ಮೂರು ನಾಲ್ಕು ಜನ ಸೇರಿ ನಿಮ್ಮನ್ನು ಆಟ ಆಡಿಸುತ್ತಿದ್ದಾರೆ. ನಿಮ್ಮದು ನಾಲಿಗೆನಾ ಎಕ್ಕಡನೋ. ನಿಮಗೆ ಎಚ್ಚರ ನೀಡಲು ವೀರಶೈವ ಲಿಂಗಾಯತ ಮಹಾ ಸಂಗಮ ಸಮಾವೇಶ ನಡೆಸುತ್ತಿದ್ದೇವೆ ಎಂದು ಮಾಜಿ ಸಚಿವ ರೇಣುಕಾಚಾರ್ಯ ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಎಚ್ಚರಿಕೆ ನೀಡಿದರು.
ಚಿಕ್ಕಮಗಳೂರು (ಮಾ.09): ಮೂರು ನಾಲ್ಕು ಜನ ಸೇರಿ ನಿಮ್ಮನ್ನು ಆಟ ಆಡಿಸುತ್ತಿದ್ದಾರೆ. ನಿಮ್ಮದು ನಾಲಿಗೆನಾ ಎಕ್ಕಡನೋ. ನಿಮಗೆ ಎಚ್ಚರ ನೀಡಲು ವೀರಶೈವ ಲಿಂಗಾಯತ ಮಹಾ ಸಂಗಮ ಸಮಾವೇಶ ನಡೆಸುತ್ತಿದ್ದೇವೆ ಎಂದು ಮಾಜಿ ಸಚಿವ ರೇಣುಕಾಚಾರ್ಯ ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಎಚ್ಚರಿಕೆ ನೀಡಿದರು. ನಗರದ ಶ್ರೀ ರೇಣುಕಾಚಾರ್ಯ ಕಲ್ಯಾಣ ಮಂಟಪದಲ್ಲಿ ನಡೆದ ವೀರಶೈವ ಲಿಂಗಾಯತ ಮಹಾ ಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಮಾಜದ ಮಠಾಧೀಶರನ್ನು ಪೇಮೆಂಟ್ ಗುರುಗಳೆಂದು ಹೇಳಲು ನಿಮಗೆ ನಾಚಿಕೆಯಾಗಬೇಕು. ಮಠಾಧೀಶರನ್ನು ಅವಮಾನ ಮಾಡಿದ ನಿಮಗೆ ಮುಂದಿನ ದಿನಗಳಲ್ಲಿ ಸಮುದಾಯದವರು ತಕ್ಕ ಪಾಠ ಕಲಿಸಲಿದ್ದಾರೆ ಎಂದರು. ಯಡಿಯೂರಪ್ಪ ಹಾಗೂ ವಿಜಯೇಂದ್ರ ಪರವಾಗಿ ನಮ್ಮ ಸಮುದಾಯ ಗಟ್ಟಿ ಧ್ವನಿಯಾಗಿ ನಿಂತಿದೆ. ಯಡಿಯೂರಪ್ಪ ಹಾಗೂ ವಿಜಯೇಂದ್ರರ ಬಗ್ಗೆ ಹಗುರವಾಗಿ ಮಾತನಾಡಿರುವ ನಿಮ್ಮನ್ನು ನಮ್ಮ ಜನಾಂಗ ಹಾಗೂ ಮಠಾಧೀಶರು ಸುಮ್ನೆ ಬಿಡ್ತಾರಾ ಎಂದು ಪ್ರಶ್ನಿಸಿದರು.
ವಿಜಯೇಂದ್ರ ಭವಿಷ್ಯದ ನಾಯಕ, ಭವಿಷ್ಯದ ಮುಖ್ಯಮಂತ್ರಿ, ಸಂಘಟನಾ ಚತುರ. ಈ ಘೋಷಣೆಯನ್ನು ಚಿಕ್ಕಮಗಳೂರಿನಲ್ಲಿ ಮಾತ್ರ ಅಲ್ಲ ವಿಜಾಪುರದಲ್ಲೂ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದರು. ಮಾಜಿ ಸಚಿವ ಬಿ.ಸಿ. ಪಾಟೀಲ್ ಮಾತನಾಡಿ, ನಳಿನ್ ಕುಮಾರ್ ಕಟೀಲ್ ಅವರು ಆರು ವರ್ಷಗಳ ಕಾಲ ಬಿಜೆಪಿಯ ರಾಜ್ಯ ಅಧ್ಯಕ್ಷರಾಗಿದ್ದಾಗ ಯಾರೂ ಕೂಡ ಚಕಾರ ಎತ್ತಿರಲಿಲ್ಲ. ಆದರೆ. ವಿಜಯೇಂದ್ರ ಅವರು ರಾಜ್ಯ ಅಧ್ಯಕ್ಷರಾದ ನಂತರ ಯತ್ನಾಳ್ ಅವರು, ಮಾತನಾಡುತ್ತಿದ್ದಾರೆ.
ನೀವ್ಯಾರೂ ಲಿಂಗಾಯತ ನಾಯಕರಲ್ಲ: ಶಾಸಕ ಯತ್ನಾಳ್‌ಗೆ ರೇಣುಕಾಚಾರ್ಯ ತಿರುಗೇಟು
ಎಲುಬಿಲ್ಲದ ನಾಲಿಗೆ ಎಂದು ಏನು ಬೇಕಾದರೂ ಮಾತನಾಡುವುದು ಸರಿ ಅಲ್ಲ ಎಂದು ಹೇಳಿದರು. ಮುಂದಿನ ವಿಧಾನಸಭಾ ಚುನಾವಣೆ ವಿಜಯೇಂದ್ರ ಅವರ ನೇತೃತ್ವ ನಡೆಯಬೇಕು. ಆಗ ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದರು. ತರೀಕೆರೆ ಮಾಜಿ ಶಾಸಕ ಡಿ.ಎಸ್. ಸುರೇಶ್ ಮಾತನಾಡಿ, ನಮ್ಮ ಸಮುದಾಯ ಯಡಿಯೂರಪ್ಪ ಹಾಗೂ ವಿಜಯೇಂದ್ರ ಪರವಾಗಿ ಇದೆ ಎಂಬುದನ್ನು ಯತ್ನಾಳ್ ಹಾಗೂ ಅವರ ಟೀಮ್‌ಗೆ ತೋರಿಸಲು ಈ ಸಮಾವೇಶ ನಡೆಸಲಾಗುತ್ತಿದೆ ಎಂದು ಹೇಳಿದರು.
