ಕರ್ನಾಟಕದ 4 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ದಿನಾಂಕ ಘೋಷಣೆ..!
ಕರ್ನಾಟಕದಲ್ಲಿ ತೆರವಾಗಲಿರುವ ರಾಜ್ಯಸಭೆ ಸ್ಥಾನಗಳಿಗೆ ಕೇಂದ್ರ ಚುನಾವಣಾ ಆಯೋಗ ದಿನಾಂಕ ನಿಗದಿಪಡಿಸಿದೆ.
ನವದೆಹಲಿ/ಬೆಂಗಳೂರು, (ಜೂನ್.01): ಕರ್ನಾಟಕದ 4 ರಾಜ್ಯಸಭಾ ಸ್ಥಾನಗಳಿಗೆ ಕೇಂದ್ರ ಚುನಾವಣೆ ಆಯೋಗ ಎಲೆಕ್ಷನ್ ದಿನಾಂಕವನ್ನು ಘೋಷಣೆ ಮಾಡಿದೆ.
ಜೂನ್ 19 ರಂದು ಬೆಳಗ್ಗೆ 9ರಿಂದ ಸಂಜೆ 4ರ ವರೆಗೆ ಮತದಾನ ನಡೆಯಲಿದ್ದು, ಅದೇ ದಿನ ಸಂಜೆ 5ಕ್ಕೆ ಮತ ಎಣಿಕೆ ನಡೆಯಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಕಾಂಗ್ರೆಸ್-ಜೆಡಿಎಸ್ ಮತ್ತೆ ದೋಸ್ತಿ: ದೇವೇಗೌಡರ ಮುಂದೆ ಬಂಪರ್ ಆಫರ್...!
ಕರ್ನಾಟಕದ ರಾಜ್ಯಸಭೆ ಸದಸ್ಯರುಗಳಾದ ಪ್ರೊ. ಎಂ.ವಿ.ರಾಜೀವ್ ಗೌಡ (ಕಾಂಗ್ರೆಸ್), ಬಿ.ಕೆ.ಹರಿಪ್ರಸಾದ್ (ಕಾಂಗ್ರೆಸ್), ಡಾ. ಪ್ರಭಾಕರ್ ಕೋರೆ (ಬಿಜೆಪಿ), ಡಿ. ಕುಪೇಂದ್ರ ರೆಡ್ಡಿ (ಜೆಡಿಎಸ್) ಅವರಿಂದ ತೆರವಾಗುವ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ವಿಧಾನಸಭಾ ಸದಸ್ಯರು (MLA) ಮತದಾನ ಮಾಡಲಿದ್ದಾರೆ.
ಚುನಾವಣೆ ಪ್ರಕ್ರಿಯೆ
* ಜೂನ್ 9- ನಾಮಪತ್ರ ಸಲ್ಲಿಸಲು ಕೊನೆ ದಿನ
* ಜೂನ್ 10- ನಾಮಪತ್ರ ಪರಿಶೀಲನೆ
* ಜೂನ್ 12- ನಾಮಪತ್ರ ಹಿಂಪಡೆಯಲು ಕೊನೆ ದಿನ
* ಜೂನ್ 19- ಮತದಾನ (ಬೆಳಗ್ಗೆ 9ರಿಂದ ಸಂಜೆ4ರ ವರೆಗೆ
*ಅಂದೇ ಅಂದ್ರೆ ಜೂನ್ 19ರ ಸಂಜೆ 5ಗೆ ಮತದಾನ ಎಣಿಕೆ
* ಜೂನ್ 22ರ ವೇಳೆ ಎಲ್ಲಾ ಪ್ರಕ್ರಿಯೆ ಮುಗಿಯಲಿವೆ.
ಇನ್ನು ಆಂಧ್ರಪ್ರದೇಶ ಮತ್ತು ಗುಜರಾತ್‌ನಲ್ಲಿ ತಲಾ 4 ಸ್ಥಾನಗಳು, ಜಾರ್ಖಂಡ್ 2, ಮಧ್ಯಪ್ರದೇಶ 3, ಮಣಿಪುರ್ ಮತ್ತು ಮೇಘಾಲಯ ತಲಾ 1 ಸೀಟುಳಿಗೆ ಗೆ ಜೂನ್ 19ರಂದೇ ಚುನಾವಣೆ ನಡೆಯಲಿದೆ.