Asianet Suvarna News Asianet Suvarna News

ಕೊರಟಗೆರೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸುವೆ: ಡಾ.ಜಿ.ಪರಮೇಶ್ವರ್‌

ಕೊರಟಗೆರೆ ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುವುದಾಗಿ ಶಾಸಕ ಡಾ.ಜಿ.ಪರಮೇಶ್ವರ್‌ ತಿಳಿಸಿದರು. ಪಟ್ಟಣದ ಕಾಳಿದಾಸ ಪ್ರೌಢಶಾಲೆ ಆವರಣದಲ್ಲಿ ರಣಭೈರೇಗೌಡರ ಸಾಂಸ್ಕೃತಿಕ ವೇದಿಕೆಯಿಂದ ಏರ್ಪಡಿಸಿದ್ದ 67ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ತಾಲೂಕಿನ 600 ಆಟೋ ಚಾಲಕರಿಗೆ ಸಮವಸ್ತ್ರ ವಿತರಿಸಿದರು.

Dr G Parameshwar Talks Over Koratagere Constituency gvd
Author
First Published Nov 5, 2022, 1:20 AM IST

ಕೊರಟಗೆರೆ (ನ.05): ಕೊರಟಗೆರೆ ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುವುದಾಗಿ ಶಾಸಕ ಡಾ.ಜಿ.ಪರಮೇಶ್ವರ್‌ ತಿಳಿಸಿದರು. ಪಟ್ಟಣದ ಕಾಳಿದಾಸ ಪ್ರೌಢಶಾಲೆ ಆವರಣದಲ್ಲಿ ರಣಭೈರೇಗೌಡರ ಸಾಂಸ್ಕೃತಿಕ ವೇದಿಕೆಯಿಂದ ಏರ್ಪಡಿಸಿದ್ದ 67ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ತಾಲೂಕಿನ 600 ಆಟೋ ಚಾಲಕರಿಗೆ ಸಮವಸ್ತ್ರ ವಿತರಿಸಿ, ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ 60 ಗಣ್ಯರಿಗೆ ಸನ್ಮಾನಿಸಿ, ಮಾತನಾಡಿದರು. ಕನ್ನಡ ಭಾಷೆಯನ್ನು ನಮ್ಮ ನಾಡಿನಲ್ಲೇ ಉಳಿಸಲು ಹೋರಾಟ ಮಾಡಬೇಕಾಗಿರುವುದು ದುರಾದೃಷ್ಟಕರ. ನಮ್ಮ ರಾಜಧಾನಿ ಬೆಂಗಳೂರು, ಗಡಿ ಜಿಲ್ಲೆ ಬೆಳಗಾವಿ ಸೇರಿದಂತೆ ಹಲವು ಕಡೆ ಕನ್ನಡ ವಿರೋಧತನವನ್ನು ಮಟ್ಟಹಾಕಿ ಕನ್ನಡ ಭಾಷೆಯನ್ನು ಬೆಳೆಸಬೇಕಿದೆ ಎಂದರು.

ಕೊರಟಗೆರೆ ಪಟ್ಟಣ ಪಂಚಾಯತಿಗೆ ಸುಮಾರು 20 ಕೋಟಿ ರು.ವಿಶೇಷ ಅನುದಾನ ನೀಡಿಲಾಗಿದೆ. ಪಟ್ಟಣದಲ್ಲಿ ಸಾಕಷ್ಟುರಸ್ತೆ ಹಾಗೂ ಉತ್ತಮ ಚರಂಡಿ ವ್ಯವಸ್ಥೆಯನ್ನು ನಿರ್ಮಾಣ ಮಾಡಲಾಗಿದ್ದು, ಕ್ಷೇತ್ರದ್ಯಾಂತ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿದ್ದೇನೆ. ಇನ್ನೂ ಕೊರಟಗೆರೆ ವಿಧಾನಸಭಾ ಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಿ ಮಾಡುವುದು ನನ್ನ ಬಹುದಿಗಳ ಆಸೆಯಾಗಿದ್ದು, ಶೈಕ್ಷಣಿಕ ಅಭಿವೃದ್ಧಿಗಾಗಿ ತಾಲೂಕಿನಲ್ಲಿ 6 ಸುಸರ್ಜಿತ ವಸತಿ ಶಾಲೆಗಳನ್ನು ಪ್ರಾರಂಭಿಸಲಾಗಿದೆ. ಈ ವಸತಿ ಶಾಲೆಗಳಲ್ಲಿ ಸಾವಿರಾರು ವಿದ್ಯಾರ್ಥಿ-ವಿದ್ಯಾರ್ಥಿನಿಯರು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

