ಕಾಂಗ್ರೆಸ್‌ನದು 75 ವರ್ಷಗಳ ಹಳೆಯ ಬಸ್: ಎಚ್.ಡಿ.ರೇವಣ್ಣ ವಾಗ್ದಾಳಿ
ದೇವೇಗೌಡರು ಕುಮಾರಸ್ವಾಮಿ ಹೆಸರೇಳಿದ ಕೂಡಲೆ ಯಾರು ಓಡಿ ಬಂದು ಓಟ್ ಹಾಕಲ್ಲ ಹಣ ಕೊಟ್ಟರೆ ಮಾತ್ರ ಅರಸೀಕೆರೆ ಜನ ಓಟು ಹಾಕುತ್ತಾರೆ ಎಂದು ಕೆಲವರು ಹೇಳುತ್ತಿದ್ದು, ನೋಡೋಣ ಹಾಗಿದ್ರೆ ಹಣ ಬಲ ನಡೆಯುತ್ತಾ, ಅಥವಾ ಜನರ ಬಲ ನಡೆಯುತ್ತಾ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ವಾಗ್ದಾಳಿ ನಡೆಸಿದರು.
ಅರಸೀಕೆರೆ (ಫೆ.11): ದೇವೇಗೌಡರು ಕುಮಾರಸ್ವಾಮಿ ಹೆಸರೇಳಿದ ಕೂಡಲೆ ಯಾರು ಓಡಿ ಬಂದು ಓಟ್ ಹಾಕಲ್ಲ ಹಣ ಕೊಟ್ಟರೆ ಮಾತ್ರ ಅರಸೀಕೆರೆ ಜನ ಓಟು ಹಾಕುತ್ತಾರೆ ಎಂದು ಕೆಲವರು ಹೇಳುತ್ತಿದ್ದು, ನೋಡೋಣ ಹಾಗಿದ್ರೆ ಹಣ ಬಲ ನಡೆಯುತ್ತಾ, ಅಥವಾ ಜನರ ಬಲ ನಡೆಯುತ್ತಾ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ವಾಗ್ದಾಳಿ ನಡೆಸಿದರು. ನಗರದ 3 ನೇ ವಾರ್ಡ್‌ನ ಗುಂಡ್ಕಾನಹಳ್ಳಿಯಲ್ಲಿ ಜೆಡಿಎಸ್ ಕಚೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಣ ಕೊಟ್ಟರೆ ಮಾತ್ರ ಓಟು ಹಾಕುತ್ತಿರಾ ಎಂದು ಕಾರ್ಯಕರ್ತರನ್ನು ಪ್ರಶ್ನಿಸಿ, ಶಿವಲಿಂಗೇಗೌಡ ಅವರಿಗೆ ಕಿವಿಮಾತು ಹೇಳ್ತಿನಿ ತಪ್ಪು ದಾರಿಗೆ ಹೋಗಬೇಡಿ.
ಇದರ ಮೇಲೆ ಅವರಿಗೆ ಬಿಟ್ಟ ವಿಚಾರ, ಅವರಿಗೆ ಒಳ್ಳೆಯದು ಆಗಲಿ. ಪಕ್ಷ ಬಿಡಬೇಡಿ ಇಲ್ಲೇ ಇರಿ ಎಂದರು. ದೇವೇಗೌಡರಿಗೆ ರಾಜಕೀಯ ಶಕ್ತಿ ಬಂದಿದ್ದು ನಿಮ್ಮಂತ ಪುಣ್ಯಾತ್ಮರಿಂದ ಒಂದೇ ದಿನಕ್ಕೆ ಇಷ್ಟೊಂದು ಜನ ಸೇರಿರೋದು ನೋಡಿದ್ರೆ ಅರಸೀಕೆರೆ ಚಿತ್ರಣ ಬದಲಾಗಿರೋದು ಕಾಣುತ್ತೆ ಎಲ್ಲರಿಗೂ ಕೈ ಮುಗಿಯುತ್ತೇನೆ ದೇವೇಗೌಡರ ಕೈ ಬಲಪಡಿಸಿ, ಕುಮಾರಸ್ವಾಮಿ ಪಂಚರತ್ನಯಾತ್ರೆ ಮಾಡುತ್ತಿದ್ದಾರೆ. ಫೆ.12 ಕ್ಕೆ ದೇವೇಗೌಡರು, ಕುಮಾರಸ್ವಾಮಿ ಪಂಚರತ್ನ ಯಾತ್ರೆ ಸಭೆಗೆ ಬರ್ತಾರೆ. ಈ ಕ್ಷೇತ್ರ ಉಳಿಯಲು ದೇವೇಗೌಡರ ಮತ್ತು ಕುಮಾರಸ್ವಾಮಿ ಕೊಡುಗೆ ಎಷ್ಟಿದೆ ಹಾಗೂ ನಾನು ಇಂಧನ ಸಚಿವರಾಗಿ ಏನು ಮಾಡಿದೆ ಎಂಬುದನ್ನು ಎಳೆ ಎಳೆಯಾಗಿ ಬಿಡಿಸಿ ಹೇಳ್ತೇನೆ.
