ನ.14ಕ್ಕೆ ಡಿ.ಕೆ.ಶಿವಕುಮಾರ್‌ಗೆ ಮತ್ತೆ ಇ.ಡಿ.ಬುಲಾವ್
ಜಾರಿ ನಿರ್ದೇಶನಾಲಯದಿಂದ (ಇಡಿ) ನ.14ರಂದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಬಂದಿದೆ. ಆದರೆ ಅದೇ ದಿನ ನೆಹರು ಜಯಂತಿ ಇದೆ. ಸಮನ್ಸ್‌ಗೆ ಗೌರವ ಕೊಡಬೇಕು. ಹಾಗಾಗಿ ವಕೀಲರೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.
ಹುಬ್ಬಳ್ಳಿ (ನ.09): ಜಾರಿ ನಿರ್ದೇಶನಾಲಯದಿಂದ (ಇಡಿ) ನ.14ರಂದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಬಂದಿದೆ. ಆದರೆ ಅದೇ ದಿನ ನೆಹರು ಜಯಂತಿ ಇದೆ. ಸಮನ್ಸ್‌ಗೆ ಗೌರವ ಕೊಡಬೇಕು. ಹಾಗಾಗಿ ವಕೀಲರೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು. ಇಲ್ಲಿನ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಚಾರಣೆಗೆ ಹಾಜರಾಗುವಂತೆ ಇಡಿ ಸಮನ್ಸ್ ನೀಡಿದೆ. ನ.14ರಂದು ವಿಚಾರಣೆಗೆ ಹಾಜರಾಗುವಂತೆ ತಿಳಿಸಿದೆ ಎಂದು ಈಗ ತಾನೆ ತಿಳಿಯಿತು. ಈಗಾಗಲೇ ನನ್ನ ಸಹೋದರ ಸೋಮವಾರ ವಿಚಾರಣೆಗೆ ಹಾಜರಾಗಿದ್ದಾನೆ. ಸಮನ್ಸ್ ಕುರಿತು ಅವನೊಂದಿಗೆ ಹಾಗೂ ವಕೀಲರೊಂದಿಗೆ ಸಮಾಲೋಚಿಸುತ್ತೇನೆ ಎಂದರು.
ಐದೂವರೆ ಗಂಟೆ ಕಾಲ ವಿಚಾರಣೆ ಎದುರಿಸಿದ ಡಿಕೆಸು: ಯಂಗ್ ಇಂಡಿಯಾ ಟ್ರಸ್ಟ್‌ಗೆ ದೇಣಿಗೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಸಂಸದ ಡಿ.ಕೆ.ಶಿವಕುಮಾರ್ ಅವರು ಸೋಮವಾರ ಇ.ಡಿ.(ಜಾರಿ ನಿರ್ದೇಶನಾಲಯ) ವಿಚಾರಣೆಗೆ ಹಾಜರಾದರು. ಡಿ.ಕೆ.ಸುರೇಶ್ ಅವರನ್ನು ಇ.ಡಿ. ಅಧಿಕಾರಿಗಳು ಸತತ ಐದೂವರೆ ಗಂಟೆಗಳ ಕಾಲ ವಿಚಾರಣೆ ನಡೆಸಿದರು. ಡಿ.ಕೆ.ಶಿವಕುಮಾರ್ ಅವರು ಪೂರ್ವನಿಯೋಜಿತ ಕಾರ್ಯಕ್ರಮಗಳ ಕಾರಣ ನೀಡಿ ಗೈರಾದರೆ, ಡಿ.ಕೆ.ಸುರೇಶ್ ಅವರು ದೆಹಲಿಗೆ ತೆರಳಿ ವಿಚಾರಣೆ ಎದುರಿಸಿದರು. ನಂತರ ಸುದ್ದಿಗಾರರ ಜತೆಗೆ ಮಾತನಾಡಿದ ಡಿ.ಕೆ.ಸುರೇಶ್, ದೇಣಿಗೆ ಯಾಕೆ ನೀಡಿದ್ದೀರಿ?
