ಬೆಂಗಳೂರಿನಲ್ಲಿ ಗೋವುಗಳ ಕೆಚ್ಚಲು ಕಟ್ ಮಾಡಿದ ಕಿಡಿಕೇಡಿಗಳ ವಿರುದ್ಧ ಶಿವಮೊಗ್ಗದಲ್ಲಿ ರಾಷ್ಟ್ರಭಕ್ತ ಬಳಕ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ಶಿವಮೊಗ್ಗ (ಜ.17): ಬೆಂಗಳೂರಿನಲ್ಲಿ ಗೋವುಗಳ ಕೆಚ್ಚಲು ಕಟ್ ಮಾಡಿದ ಕಿಡಿಕೇಡಿಗಳ ವಿರುದ್ಧ ಶಿವಮೊಗ್ಗದಲ್ಲಿ ರಾಷ್ಟ್ರಭಕ್ತ ಬಳಕ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ಗೋ ಮಾತೆಯ ಕೆಚ್ಚಲು ಕಟ್ ಮಾಡಿದ್ದಾರೋ ಅದು ಒಬ್ಬ ವ್ಯಕ್ತಿಯ ಪ್ರಯತ್ನ ಅಲ್ಲ, ನೀವು ಗೋ ಮುಟ್ಟಿದ್ದೀರಾ ಈ ಶಾಪದಿಂದ ಕಾಂಗ್ರೆಸ್ ಸರ್ಕಾರ ಇರಲ್ಲ ಎಂದ ಅವರು, ಗೋಮಾತೆಗೆ ನಡೆದ ಅಪಮಾನ ನಮ್ಮೆಲ್ಲರಿಗೂ ಆದ ಅಪಮಾನ.
ಕಾಂಗ್ರೆಸ್ ನವರು ಯಾರೂ ಗೋ ಮಾತೆಯ ಕೆಚ್ಚಲು ಕಟ್ ಮಾಡಿರುವವರ ವಿರುದ್ಧ ಮಾತಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ನಾವು ಹಿಂದು ಎನ್ನುತ್ತಾರೆ. ತಾವು ಹಿಂದೂ ಆಗಿದ್ದರೆ, ಗೋಮಾತೆಯನ್ನು ಹಿಂಸಿಸಿದವರಿಗೆ ಕಠಿಣ ಶಿಕ್ಷೆ ಕೊಡಿಸಲಿ ಎಂದು ಆಗ್ರಹಿಸಿದ ಅವರು, ಈ ಸರ್ಕಾರಕ್ಕೆ ಗೋ ಮಾತೆಯ ಶಾಪ ತಟ್ಟದೆ ಬಿಡುವುದಿಲ್ಲ ಎಂದು ಹರಿಹಾಯ್ದರು. ಗೋ ಮಾತೆಯ ಶಾಪ ತಟ್ಟಿದ್ದರೆ ನೀವು ಇಬ್ಬರು ಮುಖ್ಯಮಂತ್ರಿ ಆಗಲ್ಲ, ಬೇರೆ ಯಾರೋ ಬಂದು ಮುಖ್ಯಮಂತ್ರಿ ಆಗ್ತಾರೆ, ಹಂತಕರಿಗೆ ಶಿಕ್ಷೆ ಕೊಡಿಸಿ ಆಗ ನಿಮ್ಮ ಮೈಯಲ್ಲಿ ಹಿಂದೂ ರಕ್ತ ಹರಿಯುತ್ತಿದೆ ಅಂತ ಗೊತ್ತಾಗುತ್ತೆ ಎಂದು ಸಿಎಂ ಹಾಗೂ ಡಿಸಿಎಂ ಗೆ ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ರಾಷ್ಟ್ರಭಕ್ತ ಬಳಗದ ಪ್ರಮುಖರಾದ ಮಹಾಲಿಂಗಯ್ಯ ಶಾಸ್ತ್ರಿ, ಜಿಪಂ ಮಾಜಿ ಸದಸ್ಯ ಕೆ.ಈ.ಕಾಂತೇಶ್ ಸೇರಿದಂತೆ ಹಲವರು ಇದ್ದರು.
ಡಿ.ಕೆ.ಶಿವಕುಮಾರ್ ಹಿಂದೂಗಳ ಪರ ಮಾತನಾಡುತ್ತಿರುವುದನ್ನು ಸ್ವಾಗತಿಸುವೆ: ಕೆ.ಎಸ್.ಈಶ್ವರಪ್ಪ
ಹಸುಗಳ ಕೆಚ್ಚಲು ಕತ್ತರಿಸಿದ ಪ್ರಕರಣಕ್ಕೆ ಕಾಂಗ್ರೆಸ್ ಪ್ರೇರಣೆ: ಹಸುಗಳ ಕೆಚ್ಚಲು ಕತ್ತರಿಸಿದ ಪ್ರಕರಣಕ್ಕೆ ರಾಜ್ಯದ ಕಾಂಗ್ರೆಸ್ ಸರ್ಕಾರದ ಪ್ರೇರಣಯೇ ಕಾರಣವಾಗಿದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಆರೋಪಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನ ಬಿಜೆಪಿ ಸರ್ಕಾರ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಗೋಶಾಲೆ ತೆಗೆಯಬೇಕೆಂದು ತೀರ್ಮಾನಿಸಿತ್ತು.
