ವಿಜಯೇಂದ್ರಗೆ ಟಿಕೆಟ್‌ ಬಗ್ಗೆ ಚುನಾವಣಾ ಸಮಿತಿ ನಿರ್ಧಾರ: ಬಿಎಸ್‌ವೈ

ಪುತ್ರ ವಿಜಯೇಂದ್ರನದ್ದಾಗಲಿ ಅಥವಾ ರಾಜ್ಯದ ಯಾವುದೇ ಕ್ಷೇತ್ರದ ಅಭ್ಯರ್ಥಿಯದ್ದಾಗಲಿ ಟಿಕೆಟ್‌ ಕೊಡಬೇಕೋ ಬೇಡವೋ ಎಂಬುದನ್ನು ಚುನಾವಣಾ ಸಮಿತಿ ನಿರ್ಧರಿಸುತ್ತದೆ. ಈ ವಿಚಾರದಲ್ಲಿ ನಾವು ಸಲಹೆ ಕೊಡಬಹುದಷ್ಟೆಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸ್ಪಷ್ಟಪಡಿಸಿದರು.

Election committee decision on ticket for Vijayendra says BSY  at rabakavi rav

ರಬಕವಿ-ಬನಹಟ್ಟಿ (ಮಾ.15) : ಪುತ್ರ ವಿಜಯೇಂದ್ರನದ್ದಾಗಲಿ ಅಥವಾ ರಾಜ್ಯದ ಯಾವುದೇ ಕ್ಷೇತ್ರದ ಅಭ್ಯರ್ಥಿಯದ್ದಾಗಲಿ ಟಿಕೆಟ್‌ ಕೊಡಬೇಕೋ ಬೇಡವೋ ಎಂಬುದನ್ನು ಚುನಾವಣಾ ಸಮಿತಿ ನಿರ್ಧರಿಸುತ್ತದೆ. ಈ ವಿಚಾರದಲ್ಲಿ ನಾವು ಸಲಹೆ ಕೊಡಬಹುದಷ್ಟೆಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ(BS Yadiyurappa) ಸ್ಪಷ್ಟಪಡಿಸಿದರು.

ವಿಜಯೇಂದ್ರನಿಗೆ (BY Vijayendra)ಟಿಕೆಟ್‌ ನೀಡುವ ವಿಚಾರವನ್ನು ಅಡುಗೆ ಮನೆಯಲ್ಲಿ ನಿರ್ಧರಿಸಲು ಸಾಧ್ಯವಿಲ್ಲ. ಅದನ್ನು ಹೈಕಮಾಂಡ್‌, ಚುನಾವಣಾ ಸಮಿತಿ ನಿರ್ಧರಿಸುತ್ತದೆಯೇ ಹೊರತು ಯಡಿಯೂರಪ್ಪ ಅಲ್ಲ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ.ರವಿ( CT Ravi) ಹೇಳಿದ್ದರು. ಈ ಹೇಳಿಕೆಗೆ ಸಂಬಂಧಿಸಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಯಡಿಯೂರಪ್ಪ, ಟಿಕೆಟ್‌ ವಿಚಾರದಲ್ಲಿ ಅಂತಿಮ ತೀರ್ಮಾನ ಚುನಾವಣಾ ಸಮಿತಿಯದ್ದೇ ಆಗಿರುತ್ತದೆ ಎಂದರು.

ಕಾಂಗ್ರೆಸ್ ಸಾಯಲ್ಲ, ಕೈಲಾಗದ ಈಶ್ವರಪ್ಪ ಮೈ ಪರಚಿಕೊಳ್ತಾನೆ: ಕಾಂಗ್ರೆಸ್ ಮುಖಂಡ ಕಿಡಿ

ಯತ್ನಾಳ(Basanagowda patil yatnal) ಜತೆಗೆ ಮುನಿಸು ಶಮನ?: ವಿಜಯಪುರ ಶಾಸಕ ಬಸನಗೌಡ ಯತ್ನಾಳ ನನ್ನ ಆತ್ಮೀಯ ಸ್ನೇಹಿತರು. ಯಾವುದೋ ಒಂದೆರೆಡು ಸಂದರ್ಭದಲ್ಲಿ ವಿರೋಧದ ಹೇಳಿಕೆ ನೀಡಿದ ಮಾತ್ರಕ್ಕೆ ಮಹಾ ಅಪರಾಧವಲ್ಲ ಎಂದು ಯಡಿಯೂರಪ್ಪ ಹೇಳಿದರು.