ಖಾತೆ ಬಂದ್ ಮಾಡಿಸಿದ್ರೂ, ಜೈಲಿಗೆ ಹಾಕಿಸಿದ್ರೂ ನಾವು ಸಿದ್ಧ: ಡಿಕೆಶಿ
ಹಣದ ಮೂಲ ಏನು? ಸೇರಿದಂತೆ ವಿವಿಧ ಮಾಹಿತಿಗಳು ಕೇಳಿದ್ದಾರೆ. ಅವರು ಕೇಳಿ ಕೆಲವು ವಿಚಾರಗಳಿಗೆ ಮೂರ್ನಾಲ್ಕು ದಿನಗಳಲ್ಲಿ ಎಲ್ಲ ದಾಖಲೆ ನೀಡುವುದಾಗಿ ತಿಳಿಸಿದ್ದೇನೆ ಎಂದರು. ನನಗೂ ಆಹ್ವಾನ ಇತ್ತು: ಈ ಹಿಂದೆ ಐಟಿ, ಇ.ಡಿ. ದಾಳಿ ವೇಳೆ ಬಿಜೆಪಿ ಸೇರುವಂತೆ ನನಗೂ ಆಹ್ವಾನ ಇತ್ತು. ಈಗ ಅಂಥ ಆಹ್ವಾನ ಇಲ್ಲ. ಈ ಹಿಂದೆ ಬೇರೆ ರೀತಿಯ ಒತ್ತಡಗಳು ಬಂದಿದ್ದವು, ಬೇರೆಯವರ ಮೂಲಕ ಬಿಜೆಪಿಗೆ ಸೇರಲು ಒತ್ತಡ ಹಾಕಿದ್ದರು ಎಂದು ಇದೇ ವೇಳೆ ಡಿ.ಕೆ.ಸುರೇಶ್ ಆರೋಪಿಸಿದರು.
ಪದೇಪದೇ ಇ.ಡಿ. ಸಮನ್ಸ್ ನೀಡಿ ಹಿಂಸೆ: ಜಾರಿ ನಿರ್ದೇಶನಾಲಯದ (ಇ.ಡಿ) ಸಮನ್ಸ್ ಮೇರೆಗೆ ಇತ್ತೀಚೆಗಷ್ಟೇ ನಾನು ಹಾಗೂ ನನ್ನ ಸಹೋದರ ಹೋಗಿ ಉತ್ತರ ಕೊಟ್ಟಿದ್ದೇವೆ. ಇದೀಗ ಮತ್ತೆ ನ.7ರಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಬಂದಿದೆ. ಇ.ಡಿ. ಅವರು ಯಾಕೆ ಪದೇ ಪದೇ ಕರೆದು ಹಿಂಸೆ ಕೊಡುತ್ತಿದ್ದಾರೆ ಎಂಬುದು ಗೊತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪದೇ ಪದೇ ಜಾರಿ ನಿರ್ದೇಶನಾಲಯದಿಂದ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಬರುತ್ತಿರುವ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದರು.
ನಿಜವಾದ ಬಂಡೆ ಮಲ್ಲಿಕಾರ್ಜುನ ಖರ್ಗೆ: ಡಿ.ಕೆ.ಶಿವಕುಮಾರ್ ಪ್ರಶಂಸೆ
ಇತ್ತೀಚೆಗೆ ನಡೆದ ವಿಚಾರಣೆ ವೇಳೆ ಇ.ಡಿ. ಅವರು ಕೇಳಿದ ಎಲ್ಲಾ ಮಾಹಿತಿ ನೀಡಿದ್ದೇನೆ. ಆದರೆ ನ್ಯಾಷನಲ್ ಹೆರಾಲ್ಡ್ ಪ್ರಕರಣದ ತನಿಖಾಧಿಕಾರಿ ಬದಲಾಗಿದ್ದಾರೆ. ಈಗ ಮತ್ತೆ ವಿಚಾರಣೆಗೆ ಹಾಜರಾಗಲು ನನಗೆ ಹಾಗೂ ನನ್ನ ಸಹೋದರನಿಗೆ (ಸಂಸದ ಡಿ.ಕೆ.ಸುರೇಶ್) ನೋಟಿಸ್ ನೀಡಿದ್ದಾರೆ. ಅವರು ಕೇಳಿದ ದಾಖಲೆ ಸಲ್ಲಿಸಿದ್ದು, ಇನ್ನೂ ಕೆಲ ದಾಖಲೆಗಳನ್ನು ಕಳಿಸುತ್ತೇನೆ. ಇದನ್ನು ಕಾನೂನು ಪ್ರಕಾರವೇ ಎದುರಿಸುತ್ತೇನೆ ಎಂದು ಸ್ಪಷ್ಟಪಡಿಸಿದರು. ಜಾರಿ ನಿರ್ದೇಶನಾಲಯ ಹಾಗೂ ಸಿಬಿಐ ಒಂದೇ ವಿಚಾರಕ್ಕೆ (ಅಕ್ರಮ ಆಸ್ತಿ ಸಂಪಾದನೆ ಪ್ರಕರಣ) ಎರಡು ಕೇಸ್ ದಾಖಲಿಸಿವೆ. ಈ ರೀತಿ ದಾಖಲಿಸಲು ಸಾಧ್ಯವಿಲ್ಲ ಎಂದು ಹೈಕೋರ್ಚ್‌ಗೆ ಅರ್ಜಿ ಹಾಕಿದ್ದೇನೆ. ನನಗೆ ಕಾನೂನಿನ ಮೇಲೆ ಗೌರವ ಇದೆ. ಅವರು ಏನು ಹೇಳುತ್ತಾರೋ ನೋಡೋಣ ಎಂದು ಹೇಳಿದರು.