ಬಿಜೆಪಿ, ಕಾಂಗ್ರೆಸ್ ಆಡಳಿತದಲ್ಲಿ ಜನರ ಬದುಕಿನ ಜೊತೆ ಚೆಲ್ಲಾಟ: ಎಚ್‌ಡಿಕೆ
ನಾನೂ ಈ ಜಿಲ್ಲೆಯಲ್ಲಿ ಇಪ್ಪತ್ತೈದು ವರ್ಷ ಶಾಸಕನಾಗಿ ರಾಜಕೀಯ ಮಾಡಿದ್ದೀನಿ ನನಗೆ ಇಲ್ಲಿನ ರಾಜಕೀಯ ಎಲ್ಲ ಗೊತ್ತಿದೆ ಎಂದು ಟಾಂಗ್ ನೀಡಿದರು. ಕೆಲವರು ನಮ್ಮ ಬಸ್ ಹತ್ತಿ ಅಂತಾವ್ರೆ. 75 ವರ್ಷಗಳ ಗುಜುರಿ ಬಸ್ ದೇಶದ ಎಲ್ಲಾ ಕಡೆ ಸೋತು ಸುಣ್ಣವಾಗಿದೆ. ಈಗ ರಾಜ್ಯದಲ್ಲಿ ಅವರ ಪಕ್ಷದಲ್ಲಿ ಬಸ್ ಹತ್ತುವ ಸಾಮರ್ಥ್ಯವಿಲ್ಲದೆ ಬೇರೆ ಪಕ್ಷದವರನ್ನು ನಮ್ಮ ಬಸ್ ಅತ್ತಿ ಎನ್ನುತ್ತಾರೆ. ಯಾರು ಅವರ ಬಸ್ ಹತ್ತುತಾರೋ ಇಲ್ಲವೋ ಗೊತ್ತಿಲ್ಲ. ಅದು 75ವರ್ಷದ ಹಳೆಯ ಬಸ್ ಯಾರು ಅತ್ತೋಕೆ ಹೋಗ್ಬೇಡಿ. ನಾವ್ಯಾರು ಕಾಂಗ್ರೆಸ್ ತೆಗೆಯೊದು ಬೇಡಾ ಅವರ ನಾಯಕರೇ ಕಾಂಗ್ರೆಸ್ ತೆಗಿತಾರೆ ಎಂದರು.
ದೇವೇಗೌಡರು ಈ ಮಟ್ಟಕ್ಕೆ ಬೆಳೆಯಲು ಜಿಲ್ಲೆಯ ಜನರ ಕೊಡುಗೆ ಇದೆ. ಈ ಜಿಲ್ಲೆಯ ಜನರನ್ನು ನಾನು ಬದುಕಿರೋವರೆಗೆ ಕೈ ಬಿಡೋದಿಲ್ಲ. ಅಧಿಕಾರ ಇರಲಿ. ಇಲ್ಲದಿರಲಿ ಜನರ ಜೊತೆ ನಾವು ಇರ್ತಿವಿ ರಾಜಕೀಯವಾಗಿ ಶಕ್ತಿ ಕೊಟ್ಟತಾಲೂಕು, ಹಾಗಾಗಿ ಮರೆಯೋದಿಲ್ಲ. ಚುನಾವಣೆಗೆ ಇನ್ನು ಎರಡು ತಿಂಗಳಿದೆ, ಏಳು ಕ್ಷೇತ್ರದಲ್ಲಿ ಹಗಲು ರಾತ್ರಿ ದುಡಿತಿನಿ ಸಂಸದ ಪ್ರಜ್ವಲ್ ಅವರು ವಾರಕ್ಕೆ ಎರಡು ದಿನ ಇಲ್ಲೆ ಇರ್ತಾರೆ. ಏನೇ ಸಮಸ್ಯೆ ಆದ್ರು ನಾವು ಜೊತೆಗೆ ಇರ್ತೇವೆ. ಕುಮಾರಸ್ವಾಮಿ ಕೊಟ್ಟಮಾತಿನಂತೆ ಸಾಲಮನ್ನಾ ಮಾಡಿದ್ರುಈಗ ಶಿಕ್ಷಣ, ಆರೋಗ್ಯ, ರೈತರಿಗೆ ಅನುಕೂಲ ಮಾಡಲು ಯಾತ್ರೆ ಹೊರಟಿದ್ದಾರೆ ಅವರ ಜೊತೆಗೆ ಎಲ್ಲಾ ಇರಿ ಎಂದು ಮನವಿ ಮಾಡಿದರು.