ಈಗ ಯತ್ನಾಳ್‌ ಅವರೂ ಸುಧಾರಿಸಿಕೊಂಡಿದ್ದಾರೆ. ನಮ್ಮಲ್ಲಿ ಯಾವುದೇ ಗೊಂದಲವಿಲ್ಲ, ಎಲ್ಲವೂ ಸರಿಯಿದೆ. ಎಲ್ಲರೂ ಒಟ್ಟಾಗಿ ಹೋಗುತ್ತೇವೆ ಎನ್ನುವ ಮೂಲಕ ತಮ್ಮಿಬ್ಬರ ನಡುವಿನ ಭಿನ್ನಮತ ದೂರವಾಗಿದೆ ಎಂಬ ಸಂದೇಶ ರವಾನಿಸುವ ಪ್ರಯತ್ನವನ್ನು ಯಡಿಯೂರಪ್ಪ ಮಾಡಿದರು.

ಸಚಿವ ಸೋಮಣ್ಣ ಕಾಂಗ್ರೆಸ್‌ ಸೇರ್ಪಡೆ ಪ್ರಶ್ನೆಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಕಾಂಗ್ರೆಸ್‌ ಮುಳುಗುತ್ತಿರುವ ಹಡಗು. ಬಿಜೆಪಿಯ ಯಾವ ಮುಖಂಡರೂ ಅನ್ಯ ಪಕ್ಷಗಳಿಗೆ ಹೋಗುವುದಿಲ್ಲ ಎಂಬ ವಿಶ್ವಾಸವಿದೆ. ಎಲ್ಲರೂ ಒಟ್ಟಾಗಿ ಪಕ್ಷ ಸಂಘಟನೆ ಕೆಲಸ ಮಾಡುತ್ತಿದ್ದೇವೆ ಎಂದರು.

ಸಿದ್ದು ಸವದಿಯೇ ತೇರದಾಳ ಅಭ್ಯರ್ಥಿ

ತೇರದಾಳ ವಿಧಾನಸಭಾ ಕ್ಷೇತ್ರ(Teradal assembly constitueny)ಕ್ಕೆ ಈ ಬಾರಿಯೂ ಶಾಸಕ ಸಿದ್ದು ಸವದಿಯೇ ಬಿಜೆಪಿ ಅಭ್ಯರ್ಥಿ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಘೋಷಿಸಿದ್ದಾರೆ.

ಶಿವಮೊಗ್ಗ: ಸಂಗೊಳ್ಳಿ ರಾಯಣ್ಣ ಅಪ್ರತಿಮ ವೀರಸೇನಾನಿ: ಬಿಎ​ಸ್‌​ವೈ

ಪಟ್ಟಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಕ್ಷೇತ್ರದಲ್ಲಿ ಸಿದ್ದು ಸವದಿ ಹಗಲು-ರಾತ್ರಿ ಎನ್ನದೆ ಓಡಾಡಿ ಅಭಿವೃದ್ಧಿ ಪರ ಕೆಲಸಗಳನ್ನು ಮಾಡುತ್ತಿದ್ದಾರೆ. ಹಾಗಾಗಿ ಈ ಬಾರಿಯೂ ಅವರೇ ಬಿಜೆಪಿ ಅಭ್ಯರ್ಥಿಯಾಗಿ ದೊಡ್ಡ ಅಂತರದಲ್ಲಿ ಗೆಲುವು ಕಾಣಲಿದ್ದಾರೆ ಎಂದು ಪ್ರತಿಕ್ರಿಯಿಸಿದರು.

Latest Videos
Follow Us:
Download App:
  • android
  • ios