ಭಾರತದ ಚುನಾವಣಾ ಆಯೋಗ ಬಿಜೆಪಿಯ ಶಾಖೆಯಾಗಿದೆ. ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಧರ್ಮಾಧಾರಿತ ಪ್ರಚಾರ ಮಾಡಿದ್ರೆ ಅದು ಸುಮ್ಮನಿರುತ್ತೆ. ಈ ಮೊದಲು ಇದ್ದಂತೆ ಈಗ ಚುನಾವಣಾ ಆಯೋಗ ಸ್ವತಂತ್ರವಾಗಿ ಉಳಿದಿಲ್ಲ ಎಂದು ಮೆಹಬೂಬಾ ಮುಫ್ತಿ ಹೇಳಿದ್ದಾರೆ.
ಪಿಡಿಪಿ (PDP) ಮುಖ್ಯಸ್ಥೆ ಮೆಹಬೂಬಾ ಮುಫ್ತಿ (Mehbooba Mufti) ಚುನಾವಣಾ ಆಯೋಗದ ವಿರುದ್ಧ ಹರಿಹಾಯ್ದಿದ್ದಾರೆ. ಭಾರತದ ಚುನಾವಣಾ ಆಯೋಗ ((Election Commission of India) ಈಗ ಬಿಜೆಪಿಯ (BJP) ಶಾಖೆಯಾಗಿದ್ದು, ಅಲ್ಲದೆ, ಕೇಸರಿ ಪಕ್ಷದ ಸಂಕೇತಗಳ ಮೇರೆಗೆ ಚುನಾವಣಾ ಆಯೋಗ ಚುನಾವಣೆಗಳನ್ನು ನಡೆಸುತ್ತದೆ ಎಂದೂ ಮೆಹಬೂಬಾ ಮುಫ್ತಿ ಆರೋಪಿಸಿದ್ದಾರೆ. ಹಾಗೆ, ಚುನಾವಣಾ ಆಯೋಗ ಇನ್ನು ಸ್ವತಂತ್ರವಾಗಿ ಉಳಿದಿಲ್ಲ ಎಂದೂ ಪಿಡಿಪಿ ಮುಖ್ಯಸ್ಥೆ ಹೇಳಿಕೊಂಡಿದ್ದಾರೆ. ‘’ಭಾರತದ ಚುನಾವಣಾ ಆಯೋಗ ಬಿಜೆಪಿಯ ಶಾಖೆಯಾಗಿದೆ. ಹಿಮಾಚಲ ಪ್ರದೇಶದಲ್ಲಿ (Himachal Pradesh) ಬಿಜೆಪಿ ಧರ್ಮಾಧಾರಿತ ಪ್ರಚಾರ ಮಾಡಿದ್ರೆ ಅದು ಸುಮ್ಮನಿರುತ್ತೆ. ಈ ಮೊದಲು ಇದ್ದಂತೆ ಈಗ ಚುನಾವಣಾ ಆಯೋಗ ಸ್ವತಂತ್ರವಾಗಿ ಉಳಿದಿಲ್ಲ. ಭಾರತದ ಚುನಾವಣಾ ಆಯೋಗ ಬಿಜೆಪಿಯ ಸಂಕೇತಗಳ ಮೇರೆಗೆ ಚುನಾವಣೆ ನಡೆಸುತ್ತದೆ’’ ಎಂದು ಮೆಹಬೂಬಾ ಮುಫ್ತಿ ಹೇಳಿದ್ದಾರೆ.
ಹಿಮಾಚಲ ಪ್ರದೇಶದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಶೇ. 73.23 ರಷ್ಟು ಮತದಾನ ನಡೆದಿದೆ ಎಂದು ಶನಿವಾರ ರಾತ್ರಿ 11: 30ರಂದು ಚುನಾವಣಾ ಆಯೋಗ ಮಾಹಿತಿ ನೀಡಿತ್ತು. ಸೋಲನ್ ಭಾಗದಲ್ಲಿ ಅತಿ ಹೆಚ್ಚು ಅಂದರೆ ಶೇ. 76.82 ರಷ್ಟು ಜನರು ತಮ್ಮ ಹಕ್ಕನ್ನು ಚಲಾಯಿಸಿದ್ದರೆ, ಶಿಮ್ಲಾದಲ್ಲಿ ಶೇ. 69.88 ರಷ್ಟು ಪ್ರಮಾಣದ ಮತದಾನ ನಡೆದಿದೆ ಎಂದು ವರದಿಯಾಗಿದೆ.
ಇದನ್ನು ಓದಿ: ಅಧಿಕೃತ ನಿವಾಸವನ್ನು ಖಾಲಿ ಮಾಡಿ, ಮೆಹಬೂಬಾ ಮಫ್ತಿಗೆ ನೋಟಿಸ್ ಜಾರಿ!
ಇನ್ನು, ಉನಾ ಪ್ರದೇಶದಲ್ಲಿ ಶೇ. 76.69 ರಷ್ಟು ಜನರು ತಮ್ಮ ಹಕ್ಕು ಚಲಾಯಿಸಿದ್ದರೆ, ಕುಲ್ಲು ಭಾಗದಲ್ಲಿ ಶೇ. 76. 15 ರಷ್ಟು ಜನರು ಮತದಾನ ಮಾಡಿದ್ದಾರೆ. ನೂತನ ಶಾಸಕರನ್ನು ಆಯ್ಕೆ ಮಾಡಲು ಹಿಮಾಚಲ ಪ್ರದೇಶದಲ್ಲಿ ಬೆಳಗ್ಗೆ 8 ಗಂಟೆಗೆ ಆರಂಭವಾದ ಮತದಾನ ಸಂಜೆ 5 ಗಂಟೆಯವರೆಗೆ ನಡೆಯಿತು.
