ಹೈದರಾಬಾದ್(ನ. 25) ಮುಂದಿನ  2-3  ವರ್ಷದಲ್ಲಿ ದಕ್ಷಿಣ ಭಾರತ ಸಂಪೂರ್ಣ ಕೇಸರಿಮಯವಾಗಲಿದೆ ಎಂದು ಬಿಜೆಪಿ ಯುವಮೋರ್ಚಾ  ಅಧ್ಯಕ್ಷ ತೇಜಸ್ವಿ ಸೂರ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಹೈದರಾಬಾದ್ ನ ಮುಸ್ಸಿಪಲ್ ಕಾರ್ಪೋರೇಶನ್ ಗೆಲುವಿನೊಂದಿಗೆ ಬಿಜೆಪಿ ಅಭಿಯಾನ ಆರಂಭವಾಗಲಿದೆ.  ತಮಿಳು ನಾಡು ಮತ್ತು ಕೇರಳದಲ್ಲಿಯೂ ಜಯ ಸಿಗಲಿದೆ ಎಂದಿದ್ದಾರೆ.

ಹೈದರಾಬಾದ್ ನಲ್ಲಿ ಬಿಜೆಪಿ ಪರ ಪ್ರಚಾರ ಮಾಡುತ್ತಿರುವ ಸೂರ್ಯ,  ಬದಲಾವಣೆಗಾಗಿ ನಮ್ಮ ಹೋರಾಟ ಎಂದು ಹೇಳಿದ್ದಾರೆ.

ಹೈದರಾಬಾದ್ ಹೆಸರನ್ನು ಬಸಲಿಸಿದ ತೇಜಸ್ವಿ; ಭಾಗ್ಯನಗರ

ಹೈದರಾಬಾದ್ ಮುನ್ಸಿಪಲ್ ಗೆಲುವು ಮುಂದಿನ ತೆಲಂಗಾಣ ವಿಧಾನಸಭೆ ಚುನಾವಣೆ ಗೆಲುವಿನ ವೇದಿಕೆಯಾಗಲಿದೆ.  ತೆಲಂಗಾಣದ ಚಂದ್ರಶೇಖರ್ ರಾವ್ ಅವರ ಟಿಆರ್ ಎಸ್  ಮತ್ತು ಓವೈಸಿಯ ಎಐಎಂಐಎಂ ಒಂದೆ ನಾಣ್ಯದ ಎರಡು ಮುಖಗಳು ಎಂದು ಟೀಕಿಸಿದರು.

ಕೆಸಿಆರ್ ಹೈದ್ರಾಬಾದನ್ನು ಟರ್ಕಿಯ ರಾಜಧಾನಿ ಇಸ್ತಾಂಬುಲ್ ಮಾಡಲು ಹೊರಟಿದ್ದಾರೆ.  ಇನ್ನೊಂದುಕಡೆ ಎಐಎಂಐಎಂ ಹೈದರಾಬಾದ್ ನ್ನು ಪಾಕಿಸ್ತಾನದ ಹೈದರಾಬಾದ್ ಮಾಡಲು ಹೊರಟಿದೆ. ಓವೈಸಿ ಜಿನ್ನಾರ ಮತ್ತೊಂದು ಅವತಾರ ಎಂದು ದಾಳಿ ಮಾಡಿದರು.