Asianet Suvarna News Asianet Suvarna News

ಲೋಕಸಭೆಗೆ ಕಾಂಗ್ರೆಸ್‌ನಿಂದ ನಾನು ಸ್ಪರ್ಧಿಸುವುದೆಲ್ಲ ಸುಳ್ಳು: ಮಾಜಿ ಸಚಿವ ವಿ.ಸೋಮಣ್ಣ

ನಾನು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ನಿರ್ಧರಿಸಿದ್ದೇನೆಂಬುದೆಲ್ಲ ಸುಳ್ಳು. ನನಗೆ ಅದರ ಅವಶ್ಯಕತೆಯಿಲ್ಲ ಎಂದು ಮಾಜಿ ಸಚಿವ ವಿ.ಸೋಮಣ್ಣ ತಿಳಿಸಿದರು. 

Everything I Contested for Lok Sabha Election from Congress is a lie Says V Somanna gvd
Author
First Published Dec 14, 2023, 3:19 PM IST

ದಾಬಸ್‌ಪೇಟೆ (ಡಿ.14): ನಾನು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ನಿರ್ಧರಿಸಿದ್ದೇನೆಂಬುದೆಲ್ಲ ಸುಳ್ಳು. ನನಗೆ ಅದರ ಅವಶ್ಯಕತೆಯಿಲ್ಲ ಎಂದು ಮಾಜಿ ಸಚಿವ ವಿ.ಸೋಮಣ್ಣ ತಿಳಿಸಿದರು. ತುಮಕೂರಿನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೀರಾ ಎಂದು ಮಾಧ್ಯಮದವರು ಪ್ರಶ್ನಿಸಿದಾಗ ಅವರು, ನಾನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗು ವುದನ್ನು ಕನಸಲ್ಲೂ ಕಲ್ಪಿಸಿಕೊಂಡಿಲ್ಲ, ಆ ಕುರಿತು ಯೋಚನೆ ಮಾಡಿಲ್ಲ ಎಂದರು. ಚುನಾವಣೆಯಲ್ಲಿ ನಿಲ್ಲುವುದು, ಬಿಡುವುದು ಎಂಬುದಕ್ಕಿಂತ ಹೆಚ್ಚಾಗಿ ಅದರ ಅವಶ್ಯಕತೆಯೇ ನನಗಿಲ್ಲ. ವೈಯಕ್ತಿಕ ರಾಜಕೀಯ ಈಗ ಮಾತನಾಡಲಾರೆ, ಸೂಕ್ತ ಸಮಯದಲ್ಲಿ ಆ ಕುರಿತು ಉತ್ತರಿಸುತ್ತೇನೆ ಎಂದರು. 

ಮೋದಿ ಅಗತ್ಯವಿದೆ: ರಾಷ್ಟ್ರಕ್ಕೆ ಮೋದಿಯವರ ಅವಶ್ಯಕತೆ ಇದೆ. ದೇಶದ ಜನಕ್ಕಷ್ಟೇ ಅಲ್ಲ, ಇಡೀ ಜಗತ್ತಿನ ಜನರೂ ಇಂದಿನ ಸಂದರ್ಭ, ಸನ್ನಿವೇಶಕ್ಕೆ ಮೋದಿಯವರ ಅಗತ್ಯ ಬಹಳಷ್ಟಿದೆ ಎನ್ನುತ್ತಿದ್ದಾರೆ ಎಂದರು.

ಲೋಕಸಭೆಯಲ್ಲಿ ಬಣ್ಣದ ಗ್ಯಾಸ್ ಬಾಂಬ್ ಸ್ಫೋಟ: ಸಂಸದ ಮುನಿಸ್ವಾಮಿ ಖಂಡನೆ

ಕೆಲ ಸ್ವಾಮೀಜಿಗಳಿಗೆ ಕೋಪ: ನಾನು ಸತ್ಯ ಮಾತನಾಡುತ್ತೇನೆ. ಹೀಗಾಗಿ ಕೆಲ ಸ್ವಾಮೀಜಿಗಳಿಗೆ ನನ್ನನ್ನು ಕಂಡರೆ ಕೋಪ. ಅದಕ್ಕೆ ನಾನೇನು ಮಾಡಲಿ, ನನ್ನ ನಡವಳಿಕೆಯೇ ಹಾಗೆ. ನಾನು ಸ್ವಲ್ವ ಕಠಿಣವಾಗಿ ಮಾತಾಡು ತ್ತೇನೆ, ಅದು ಕೆಲವರಿಗೆ ಹಿಡಿಸುವುದಿಲ್ಲ. ಸತ್ಯ ಹೇಳುತ್ತೇನೆ, ಅದು ಕೆಲವರಿಗೆ ಕೋಪ ತರಿಸುತ್ತದೆ ಎಂದು ಇದೇ ವೇಳೆ ತಿಳಿಸಿದರು.