ಈ ಮಧ್ಯೆ, ಕಾಶ್ಮೀರಿ ಪಂಡಿತರ (Kashmiri Pandits) ವಿಚಾರದಲ್ಲೂ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಮೆಹಬೂಬಾ ಮುಫ್ತಿ, "ಎಲ್ಲವನ್ನೂ ಅಡ್ಡಿಪಡಿಸಲು" (ಮೋದಿ) ಸರ್ಕಾರವಿದೆ ಎಂದು ಹೇಳಿದ್ದಾರೆ. ಹಾಗೂ, ಬಿಜೆಪಿಯು (ಪಂಡಿತರ) ಹೋರಾಟಗಳನ್ನು ಬಳಸಿಕೊಂಡು" ತಮ್ಮ ಮತಗಳನ್ನು ಗಳಿಸುತ್ತಿದೆ ಎಂದೂ ಅವರು ಆರೋಪಿಸಿದರು.
“ಪ್ರಸ್ತುತ ಸರ್ಕಾರವು ಎಲ್ಲವನ್ನೂ ಅಡ್ಡಿಪಡಿಸಲು ಇಲ್ಲಿದೆ. ಕಾಶ್ಮೀರಿ ಪಂಡಿತರು ಕಾಶ್ಮೀರದಲ್ಲಿ ಪರಿಸ್ಥಿತಿ ಸುಧಾರಿಸುವವರೆಗೆ ಜಮ್ಮುವಿಗೆ ಸ್ಥಳಾಂತರಿಸಬೇಕೆಂದು ಬಹಳ ಸಮಯದಿಂದ ಆಗ್ರಹಿಸುತ್ತಿದ್ದಾರೆ. ಆದರೆ ಸರ್ಕಾರ ಅವರ ಆದಾಯ ಮತ್ತು ಪಡಿತರವನ್ನು ನಿಲ್ಲಿಸುತ್ತಾರೆ. ಹಾಗೂ, ಬಿಜೆಪಿ ಅವರ ಹೋರಾಟವನ್ನು ಮತ ಗಳಿಸಲು ಬಳಸಿಕೊಳ್ಳುತ್ತದೆ ಎಂದು ಮೆಹಬೂಬಾ ಮುಫ್ತಿ ಆರೋಪಿಸಿದ್ದಾರೆ.
ಇದನ್ನೂ ಓದಿ: 'ಈಶ್ವರ ಅಲ್ಲಾ ತೇರೇ ನಾಮ್..' ಎಂದ ಕಾಶ್ಮೀರ ಮಕ್ಕಳು, ಇದು ಹಿಂದುತ್ವದ ಅಜೆಂಡಾ ಎಂದ ಮೆಹಬೂಬಾ ಮುಫ್ತಿ!
ಕಳೆದ ತಿಂಗಳ ಆರಂಭದಲ್ಲಿ, ಈ ಪ್ರದೇಶದಲ್ಲಿ ಇತ್ತೀಚೆಗೆ ನಡೆದ ಉದ್ದೇಶಿತ ಹತ್ಯೆಗಳ ವಿಚಾರದಲ್ಲೂ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ, ಕೇಂದ್ರದಲ್ಲಿ ಬಿಜೆಪಿ ವ್ಯವಹಾರಗಳ ಚುಕ್ಕಾಣಿ ಹಿಡಿದಿದ್ದರೂ ಸಹ ಕಾಶ್ಮೀರಿ ಪಂಡಿತರು ವಲಸೆ ಹೋಗುವಂತೆ ಒತ್ತಾಯಿಸಲಾಗಿದೆ ಎಂದು ಹೇಳಿದರು.
“ಕಾಶ್ಮೀರಿ ಪಂಡಿತರ ಉದ್ದೇಶಿತ ಹತ್ಯೆಗಳು ನಡೆಯುತ್ತಿವೆ, ಯಾರ ಸರ್ಕಾರವಿದೆ? ಕಾಶ್ಮೀರಿ ಪಂಡಿತರು ಕಳೆದ 6 ತಿಂಗಳಿನಿಂದ ಜಮ್ಮುವಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇಂದು ಫಾರೂಕ್ ಅಬ್ದುಲ್ಲಾ ಅಥವಾ ನಾನು ಅಧಿಕಾರದಲ್ಲಿಲ್ಲ. ಕೇಂದ್ರದಲ್ಲಿ ಬಿಜೆಪಿ ಸರಕಾರವಿದೆ. ಕಾಶ್ಮೀರಿ ಪಂಡಿತರು ಏಕೆ ವಲಸೆ ಹೋಗುವಂತೆ ಒತ್ತಾಯಿಸುತ್ತಿದ್ದಾರೆ? ಎಂದು ಮೆಹಬೂಬಾ ಮುಫ್ತಿ ಹೇಳಿದರು.
ಇದನ್ನೂ ಓದಿ: ಭಜನೆ ಮಾಡಿದ ಕೂಡಲೇ ಹಿಂದೂಗಳಾಗುತ್ತಾರಾ: Mehbooba Mufti ಹೇಳಿಕೆಗೆ Farooq Abdullah ಆಕ್ರೋಶ