ಸಂಸದ ಪ್ರಜ್ವಲ್ ರೇವಣ್ಣ ಮಾತನಾಡಿ, ಹಾಸನ ಜಿಲ್ಲೆಯ ರಾಜಕಾರಣದಲ್ಲಿ ಮಾಜಿ ಪ್ರಧಾನಿಗಳಾದ ಎಚ್.ಡಿ.ದೇವೇಗೌಡರ ರಾಜಕೀಯ ಶಕ್ತಿ ಪ್ರದರ್ಶನ ಮಾಡುವ ಪರ್ವ ಕಾಲ ಕೂಡಿ ಬಂದಿದೆ. ಹಾಸನ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಅವಿರತ ಹೋರಾಟವನ್ನು ನಡೆಸುವ ಸಂಕಲ್ಪ ತಮ್ಮದಾಗಿದೆ ಎಂದು ತಿಳಿಸಿದರು.
ಹಾಸನ ಕ್ಷೇತ್ರದ ಸಂಸದನಾಗಿ 4 ವರ್ಷಗಳು ಕಳೆದಿದೆ. 2 ವರ್ಷ ಕೊರೋನಾ ಸಂಕಷ್ಟವನ್ನು ಸಮರ್ಥವಾಗಿ ನಿಯಂತ್ರಿಸಲು ಸತತ ಪರಿಶ್ರಮ ವಹಿಸಿದ್ದೇನೆ. ಕಡೂರು ಕ್ಷೇತ್ರವು ಸೇರಿದಂತೆ ತಮ್ಮ ಸಂಸದರ ಕ್ಷೇತ್ರದ ವ್ಯಾಪ್ತಿಗೆ 6480ಕ್ಕೂ ಹೆಚ್ಚಿನ ಗ್ರಾಮಗಳನ್ನು ಒಳಗೊಂಡಿದ್ದು. ಎಲ್ಲಾ ಗ್ರಾಮಗಳ ಜನತೆಯನ್ನು ಸ್ವತಃ ಭೇಟಿ ಮಾಡಿಲ್ಲ ಎಂಬ ಅಸಮಾಧಾನ ತಮ್ಮನ್ನೂ ಇನ್ನೂ ಕಾಡುತ್ತಿದೆ. 19 ವರ್ಷ ವಯಸ್ಸಿನಿಂದಲ್ಲೇ ರಾಜಕಾರಣಕ್ಕೆ ಬಂದ ನಾನು 28 ವರ್ಷ ವಯಸ್ಸಿನಲ್ಲಿ ನನಗೆ ಸ್ವಕ್ಷೇತ್ರವನ್ನು ಬಿಟ್ಟುಕೊಟ್ಟಂತಹ ಎಚ್.ಡಿ.ದೇವೇಗೌಡರ ಆಶೀರ್ವಾದ ಶ್ರೀರಕ್ಷೆಯಾಗಿದ್ದು, ಜೊತೆಗೆ ತಮ್ಮೆಲ್ಲರ ಆಶೀರ್ವಾದ ಹಾಗೂ ಹೋರಾಟದ ಫಲವಾಗಿ ಹಾಸನ ಕ್ಷೇತ್ರದ ಸಂಸದನಾಗಿ ಆಯ್ಕೆಯಾಗಿದ್ದೇನೆ ಎಂದರು.
ಕಾರ್ಯಕ್ರಮದಲ್ಲಿ ಜಿ.ಪಂ.ಮಾಜಿ ಉಪಾಧ್ಯಕ್ಷೆ ಪ್ರೇಮ ನಿಂಗಪ್ಪ, ಜಿ.ಪಂ.ಮಾಜಿ ಸದಸ್ಯ ಬಾಣಾವರ ಅಶೋಕ್,ತಾ.ಪಂ.ಮಾಜಿ ಸದಸ್ಯ ಟಿ.ಆರ್. ಕೃಷ್ಣಮೂರ್ತಿ, ಹೊಸೂರು ಗಂಗಾಧರ್, ಶೇಖರ ನಾಯ್‌್ಕ, ವೆಂಕಟೇಶ್ ನಾಯ್‌್ಕ, ಎ.ಪಿ.ಎಂ.ಸಿ.ಮಾಜಿ ಅಧ್ಯಕ್ಷರಾದ ಕೆ.ಎಸ್.ಚಂದ್ರಶೇಖರ್, ಶಶಿಧರ್, ರಾಜಣ್ಣ, ಮುಖಂಡರಾದ ಸಿಕಂದರ್, ದರ್ಶನ್, ಹಾಗೂ ಇನ್ನಿತರ ಮುಖಂಡರು ಹಾಗೂ ಸಾವಿರಾರು ಸಂಖ್ಯೆ ಕಾರ್ಯಕರ್ತರು ಹಾಜರಿದ್ದರು.
