸಿಗೆ ಸೀತಾರಾಂ ಗುಡ್‌ಬೈ?: ನಿರ್ಧಾರಕ್ಕೆ ನಾಳೆ ಬೆಂಬಲಿಗರ ಸಭೆ

ವಿಧಾನಪರಿಷತ್‌ ಸದಸ್ಯ ಸ್ಥಾನ ದೊರೆಯದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಪಕ್ಷದ ಬಗ್ಗೆ ತೀವ್ರ ಅಸಮಾಧಾನಗೊಂಡಿರುವ ಮಾಜಿ ಸಚಿವ ಎಂ.ಆರ್‌. ಸೀತಾರಾಂ ಅವರು ಮುಂದಿನ ರಾಜಕೀಯ ನಡೆ ಬಗ್ಗೆ ನಿರ್ಧರಿಸಲು ಶುಕ್ರವಾರ ಬೆಂಬಲಿಗರ ಸಭೆ ಕರೆದಿದ್ದಾರೆ.

Ex Minister MR Seetharam Quits Congress gvd
Author
Bangalore, First Published Jun 23, 2022, 4:30 AM IST

ಬೆಂಗಳೂರು (ಜೂ.23): ವಿಧಾನಪರಿಷತ್‌ ಸದಸ್ಯ ಸ್ಥಾನ ದೊರೆಯದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಪಕ್ಷದ ಬಗ್ಗೆ ತೀವ್ರ ಅಸಮಾಧಾನಗೊಂಡಿರುವ ಮಾಜಿ ಸಚಿವ ಎಂ.ಆರ್‌. ಸೀತಾರಾಂ ಅವರು ಮುಂದಿನ ರಾಜಕೀಯ ನಡೆ ಬಗ್ಗೆ ನಿರ್ಧರಿಸಲು ಶುಕ್ರವಾರ ಬೆಂಬಲಿಗರ ಸಭೆ ಕರೆದಿದ್ದಾರೆ. ಅರಮನೆ ಮೈದಾನದ ವೈಟ್‌ಪೆಟಲ್ಸ್‌ ಗಾರ್ಡೆನಿಯಾದಲ್ಲಿ ಬೆಂಬಲಿಗರ ಸಭೆ ಕರೆದಿದ್ದು, ಪಕ್ಷದಲ್ಲಿ ಮುಂದುವರೆಯಬೇಕೆ ಅಥವಾ ಬೇರೆ ಪಕ್ಷ ಸೇರ್ಪಡೆಯಾಗಬೇಕೆ ಎಂಬುದರ ಕುರಿತು ಚರ್ಚಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

2009ರಲ್ಲಿ ಚಿಕ್ಕಬಳ್ಳಾಪುರದಿಂದ ಲೋಕಸಭೆಗೆ ಸ್ಪರ್ಧಿಸಲು ಅವಕಾಶ ನಿರಾಕರಿಸಲಾಯಿತು. 2012ರಲ್ಲಿ ಕಾಂಗ್ರೆಸ್‌ ಮತ ಕಡಿಮೆಯಿರುವಾಗ ನನಗೆ ಪರಿಷತ್‌ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಿದರು. ಆದರೂ ಶಾಸಕರ ಬೆಂಬಲ ಪಡೆದು ಗೆದ್ದಿದ್ದೇನೆ. 2016ರಿಂದ 2018ರವರೆಗೆ ಸಚಿವನಾಗಿಯೂ ಕೆಲಸ ಮಾಡಿದ್ದೇನೆ. ಆದರೆ, ಪಕ್ಷವು ನನ್ನೊಂದಿಗೆ ವಿಧಾನಪರಿಷತ್ತಿಗೆ ಆಯ್ಕೆಯಾದವರಿಗೆ 2018ರಲ್ಲಿ ಮತ್ತೊಂದು ಅವಕಾಶ ಕಲ್ಪಿಸಿ, ನನಗೆ ಮಾತ್ರ ಅವಕಾಶ ನಿರಾಕರಿಸಿತು. 2020ರಲ್ಲಿ ಹಾಗೂ ಇದೀಗ 2022ರ ಮೇ ತಿಂಗಳಲ್ಲೂ ರಾತ್ರೋರಾತ್ರಿ ಪಿತೂರಿ ನಡೆಸಿ ಪರಿಷತ್‌ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನಿರಾಕರಿಸಲಾಯಿತು ಎಂದು ಬೆಂಬಲಿಗರಿಗೆ ಬರೆದಿರುವ ಬಹಿರಂಗ ಪತ್ರದಲ್ಲಿ ಬೇಸರ ತೋಡಿಕೊಂಡಿದ್ದಾರೆ.

ಕಳೆದ 6 ವರ್ಷದಲ್ಲಿ ಕರ್ನಾಟಕ ಸೇರಿ 7 ರಾಜ್ಯಗಳಲ್ಲಿ ಆಪರೇಷನ್ ಕಮಲ, 4 ಬಾರಿ ಸಕ್ಸಸ್!

