Asianet Suvarna News Asianet Suvarna News

ಸಂಸದ ಮುನಿಸ್ವಾಮಿಗಾದ ಅವಮಾನ ದೇಶಕ್ಕೇ ಮಾಡಿದ ಅಪಮಾನ: ಸದಾನಂದಗೌಡ

ಸಂಸದ ಎಸ್.ಮುನಿಸ್ವಾಮಿ ಅವರಿಗೆ ಆದ ಅಪಮಾನ ಪ್ರಜಾತಂತ್ರ ವ್ಯವಸ್ಥೆಗೆ ಆದ ಅಪಮಾನ ಇಡೀ ದೇಶಕ್ಕೆ ಆದ ಅಪಮಾನ. ಕೋಲಾರದಲ್ಲಿ ಏಳು ಬಾರಿ ಗೆದ್ದವರನ್ನ ಸೋಲಿಸಿದವರಿಗೆ ಅಪಮಾನ ಮಾಡಿದ್ದಾರೆ, ಅಮಲಿನಲ್ಲಿ ಪ್ರಜಾತಂತ್ರಕ್ಕೆ ಅಪಮಾನ ಮಾಡಬೇಡಿ ಎಂದು ಮಾಜಿ ಸಿಎಂ ಸದಾನಂದಗೌಡ ಸರ್ಕಾರಕ್ಕೆ ಕಿವಿಮಾತು ಹೇಳಿದರು.

Ex CM DV Sadananda Gowda Talks Over MP S Muniswamy At Kolar gvd
Author
First Published Oct 4, 2023, 5:03 PM IST

ಕೋಲಾರ (ಅ.04): ಸಂಸದ ಎಸ್.ಮುನಿಸ್ವಾಮಿ ಅವರಿಗೆ ಆದ ಅಪಮಾನ ಪ್ರಜಾತಂತ್ರ ವ್ಯವಸ್ಥೆಗೆ ಆದ ಅಪಮಾನ ಇಡೀ ದೇಶಕ್ಕೆ ಆದ ಅಪಮಾನ. ಕೋಲಾರದಲ್ಲಿ ಏಳು ಬಾರಿ ಗೆದ್ದವರನ್ನ ಸೋಲಿಸಿದವರಿಗೆ ಅಪಮಾನ ಮಾಡಿದ್ದಾರೆ, ಅಮಲಿನಲ್ಲಿ ಪ್ರಜಾತಂತ್ರಕ್ಕೆ ಅಪಮಾನ ಮಾಡಬೇಡಿ ಎಂದು ಮಾಜಿ ಸಿಎಂ ಸದಾನಂದಗೌಡ ಸರ್ಕಾರಕ್ಕೆ ಕಿವಿಮಾತು ಹೇಳಿದರು.

ಜಿಲ್ಲಾ ಆಡಳಿತದ ವಿರುದ್ಧ ಬಿಜೆಪಿ ಮುಖಂಡರು ಹಾಗೂ ರೈತರ ಮೇಲೆ ಪೊಲೀಸ್ ದೌರ್ಜನವನ್ನು ಖಂಡಿಸಿ ನಗರದ ವಿವಿಧ ಕಡೆಗಳಲ್ಲಿ ರ್‍ಯಾಲಿ ನಂತರ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿ, ಭೂಮಿ ಕಳೆದುಕೊಂಡ ಬಡಜನರ ಪರವಾಗಿ ನ್ಯಾಯ ಕೇಳಲು ಸಂಸದ ಹೋಗಿದ್ದು, ಅಂತಹವರಿಗೆ ಅಪಮಾನ ಮಾಡಿದ್ದು ಅತ್ಯಂತ ಕೆಟ್ಟ ಕೆಲಸ ಎಂದರು. ಯಾವ ಆಧಾರದಲ್ಲಿ ಸಿದ್ದರಾಮಯ್ಯ ಆಡಳಿತ ಮಾಡುತ್ತಿದ್ದಾರೆಂದು ಗೊತ್ತಿಲ್ಲ, ರಾಜ್ಯದಲ್ಲಿ ಅಭಿವೃದ್ದಿ ಕೆಲಸ ಆಗುತ್ತಿಲ್ಲ. ಅವರ ಪಕ್ಷದವರೆ ಮುಖ್ಯಮಂತ್ರಿ ವಿರುದ್ದ ತಿರುಗಿಬಿದ್ದಿದ್ದಾರೆ ಎಂದರು.