ಸ್ನೇಹಕ್ಕೂ ಸಿದ್ಧ ಸಮರಕ್ಕೂ ಬದ್ಧ, ತಪ್ಪು ನಿರ್ಧಾರ ಬೇಡ: ಅರಸೀಕೆರೆ ಕ್ಷೇತ್ರದಲ್ಲಿ ನಿಷ್ಠಾವಂತ ಕಾರ್ಯಕರ್ತರ ಪಡೆಯನ್ನು ಜೆಡಿಎಸ್ ಪಕ್ಷ ಹೊಂದಿದೆ. ಆದ್ದರಿಂದ ಶಾಸಕ ಕೆ.ಎಂ.ಶಿವಲಿಂಗೇಗೌಡರು ಯಾರದೋ ಮಾತನ್ನೂ ಕೇಳಿ ತಪ್ಪು ನಿರ್ಧಾರ ತೆಗೆದುಕೊಳ್ಳುವುದು ಬೇಡ. ಯಾವುದೇ ಸಣ್ಣ ಪುಟ್ಟಭಿನ್ನಾಭಿಪ್ರಾಯಗಳಿದ್ದರೂ ಅದನ್ನು ಬದಿಗಿಟ್ಟು ತಮ್ಮ ಗೆಲುವಿಗಾಗಿ ಪ್ರಾಮಾಣಿಕವಾಗಿ ಸಂಘಟಿತ ಹೋರಾಟ ಮಾಡಲು ನಮ್ಮ ಜೆಡಿಎಸ್ ಕಾರ್ಯಕರ್ತರ ಪಡೆ ಸಿದ್ಧವಾಗಿದೆ. ಅದನ್ನು ಬಿಟ್ಟು ತಾವು ಬೇರೆ ಮಾರ್ಗವನ್ನು ಕಂಡು ಕೊಂಡರೆ ನಾವುಗಳು ಎಂದಿಗೂ ಕೈಕಟ್ಟಿಕೂರಲು ಸಾಧ್ಯವಿಲ್ಲ.
ಕೊಡಗಿಗೆ ಬರಲು ಹೆದರಿದ್ರಾ ಸಿದ್ದು, ಡಿಕೆಶಿ ಜೋಡಿಯ ಪ್ರಜಾಧ್ವನಿ ಯಾತ್ರೆ!
ನಮ್ಮ ಪಕ್ಷದಿಂದ ಬೇರೆ ಸಮರ್ಥ ಅಭ್ಯರ್ಥಿಯನ್ನು ಸ್ಪರ್ಧಾ ಕಣಕ್ಕಿಳಿಸಿ ಗೆಲ್ಲಿಸುವುದು ಹೇಗೆ ಎಂಬ ಹೋರಾಟಕ್ಕೂ ನಾವು ಸಿದ್ಧರಾಗಿದ್ದೇವೆ. ಅಂದು ಗಂಡಸಿ ಕ್ಷೇತ್ರದಲ್ಲಿ 18 ಮತಗಳಿಂದ ಸೋತಿದ್ದ ಶಿವಲಿಂಗೇಗೌಡ ಅವರಿಗೆ ಮಾಜಿ ಪ್ರಧಾನಿಗಳಾದ ಎಚ್.ಡಿ.ದೇವೇಗೌಡರು ಮಾಜಿ ಮುಖ್ಯಮಂತ್ರಿ ಕುಮಾರಣ್ಣ ಹಾಗೂ ಮಾಜಿ ಮಂತ್ರಿಗಳಾದ ಎಚ್.ಡಿ.ರೇವಣ್ಣ ಸೇರಿದಂತೆ ಸಹಸ್ರಾರು ಜೆ.ಡಿ.ಎಸ್.ಕಾರ್ಯಕರ್ತರ ಪಡೆ ರಾಜಕೀಯ ಶಕ್ತಿಯನ್ನು ತುಂಬುವ ಮೂಲಕ ಅರಸೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಅತ್ಯಂತ ಬಹುಮತಗಳ ಅಂತರದಲ್ಲಿ ಗೆದ್ದಿದ್ದಾರೆ. ಆದಕಾರಣ ಅಂತಹ ಪರಿಸ್ಥಿತಿಗೆ ಕೆ.ಎಂ.ಶಿವಲಿಂಗೇಗೌಡರು ಆಸ್ಪದ ನೀಡುವುದಿಲ್ಲ ಎಂಬ ನಂಬಿಕೆ ತಮ್ಮದು ಎಂದು ಪ್ರಜ್ವಲ್ ರೇವಣ್ಣ ಎಚ್ಚರಿಸಿದರು.