ಸಿದ್ದರಾಮಯ್ಯ ಪೂಜೆ ಮಾಡ್ಕೊಳ್ಳಿ: ಎಚ್‌.ಆಂಜನೇಯಗೆ ಈಶ್ವರಪ್ಪ ತಿರುಗೇಟು

ಮಾಜಿ ಸಚಿವ ಎಚ್‌.ಆಂಜನೇಯ ಒಬ್ಬ ಮಹಾನುಭಾವ ಮುಖ್ಯಮಂತ್ರಿ ಸಿದ್ದರಾಮಯ್ಯನ ಪೂಜೆ ಮಾಡ್ತೀನಿ ಅಂತಾನೆ. ನೀನು ಪೂಜೆ ಮಾಡ್ಕೋ ಯಾರು ಬೇಡ ಅಂತಾರೆ. ನಿನಗೆ ಸ್ವಾತಂತ್ರ್ಯ ಇದೆ. ಆದರೆ, ಶ್ರೀರಾಮನ ತಂಟೆಗೆ ಬಂದರೆ ಸುಮ್ಮನೆ ಇರಲ್ಲ ಎಂದು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಎಚ್ಚರಿಸಿದರು.

Ex DCM KS Eshwarappa Slams On H Anjaneya At Davanagere gvd

ದಾವಣಗೆರೆ (ಜ.04): ಮಾಜಿ ಸಚಿವ ಎಚ್‌.ಆಂಜನೇಯ ಒಬ್ಬ ಮಹಾನುಭಾವ ಮುಖ್ಯಮಂತ್ರಿ ಸಿದ್ದರಾಮಯ್ಯನ ಪೂಜೆ ಮಾಡ್ತೀನಿ ಅಂತಾನೆ. ನೀನು ಪೂಜೆ ಮಾಡ್ಕೋ ಯಾರು ಬೇಡ ಅಂತಾರೆ. ನಿನಗೆ ಸ್ವಾತಂತ್ರ್ಯ ಇದೆ. ಆದರೆ, ಶ್ರೀರಾಮನ ತಂಟೆಗೆ ಬಂದರೆ ಸುಮ್ಮನೆ ಇರಲ್ಲ ಎಂದು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಎಚ್ಚರಿಸಿದರು. ಸಿದ್ದರಾಮಯ್ಯನ ಪೂಜೆ ಮಾಡ್ತೀನಿ ಅಂತಾ ಮಾಜಿ ಸಚಿವ ಆಂಜನೇಯ ಹೇಳಿದ್ದು, ನೀನು ಪೂಜೆ ಮಾಡಿಕೋ. ಯಾರು ಬೇಡ ಅಂತಾರೆ? ನಿನಗೆ ಸ್ವಾತಂತ್ರ್ಯವಿದೆ. ಆದರೆ, ಪ್ರಭು ಶ್ರೀರಾಮಚಂದ್ರನ ತಂಟೆಗೆ ಬಂದರೆ ಮಾತ್ರ ಸುಮ್ಮನೆ ಇರುವುದಿಲ್ಲ ಎಂದು ಸೂಚ್ಯವಾಗಿ ತಿಳಿಸಿದರು.

ಮಸೀದಿ ತೆರವು ಮಾಡಿ, ಇಲ್ಲ ಹಿಂದೂ ಸಮಾಜವೇ ಪುಡಿಗಟ್ಟೀತು: ಮುಸಲ್ಮಾನರು ಎಲ್ಲೆಲ್ಲಿ ದೇವಸ್ಥಾನ ಒಡೆದು ಮಂದಿರ ನಿರ್ಮಿಸಿದ್ದಾರೋ ಅಲ್ಲೆಲ್ಲಾ ಮರ್ಯಾದೆಯಿಂದ ಮಸೀದಿಗಳ ತೆರವು ಮಾಡಬೇಕು, ಇಲ್ಲವಾದರೆ ಹಿಂದೂ ಸಮಾಜ ಮಸೀದಿಗಳನ್ನು ಒಡೆದು ಪುಡಿಗಟ್ಟುತ್ತದೆ ಎಂದು ಬಿಜೆಪಿ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಆಕ್ರೋಶದಿಂದ ನುಡಿದರು. ಪಟ್ಟಣದಲ್ಲಿ ಶ್ರೀ ರಾಮಸೇನೆ ಆಯೋಜಿಸಿದ್ದ ‘ಮೋದಿ ಗೆಲ್ಲಿಸಿ ಭಾರತ ಉಳಿಸಿ’ಅಭಿಯಾನ ಉದ್ಘಾಟಿಸಿ ಮಾತನಾಡಿದ ಅವರು, ಅಖಂಡ ಭಾರತ ನಿರ್ಮಾಣಕ್ಕೆ ‘ಜೈ ಶ್ರೀರಾಮ’ ಘೋಷಣೆ ದೇಶದಲ್ಲಿ ಮತ್ತೆ ಕೇಳಿ ಬರುತ್ತಿದೆ. ಸದ್ಯ ಪಾಕಿಸ್ತಾನದವರೂ ಸಹ ಮೋದಿ ಪ್ರಧಾನಿ ಆಗಲಿ ಎಂದು ಬಯಸುತ್ತಿದ್ದಾರೆ ಎಂದವರು ಹೇಳಿದರು.