ಅದರಂತೆ 14 ಗೋಶಾಲೆಗಳನ್ನು ಆರಂಭಗೊಂಡಿದ್ದವು. ಆದರೆ, ಕಾಂಗ್ರೆಸ್ ಸರ್ಕಾರ ಕಳೆದ ವಾರ ನಡೆಸಿದ ಸಚಿವ ಸಂಪುಟದಲ್ಲಿ ಎಲ್ಲ ಶಾಲೆಗಳನ್ನು ರದ್ದು ಪಡಿಸುವುದಾಗಿ ತಿಳಿಸಿದ್ದು, ಗೋವಿನ ಬಗ್ಗೆ ಕಾಂಗ್ರೆಸ್ ಸರ್ಕಾರ ತೆಗೆದುಕೊಂಡ ಧೋರಣೆಯಿಂದಾಗಿಯೇ ಕಿಡಿಗೇಡಿಗಳು ಸ್ಫೂರ್ತಿ ಪಡೆದಿದ್ದು, ತಾಯಿಯಂತೆ ಭಾವಿಸಿ ಪೂಜಿಸುವ ಗೋವಿಗೆ ಹಿಂಸೆ ನೀಡಿರುವುದು ಇಡೀ ಹಿಂದೂ ಸಮಾಜಕ್ಕೆ ಅಪಮಾನ ಮಾಡಿದಂತಾಗಿದ್ದು, ಹಿಂದೂ ವಿಚಾರದಲ್ಲಿ ಕಾಂಗ್ರೆಸ್ ತೋರಿಸುತ್ತಿರುವ ಧೋರಣೆಯನ್ನು ಬದಲಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಡ್ತಾರೆ ಅಂತಾ ಕಾಯ್ತಿದ್ದಾರೆ: ಕೆ.ಎಸ್.ಈಶ್ವರಪ್ಪ
ರಾಜ್ಯದಲ್ಲಿ ನಕ್ಸಲರ ಶರಣಾಗತಿ ಶೋ ಆಗಬಾರದು, ರಾಜಕೀಯಕ್ಕೋಸ್ಕರ ನಕ್ಸಲರನ್ನು ಕರೆಸಿಕೊಂಡು, ಪಕ್ಕದಲ್ಲಿ ಕೂಡಿಸಿಕೊಂಡು, ಫೋಟೋ, ಟೀವಿಗೆ ಬರೋದಲ್ಲಾ ನಿಜಕ್ಕೂ ಶರಣಾದರೆ ಸ್ವಾಗತ, ಶೋ ಆದರೆ, ಕಾಡಲ್ಲಿರೋರು ಊರು ನಕ್ಸಲರು ಆಗುತ್ತಾರೆ, ಅವರಿಗೆ ಸ್ವಾತಂತ್ರ್ಯ ಸಿಕ್ಕಂತಾಗುತ್ತದೆ ಎಂದರು. ಅಹಿಂದ ನಾಯಕ ಎಂದು ಹೇಳಿಕೊಳ್ಳುತ್ತಿರುವ ಸಿಎಂ ಸಿದ್ದರಾಮಯ್ಯ ಅವರು ಕುರುಬ ಸಮಾಜಕ್ಕಾಗಲಿ, ಅಹಿಂದಕ್ಕೆ ಯಾವುದೇ ಅನುಕೂಲ ಮಾಡದ ಕಾರಣಕ್ಕೆ ನಾವು ಕ್ರಾಂತಿವೀರ ಬ್ರಿಗೇಡ್ ಆರಂಭಿಸುತ್ತಿದ್ದು, 1008 ಸಾಧು-ಸಂತರ ಪಾದಪೂಜೆ ಮಾಡಿ, ಬ್ರಿಗೇಡ್‌ನ್ನು ಪ್ರಾರಂಭಿಸಲಾಗುವುದು. ಹಿಂದುಳಿದ, ದಲಿತರ ಹಾಗೂ ಹಿಂದು ಸಮಾಜದ ರಾಜಕೀಯ ಪಕ್ಷಗಳಿಗೆ ಟೂಲ್ ಕಿಟ್ ಆಗಿದ್ದು, ಅದಕ್ಕಾಗಿ ಬ್ರಿಗೇಡ್ ಶುರು ಮಾಡುತ್ತಿರುವುದಾಗಿ ತಿಳಿಸಿದರು.
