Asianet Suvarna News Asianet Suvarna News

ಯು.ಟಿ.ಖಾದರ್‌ ಸಭಾ​ಧ್ಯಕ್ಷ ಪೀಠಕ್ಕೆ ಯೋಗ್ಯ​ರ​ಲ್ಲ: ಈಶ್ವ​ರಪ್ಪ

ಸದನ ನಡೆಯುತ್ತಿರುವ ವೇಳೆ ವಿಧಾನಸಭಾಧ್ಯಕ್ಷರು ತಮ್ಮ ಸ್ಥಾನಕ್ಕೆ ಅಗೌರವ ತೋರಿಸಿ, ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಭಾಧ್ಯಕ್ಷರ ನಡೆ ಖಂಡಿಸಿ ಶನಿವಾರ ಜಿಲ್ಲಾ ಬಿಜೆಪಿ ವತಿಯಿಂದ ನಗರದ ಶಿವಪ್ಪ ನಾಯಕ ವೃತ್ತದಲ್ಲಿ ಬೃಹತ್‌ ಪ್ರತಿಭಟನೆ ನಡೆಸಲಾಯಿತು.

Ex Minister KS Eshwarappa Slams On UT Khader gvd
Author
First Published Jul 23, 2023, 4:18 PM IST

ಶಿವಮೊಗ್ಗ (ಜು.23): ಸದನ ನಡೆಯುತ್ತಿರುವ ವೇಳೆ ವಿಧಾನಸಭಾಧ್ಯಕ್ಷರು ತಮ್ಮ ಸ್ಥಾನಕ್ಕೆ ಅಗೌರವ ತೋರಿಸಿ, ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಭಾಧ್ಯಕ್ಷರ ನಡೆ ಖಂಡಿಸಿ ಶನಿವಾರ ಜಿಲ್ಲಾ ಬಿಜೆಪಿ ವತಿಯಿಂದ ನಗರದ ಶಿವಪ್ಪ ನಾಯಕ ವೃತ್ತದಲ್ಲಿ ಬೃಹತ್‌ ಪ್ರತಿಭಟನೆ ನಡೆಸಲಾಯಿತು. ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್‌. ಈಶ್ವರಪ್ಪ ಈ ಸಂದರ್ಭ ಮಾತನಾಡಿ, ಮಾತೆತ್ತಿದರೆ ಕಾಂಗ್ರೆಸ್‌ನವರು ಅಂಬೇಡ್ಕರ್‌ ಮತ್ತು ಸಂವಿಧಾನ ಎಂದು ಹೇಳುತ್ತಾರೆ. ಐಎಎಸ್‌ ಅಧಿಕಾರಿಗಳನ್ನು ಯಾವ ಲೆಕ್ಕಾಚಾರದಲ್ಲಿ ಸಂವಿಧಾನಕ್ಕೆ ವಿರೋಧವಾಗಿ ಸ್ವಾಗತ ಮಾಡಲು ಕಳಿಸಿದರು? ಇದಕ್ಕೆ ಕಾರಣರಾದ ಹಿರಿಯ ಅಧಿಕಾರಿಗಳು ಅವರೇ ಈ ಖರ್ಚು ಭರಿಸಬೇಕು ಎಂದು ಒತ್ತಾಯಿಸಿದರು.

ವಿಧಾನಸಭೆ ಸಭಾಧ್ಯಕ್ಷ ಯು.ಟಿ. ಖಾದರ್‌ ಅವರು ಗೊತ್ತಿಲ್ಲದೇ ನಾನು ಪಕ್ಷದ ಸಭೆಗೆ ಹೋಗಿದ್ದೆ ಎಂದರೆ ಕ್ಷಮಿಸಬಹುದಿತ್ತು. ಅವರು ಪೀಠಕ್ಕೆ ಯೋಗ್ಯರಲ್ಲ, ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸುತ್ತಾರೆ ಎಂದ​ರು.ನವಿಧಾನ ಪರಿಷತ್ತು ಮಾಜಿ ಶಾಸಕ ಆರ್‌.ಕೆ. ಸಿದ್ರಾಮಣ್ಣ ಮಾತ​ನಾ​ಡಿ​ದರು. ಶಾಸಕ ಡಿ.ಎಸ್‌. ಅರುಣ್‌, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್‌, ಮೇಯರ್‌ ಶಿವಕುಮಾರ್‌, ಉಪಮೇಯರ್‌ ಲಕ್ಷ್ಮೇ ಶಂಕರ ನಾಯ್ಕ್, ಬಿಜೆಪಿ ನಗರಾಧ್ಯಕ್ಷ ಟಿ.ಬಿ. ಜಗದೀಶ್‌, ಪ್ರಮುಖರಾದ ಎಸ್‌.ದತ್ತಾತ್ರಿ, ಇ.ವಿಶ್ವಾಸ್‌, ಎಸ್‌.ಜ್ಞಾನೇಶ್ವರ್‌, ಮೋಹನ್‌ ರೆಡ್ಡಿ, ಶ್ರೀನಾಥ್‌ ಮೊದಲಾದವರಿದ್ದರು.