2017ರ ದತ್ತಪೀಠ ಆವರಣದ ಗೋರಿ ಹಾನಿ ಪ್ರಕರಣ: 14 ಹಿಂದು ಕಾರ್ಯಕರ್ತರಿಗೆ ಕೋರ್ಟ್ ಸಮನ್ಸ್!

ಕಾಂಗ್ರೆಸ್ ಅಧಿಕಾರದ ಆಸೆಯಿಂದಾಗಿ ನಮ್ಮ ದೇಶ ತುಂಡು ತುಂಡಾಯಿತು ಎಂದರಲ್ಲದೆ, ಜನವರಿ 22 ರಾಮ ಮಂದಿರ ಉದ್ಘಾಟನೆ ದಿನದಂದು ಸ್ವತಂತ್ರ್ಯ ಹೋರಾಟ ಗಾರರ ಆತ್ಮಕ್ಕೆ ಶಾಂತಿ ಸಿಗಲಿದೆ ಎಂದು ಹೇಳಿದರು. ಇನ್ನು, ಪ್ರಿಯಾಂಕ್‌ ಖರ್ಗೆ ಎನ್ನುವ ಚಿಲ್ಲರೇ ವ್ಯಕ್ತಿ ನರೆಂದ್ರ ಮೋದಿ ಬಗ್ಗೆ ಮಾತನಾಡುತ್ತಾನೆ, ಪ್ರಧಾನಿ ಮೋದಿ ಸೂರ್ಯ ಇದ್ದ ಹಾಗೆ, ಸೂರ್ಯನಿಗೆ ಉಗಿದರೆ ಉಗಿದಿದ್ದು ಪ್ರಿಯಾಂಕ ಖರ್ಗೆಗೇ ಬೀಳುತ್ತದೆ ಎಂದು ಕಿಡಿಕಾರಿದರು.

ಹಿಂದು, ಮುಸ್ಲಿಮರು ಒಂದಾಗಲು ಕಾಂಗ್ರೆಸ್‌ ಬಿಡುತ್ತಿಲ್ಲ: ಹಿಂದು, ಮುಸ್ಲಿಮರು ಒಟ್ಟಾಗಿರಬೇಕೆಂಬ ಭಾವನೆ ಮುಸ್ಲಿಮರಲ್ಲೂ ಇದೆ. ಆದರೆ, ಇವರಿಬ್ಬರು ಒಟ್ಟಾದರೆ ತಾನು ರಾಜಕೀಯ ಮಾಡಲು ಆಗಲ್ಲ ಎಂದು ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯನವರು ಒಂದಾಗಲು ಬಿಡುತ್ತಿಲ್ಲ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಆರೋಪಿಸಿದರು. ನಗರದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತ್ರಿವಳಿ ತಲಾಕ್ ನಿಷೇಧವನ್ನು ಮುಸ್ಲಿಮರು ಒಪ್ಪಿದ್ದರೂ ಕಾಂಗ್ರೆಸ್ ಒಪ್ಪುತ್ತಿಲ್ಲ. ಇಂದಿಲ್ಲ, ನಾಳೆ ದೇಶಕ್ಕೆ ಸಮಾನ ನಾಗರಿಕ ಸಂಹಿತೆ ಬರಲಿದೆ. ಇದು ಕಾಂಗ್ರೆಸ್‌ಗೆ ತೆಡೆದುಕೊಳ್ಳಲಾಗುತ್ತಿಲ್ಲ. 

