Asianet Suvarna News Asianet Suvarna News

ಸಚಿವ ಸ್ಥಾನದಿಂದ ಚಲುವರಾಯ ಸ್ವಾಮಿ ಕೈಬಿಡಿ: ಕೆ.ಎಸ್‌.ಈಶ್ವರಪ್ಪ ಒತ್ತಾಯ

ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದು ಇನ್ನೂ ಮೂರ್ನಾಲ್ಕು ತಿಂಗಳು ಕಳೆದಿಲ್ಲ. ಆಗಲೇ ಕೃಷಿ ಸಚಿವ ಲಂಚ ಸ್ವೀಕಾರಕ್ಕೆ ಇಳಿದಿದ್ದಾರೆ. ಇದನ್ನು ವಿರೋಧಿಸಿ ಸಚಿವ ಚಲುವರಾಯ ಸ್ವಾಮಿ ವಿರುದ್ಧ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. 

Ex Minister KS Eshwarappa Slams On N Cheluvarayaswamy gvd
Author
First Published Aug 8, 2023, 4:23 AM IST

ಶಿವಮೊಗ್ಗ (ಆ.08): ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದು ಇನ್ನೂ ಮೂರ್ನಾಲ್ಕು ತಿಂಗಳು ಕಳೆದಿಲ್ಲ. ಆಗಲೇ ಕೃಷಿ ಸಚಿವ ಲಂಚ ಸ್ವೀಕಾರಕ್ಕೆ ಇಳಿದಿದ್ದಾರೆ. ಇದನ್ನು ವಿರೋಧಿಸಿ ಸಚಿವ ಚಲುವರಾಯ ಸ್ವಾಮಿ ವಿರುದ್ಧ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ಕೂಡಲೇ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಒತ್ತಾಯಿಸಿದರು. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, . 8ರಿಂದ 10 ಲಕ್ಷ ಕೇಳ್ತಾರೆ ಎಂದು ಅಧಿಕಾರಿಗಳೇ ರಾಜ್ಯಪಾಲರಿಗೆ ಅಧಿಕಾರಿಗಳು ಪತ್ರ ಬರೆದಿದ್ದಾರೆ. ರಾಜ್ಯದ ಇತಿಹಾಸದಲ್ಲಿ ಈ ರೀತಿ ಮೊದಲ ಬಾರಿ ಆಗಿದೆ. ರಾಜ್ಯಪಾಲರು ಸಂಬಂಧಪಟ್ಟಅಧಿಕಾರಿಗೆ ತನಿಖೆಗೆ ಕಳುಹಿಸಿದ್ದಾರೆ. 

ಹಾಗಾಗಿ ಮುಖ್ಯಮಂತ್ರಿಗಳು ಕೃಷಿ ಸಚಿವರನ್ನು ಸಂಪುಟದಿಂದ ಕೈಬಿಡಬೇಕು. ತನಿಖೆ ಮಾಡಿ ಹಣ ಲೂಟಿ ಮಾಡಿರುವವರ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಸರ್ಕಾರ ಬಂದು ಮೂರು ತಿಂಗಳು ಆಗಿಲ್ಲ. ಆಗಲೇ ರೈತರಿಗೆ ತೊಂದರೆ ಕೊಡ್ತಿದ್ದಾರೆ. ಯಡಿಯೂರಪ್ಪ ಅವರು ರೈತರಿಗೆ ಕೊಟ್ಟಹಣವನ್ನು ವಾಪಸ್‌ ಪಡೆಯುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳಿಗೆ ಬಜೆಟ್‌ನಲ್ಲಿಟ್ಟಬೇರೆ ಬೇರೆ ಹಣ ಬಳಸಿಕೊಳ್ಳುತ್ತಿದ್ದಾರೆ. ರೈತರ ದ್ರೋಹಿ ಯಾರಾದ್ರೂ ಇದ್ದರೆ ಅದು ಸಿದ್ದರಾಮಯ್ಯ ಎಂದು ಹರಿಹಾಯ್ದರು. ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಜನರ ಸಮಸ್ಯೆ ಪರಿಹರಿಸುವುದಿರಲಿ. 

