Asianet Suvarna News Asianet Suvarna News

UP Elections : ಸಮಾಜವಾದಿ ಅಧಿಕಾರದ ಕಾಲದಲ್ಲಿ ಸ್ಮಶಾನದಲ್ಲಿ ಮಾತ್ರವೇ ಅಭಿವೃದ್ಧಿ ಕಾಣುತ್ತಿತ್ತು!

ಸಮಾಜವಾದಿ ಪಕ್ಷದ ವಿರುದ್ಧ ಯೋಗಿ ಆದಿತ್ಯನಾಥ್ ಕಿಡಿ
ಪಿಸ್ತೂಲ್ ಗಳ ಫ್ಯಾಕ್ಟರಿಯನ್ನು ರಾಜ್ಯದಲ್ಲಿ ನಡೆಸುತ್ತಿತ್ತು
ಸ್ಮಶಾನದಲ್ಲಿ ಮಾತ್ರವೇ ಅಭಿವೃದ್ಧಿ ಕಾಣುತ್ತಿತ್ತು ಎಂದು ಯುಪಿ ಮುಖ್ಯಮಂತ್ರಿ

During Samajwadis time development was visible only in graveyard said Yogi Adityanath
Author
Bengaluru, First Published Jan 29, 2022, 9:08 PM IST | Last Updated Jan 29, 2022, 9:08 PM IST

ಭಾಗ್ ಪೇಟ್ (ಜ. 29): ಉತ್ತರ ಪ್ರದೇಶದಲ್ಲಿ ಈ ಹಿಂದೆ ಅಧಿಕಾರದಲ್ಲಿದ್ದ ಸಮಾಜವಾದಿ ಪಕ್ಷವು ( Samajwadi Party) ಕೇವಲ ವಿನಾಶದ ಮಾದತಿಯನ್ನು ಅಳವಡಿಸಿಕೊಂಡಿತ್ತು. ಅವರ ಅವಧಿಯಲ್ಲಿ ಕೇವಲ ಸ್ಮಶಾನಗಳಲ್ಲಿ(graveyard) ಮಾತ್ರವೇ ಅಭಿವೃದ್ಧಿ ಗೋಚರವಾಗುತ್ತಿತ್ತು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ (Uttar Pradesh Chief Minister) ಯೋಗಿ ಆದಿತ್ಯನಾಥ್ (Yogi Adityanath) ಕಿಡಿ ಕಾರಿದ್ದಾರೆ. 

"ಎಸ್‌ಪಿ ಸರ್ಕಾರವು 'ತಮಂಚಾ' (tamanchas)(ದೇಸೀ ನಿರ್ಮಿತ ಪಿಸ್ತೂಲ್‌ಗಳು) ಉತ್ಪಾದನೆಗಾಗಿ ಕಾರ್ಖಾನೆಗಳನ್ನು ಸ್ಥಾಪಿಸಿತ್ತು ಆದರೆ ನಾವು ರಾಜ್ಯದಲ್ಲಿ ರಕ್ಷಣಾ ಕಾರಿಡಾರ್‌ಗಳನ್ನು (defence corridors) ನಿರ್ಮಿಸುತ್ತಿದ್ದೇವೆ. ನಾವು ಭವ್ಯವಾದ ರಾಮ ಮಂದಿರವನ್ನು ಸಹ ನಿರ್ಮಿಸುತ್ತಿದ್ದೇವೆ" ಎಂದು ಭಾಗ್ ಪೇಟ್ ನಲ್ಲಿ (Baghpat)ನಡೆದ ಪ್ರಭಾವಿ ಮತದಾರರ ಸಂವಾದ (Influential Voters' Dialogue)ಕಾರ್ಯಕ್ರಮದಲ್ಲಿ ಮುಂಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಾತನಾಡಿದರು. "ಸಮಾಜವಾದಿ ಪಕ್ಷವು ಕೇವಲ ವಿನಾಶದ ಮಾದರಿಯನ್ನು ಅಳವಡಿಸಿಕೊಂಡಿದೆಯೇ ಹೊರತು ರಾಜ್ಯದ ಅಭಿವೃದ್ಧಿಯಲ್ಲ. ಅವರ ಕಾಲದಲ್ಲಿ ಅಭಿವೃದ್ಧಿಯು ಸ್ಮಶಾನದಲ್ಲಿ ಮಾತ್ರ ಗೋಚರಿಸುತ್ತದೆ, ಸ್ಮಶಾನಗಳ ಗಡಿ ಗೋಡೆಗಳನ್ನು ಹೊರತುಪಡಿಸಿ ಏನನ್ನೂ ನಿರ್ಮಿಸಲಾಗಿಲ್ಲ" ಎಂದು ಅವರು ಆರೋಪಿಸಿದರು. 

