ಡಿಕೆಶಿಗೆ ದೇವರು ಈಗಲಾದರೂ ಸದ್ಬುದ್ಧಿ ನೀಡಲಿ: ಡಾ.ಕೆ.ಸುಧಾಕರ್ ಲೇವಡಿ
ಕೋಚಿಮುಲ್ ಅಧಿಕಾರಿಗಳ ನೇಮಕಾತಿಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ. ಆ ಪಟ್ಟಿಯನ್ನ ತಡೆ ಹಿಡಿಯಿರಿ. ನೀವೆ ತನಿಖೆ ಮಾಡಿ ತಪ್ಪಿತಸ್ಥರ ಮೇಲೆ ಕ್ರಮಕೈಗೊಳ್ಳಿ ಎಂದು ಸರ್ಕಾರವನ್ನು ಒತ್ತಾಯ ಮಾಡಿದ್ದೆ. ಆದರೆ ಸರ್ಕಾರ ನಿರ್ಲಕ್ಷಿಸಿತು.
ಚಿಕ್ಕಬಳ್ಳಾಪುರ (ಜ.11): ಕೋಚಿಮುಲ್ ಅಧಿಕಾರಿಗಳ ನೇಮಕಾತಿಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ. ಆ ಪಟ್ಟಿಯನ್ನ ತಡೆ ಹಿಡಿಯಿರಿ. ನೀವೆ ತನಿಖೆ ಮಾಡಿ ತಪ್ಪಿತಸ್ಥರ ಮೇಲೆ ಕ್ರಮಕೈಗೊಳ್ಳಿ ಎಂದು ಸರ್ಕಾರವನ್ನು ಒತ್ತಾಯ ಮಾಡಿದ್ದೆ. ಆದರೆ ಸರ್ಕಾರ ನಿರ್ಲಕ್ಷಿಸಿತು. ಆದರೆ ಎಲ್ಲ ಮಾಹಿತಿ ಸಂಗ್ರಹಿಸಿ ಕೊಚಿಮುಲ್ ಅಧ್ಯಕ್ಷ ಮತ್ತು ನಿರ್ದೇಶಕರ ಮನೆ ಮೇಲೆ ಇಡಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಮೇಲ್ನೋಟಕ್ಕೆ ಭಾರಿ ಪ್ರಮಾಣದ ಭ್ರಷ್ಟಾಚಾರ ಹೊರಗೆ ಬರಬಹುದು ಎಂಬ ಅನುಮಾನ ದಟ್ಟವಾಗಿದೆ ಎಂದು ಮಾಜಿ ಸಚಿವ ಡಾ ಕೆ.ಸುಧಾಕರ್ ಇಡಿ ದಾಳಿಯನ್ನು ಸಮರ್ಥಿಸಿದರು.
ತಾಲೂಕಿನ ಎಸ್.ಗೊಲ್ಲಹಳ್ಳಿ ಗ್ರಾಮದಲ್ಲಿ ನಡೆದ ವಿಕಸಿತ ಭಾರತ ಸಂಕಲ್ಪ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯ ಸರ್ಕಾರದಲ್ಲಿ ಮೂರು ದಲಿತ ಡಿಸಿಎಂ ಹುದ್ದೆ ಕ್ರಿಯೇಟ್ ಮಾಡುವಂತೆ ಒತ್ತಾಯಿಸುವುತ್ತಿರುವುದನ್ನು ಪ್ರಸ್ತಾಪಿಸಿದ ಅವರು, ಸ್ಕ್ರಿಪ್ಟ್, ಡೈರೆಕ್ಷನ್, ಅವರದೆ ಪ್ರೊಡಕ್ಷನ್ ಸಹಾ ಅವರದೆ ಸಿನಿಮಾ ಹೀಗೆಯೇ ಆಗುತ್ತೆ ಅಂತ ನನಗೆ ಮೊದಲೇ ಗೊತ್ತಿತ್ತು. ಪಾಪ ಡಿ.ಕೆ.ಶಿವಕುಮಾರ್‌ಗೆ ದೇವರು ಈಗಲಾದರೂ ಸದ್ಬುದ್ದಿ, ಸನ್ಮಾರ್ಗ ತೋರಿಸಲಿ ಎಂದು ಲೇವಡಿ ಮಾಡಿದರು.
ತಪ್ಪಾಗಿದ್ದರೆ ಕಾನೂನು ರೀತಿ ತನಿಖೆ: ಎಚ್.ಡಿ.ಕುಮಾರಸ್ವಾಮಿ ಹೇಳಿದ್ದೇನು?