ಅವಕಾಶ ಸಿಕ್ಕರೆ ಪುತ್ರ ಸುನಿಲ್‌ ಚಾ.ನಗರದಿಂದ ಸ್ಪರ್ಧೆ: ಸಚಿವ ಮಹದೇವಪ್ಪ

ಅವರ ಶಾಸಕರ ಸಮಸ್ಯೆ ಬಗೆಹರಿಸಲು ಆಗ್ತಿಲ್ಲ. ಬಹಿರಂಗವಾಗಿಯೇ ಸಚಿವರು, ಶಾಸಕರೇ ನಮಗೆ ಸಮಾಧಾನ ಇಲ್ಲ ಎನ್ನುತ್ತಿದ್ದಾರೆ. ಸಭೆ ನಡೆಸಿ ಮುಖ್ಯಮಂತ್ರಿಗಳು ತೇಪೆ ಹಚ್ಚುವ ಕೆಲಸ ಮಾಡ್ತಿದ್ದಾರೆ. ಮೊದಲು ಸರ್ಕಾರ ಜನರ ಸಂಕಷ್ಟಗಳನ್ನು ಅರಿಯಬೇಕು. ಅಸಮಾಧಾನಗೊಂಡಿರುವ ಶಾಸಕರನ್ನು ಸಮಾಧಾನ ಮಾಡಲು 6-7 ಜಿಲ್ಲೆ ಶಾಸಕರ ಸಭೆ ಮಾಡುವಂತಹ ದುಸ್ಥಿತಿ ಈ ಸರ್ಕಾರಕ್ಕೆ ಬಂದಿದೆ ಎಂದು ಲೇವಡಿ ಮಾಡಿದೆ. ಕಾಂಗ್ರೆಸ್‌ನವರು ಲೋಕಸಭೆ ಚುನಾವಣೆ ತಯಾರಿ ಮಾಡಿಕೊಳ್ಳಲಿ ಅದು ಅವರ ವಿಚಾರ. ದೆಹಲಿ, ಹೈದ್ರಾಬಾದ್‌ ಎಲ್ಲಿಗಾದ್ರೂ ಹೋಗಲಿ. ಮೊದಲು ಜನರ ಸಮಸ್ಯೆ ಬಗ್ಗೆ ಗಮನ ಕೊಡಲಿ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬಿಜೆಪಿ ರೈತರಿಗೆ ಕೊಟ್ಟಿದ್ದ ಹಣವನ್ನು ಗ್ಯಾರೆಂಟಿ ಯೋಜನೆಗೆ ಬಳಕೆ: ಬಿಜೆಪಿ ರೈತರಿಗೆ ಕೊಟ್ಟಿದ್ದ ಹಣವನ್ನು ಗ್ಯಾರೆಂಟಿ ಯೋಜನೆಗಳಿಗೆ ಬಳಸಿಕೊಳ್ಳಲು ಮುಂದಾಗಿರುವ ಕಾಂಗ್ರೆಸ್‌ ಸರ್ಕಾರ ರೈತರಿಗೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿ ಜಿಲ್ಲಾ ಬಿಜೆಪಿ ರೈತಮೋರ್ಚಾ ವತಿಯಿಂದ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು. ಪ್ರತಿಭಟನೆಯಲ್ಲಿ ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ ಮಾತನಾಡಿ, ರೈತದ್ವೇಷಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸರ್ಕಾರ ಕಿಸಾನ್‌ ಸಮ್ಮಾನ್‌ ಯೋಜನೆ ಮೂಲಕ ನೀಡುತ್ತಿದ್ದ 6 ಸಾವಿರಕ್ಕೆ ರಾಜ್ಯ ಬಿಜೆಪಿ ಸರ್ಕಾರ ಹಿಂದೆ ನಾಲ್ಕು ಸಾವಿರ ರು. ನೀಡುತ್ತಿತ್ತು. ಅದನ್ನು ನೀಡದೆ ರೈತರಿಗೆ ಚೌರ ಮಾಡಿದ್ದಾರೆ. ತಕ್ಷಣ ಹಣ ವಾಪಾಸ್‌ ನೀಡಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ತಡೆದ ಯೋಜನೆಗೆ ಮತ್ತೆ ಚಾಲನೆ ನೀಡುವೆ: ಸಚಿವ ಮಲ್ಲಿಕಾರ್ಜುನ

ಮೂರು ತಿಂಗಳಲ್ಲಿ 42 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ರೈತರ ಕುಟುಂಬ ಭೇಟಿ ಮಾಡಿ ಸಾಂತ್ವನ ಹೇಳಿಲ್ಲ. ಪರಿಹಾರ ನೀಡಿಲ್ಲ. ರೈತರ ಮಕ್ಕಳಿಗೆ ಬಿಜೆಪಿ ಸರ್ಕಾರ ಜಾರಿಗೆ ತಂದ ರೈತ ವಿದ್ಯಾನಿಧಿ ಯೋಜನೆ ಕೂಡ ರದ್ದುಗೊಳಿಸಿದ್ದಾರೆ. ಗೋವು ನಮ್ಮ ತಾಯಿ ಸಮಾನ. ಗೋ ಸಂತತಿ ಉಳಿಸಲು ಜಿಲ್ಲೆಗೊಂದು ಗೋಶಾಲೆಯನ್ನು ಬಿಜೆಪಿ ನೀಡಿತ್ತು, ಅದನ್ನು ರದ್ದುಮಾಡಿದ್ದಾರೆ. ಕೂಡಲೇ ಪುನರಾರಂಭ ಮಾಡಬೇಕು ಎಂದು ಆಗ್ರಹಿಸಿದರು. ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ರೈತರಿಗಾಗಿ ಮೀಸಲಿಟ್ಟ10 ಸಾವಿರ ಕೋಟಿ ಹಣವನ್ನು ಗ್ಯಾರಂಟಿ ಯೋಜನೆಗಾಗಿ ವರ್ಗಾವಣೆ ಮಾಡಿದ್ದಾರೆ. ಕೃಷ್ಣಾ ಯೋಜನೆಗೆ ಪ್ರತಿವರ್ಷ . 10ಸಾವಿರ ನೀಡುತ್ತೇವೆ ಎಂದು ಹೇಳಿದ ಮುಖ್ಯಮಂತ್ರಿಗಳು ಒಟ್ಟಾರೆ ನೀರಾವರಿ ಯೋಜನೆಗೆ ಅಷ್ಟು ಹಣ ನೀಡಿಲ್ಲ. ಎಪಿಎಂಸಿ ಕಾಯಿದೆ ತೆಗೆದು ರೈತನಿಗೆ ತಾನು ಬೆಳೆದ ಬೆಳೆಗೆ ತಾನೇ ಮಾರುವ ಹಕ್ಕನ್ನು ಕಸಿದುಕೊಂಡಿದ್ದಾರೆ ಎಂದು ದೂರಿದರು.

Follow Us:
Download App:
  • android
  • ios