ಶ್ರೀಗಳ ಮಾರ್ಗದರ್ಶನದಲ್ಲಿ ಅನೇಕ ಧಾರ್ಮಿಕ ಕೆಲಸ ಮಾಡಿರುವೆ: ನಾನು ಬೆಂಗಳೂರಿಗೆ 1969-70 ರಲ್ಲಿ ಬಂದಾಗ ನನಗೆ ಹತ್ತಾರು ವರ್ಷಗಳ ಕಾಲ ಆಶ್ರಯ ನೀಡಿದ್ದು ತಿಗಳ ಸಮುದಾಯ ಎಂದು ಮಾಜಿ ಸಚಿವ ವಿ. ಸೋಮಣ್ಣ ಹೇಳಿದರು. ನಗರದ ಹನುಮಂತಪುರದ ಶ್ರೀಕೋಟೆ ಕಲ್ಲಾಪುರದಮ್ಮ ದೇವಾಲಯ ಸಮಿತಿ ವತಿಯಿಂದ ಕಾರ್ತಿಕ ಮಾಸದ ಕೊನೆಯ ದಿನ ಹಮ್ಮಿಕೊಂಡಿದ್ದ ಲಕ್ಷ ದೀಪೋತ್ಸವ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇಂದಿಗೂ ನನ್ನ ಅವರ ನಡುವೆ ಒಳ್ಳೆಯ ಸಂಬಂಧವಿದೆ. ತಮಗಿರುವ ಒಂದು ಎಕರೆ, ಅರ್ಧ ಎಕರೆ ಭೂಮಿಯಲ್ಲಿಯೇ ಬೆವರು ಸುರಿಸಿ, ದುಡಿದು ಬದುಕುವ ಶ್ರಮಜೀವಿ ಸಮುದಾಯ. ಈ ದೇವಾಲಯವನ್ನು ನೋಡಿದರೆ ನನಗೆ ಆನಂದ ಆಗುತ್ತದೆ. ತುಮಕೂರಿನ ಉಪಮೇಯರ್ ಟಿ.ಕೆ. ನರಸಿಂಹಮೂರ್ತಿ ರಾಜಕಾರಣಕ್ಕೆ ಬರುವ ಮುಂಚಿನಿಂದಲೂ ನನಗೆ ಪರಿಚಯ. ಸಿದ್ದಗಂಗಾ ಮಠದ ಹಿರಿಯ ಶ್ರೀಗಳ ದಿಸೆಯಿಂದ ನನಗೂ ತುಮಕೂರಿಗೂ ಅವಿನಾಭಾವ ಸಂಬಂಧ. ಒಳ್ಳೆಯ ಕೆಲಸಗಳಿಗೆ ಬೆನ್ನುತಟ್ಟುತಿದ್ದ ಶ್ರೀಗಳು ಮಾರ್ಗದರ್ಶನದಲ್ಲಿ ಹಲವಾರು ಧಾರ್ಮಿಕ ಕೆಲಸಗಳನ್ನು ಮಾಡಿದ್ದೇನೆ ಎಂದು ಗೌರವದಿಂದ ನುಡಿದರು.

ಕಾರ್ತಿಕ ಮಾಸ ಶ್ರೇಷ್ಠವಾದ ಮಾಸ. ಒಂದರಿಂದ ಮತ್ತೊಂದು ದೀಪ ಹತ್ತಿಸುವ ಮೂಲಕ ನಮ್ಮಲ್ಲಿರುವ ದೇಷ ಅಸೂಯೆಗಳನ್ನು ಹೋಗಲಾಡಿಸಲು ಒಳ್ಳೆಯ ಮಾರ್ಗ. ಕೋಟೆ ಕೊಲ್ಲಾಪುರದಮ್ಮ ದೇವಾಲಯದಲ್ಲಿ ಲಕ್ಷ ದೀಪೋತ್ಸವದ ಜೊತೆಗೆ, ಸಹ ಪಂಕ್ತಿಭೋಜನ ಸಹ ಬಹಳ ಪ್ರಸಿದ್ಧಿ ಪಡೆದಿದೆ. ಈ ಕಾರ್ಯಕ್ರಮದಲ್ಲಿ ಹಿರಿಯರು, ಕಿರಿಯರಿಗೆ ಮಾರ್ಗದರ್ಶನ ಮಾಡುತ್ತಿರುವುದನ್ನು ನೋಡಿದರೆ, ನಿಮ್ಮಂದ ಕಲಿಯುವಂತಹದ್ದು ಬಹಳಷ್ಟಿದೆ ಎಂದು ವಿ.ಸೋಮಣ್ಣ ನುಡಿದರು

ಬಿ.ಎಸ್.ಯಡಿಯೂರಪ್ಪ ಸದನಕ್ಕೆ ಬಂದು ಮಾತಾಡಲಿ: ಡಿ.ಕೆ.ಶಿವಕುಮಾರ್ ಟಾಂಗ್

ರಾಜಕಾರಣ ಎಲ್ಲಿ, ಹೇಗೆ ಎಂಬುದು ತೀರ್ಮಾನವಾಗಿಲ್ಲ. 1999 ರಲ್ಲಿ ಬೆಂಗಳೂರು ನಗರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಬಿನ್ನಿಪೇಟೆ ಕ್ಷೇತ್ರದಲ್ಲಿ ನಿಂತಾಗ ಕೆಲವರು ನಿಲ್ಲುವುದು ಬೇಡ ಎಂದಿದ್ದರು. ಆದರೆ ಸಿದ್ದಗಂಗಾ ಶ್ರೀಗಳು ಮತ್ತು ಆದಿಚುಂಚನಗಿರಿ ಶ್ರೀಗಳು ನೀನು ಮಾಡಿರುವ ಕೆಲಸಗಳಿಗೆ ಇದೊಂದು ಪರೀಕ್ಷೆ ಸ್ಪರ್ಧೆ ಮಾಡು ಎಂದು ಅಶೀರ್ವಾದ ಮಾಡಿದ್ದರು. ಕಾಂಗ್ರೆಸ್‌ನ ಪಾಂಚಜನ್ಯ ಯಾತ್ರೆಯ ಅಲೆಯ ನಡುವೆಯೂ 36 ಸಾವಿರ ಅಂತರದಿಂದ ಗೆಲುವಾಯಿತು. ಕಾಲ ಎಲ್ಲವನ್ನು ತೀರ್ಮಾನಿಸಲಿದೆ ಎಂದರು.

Follow Us:
Download App:
  • android
  • ios