ಗುತ್ತಿಗೆ ನೌಕರರನ್ನು ಕೆಲಸದಿಂದ ತೆಗೆಯುವಂತೆ ನಾನು ಹೇಳಿಲ್ಲ: ಸುನಿಲ್‌ ಬೋಸ್‌

ಹುದ್ದೆಗೆ ಸ್ಪೀಕರ್‌ ರಾಜಿ​ನಾಮೆ ನೀಡ​ಲಿ: ಶಿವ​ಮೊಗ್ಗ ನಗರ ಕ್ಷೇತ್ರ ಶಾಸಕ ಎಸ್‌.ಎನ್‌. ಚನ್ನಬಸಪ್ಪ ಮಾತನಾಡಿ, ಇಂದಿರಾ ಗಾಂಧಿ ಕೂಡ ಪ್ರಜಾಪ್ರಭುತ್ವ ದಮನಕ್ಕೆ ಕೈಹಾಕಿದ್ದರು. ವಿಚಿತ್ರ ಪರಿಸ್ಥಿತಿಯಲ್ಲಿ ಅಧಿವೇಶನ ನಡೆಯುತ್ತಿದ್ದು, ಸ್ಪೀಕರ್‌ ಪಾರ್ಟಿಯ ಕೈಗೊಂಬೆಯಂತೆ ನಡೆದುಕೊಂಡಿದ್ದು, ಪೀಠಕ್ಕೆ ಅವಮಾನ. ನೂತನ ಶಾಸಕರಿಗೆ ಸ್ಪೀಕರ್‌ ನಡೆಸಿದ ಕಾರ್ಯಾಗಾರ ಚೆನ್ನಾಗಿತ್ತು. ಆದರೆ, ಅವರ ನಡೆ ಚೆನ್ನಾಗಿರಲಿಲ್ಲ. ಕಾಂಗ್ರೆಸ್‌ ಕೈಗೊಂಬೆಯಾಗಿರುವ ಸ್ಪೀಕರ್‌ ಗೌರವಯುತವಾಗಿ ರಾಜೀನಾಮೆ ನೀಡಲಿ. ಅವರ ವಿರುದ್ಧ ಈಗಾಗಲೇ ಅವಿಶ್ವಾಸ ಮಂಡನೆ ಮಾಡಿದ್ದೇವೆ ಎಂದರು.

ಬಿ.ಕೆ.ಹರಿಪ್ರಸಾದ್ ಹೇಳಿಕೆ ಬಗ್ಗೆ ನನಗೆ ಏನು ಗೊತ್ತಿಲ್ಲ: ಶಾಮನೂರು ಶಿವಶಂಕರಪ್ಪ

ಮೊದಲು ಸಭಾಧ್ಯಕ್ಷರ ನಡೆ ಹೇಗೆ ಎಂಬುದನ್ನು ಯು.ಟಿ.ಖಾದರ್‌ ಅವರಿಗೆ ತರಬೇತಿ ನೀಡಬೇಕು. ವಿವಿಧ ಪಕ್ಷಗಳ ಒಕ್ಕೂಟದ ಖಾಸಗಿ ಕಾರ್ಯಕ್ರಮಕ್ಕೆ ನಾಯಕರನ್ನು ಸ್ವಾಗತಿಸಿಲು ಐಎಎಸ್‌ ಅಧಿಕಾರಿಗಳನ್ನು ಕಳಿಸಿದ್ದು, ಸಾಂವಿಧಾನಿಕ ಲೋಪ ಆಗಿದೆ. ಯಾರೋ ಒಬ್ಬ ಜೋಸೆಫ್‌ ಎನ್ನುವವರಿಗೆ ಶಾಸಕನೆಂದು ಪಟ್ಟಿಯಲ್ಲಿ ಹೆಸರಿಸಿ ಅವನ ಸ್ವಾಗತಕ್ಕೂ ಐಎಎಸ್‌ ಅಧಿಕಾರಿ ಕಳಿಸಿದ್ದಾರೆ. ಈ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸಬೇಕು
- ಆರಗ ಜ್ಞಾನೇಂದ್ರ, ಶಾಸಕ, ತೀರ್ಥ​ಹಳ್ಳಿ ಕ್ಷೇತ್ರ

Follow Us:
Download App:
  • android
  • ios