ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಎನ್‌ಡಿಎ ಯಲ್ಲಿ ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆ ಮತ್ತು ಸಿಬಿಐ ಮಾತ್ರ ಮೂರು ಪ್ರಬಲ ಪಕ್ಷಗಳು ಎಂದು ಹೇಳಿದ್ದಾರೆ.

ಮುಂಬೈ (ಜುಲೈ 26, 2023): ಪ್ರಧಾನಿ ಮೋದಿ ಇತ್ತೀಚೆಗೆ ‘I.N.D.I.A’ ಮೈತ್ರಿಕೂಟದ ವಿರುದ್ಧ ಟೀಕೆ ಮಾಡಿದ್ದು, ಇಂಡಿಯನ್ ಮುಜಾಹಿದ್ದೀನ್‌, ಪಾಪುಲರ್‌ ಫ್ರಂಟ್‌ ಆಫ್‌ ಇಂಡಿಯಾಲ್ಲೂ INDIA ಇದೆ ಎಂದು ಟೀಕೆ ಮಾಡಿದ್ದರು. ಈ ಬೆನ್ನಲ್ಲೇ ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದಲ್ಲಿ (ಎನ್‌ಡಿಎ) ಗೆ ಟಾಮಗ್‌ ನೀಡಿದ್ದಾರೆ. ಅಲ್ಲದೆ, ಬಿಜೆಪಿ ವಿರುದ್ಧವೂ ತರಾಟೆಗೆ ತೆಗೆದುಕೊಂಡಿದ್ದಾರೆ.

ಭಾರತೀಯ ಜನತಾ ಪಕ್ಷವನ್ನು ತರಾಟೆಗೆ ತೆಗೆದುಕೊಂಡಿರುವ ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದಲ್ಲಿ (ಎನ್‌ಡಿಎ) ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆ ಮತ್ತು ಸಿಬಿಐ ಮಾತ್ರ "ಮೂರು ಪ್ರಬಲ ಪಕ್ಷಗಳು" ಎಂದು ಹೇಳಿದ್ದಾರೆ. ಶಿವಸೇನಾ (ಯುಬಿಟಿ) ಮುಖವಾಣಿ 'ಸಾಮ್ನಾ'ದ ಕಾರ್ಯನಿರ್ವಾಹಕ ಸಂಪಾದಕರಾಗಿರುವ ರಾಜ್ಯಸಭಾ ಸದಸ್ಯ ಸಂಜಯ್ ರಾವುತ್ ಅವರಿಗೆ ಸಂದರ್ಶನವೊಂದರಲ್ಲಿ ಉದ್ಧವ್‌ ಠಾಕ್ರೆ ಈ ಹೇಳಿಕೆ ನೀಡಿದ್ದಾರೆ. 

ಇದನ್ನು ಓದಿ: Manipur Violence: ಕೇಂದ್ರ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ ಕಾಂಗ್ರೆಸ್‌, ಕೆಸಿಆರ್‌ ಪಕ್ಷ

ಮಣಿಪುರದ ಹಿಂಸಾಚಾರದ ಬಗ್ಗೆ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಉದ್ಧವ್‌ ಠಾಕ್ರೆ, ಪ್ರಧಾನಿ ನರೇಂದ್ರ ಮೋದಿ ಈಶಾನ್ಯ ರಾಜ್ಯಕ್ಕೆ ಭೇಟಿ ನೀಡಲು ಸಿದ್ಧರಿಲ್ಲ ಎಂದೂ ಆರೋಪಿಸಿದರು. ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ಇತ್ತೀಚಿನ ಸಭೆಗೆ ಟಾಂಗ್‌ ಕೊಟ್ಟ ಉದ್ಧವ್‌ ಠಾಕ್ರೆ, ಚುನಾವಣೆಗಳು ಸಮೀಪಿಸಿದಾಗ, ಬಿಜೆಪಿಗೆ ಅದರ ಸರ್ಕಾರವು ಎನ್‌ಡಿಎ ಸರ್ಕಾರವಾಗುತ್ತದೆ. ಆದರೆ, ಚುನಾವಣೆ ಮುಗಿದ ನಂತರ ಅದು ಮೋದಿ ಸರ್ಕಾರವಾಗುತ್ತದೆ ಎಂದೂ ಪ್ರತಿಪಾದಿಸಿದರು. ಎನ್‌ಡಿಎಯ ಭಾಗವಾಗಿರುವ 38 ಪಕ್ಷಗಳ ನಾಯಕರು ಕಳೆದ ವಾರ ದೆಹಲಿಯಲ್ಲಿ ಸಭೆ ನಡೆಸಿದ್ದು, ಈ ಸಭೆಗೆ ಉದ್ದವ್‌ ಠಾಕ್ರೆ ಈ ಟೀಕೆ ಮಾಡಿದ್ದಾರೆ. 

