Asianet Suvarna News Asianet Suvarna News

ಜನರಲ್ ಎಲೆಕ್ಷನ್ ಅಥವಾ ಉಪ ಚುನಾವಣೆಗೆ ಗೈಡ್ ಲೈನ್ಸ್ ಬಿಡುಗಡೆ

ಜನರಲ್ ಎಲೆಕ್ಷನ್ ಅಥವಾ ಉಪ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ಗೈಡ್ ಲೈನ್ಸ್ ಬಿಡುಗಡೆ ಮಾಡಿದೆ.  ಅದು ಈ ಕೆಳಗಿನಂತಿದೆ.

election commission-releases new guidelines for holding elections during Covid19 pandemic
Author
Bengaluru, First Published Aug 21, 2020, 9:27 PM IST

ನವದೆಹಲಿ, (ಆ.21): ಜನರಲ್ ಎಲೆಕ್ಷನ್ ಅಥವಾ ಉಪ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ಹೊಸ ಮಾರ್ಗಸೂಚಿ ಪ್ರಕಟಿಸಿದೆ. 

ಕೊರೋನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಮುಂದೆ ನಡೆಯಲಿರುವ ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆ ಹಾಗೂ ಉಪ ಚುನಾವಣೆಗಳಲ್ಲಿ ಪಾಲಿಸಬೇಕಾದ ನಿಯಮಗಳನ್ನ ಕಡ್ಡಾಯವಾಗಿ ಪಾಲಿಸಬೇಕು ಎಂದು ಕೇಂದ್ರ ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.

ದುಬೈಗೆ ಹಾರಿದ ಕೊಹ್ಲಿ ಬಾಯ್ಸ್, ಬಿಡುಗಡೆಯಾಯ್ತು ಟಾಪ್ ನಟಿಯರ ಲಿಸ್ಟ್: ಆ.21ರ ಟಾಪ್ 10 ಸುದ್ದಿ!

ಈ ಕುರಿತು 12 ಪುಟಗಳ ಹೊಸ ಚುನಾವಣಾ ನೀತಿಯನ್ನು ಪ್ರಕಟಿಸಿದ್ದು, ಹೊಸ ಮಾರ್ಗಸೂಚಿ ಈ ಕೆಳಗಿನಂತಿದೆ ನೋಡಿ. 

ಆಯೋಗದ ಹೊಸ ಮಾರ್ಗಸೂಚಿಗಳು 

* ಮನೆ ಮನೆ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಕೇವಲ 5 ಜನರಿಗೆ ಮಾತ್ರ ಅವಕಾಶ.
* ಮತದಾನ ಕೇಂದ್ರದಲ್ಲಿ ಕೈಗವಸುಗಳನ್ನು ಧರಿಸಿ ಮತ ಚಲಾಯಿಸುವುದು ಕಡ್ಡಾಯ.
* ಚುನಾವಣಾ ಉದ್ದೇಶಕ್ಕೆ ಬಳಸುವ ಕಟ್ಟಡ/ಕೊಠಡಿ/ಹಾಲ್‌ನ ಪ್ರವೇಶದಲ್ಲಿ ಪ್ರತಿ ವ್ಯಕ್ತಿಗೂ ಥರ್ಮಲ್ ಸ್ಕ್ಯಾನಿಂಗ್ ನಡೆಸಬೇಕು. ಅಲ್ಲಿ ಸ್ಯಾನಿಟೈಸರ್, ಸೋಪ್ ಮತ್ತು ನೀರು ಲಭ್ಯವಾಗುವಂತೆ ಇರಬೇಕು.
* ಸಾರ್ವಜನಿಕ ಸಭೆ ಆಯೋಜಿಸುವ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವಾಲಯ ಜಾರಿಗೊಳಿಸಿರುವ ಕೋವಿಡ್ ನಿಯಮಾವಳಿಗಳ ಪಾಲನೆ ಕಡ್ಡಾಯ.
* ಮತದಾನ ಕೇಂದ್ರದಲ್ಲಿ ಸಾಮಾಜಿಕ ಅಂತರ ಪಾಲನೆ ಮಾಡುವುದು ಕಡ್ಡಾಯ.
* ಮತಗಟ್ಟೆಗೆ ಬರುವಾಗ ಮತದಾರ ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು.
* ಚುನಾವಣೆಗೆ ನಿಲ್ಲುವ ಅಭ್ಯರ್ಥಿ ಆನ್‌ಲೈನ್ ಮೂಲಕವೇ ನಾಮಪತ್ರ ಹಾಗೂ ಭದ್ರತಾ ಠೇವಣಿಯನ್ನು ಸಲ್ಲಿಸಬೇಕು.
* ಮತಗಟ್ಟೆ ಸಿಬ್ಬಂದಿ ಕೂಡ ಮಾಸ್ಕ್, ಹ್ಯಾಂಡ್ ಸ್ಯಾನಿಟೈಸರ್, ಹಾಗೂ ಪಿಪಿಇ ಕಿಟ್‌ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ.
* ಮತಗಟ್ಟೆ ಕೇಂದ್ರಗಳಲ್ಲಿ ಥರ್ಮಲ್ ಸ್ಕ್ಯಾನಿಂಗ್ ಕಡ್ಡಾಯ ಎಂದ ಚುನಾವಣಾ ಆಯೋಗ.
* ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರು ಕನಿಷ್ಟ ವಾಹನಗಳ ಬಳಕೆ ಮಾಡತಕ್ಕದ್ದು.
* ರಾಜ್ಯ ಸರ್ಕಾರಗಳು ಮತಗಟ್ಟೆಗಳಿಗೆ ನೋಡಲ್ ಆರೋಗ್ಯ ಅಧಿಕಾರಿಗಳನ್ನು ನೇಮಕ ಮಾಡುವಂತೆ ಎಲ್ಲಾ ಜಲ್ಲಾಧಿಕಾರಿಗಳಿಗೆ ಸೂಚನೆ ನೀಡಬೇಕು.
* ಮತಗಟ್ಟೆಗಳನ್ನು ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಿರಬೇಕು ಎಂದು ಸೂಚಿಸಿದ ಚುನಾವಣಾ ಆಯೋಗ.
* ಕ್ಯಾರಂಟೈನ್‌ಗೆ ಗುರಿಯಾದ ಕೋವಿಡ್-19 ರೋಗಿಗಳು ಕೂಡ ಮತದಾನ ಮಾಡಬುಹುದಾಗಿದ್ದು, ಮತದಾನ ಅವಧಿಯ ಕೊನೆಯ ಒಂದು * ಗಂಟೆ ಬಾಕಿ ಇದ್ದಾಗ ಮತಗಟ್ಟೆಗೆ ಬಂದು ಮತ ಚಲಾಯಿಸಬಹುದಾಗಿದೆ.
* ಆರೋಗ್ಯ ಅಧಿಕಾರಿಗಳ ಮೇಲುಸ್ತುವಾರಿಯಲ್ಲಿ ಕ್ವಾರಂಟೈನ್‌ಗೆ ಒಳಪಟ್ಟ ಸೋಂಕಿತ ಮತದಾರರು ಮತ ಚಲಾಯಿಸಬಹುದಾಗಿದೆ.
* ಕಂಟೈನ್‌ಮೆಂಟ್ ಝೋನ್ ಹಾಗೂ ಸೀಲ್‌ಡೌನ್‌ ಪ್ರದೇಶಗಳ ಮತದಾರರಿಗೆ ಪ್ರತ್ಯೇಕ ನಿಯಮಾವಳಿಗಳ ಜಾರಿ.

Follow Us:
Download App:
  • android
  • ios