ಹಿಂದೆ ಪಶ್ಚಿಮ ಉತ್ತರ ಪ್ರದೇಶದಿಂದ ವ್ಯಾಪಾರಿಗಳು ವಲಸೆ ಹೋಗುತ್ತಿದ್ದರು ಆದರೆ ಇಂದು ಅಲ್ಲಿ ಅಭಿವೃದ್ಧಿ ನಡೆಯುತ್ತಿರುವುದರಿಂದ ವಲಸೆಗಳು ಆಗುತ್ತಿಲ್ಲ ಎಂದು ಅವರು ಹೇಳಿದರು. ಅಂದು ಸಮಾಜವಾದಿ ಪಕ್ಷದವರು ತಮ್ಮ ಸ್ವಂತ ಬಂಗಲೆಗಳನ್ನು ನಿರ್ಮಿಸುತ್ತಿದ್ದರು ಆದರೆ ನಾವು ಬಡವರಿಗೆ ಮನೆಗಳನ್ನು ನಿರ್ಮಿಸಿದ್ದೇವೆ ಎಂದು ಮುಖ್ಯಮಂತ್ರಿ ಹೇಳಿದರು.
ಸಂವಾದ ಕಾರ್ಯಕ್ರಮವನ್ನು ನಡೆಸುವುದರ ಜೊತೆಗೆ, ಬದೌತ್ ವಿಧಾನಸಭಾ ಭಾಗದಲ್ಲಿ ಶಿಕ್ಷಕರು, ವಕೀಲರು, ವೈದ್ಯರು, ವ್ಯಾಪಾರಿಗಳು ಮತ್ತು ರೈತರ ಜೊತೆಗೆ ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರೊಂದಿಗೆ ಶ್ರೀ ಆದಿತ್ಯನಾಥ್ ಸಂವಾದ ನಡೆಸಿದ್ದಲ್ಲದೆ, ಬಿಜೆಪಿ ಸರ್ಕಾರದಲ್ಲಿ ಒಂದೇ ಒಂದು ಗಲಭೆ ನಡೆದಿಲ್ಲ ಎಂದು ಹೇಳಿದರು.

ಸಮಾಜ ವಿರೋಧಿ ಕ್ರಿಮಿನಲ್ ಅಪರಾಧಿಗಳ ಆಸ್ತಿಗಳ ಮೇಲೆ ಬುಲ್ಡೋಜರ್ ಗಳನ್ನು ಓಡಿಸಲಾಗುತ್ತಿತ್ತು. , ಗಲಭೆಗಳ ಸಮಯದಲ್ಲಿ ಜನರ ಆಸ್ತಿಗಳಿಗೆ ಹಾನಿಯನ್ನು ಅವರ ಸರ್ಕಾರವು ಸಹ ಭರಿಸಿದೆ ಎಂದು ಮುಖ್ಯಮಂತ್ರಿ ಹೇಳಿದರು. ರೈತರಿಗೆ ಈ ಹಿಂದೆ ಬೆಳೆದ ಬೆಳೆಗೆ ಬೆಲೆ ಸಿಗದೇ ಸಕ್ಕರೆ ಕಾರ್ಖಾನೆಗಳು ಬಂದ್ ಆಗುತ್ತಿದ್ದವು, ರೈತರಿಗೆ ಕನಿಷ್ಠ ಬೆಂಬಲ ಬೆಲೆ ನೀಡುವ ಕೆಲಸವನ್ನು ಬಿಜೆಪಿ ಸರ್ಕಾರ ಮಾಡಿದೆ ಎಂದರು.

