ಸಿ.ಟಿ ರವಿ ಹೇಳಿಕೆ ಸ್ವತಃ ಅವರ ಹೆಂಡತಿಯೂ ಒಪ್ಪುವುದಿಲ್ಲ: ಸಚಿವ ಪ್ರಿಯಾಂಕ್ ಖರ್ಗೆ

ಹೆಬ್ಬಾಳಕರ ಬಗ್ಗೆ ರವಿ ನೀಡಿರುವ ಹೇಳಿಕೆಯ ಮಹಿಳೆಯರ ಬಗ್ಗೆ ಬಿಜೆಪಿಯವರ ಧೋರಣೆಗೆ ಕನ್ನಡಿ ಆಗಿದೆ. ಮಹಿಳೆಯರ ಕುರಿತು ಬಿಜೆಪಿಯವರು ಅವಹೇಳನಕಾರಿ ಮಾತನಾಡುತ್ತಾರೆ. ಅದು ಅವರ ಸಂಸ್ಕೃತಿ ಎಂದು ಮಾತಲ್ಲಿ ತಿವಿದ ಸಚಿವ ಪ್ರಿಯಾಂಕ್ ಖರ್ಗೆ
 

Even his wife does not agree with CT Ravi's statement Says Minister Priyank Kharge grg

ಕಲಬುರಗಿ(ಡಿ.21): ಸಚಿವೆ ಲಕ್ಷ್ಮಿ ಹೆಬ್ಬಾಳ್ಳರ್‌ ಕುರಿತು ಬಿಜೆಪಿ ನಾಯಕ ಸಿ.ಟಿ ರವಿ ಬೆಳಗಾವಿ ಸದನ ಕಲಾಪದಲ್ಲಿ ನೀಡಿರುವ ಹೇಳಿಕೆಯನ್ನು ಸ್ವತಃ ರವಿ ಅವರ ಹೆಂಡತಿಯೂ ಒಪ್ಪುವುದಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. 

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆಬ್ಬಾಳಕರ ಬಗ್ಗೆ ರವಿ ನೀಡಿರುವ ಹೇಳಿಕೆಯ ಮಹಿಳೆಯರ ಬಗ್ಗೆ ಬಿಜೆಪಿಯವರ ಧೋರಣೆಗೆ ಕನ್ನಡಿ ಆಗಿದೆ. ಮಹಿಳೆಯರ ಕುರಿತು ಬಿಜೆಪಿಯವರು ಅವಹೇಳನಕಾರಿ ಮಾತನಾಡುತ್ತಾರೆ. ಅದು ಅವರ ಸಂಸ್ಕೃತಿ ಎಂದು ಮಾತಲ್ಲಿ ತಿವಿದರು. ಆದರೂ ಕೂಡ ಅವರ ಪ್ರಕಾರ, ಮುನಿರತ್ನ, ಯಡಿಯೂರಪ್ಪ ಹಾಗೂ ರವಿ ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳುತ್ತಾರೆ ಎಂದು ಖರ್ಗೆ ವ್ಯಂಗ್ಯವಾಡಿದರು. 

ಸಿಟಿ ರವಿ ಮೇಲೆ ಹಲ್ಲೆ ಮಾಡಿದ ಆರೋಪಿಗಳನ್ನ ಬಿಡುಗಡೆ ಮಾಡಿದ್ದು ಏಕೆ? ಎಲ್ಲದಕ್ಕೂ ಪ್ರಶ್ನೆ ಇರುತ್ತೆ ಎಂದ ಗೃಹ ಸಚಿವ!

ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಹೇಳಿಕೆ ನೀಡಿದವರಿಗೆ ಶಿಕ್ಷೆ ನೀಡಿಲ್ಲ ಎಂದು ಬಿಜೆಪಿ ನಾಯಕರು ಹೇಳಿರುವ ಕುರಿತು ಸುದ್ದಿಗಾರರು ಪ್ರಶ್ನೆ ಮಾಡಿದಾಗ, ಪಾಕಿಸ್ತಾನದ ಪರ ಘೋಷಣೆ ಮಾಡಿದವರೊಂದಿಗೆ ಸಚಿವರಾಗಿದ್ದವರು ಈಗ ಶಾಸಕರಾಗಿರುವವರು ಹೋಲಿಸಿಕೊಳ್ಳುತ್ತಾರೆಯೇ? ಅವರಿಗೆ ನಾಚಿಕೆಯಾಗಬೇಕು ಎಂದು ವಾಗ್ದಾಳಿ ನಡೆಸಿದರು.  ಕಲಬುರಗಿಯಲ್ಲಿ ನಡೆದ ಕ್ಯಾಬಿನೆಟ್ ನಿರ್ಣಯಗಳನ್ನು ಮುಂದಿನ ವರ್ಷದಿಂದಲೇ ಅನುಷ್ಠಾನ ಮಾಡಲಾಗುವುದು ಎಂದು ಹೇಳಿದರು.