ಅದೇ ದಿನ, ಶಿವಸೇನೆ (UBT) ಸೇರಿದಂತೆ 26 ವಿರೋಧ ಪಕ್ಷಗಳು ಬೆಂಗಳೂರಿನಲ್ಲಿ ಸಭೆ ಸೇರಿದ್ದವು ಮತ್ತು ಅವರ ಒಕ್ಕೂಟವನ್ನು ಭಾರತೀಯ ರಾಷ್ಟ್ರೀಯ ಅಭಿವೃದ್ಧಿ ಅಂತರ್ಗತ ಒಕ್ಕೂಟ (INDIA) ಎಂದು ಹೆಸರಿಸುವ ಪ್ರಸ್ತಾಪವನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು.

ಇದನ್ನೂ ಓದಿ: ಆಕ್ಸಿಜನ್‌ ಮಾಸ್ಕ್‌ ಧರಿಸಿದ್ದ ಸೋನಿಯಾ ಗಾಂಧಿ: ಕಾಂಗ್ರೆಸ್‌ ನಾಯಕಿ ಬಳಿ ತೆರಳಿ ಆರೋಗ್ಯ ವಿಚಾರಿಸಿದ ಪ್ರಧಾನಿ ಮೋದಿ

ಆಡಳಿತಾರೂಢ ಬಿಜೆಪಿಯು ವಿರೋಧಿಗಳನ್ನು ಗುರಿಯಾಗಿಸಲು ಕೇಂದ್ರೀಯ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿವೆ. "ಎನ್‌ಡಿಎಯಲ್ಲಿ 36 ಪಕ್ಷಗಳಿವೆ. ಈ ಪೈಕಿ, ಇಡಿ, ಸಿಬಿಐ ಮತ್ತು ಆದಾಯ ತೆರಿಗೆ ಮಾತ್ರ ಎನ್‌ಡಿಎಯಲ್ಲಿ ಮೂರು ಪ್ರಬಲ ಪಕ್ಷಗಳಾಗಿವೆ. ಇತರ ಪಕ್ಷಗಳು ಎಲ್ಲಿವೆ? ಕೆಲವು ಪಕ್ಷಗಳು ಒಬ್ಬ ಸಂಸದರನ್ನು ಸಹ ಹೊಂದಿಲ್ಲ’’ ಎಂದು ಉದ್ದವ್‌ ಠಾಕ್ರೆ ಸಂದರ್ಶನದಲ್ಲಿ ಹೇಳಿದ್ದು, ಇದರ ಮೊದಲ ಭಾಗ ಇಂದು 'ಸಾಮ್ನಾ'ದಲ್ಲಿ ಪ್ರಕಟವಾಗಿದೆ.

ಈ ಮಧ್ಯೆ, ಏಕರೂಪ ನಾಗರಿಕ ಸಂಹಿತೆಯ ವಿಷಯದ ಕುರಿತು ಮಾತನಾಡಿದ ಉದ್ಧವ್‌ ಠಾಕ್ರೆ, ಬಿಜೆಪಿ ಮೊದಲು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಗೋಹತ್ಯೆ ನಿಷೇಧಕ್ಕೆ ಕಾನೂನು ತರಬೇಕು ಎಂದು ಹೇಳಿದರು. ಕಾನೂನಿನ ಮುಂದೆ ಎಲ್ಲರೂ ಸಮಾನರಾಗಿದ್ದರೆ, ಬಿಜೆಪಿಯಲ್ಲಿ ಭ್ರಷ್ಟರಾಗಿರುವವರಿಗೂ ಶಿಕ್ಷೆಯಾಗಬೇಕು ಎಂದೂ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ವ್ಯಂಗ್ಯವಾಡಿದ್ದಾರೆ. 

ಇದನ್ನೂ ಓದಿ: ಮಣಿಪುರ ಸ್ತ್ರೀಯರ ನಗ್ನ ಪರೇಡ್‌: ದೇಶಾದ್ಯಂತ ದಿಗ್ಭ್ರಮೆ, ಆಕ್ರೋಶ;ಮಣಿಪುರದಲ್ಲಿ ಭುಗಿಲೆದ್ದ ಪ್ರತಿಭಟನೆ