ಈ ಬಗ್ಗೆ ಬೆಂಬಲಿಗರಿಗೆ ಬಹಿರಂಗ ಪತ್ರ ಬರೆದಿರುವ ಅವರು, 1985ರಿಂದ ಈವರೆಗೆ ಎಲ್ಲಾ ಹಂತದ ಚುನಾವಣೆಗಳಲ್ಲಿ ರಾಜ್ಯದ ಮೂಲೆ-ಮೂಲೆಗೂ ಪ್ರವಾಸ ಮಾಡಿ ಎಲ್ಲಾ ವರ್ಗಗಳ ಕಷ್ಟಗಳಿಗೆ ಸ್ಪಂದಿಸಿದ್ದೇನೆ. ನನ್ನೆಲ್ಲಾ ನಿಸ್ವಾರ್ಥ ಸೇವೆ ಪರಿಗಣಿಸದೆ ಕೆಲ ಸ್ವಾರ್ಥ ಹಾಗೂ ಪಟ್ಟಭದ್ರ ಶಕ್ತಿಗಳು ಕುಟಿಲ ರಾಜಕೀಯ ನಡೆಸುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹೊಸ ಬಾಂಬ್‌ ಸಿಡಿಸಿದ ಸಚಿವ ಕತ್ತಿ: ರಾಜ್ಯ ಸೇರಿದಂತೆ ದೇಶದ ನಾನಾ ಭಾಗಗಳಲ್ಲಿ ಕೇಂದ್ರದ ಅಗ್ನಿಪಥ್‌ ಯೋಜನೆಗೆ ಪ್ರತಿಪಕ್ಷ ಕಾಂಗ್ರೆಸ್‌ನಿಂದ ತೀವ್ರ ವಿರೋಧ ವ್ಯಕ್ತವಾಗಿರುವ ಬೆನ್ನಲ್ಲೇ ಇದು ಕಾಂಗ್ರೆಸ್‌ನವರೇ ರೂಪಿಸಿದ ಯೋಜನೆ ಎಂದು ಆಹಾರ ಸಚಿವ ಉಮೇಶ ಕತ್ತಿ ಹೊಸ ಬಾಂಬ್‌ ಸಿಡಿಸಿದ್ದಾರೆ. ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಹಿಡಕಲ್‌ ಜಲಾಶಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಗ್ನಿಪಥ್‌ ಯೋಜನೆಯನ್ನು ಕಾಂಗ್ರೆಸ್‌ನವರೇ 1990ರ ಆಚೀಚೆ ಯೋಜನೆಯನ್ನು ಮಾಡಿದವರು. 

ಆಸ್ಪತ್ರೆಯಿಂದ ಬಿಡುಗಡೆಯಾದ ಸೋನಿಯಾ ಗಾಂಧಿ ಇಡಿಗೆ ಪತ್ರ, ವಿಚಾರಣೆ ಮುಂದೂಡಲು ಮನವಿ!

ಈಗ ಪ್ರಧಾನಿ ನರೇಂದ್ರ ಮೋದಿ ಅವರು ಅನುಷ್ಠಾನ ಮಾಡುತ್ತಿದ್ದಾರೆ ಎಂದು ಹೇಳಿದರು. ಕಾಂಗ್ರೆಸ್‌ಗೆ ಉದ್ಯೋಗ ಇಲ್ಲ. ಮಾತ್ರವಲ್ಲ, ಡಿ.ಕೆ.ಶಿವಕುಮಾರ್‌ಗೆ, ಸಿದ್ದರಾಮಯ್ಯಗೂ ಉದ್ಯೋಗ ಇಲ್ಲ. ಅವರಿಗೆ ಬುದ್ಧಿಭ್ರಮಣೆಯಾಗಿದೆ. ಈ ರೀತಿಯಾಗಿ ವಿರೋಧ ಮಾಡುವುದರಲ್ಲಿ ಅರ್ಥವಿಲ್ಲ ಎಂದು ದೂರಿದರು. 75 ಸಾವಿರ ಯುವಕರಿಗೆ ನೌಕರಿ ಕೊಡುವ ಉದ್ದೇಶವನ್ನು ಅಗ್ನಿಪಥ್‌ ಹೊಂದಿದೆ. ನಾಲ್ಕು ವರ್ಷಗಳ ಕಾಲ ಅವರು ಸೇವೆ ಮಾಡುವುದು ಯೋಜನೆಯಲ್ಲಿದೆ. ಅವರು ದುಡಿದ .11 ಲಕ್ಷ ನಾವು ಕೊಡುವ .11 ಲಕ್ಷ ಸೇರಿಸಿ ನಂತರ ಅವರಿಗೆ ನೀಡುವ ಯೋಜನೆ ಇದೆ ಎಂದು ಸಮರ್ಥಿಸಿಕೊಂಡರು.

Follow Us:
Download App:
  • android
  • ios