371(ಜೆ) ಜಾರಿ ಪರಿಣಾಮ ಶೈಕ್ಷಣಿಕ ಅಭಿವೃದ್ಧಿ: ಸಚಿವ ಪ್ರಿಯಾಂಕ್ ಖರ್ಗೆ 

ಕಲಬುರಗಿ: ಸಂವಿಧಾನದ ಕಲಂ 371 (ಜೆ) ಜಾರಿಗೆ ಬಂದ ನಂತರ ಕಲ್ಯಾಣ ಕರ್ನಾಟಕ ಭಾಗದಲ್ಲಿ ಶೈಕ್ಷಣಿಕ‌ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಗಣನೀಯ ಅಭಿವೃದ್ದಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಕಲಬುರಗಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲಂ 371 (ಜೆ) ಜಾರಿಗೆ ಬಂದ ಮೇಲೆ ಲಕ್ಷಾಂತರ ಜನ ನಿರುದ್ಯೋಗಿ ಯುವಕರಿಗೆ ಉದ್ಯೋಗ ಸಿಕ್ಕಿವೆ. ಕಲಬುರಗಿ ಮೆಡಿಕಲ್ ಹಬ್ಆಗಿ ಅಭಿವೃದ್ಧಿ ಹೊಂದಿದೆ. ಇತ್ತೀಚಿಗೆ ಬೆಳಗಾವಿಯ ಅಧಿವೇಶನದಲ್ಲಿ‌ ಕೆಲ ಮಿತ್ರರು ಈ ಬಗ್ಗೆ ಪ್ರಸ್ತಾಪ ಮಾಡಿ ನಕರಾತ್ಮಕ‌ ಮಾತುಗಳನ್ನಾಡಿದ್ದರು. ಕೆಲ ಲೋಪಗಳನ್ನು ಸರಿಪಡಿಸಿಕೊಂಡು‌,‌ ಈ ಭಾಗದ ಜನರಿಗೆ ಸೌಲಭ್ಯ ಕಲ್ಪಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.

ಪಕ್ಕದಲ್ಲಿಯೇ ಇದ್ದವರಿಗೆ ಕೇಳದ್ದು, ದೂರವಿದ್ದ ಹೆಬ್ಬಾಳರ್‌ಗೆ ಕೇಳಿದ್ದೇಗೆ?: ಹೇಮಲತಾ ನಾಯಕ

2016ರಲ್ಲಿ ಜಯದೇವ ಆಸ್ಪತ್ರೆ ಸ್ಥಾಪನೆಯಾದ ನಂತರ ಇಲ್ಲಿಯವರೆಗೆ ಸುಮಾರು 15 ಲಕ್ಷ ಜನರು ಆಸ್ಪತ್ರೆಯ ವಿವಿಧ ವಿಭಾಗಗಳಲ್ಲಿ ಆರೋಗ್ಯ ಸೇವೆ ಪಡೆದುಕೊಂಡಿದ್ದಾರೆ. ಇದು ಹೆಮ್ಮೆಯ ವಿಷಯ. ಕಲಂ371(ಜೆ) ಜಾರಿಗೆ ಬಂದು ಒಂದು ದಶಕಗಳು ಸಂದ ಹಿನ್ನೆಲೆಯಲ್ಲಿ ಜಯದೇವ ಆಸ್ಪತ್ರೆಗೆ ಹೊಸ ಕಟ್ಟಡ‌ ನಿರ್ಮಾಣ‌ ಮಾಡಿ, 371 ಹಾಸಿಗೆಗಳ ಆಸ್ಪತ್ರೆಯನ್ನಾಗಿ‌ ಪರಿವರ್ತಿಸಲಾಗಿದೆ. ನಾಳೆ ಸಿಎಂ ಸಿದ್ದರಾಮಯ್ಯನವರಿಂದ ಲೋಕಾರ್ಪಣೆಗೊಳ್ಳಲಿದೆ ಎಂದು ಹೇಳಿದರು.

ಬಾಣಂತಿಯರ ಸಾವುಗಳು ಸರ್ಕಾರದ ಪ್ರಾಯೋಜಿತ ಕೊಲೆಗಳು ಎನ್ನುವ ವಿರೋಧ ಪಕ್ಷದ ನಾಯಕ ಆರ್.ಅಶೋಕ ಹಾಗೂ ಬಿಜೆಪಿ ನಾಯಕ ಅಶ್ವಥ್ ನಾರಾಯಣ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಚಿವರು, ಕೋವಿಡ್ ಸಂದರ್ಭದಲ್ಲಿ ಅಂದಿನ ಬಿಜೆಪಿ ಸರ್ಕಾರದ ಬೇಜಾವಾಬ್ದಾರಿತನ ಹಾಗೂ ದುಡ್ಡು ಗಳಿಸುವ ದುರಾಸೆಯ ಪರಿಣಾಮ ರಾಜ್ಯದಲ್ಲಿ ಜನರು ಪ್ರಾಣ ಕಳೆದುಕೊಂಡರು. ಅದನ್ನು ಸರ್ಕಾರದ ಪ್ರಾಯೋಜಿತ ಕೊಲೆಗಳು ಎನ್ನಬಹುದು ಎಂದು ತಿರುಗೇಟು ನೀಡಿದರು.

Latest Videos
Follow Us:
Download App:
  • android
  • ios