ಸಿದ್ದರಾಮಯ್ಯ ಪುತ್ರ ಯತೀಂದ್ರ, ಡಿ.ಕೆ.ಸಹೋದರರು ಎಷ್ಟೆಷ್ಟು ಹಣ ಹೊಡೆದಿದ್ದಾರೆಂದು ನಿವೃತ್ತ ನ್ಯಾಯಾಧೀಶರಿಂದ ತನಿಖೆಯಾಗಲಿ. ಅದಕ್ಕೆ ಪೂರಕ ಸಾಕ್ಷಿ ನಾನು ನೀಡುತ್ತೇನೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ಹೇಳಿದರು. 

ಶಿವಮೊಗ್ಗ (ಅ.16): ಸಿದ್ದರಾಮಯ್ಯ ಪುತ್ರ ಯತೀಂದ್ರ, ಡಿ.ಕೆ.ಸಹೋದರರು ಎಷ್ಟೆಷ್ಟು ಹಣ ಹೊಡೆದಿದ್ದಾರೆಂದು ನಿವೃತ್ತ ನ್ಯಾಯಾಧೀಶರಿಂದ ತನಿಖೆಯಾಗಲಿ. ಅದಕ್ಕೆ ಪೂರಕ ಸಾಕ್ಷಿ ನಾನು ನೀಡುತ್ತೇನೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ಹೇಳಿದರು. ಅವರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದ ಇತಿಹಾಸದಲ್ಲೆ ಇಂಥ ಉಡಾಫೆಯ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯನ್ನು ನಾನು ಎಂದೂ ಕಂಡಿಲ್ಲ ಎಂದು ಕಿಡಿಕಾರಿದರಲ್ಲದೆ, ಡಿ.ಕೆ.ಶಿವಕುಮಾರ್‌ ಮತ್ತು ಸಿದ್ದರಾಮಯ್ಯ ಇವರಿಬ್ಬರಿಂದಲೇ ಹಣ ಲೂಟಿ ಅಗುತ್ತದೆ. 

ಅವರ ಪಕ್ಷದ ಶಾಸಕರೇ ಈ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ ಎಂದವರು ದೂಷಿಸಿದರು. ಇನ್ನು, ಈ ಸರ್ಕಾರ ಬಂದಿರೋದೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಅವರಿಬ್ಬರಿಗಾಗಿ ಮಾತ್ರ ಎಂಬ ಸ್ಥಿತಿ ನಿರ್ಮಾಣವಾಗಿದೆ. ಅತ್ತ ರಾಜ್ಯದ ಗಡಿ‌ ಭಾಗಗಳಲ್ಲಿ ‌ನಕ್ಸಲ್ ಚಟುವಟಿಕೆ ಇದೆ ಎಂದ ಅವರು, ‘ಈ ಬಗ್ಗೆ ಗೃಹ ಸಚಿವರು ಇಲ್ಲ ಅಂತಾ ಹೇಳಲಿ ನೋಡೋಣ’ ಎಂದು ಸವಾಲೆಸೆದರು.

ಗೂಂಡಾಗಿರಿ ಮಾಡುವವರು ಮುಸಲ್ಮಾನ್ ಗೂಂಡಾಗಳು: ಗೂಂಡಾಗಿರಿ ಮಾಡುವ ಮುಸಲ್ಮಾನರನ್ನು ಮುಸಲ್ಮಾನ್ ಗೂಂಡಾಗಳು ಎಂದು ಕರೆಯುತ್ತೇನೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ತಿಳಿಸಿದರು. ಶಿವಮೊಗ್ಗ ಗಲಭೆ ವಿಚಾರ ಸಂಬಂಧ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುಂಡೇಟು ತಿಂದ ಗೂಂಡಾಗಳೆಲ್ಲಾ ಜೈಲಿನಲ್ಲಿದ್ದಾರೆ. ಮುಸಲ್ಮಾನ್ ಗೂಂಡಾಗಳು ಅಂತ ಎಲ್ಲರಿಗೂ ಹೇಳುವುದಿಲ್ಲ. ಆದರೆ, ಆರು ಮಂದಿ ಪೊಲೀಸರ ಮೇಲೆ ಹಲ್ಲೆ‌ಮಾಡಿದವರನ್ನು ಹಾಗೆ ಕರೀತೀನಿ ಎಂದರು.

ಚೀನಾದ ಫೋಟೋಗಳನ್ನ ಶೇರ್ ಮಾಡಿದ Dr Bro: ನಕಲಿಗಳ ಮಧ್ಯೆ ನೀವು ಕನ್ನಡದ ಅಸಲಿ ಚಿನ್ನ ಎಂದ ಫ್ಯಾನ್ಸ್!

ಖುದ್ದು ಎಸ್ಪಿ ಮೇಲೂ ಹಲ್ಲೆ ನಡೆಸಿದ್ದಾರೆ. ಹಿಂದೂ‌ ಹೆಣ್ಣು ಮಕ್ಕಳು ಕಣ್ಣೀರು ಹಾಕಿಕೊಂಡು‌ ಹೇಳಿದರು. ಎಸ್ಪಿ ಸುಳ್ಳು ಹೇಳಿ ಸರ್ಕಾರದ ಮರ್ಯಾದೆ ಉಳಿಸಿದರು. ಮುಸಲ್ಮಾನ ಗೂಂಡಾಗಳು ಕದ್ದು ಮುಚ್ಚಿ ಓಡಾಡುತ್ತಿದ್ದಾರೆ. ಪಾಕಿಸ್ತಾನದಲ್ಲಿ ಇವರ ಆಟ ನಡೆಯಬಹುದು. ಹಿಂದೂಸ್ತಾನದಲ್ಲಿ ಇವರ ಆಟ ನಡೆಯಲ್ಲ ಎಂದು ಅವರು ಹೇಳಿದರು. ಮಹಿಷ‌ ದಸರಾ ಆಚರಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಯಾಗ- ಯಜ್ಞಗಳಿಗೆ ಸಾವಿರಾರು ವರ್ಷದ ಇತಿಹಾಸವಿದೆ. ರಾಕ್ಷಸರ ಹೆಸರು ಇತಿಹಾಸದಲ್ಲಿ ಉಳಿದಿಲ್ಲ. ರಾಮ- ಲಕ್ಷ್ಮಣ, ಲವ- ಕುಶರ ಹೆಸರು ಉಳಿದಿದೆ. ಈ ದೇಶದಲ್ಲಿ ಸನಾತನ ಧರ್ಮ ಅಳಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದರು.