ಮೈಸೂರು (ಮಾ.07):  ಕ್ಷೇತ್ರ ಪಲ್ಲಟಕ್ಕೆ ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಚಿಂತನೆ‌ ನಡೆಸಿದ್ದು, ತಿ.ನರಸೀಪುರದಿಂದ ನಂಜುಂಡನ ಸನ್ನಿಧಿಗೆ ಹಾರಲಿರುವರೇ ಎನ್ನುವ ಪ್ರಶ್ನೆ ಮೂಡಿದೆ. 

ಎರಡು ದಿನಗಳ ಹಿಂದೆಯಷ್ಟೇ ನಂಜನಗೂಡಿಗೆ ಭೇಟಿ ನೀಡಿದ್ದ ಮಾಜಿ ಸಚಿವ ಡಾ.ಎಚ್.ಸಿ ಮಹದೇವಪ್ಪ. ಪಕ್ಷದ ಕರ್ತಕರ್ತರ ಜತೆ ಸಭೆ ನಡೆಸಿದ್ದರು. ಕಾರ್ಯಕರ್ತರೊಂದಿಗೆ ಸಭೆ ನಡೆಸಿರುವ ಬಗ್ಗೆ ತಮ್ಮ ಟ್ವಿಟ್ಟರ್‌ನಲ್ಲಿ ಪೋಸ್ಟ್  ಮಾಡಿದ್ದರು. 

'ಸಿದ್ದು-ಡಿಕೆಶಿ ನಡುವಿನ ಬಿರುಕಿಗೆ ತೇಪೆ ಹಚ್ಚದಿದ್ದರೆ ಕಷ್ಟ' ...

ಈ ನಿಟ್ಟಿನಲ್ಲಿ ಮುಂದಿನ ಚುನಾವಣೆಯಲ್ಲಿ ನಂಜನಗೂಡಿನಿಂದ ಸ್ಪರ್ಧಿಸಲಿದ್ದಾರಾ ಎಚ್.ಸಿ.ಎಂ ಎನ್ನುವ ಪಶ್ನೆ ಇದೀಗ ಮೂಡಿದೆ. ಮಹದೇವಪ್ಪ ಆಗಮನದಿಂದ ತಾಲ್ಲೂಕಿನ ರಾಜಕೀಯದಲ್ಲಿಯೂ ಸಾಕಷ್ಟು  ಗುಸು ಗುಸು ಕೇಳಿಬರುತ್ತಿದೆ.

ಇದುವರೆಗೆ ಸ್ಪರ್ಧಿಸುತ್ತಿದ್ದ ತಿ.ನರಸೀಪುರ ಕ್ಷೇತ್ರವನ್ನು ತಮ್ಮ ಪುತ್ರ ಸುನೀಲ್ ಬೋಸ್ ಗೆ ಬಿಟ್ಟು ಕೊಡುವ ಸಾಧ್ಯತೆ ಇದ್ದು, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕೈ ಟಿಕೆಟ್ ಯಾರಿಗೆ ಎಂಬುದೇ ಕ್ಷೇತ್ರದಾದ್ಯಂತ ಚರ್ಚೆಗೆ ಕಾರಣವಾಗಿದೆ.