ಹೀಗಾಗಿ ಮುಸ್ಲಿಂ ಹಾಗೂ ಹಿಂದುಗಳು ದೂರ ಇರಬೇಕು ಎನ್ನುವುದು ಕಾಂಗ್ರೆಸ್ ಇರಾದೆ. ಮುಂದೊಂದು ದಿನ ಇಡೀ ದೇಶ ಒಂದಾಗಲಿದೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಸ್ವಾತಂತ್ರ್ಯ ಹೋರಾಟ ಮಾಡಿದ ಕಾಂಗ್ರೆಸ್ಸಿಗರು ಈಗ ಸ್ವರ್ಗದಲ್ಲಿದ್ದಾರೆ. ಅವರ ಕನಸು ನಮ್ಮ ಸಂಸ್ಕೃತಿ, ಧರ್ಮ ಉಳಿಯಬೇಕು ಎಂಬುದಾಗಿತ್ತೇ ಹೊರತು ಹಿಂದು, ಮುಸ್ಲಿಮರು ಹೊಡೆದಾಡುತ್ತ ಕುಳಿತಕೊಳ್ಳಲು ಅಲ್ಲ. ಮುಸ್ಲಿಮರು ಸಿದ್ಧರಿದ್ದರೂ ಕಾಂಗ್ರೆಸ್ ಸಿದ್ಧವಿಲ್ಲ. 2024ರ ಲೋಕಸಭಾ ಚುನಾವಣೆಯ ಬಳಿಕ ಮತ್ತೆ ಪ್ರಧಾನಿಯಾಗಿ ನರೇಂದ್ರ ಮೋದಿ ಆಯ್ಕೆಯಾಗಿ ಸುಭದ್ರ ದೇಶ ಕಟ್ಟುತ್ತಾರೆ ಎಂದರು.

ಭವ್ಯ ಭಾರತ ವಿಶ್ವ ಗುರು ಆಗಲು ಯುವಜನರೇ ಕಾರಣ: ಸಚಿವೆ ಲಕ್ಷ್ಮೀ ಹೆಬ್ಬಾಳಕರ

ಸಿಎಂ ಸಿದ್ದರಾಮಯ್ಯನವರು ಚುನಾವಣೆ ಮೊದಲು ಅಹಿಂದ ಹೆಸರು ಹೇಳುತ್ತಿದ್ದರು. ಆದರೆ ಪಂಚರಾಜ್ಯ ಚುನಾವಣೆಯ ಬಳಿಕ ಈಗ ಅವರನ್ನು ಕೈ ಬಿಟ್ಟಿದ್ದಾರೆ. ಈಗ ಅಲ್ಪಸಂಖ್ಯಾತರನ್ನು ಇಟ್ಟುಕೊಂಡು ರಾಜಕಾರಣ ಮಾಡಬೇಕೆಂದು ತೀರ್ಮಾನಿಸಿದ್ದಾರೆ. ಸಿದ್ದರಾಮಯ್ಯನವರಿಗೆ ದೇಶ, ಧರ್ಮದ ಬಗ್ಗೆ ಕಲ್ಪನೆ ಇಲ್ಲ. ದೇಶ, ಧರ್ಮ ಬೇಡ ಎಂದ ಬಳಿಕ ಅವರಿಗೆ ರಾಷ್ಟ್ರದ್ರೋಹಿಗಳಿಗೆ ತೃಪ್ತಿ ಆಗುವ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಬಾರದು ಎಂದು ನ್ಯಾಯಾಲಯದಲ್ಲಿ ಅರ್ಜಿ ಹಾಕಿದ ಮುಸ್ಲಿಮರು ಅಯೋಧ್ಯೆಗೆ ಪ್ರಧಾನಿ ಭೇಟಿ ವೇಳೆ ಹೂಗುಚ್ಚ ನೀಡಿ ಸ್ವಾಗತಿಸಿದ್ದಾರೆ. ಹಿಂದು, ಮುಸ್ಲಿಂ, ಕ್ರೈಸ್ತರು ಒಟ್ಟಾಗಿದ್ದು ಜೀವನ ನಡೆಸುತ್ತೇವೆ ಎಂದು ಮೋದಿಗೆ ಹೇಳಿದ್ದಾರೆ ಎಂದರು.

Latest Videos
Follow Us:
Download App:
  • android
  • ios