Asianet Suvarna News Asianet Suvarna News

Tumakuru: ರೈತರ ಜೀವನ ಮಟ್ಟ ಸುಧಾರಿಸಬೇಕು: ಡಾ.ಜಿ.ಪರಮೇಶ್ವರ್‌

ಭಾರತದಲ್ಲಿ ರೈತರು ದೇಶದ ಆರ್ಥಿಕತೆಗೆ ಶೇ.25% ಕೊಡುಗೆ ನೀಡಿ ಜಿಡಿಪಿ ಹೆಚ್ಚಿಸುತ್ತಿದ್ದರೂ ಅವರ ಜೀವನ ಮಟ್ಟವನ್ನು ಸುಧಾರಿಸಲು ಸಾಧ್ಯವಾಗದೆ ಇರುವುದು ದುರಾದೃಷ್ಟಕರ ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ತಿಳಿಸಿದರು. 

The standard of living of farmers should be improved says dr g parameshwar gvd
Author
First Published Nov 3, 2022, 10:39 PM IST

ಕೊರಟಗೆರೆ (ನ.03): ಭಾರತದಲ್ಲಿ ರೈತರು ದೇಶದ ಆರ್ಥಿಕತೆಗೆ ಶೇ.25% ಕೊಡುಗೆ ನೀಡಿ ಜಿಡಿಪಿ ಹೆಚ್ಚಿಸುತ್ತಿದ್ದರೂ ಅವರ ಜೀವನ ಮಟ್ಟವನ್ನು ಸುಧಾರಿಸಲು ಸಾಧ್ಯವಾಗದೆ ಇರುವುದು ದುರಾದೃಷ್ಟಕರ ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ತಿಳಿಸಿದರು. ತಾಲೂಕಿನ ಕ್ಯಾಮೇನಹಳ್ಳಿ ಗ್ರಾಮದಲ್ಲಿ ಬೆಂಗಳೂರು ಕೃಷಿ ವಿದ್ಯಾನಿಲಯದಿಂದ ಏರ್ಪಡಿಸಿದ್ದ ಕೃಷಿ ಸಂಗಮ ಕಾರ್ಯಕ್ರಮನ್ನು ಉದ್ಘಾಟಿಸಿ ಮಾತನಾಡಿದರು. ಕೃಷಿ ಕ್ಷೇತ್ರ ಆಧುನಿಕ ಬೆಳೆಗಳ ನೂತನ ವಿವಿಧ ತಳಿಗಳ ಆವಿಷ್ಕಾರ ತಂತ್ರಜ್ಞಾನದಿಂದ ಉತ್ತಮಗೊಂಡಿದೆ. ರೈತರು ಹಿಂದೆ ಎಕರೆವಾರು ಬೆಳೆಯುವ ಬೆಳೆಗಿಂತ ಈಗ 5 ಪಟ್ಟು ಹೆಚ್ಚು ಆಹಾರ ಉತ್ಪಾದಿಸುತ್ತಿದ್ದಾರೆ. 

ಇತ್ತೀಚೆಗೆ ಕೃಷಿ ಚಟುವಟಿಕೆ ಮತ್ತು ಉತ್ಪನ್ನಗಳ ವೆಚ್ಚ ಅತ್ಯಂತ ದುಬಾರಿಯಾಗಿದೆ. ಅನ್ನ ನೀಡುವ ರೈತ ಬದುಕು ನಿರ್ದಿಷ್ಟವಲ್ಲದಿದ್ದು ಇದರ ಪರಿಹಾರಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸರಿಯಾದ ಮಾರ್ಗಸೂಚಿ, ರೈತ ಪರ ನಿಯಮವನ್ನು ಜಾರಿಗೆ ತರಬೇಕಿದೆ. ರೈತರು ಸಹ ಕೃಷಿಯಲ್ಲಿ ಅಂತರ ಬೆಳೆ ಮತ್ತು ಮಿಶ್ರ ಬೆಳೆ ಬೇಸಾಯದೊಂದಿಗೆ ಹೈನುಗಾರಿಕೆ ಮಾಡಿದರೆ ಅವರ ಜೀವನ ಸುಧಾರಿಸುತ್ತದೆ ಎಂದರು. 