ಇದ್ದದ್ದನ್ನು ಇರುವ ಹಾಗೆ ಹೇಳಿದ್ದೇನೆ, ಹೆದರುವ ಪ್ರಶ್ನೆಯೇ ಇಲ್ಲ: ಶಾಸಕ ರಾಜು ಕಾಗೆ

ಅಲ್ಪಂಸಂಖ್ಯಾತರ ಓಲೈಕೆ: ಇದನ್ನೆಲ್ಲ ರಾಜ್ಯದ ಜನತೆ ಸಹಿಸುವುದಿಲ್ಲ, ಇವರ ಕುರ್ಚಿಯ ಉಳಿವಿಗಾಗಿ ರಾಜ್ಯದ ಜನರನ್ನ ಬಲಿ ಕೊಡುತ್ತಿದ್ದಾರೆ. ಹುಬ್ಬಳ್ಳಿ, ಶಿವಮೊಗ್ಗ, ಕೋಲಾರದಲ್ಲಿ ನಡೆದ ಘಟನೆಯು ಕಾಂಗ್ರೆಸ್ ಆಡಳಿತದ ವೈಫಲ್ಯವನ್ನ ಮುಚ್ಚಿಹಾಕುವದಕ್ಕೆ ನಡೆಯುತ್ತಿದೆ, ಅಲ್ಪ ಸಂಖ್ಯಾತರನ್ನು ಸರ್ಕಾರ ಓಲೈಕೆ ಮಾಡುತ್ತಿದ್ದಾರೆ. ಅದರಿಂದಾಗಿಯೇ ಇವತ್ತು ಶಿವಮೊಗ್ಗದಲ್ಲಿ ಪೊಲೀಸರು ಕಲ್ಲು ತೂರಾಟದಿಂದ ಆಸ್ಪತ್ರೆಯಲ್ಲಿ ಮಲಗುವಂತಾಗಿದೆ ಎಂದರು.

ಸಿದ್ದರಾಮಯ್ಯ ಮತ್ತು ಡಿಕೆಶಿ ಇಬ್ಬರೇ ನಾಯಕರು ಅಂತ ಹೊರಟಿದ್ದಾರೆ, ಇದನ್ನ ರಾಜ್ಯದ ಜನ ಸಹಿಸಲ್ಲ, ರಾಜ್ಯದಲ್ಲಿ ಕುಡಿಯಲು ನೀರಿಲ್ಲ, ಡಿಸೆಂಬರ್ ಅಂತ್ಯದವರೆಗೂ ಮಾತ್ರ ನಮಗೆ ಕುಡಿಯಲು ನೀರಿದೆ. ಸಂಕಷ್ಟ ಸೂತ್ರ ಮಾಡುವ ಪ್ರಯತ್ನ ಮಾಡಿಲ್ಲ, ಕಾವೇರಿ ಮ್ಯಾನೇಜ್ಮೆಂಟ್ ಅಥಾರಿಟಿ, ಸುಪ್ರೀಂ ಕೋರ್ಟಿಗೆ ಮಾಹಿತಿ ಕೊಡೋದ್ರಲ್ಲಿ ವಿಫಲವಾಗಿದೆ ಎಂದರು.

ಸಿದ್ದರಾಮಯ್ಯ ನನ್ನ ಗುರು, ಅವರಿಂದ ಕಲಿಯಬೇಕಾದದ್ದು ಬಹಳಷ್ಟಿದೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಎಂಎಲ್ಸಿ ರವಿಕುಮಾರ್ ಮಾತನಾಡಿ, ಡೀಸಿ ಅಕ್ರಂ ಪಾಷ ಮತ್ತು ಎಸ್ಪಿ ನಾರಾಯಣರನ್ನ ಈ ಕೂಡಲೇ ಅಮಾನತುಗೊಳಿಸಬೇಕು. ರೈತರಿಗೆ ಆದ ಅನ್ಯಾಯವನ್ನು ಹೇಳಲು ಹೊರಟ ಎಂಪಿ ಮುನಿಸ್ವಾಮಿ ಅ‍ವರನ್ನು ಅನಾಮತ್ತಾಗಿ ಕೆಳಗೆ ಇಳಿಸಲಾಗಿದೆ. ಸಂವಿಧಾನ ಎಂದು ಎದೆಬಗೆದು ತೋರಿಸುವ ಸಿದ್ದರಾಮಯ್ಯ ಅವರೇ ಸಂವಿಧಾನಬದ್ದವಾಗಿ ಆಯ್ಕೆಯಾಗಿ ಬಂದ ಎಂಪಿ ಅವರು ಮಾಡಿದ್ದಾದರೂ ಏನು ಎಂದು ಪ್ರಶ್ನಿಸಿದರು. ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ದವೂ ವಾಗ್ದಾಳಿ ನಡೆಸಿದ ರವಿಕುಮಾರ್‌, ಭೂ ಒತ್ತವರಿಯಲ್ಲಿ ರಮೇಶ್ ಕುಮಾರ್‌ ಅವರ ಸಂಬಂಧಿಕರ ಜಮೀನನ್ನ ರಕ್ಷಣೆ ಮಾಡಿದ್ದು ಯಾಕೆ. ಅವರಿಬ್ಬರು ಅಧಿಕಾರಿಗಳನ್ನ ಎತ್ತಂಗಡಿ ಮಾಡಬೇಕು ಎಂದು ಆಗ್ರಹಿಸಿದರು.

Follow Us:
Download App:
  • android
  • ios