UP Elections : ಸೀತಾಪುರ ಜೈಲಿನಿಂದಲೇ ನಾಮಪತ್ರ ಸಲ್ಲಿಸಿದ ಅಜಮ್ ಖಾನ್!
2017ಕ್ಕೂ ಮೊದಲು ರಾಜ್ಯದಲ್ಲಿ ಕೇವಲ ಒಂದೇ ಕುಟುಂಬದ ಜನರು ನೇಮಕಾತಿಗಳನ್ನು ಆಯ್ಕೆ ಮಾಡುತ್ತಿದ್ದರು. ಆದರೆ, ಈಗ ಹಾಗಿಲ್ಲ.  "ಈಗ ಬದಲಾವಣೆ ಬಂದಿದೆ, ಮೊದಲು ಅವರು ಸೈಫೈನಲ್ಲಿ ಮಾತ್ರ ಹಬ್ಬಗಳನ್ನು ಆಚರಿಸುತ್ತಿದ್ದರು ಆದರೆ ಈಗ ಅಯೋಧ್ಯೆಯಲ್ಲಿ ದೀಪೋತ್ಸವ ಮತ್ತು ಬ್ರಜ್‌ನಲ್ಲಿ ರಂಗೋತ್ಸವವನ್ನು ಆಚರಿಸಲಾಗುತ್ತದೆ" ಎಂದು ಅವರು ಹೇಳಿದರು. "ಅಂದು ಸೈಫಾಯಿ ಕುಟುಂಬ ನೇಮಕಾತಿಯನ್ನು ನುಂಗುತ್ತಿತ್ತು. ಈಗ ನೇಮಕಾತಿ ಶಿಫಾರಸ್ಸು ಮತ್ತು ವಹಿವಾಟು ಇಲ್ಲದೆ ನಡೆಯುತ್ತದೆ," ಎಂದು ಹೇಳಿದ ಯೋಗಿ ಆದಿತ್ಯನಾಥ್, ಹಿಂದಿನ ಸರ್ಕಾರ ಕೇವಲ ಅಪರಾಧಿಗಳ ಪರವಾಗಿ ಮಾತ್ರವೇ ಸಹಾನುಭೂತಿ ಹೊಂದಿತ್ತು ಎಂದಿದ್ದಾರೆ. ‘ಪಿಕು ಸೆಂಟರ್’ಗೆ ಭೇಟಿ ನೀಡಿದ ಮುಖ್ಯಮಂತ್ರಿಗಳು ಜಿಲ್ಲಾಸ್ಪತ್ರೆಯಲ್ಲಿರುವ ಆರು ತಿಂಗಳ ಮಗುವನ್ನು ಮಡಿಲಲ್ಲಿ ಬಹಳ ಹೊತ್ತು ಕೂರಿಸಿಕೊಂಡು, ತಲೆ ಮೇಲೆ ಕೈಯಿಟ್ಟು ಆಶೀರ್ವಾದ ಮಾಡಿದರು.

Assembly Elections 2022: ಗೋವಾದಲ್ಲಿ ಫೋಟೋ ಫಿನಿಶ್‌: ಮಣಿಪುರ, ಉ.ಪ್ರ.ದಲ್ಲಿ ಬಿಜೆಪಿಗೆ ಬಹುಮತ: ಸಮೀಕ್ಷೆ!
 ಉತ್ತರ ಪ್ರದೇಶದ 403 ವಿಧಾನಸಭಾ ಕ್ಷೇತ್ರಗಳಿಗೆ ಫೆಬ್ರವರಿ 10 ರಿಂದ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, 14, 20, 23, 27 ಮತ್ತು ಮಾರ್ಚ್ 3 ಮತ್ತು 7 ರಂದು ಮತದಾನ ನಡೆಯಲಿದೆ. ಮತಗಳ ಎಣಿಕೆ ಮಾರ್ಚ್ 10 ರಂದು ನಡೆಯಲಿದೆ.

Latest Videos
Follow Us:
Download App:
  • android
  • ios