Tumakuru ಅವಳಿ ಶಿಶು ಧಾರುಣ ಸಾವು ಪ್ರಕರಣ: ಸಚಿವರ ರಾಜೀನಾಮೆಗೆ ಎಚ್‌ಡಿಕೆ ಆಗ್ರಹ

ನಾನು ಪಿಯುಸಿ ವಿಜ್ಞಾನ ವಿದ್ಯಾಭ್ಯಾಸ ಪೂರ್ಣಗೊಳಿಸಿದಾಗ ನನಗೆ ಮೆಡಿಕಲ್‌, ಎಂಜಿಯರಿಂಗ್‌ ಪದವಿ ದೊರೆಯುವ ಅವಕಾಶವಿದ್ದರೂ, ಬೆಂಗಳೂರು ಕೃಷಿ ವಿದ್ಯಾಲಯದಲ್ಲಿ ಕೃಷಿ ಪದವಿ ವ್ಯಾಸಾಂಗ ಮಾಡಿ, ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿ ಆಸ್ಪ್ರೇಲಿಯಾದಲ್ಲಿ ಕೃಷಿ ಪಿಎಚ್‌ಡಿ ಪಡೆದೆ. ನಾನು ಅಂದು ಜಿಕೆವಿಕೆಯ ಕ್ರೀಡೆಯಲ್ಲಿ 100ಮೀ ಓಟದ ಸ್ಪರ್ಧೆಯಲ್ಲಿ ಮಾಡಿದ ದಾಖಲೆ ಈಗಲೂ ಹಾಗೆ ಇದೆ. ನಾನು ರಾಜಕಾರಣ ಮತ್ತು ವಿದ್ಯಾವಲಯದಲ್ಲಿ ಇದ್ದರೂ ಈಗಲೂ ನಮ್ಮ ಜಮೀನಿನಲ್ಲಿ ನೂರಾರು ಕ್ವಿಂಟಲ್‌ ಬೆಳೆ ಬೆಳೆಯುತ್ತೇನೆ. ಆದರೆ ಬೆಳೆದ ಆಹಾರವನ್ನು ಎಪಿಎಂಸಿಗೆ ಹಾಕಿ ವರ್ಷವಾದರೂ ಇಲ್ಲಿಯವರೆಗೆ ಹಣ ಪಾವತಿಯಾಗಿಲ್ಲ ಹೀಗೆ ಯಾದರೆ ಸಾಮಾನ್ಯ ರೈತನ ಪಾಡೇನು ಎಂದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಸುನಂದ, ತಹಸೀಲ್ದಾರ್‌ ನಾಹೀದಾ ಜಮ್‌ಜಮ್‌, ಕೆಪಿಸಿಸಿ ಸದಸ್ಯ ಎ.ಡಿ.ಬಲರಾಮಯ್ಯ, ತುಮುಲ್‌ ನಿರ್ದೇಶಕ ಈಶ್ವರಯ್ಯ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕೋಡ್ಲಹಳ್ಳಿ ಅಶ್ವತ್ಥ ನಾರಾಯಣ, ಕೃಷಿ ಅಧಿಕಾರಿ ನಾಗರಾಜು, ರೇಷ್ಮೆ ಅಧಿಕಾರಿ ಮುರಳಿ, ಪಶು ವೈದ್ಯಾಧಿಕಾರಿ ಸಿದ್ದನಗೌಡ, ಜಿಲ್ಲಾ ಪಂಚಾಯಿತಿ ಇಲಾಖೆಯ ಎಇಇ ರವಿಕುಮಾರ್‌ ಉಪಸ್ಥಿತರಿದ್ದರು.

ಗೆದ್ದರೆ ಸಿಎಂ ಆಗುವ ಅವಕಾಶವಿತ್ತು: ಮುಖ್ಯಮಂತ್ರಿ ಆಗುವ ಅವಕಾಶ ಕೈ ತಪ್ಪಿದ ನೋವನ್ನು ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ್‌ ಹೊರ ಹಾಕಿದ ಘಟನೆ ನಡೆದಿದೆ. ಕೊರಟಗೆರೆ ತಾಲೂಕು ತೋವಿನಕೆರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಈ ಕ್ಷೇತ್ರದ ಜನತೆ ನನ್ನನ್ನು ಎರಡು ಭಾರಿ ಆಯ್ಕೆ ಮಾಡಿದ್ದಾರೆ. ಆದರೆ ಒಳ್ಳೆ ಟೈಂನಲ್ಲಿ ಪಲ್ಟಿಒಡೆಸಿದ್ದಾರೆ. 

Tumkur: ಜಿಲ್ಲಾಸ್ಪತ್ರೆ ನಿರ್ಲಕ್ಷ್ಯಕ್ಕೆ ತಾಯಿ, ಅವಳಿ ಮಕ್ಕಳು ಬಲಿ..!

2013ರ ಚುನಾವಣೆಯಲ್ಲಿ ಒಂದೇ ಒಂದು ಓಚ್‌ನಲ್ಲಿ ಗೆದ್ದಿದ್ದರೂ ಈ ರಾಜ್ಯದ ಮುಖ್ಯಮಂತ್ರಿ ಆಗುವ ಅವಕಾಶವಿತ್ತು. ನನ್ನದು ಹಣೆಬರಹ ಇರಬೇಕಲ್ಲಾ. ಬರೇ ನಿಮ್ಮದೇ ಹೇಳಿದರೆ ನಾನು ಏನು ಎಂದ ಅವರು ಹಣೆ ಬರಹ ಬಹುಃಶಾ ನನಗಿರಲಿಲ್ಲ ಅಂತಾ ಕಾಣಿಸುತ್ತದೆ ಎಂದು ಸ್ವವಿಮರ್ಶೆ ಮಾಡಿಕೊಂಡರು. ಇವತ್ತು ನನ್ನ ಕೈಲಾದ ಕೆಲಸ ಮಾಡಿದ್ದೇನೆ ಅನ್ನುವ ಆತ್ಮ ತೃಪ್ತಿ ನನಗಿದೆ. ತಮಗೆ ಇದೆಯೋ ಇಲ್ಲವೋ ಗೊತ್ತಿಲ್ಲ ಎಂದರು.

Follow Us:
Download App:
  • android
  • ios