Tumakuru: ರೈತರ ಜೀವನ ಮಟ್ಟ ಸುಧಾರಿಸಬೇಕು: ಡಾ.ಜಿ.ಪರಮೇಶ್ವರ್‌

ಮುಂದಿನ ದಿನಗಳಲ್ಲಿ ಮಾದರಿ ಕ್ಷೇತ್ರ ಮಾಡಲು ರೂಪು ರೇಷೆಗಳು ಸಿದ್ದ ಮಾಡಿಕೊಳ್ಳಲಾಗಿದೆ ಎಂದರು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನಾ ಸಂಜೆ 4 ಗಂಟೆಗೆ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಿಂದ ಶಾಸಕ ಡಾ.ಜಿ.ಪರಮೇಶ್ವರ್‌ರವರು ಕಾರ್ಯಕರ್ತರು ಹಾಗೂ ಅಭಿಮಾನಿಗಳೊಂದಿಗೆ ವಿವಿಧ ಸಾಂಸ್ಕೃತಿಕ ಕಲಾ ತಂಡಗಳೊಂದಿಗೆ ತಾಯಿ ಭುವನೇಶ್ವರಿಯ ಭಾವಚಿತ್ರ ಹಾಗೂ ಆಟೋಚಾಲಕರೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. 

ವೇದಿಕೆಯಲ್ಲಿ ತಹಸೀಲ್ದಾರ್‌ ನಾಹಿದಾ ಜಮ್‌ಜಮ್‌, ಪಪಂ ಸದಸ್ಯರಾದ ಎ.ಡಿ.ಬಲರಾಮಯ್ಯ, ಕೆ.ಆರ್‌.ಓಬಳರಾಜು, ನಾಗರಾಜು, ನಂದೀಶ್‌, ಮಾಜಿ ಅಧ್ಯಕ್ಷ ಸೈಯದ್‌ ಸೈಫುಲ್ಲಾ, ಮಾಜಿ ನಾಮಿನಿ ಸದಸ್ಯ ಕೆ.ಬಿ.ಲೋಕೇಶ್‌, ಜಿಪಂ ಮಾಜಿ ಸದಸ್ಯ ಪ್ರಸನ್ನಕುಮಾರ್‌, ಕೆಪಿಸಿಸಿ ಕಾರ್ಯದರ್ಶಿ ದಿನೇಶ್‌, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ರಾಮಕೃಷ್ಣಯ್ಯ, ನಗರಸಭಾ ಮಾಜಿ ಸದಸ್ಯ ವಾಲೇಚಂದ್ರಯ್ಯ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಅಶ್ವತ್‌್ಥನಾರಾಯಣ್‌ ಹಾಗೂ ಇತರರಿದ್ದರು.

Tumakuru: ವಿದ್ಯುತ್‌ ಉತ್ಪಾದನೆಯಲ್ಲಿ ಸುಧಾರಣೆಯಾಗಬೇಕು: ಡಾ.ಜಿ.ಪರಮೇಶ್ವರ್‌

2023ರ ಚುನಾವಣೆಯಲ್ಲಿ ಮತ ನೀಡಿ: 2013ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ನಾನು ನಿಮ್ಮಿಂದ ಮತ ನೀಡಲು ಈ ರೀತಿಯಾಗಿ ಬಹಿರಂಗವಾಗಿ ಕೇಳಿರಲಿಲ್ಲ. ಒಂದು ವೇಳೆ ಕೇಳಿದ್ದರೆ ಕಳೆದ ಬಾರಿಯ ಚುನಾವಣೆಯಲ್ಲಿ ನಾನು ಗೆಲ್ಲುತ್ತಿದ್ದೇನೂ ಗೊತ್ತಿಲ್ಲ. ಆದರೆ 2008, 2018ರಲ್ಲಿ ನನಗೆ ಆಶೀರ್ವಾದ ಮಾಡಿದ್ದೀರಿ. ಈ ಬಾರಿ ತಮ್ಮಗಳ ಮುಂದೆ ನಿಂತಿದ್ದು ಮುಂಬರುವ 2023ರ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲು ತಾವುಗಳು ಆಶೀರ್ವಾದಿಸಬೇಕು ಎಂದು ಕೊರಟಗೆರೆ ಕ್ಷೇತ್ರದ ಜನತೆಯಲ್ಲಿ ಶಾಸಕ ಪರಮೇಶ್ವರ್‌ ಮನವಿ ಮಾಡಿದರು.

Follow Us:
Download App:
  • android
  • ios