ಶಾಸಕ ಯತ್ನಾಳ್ ಮಾಡಿರು ಆರೋಪದ ಬಗ್ಗೆ ಪ್ರತಿಕ್ರಿಸಿ, ನಿವೃತ್ತ ನ್ಯಾಯಾಧೀಶರನ್ನು ತನಿಖೆ ಮಖ್ಯಸ್ಥರನ್ನಾಗಿ ನೇಮಿಸಿದ್ದಾರೆ. ತನಿಖೆ ನಡೀಲಿ ಅಮೇಲೆ ಏನಾಗುತ್ತೆ ಅಂತ ನಮ್ಮ ನಾಯಕ ಯತ್ನಾಳ್ ಗೆ ಗೊತ್ತಾಗುತ್ತೆ ಅಂತ ಸುಧಾಕರ್ ತಿರುಗೇಟು ನೀಡಿದರು. ಈ ವೇಳೆ ಖಾದಿ ಮಂಡಳಿ ಮಾಜಿ ಅಧ್ಯಕ್ಷ ಕೆ.ವಿ.ನಾಗರಾಜ್,ನಗರಸಭೆ ಮಾಜಿ ಅಧ್ಯಕ್ಷ ಆನಂದರೆಡ್ಡಿ ಬಾಬು, ನಗರಸಭಾ ಸದಸ್ಯ ಮಂಜುನಾಥ್, ಬಿಜೆಪಿ ಮುಖಂಡರಾದ ಮುನಿರಾಜು,ಅನುಆನಂದ್ ಇದ್ದರು.
ರೆಸಾರ್ಟ್‌ನಲ್ಲಿ ಮಾಜಿ ಸಿಎಂ ಎಚ್‌ಡಿಕೆ ತಂತ್ರಗಾರಿಕೆ: ರಾಜಕೀಯ ಲೆಕ್ಕಚಾರದಲ್ಲಿ ಕುಮಾರಸ್ವಾಮಿ!
ಕಾಂಗ್ರೆಸ್‌ನಿಂದ ಎಲ್ಲೆಡೆ ದಾರಿದ್ರ್ಯ: ಕಾಂಗ್ರೆಸ್ ಸರ್ಕಾರ ಬಂದ ನಂತರ ಎಲ್ಲ ಕಡೆ ದಾರಿದ್ರ್ಯ ಹಿಡಿದಿದೆ. ಯಾವಾಗ ವಿದ್ಯುತ್ ಕಡಿತವಾಗುತ್ತದೆ ಎಂದು ಗೊತ್ತಾಗುವುದಿಲ್ಲ. ರಸ್ತೆ ಗುಂಡಿ ಮುಚ್ಚಲು ಕ್ರಮ ವಹಿಸಿಲ್ಲ, ಕನಿಷ್ಠ 1 ಕಿ.ಮೀ. ರಸ್ತೆ ನಿರ್ಮಿಸಿಲ್ಲ ಎಂದು ಮಾಜಿ ಸಚಿವ ಡಾ.ಸುಧಾಕರ್ ಆಕ್ರೋಶ ವ್ಯಕ್ತಪಡಿಸಿದರು. ಪ್ರಧಾನಿ ಮೋದಿ ರಾಮರಾಜ್ಯ ಕಟ್ಟುತ್ತಿದ್ದು, ಅವರೇ ಮೂರನೇ ಅವಧಿಗೆ ಪ್ರಧಾನಿಯಾಗಲಿದ್ದಾರೆ. ಇದಕ್ಕಾಗಿ ಎಲ್ಲರೂ ಕೈ ಜೋಡಿಸಿ. ಕೇಂದ್ರ ಸರ್ಕಾರದಿಂದ ಜನ ಔಷಧಿಗಳು ಶೇ.60-90 ರಿಯಾಯಿತಿಯಲ್ಲಿ ಸಿಗುತ್ತಿದೆ, ಆಯುಷ್ಮಾನ್ ಭಾರತ್‌ನಡಿ ವಿಮೆ ಸಿಗುತ್ತಿದೆ, ಹಿಂದುಳಿದ ವರ್ಗಕ್ಕೆ ಮುದ್ರಾ ಯೋಜನೆಯಡಿ 30 ಲಕ್ಷ ರೂ. ವರೆಗೆ ಸಾಲ ಸಿಗುತ್ತಿದೆ ಎಂದು ಹೇಳಿದರು.