Asianet Suvarna News Asianet Suvarna News

ನಮ್ಮನ್ನು ಫುಟ್ಬಾಲ್ ರೀತಿ ಬಳಸಬೇಡಿ, ಮುಸ್ಲಿಂ ಸಚಿವನಿಂದ ಮಮತಾ ಬ್ಯಾನರ್ಜಿಗೆ ಎಚ್ಚರಿಕೆ!

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಇದೀಗ ತಮ್ಮದೇ ಪಕ್ಷದ ಮುಸ್ಲಿಂ ಸಚಿವ ಎಚ್ಚರಿಕೆ ನೀಡಿದ್ದಾರೆ. ನಮ್ಮನ್ನು ಫುಟ್ಬಾಲ್ ರೀತಿ ಬಳಿಸಿಕೊಳ್ಳಬೇಡಿ ಎಂದು ಎಚ್ಚರಿಸಿದ್ದಾರೆ. ಚುನಾವಣೆಗೆ ಸಜ್ಜಾಗುತ್ತಿರುವ ಮಮತಾಗೆ ತೀವ್ರ ಹಿನ್ನಡೆಯಾಗಿದೆ.

Dont use us like Football TMC Muslims minister warns Mamata banerjee ahead of panchayat elections ckm
Author
First Published Sep 30, 2022, 10:46 AM IST

ಕೋಲ್ಕತಾ(ಸೆ.30): ಪಶ್ಚಿಮ ಬಂಗಾಳದ ಪಂಚಾಯ್ ಚುನಾವಣೆ ಕಾವು ಜೋರಾಗಿದೆ. ಎಲ್ಲಾ ಪಂಚಾಯ್‌ಗಳಲ್ಲಿ ಪ್ರಾಬಲ್ಯ ಸಾಧಿಸಲು ಸಿಎಂ ಮಮತಾ ಬ್ಯಾನರ್ಜಿ ಬಾರಿ ಪ್ಲಾನ್ ಮಾಡಿದ್ದಾರೆ. ಆದರೆ ಗೆಲುವಿನ ಲೆಕ್ಕಾಚಾರದಲ್ಲಿ ತಮ್ಮದೇ ಪಕ್ಷದ ಮುಸ್ಲಿಂ ನಾಯಕರು ಮಮತಾ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಚುನಾವಣೆ ಬಂದಾಗ ನಮ್ಮನ್ನು ಫುಟ್ಬಾಲ್ ರೀತಿ ಬಳಸಿ ಬಿಸಾಡಬೇಡಿ ಎಂದು ಮಮತಾ ಬ್ಯಾನರ್ಜಿ ವಿರುದ್ದ ತಮ್ಮದೇ ಸರ್ಕಾರದ ಸಚಿವ ಸಿದ್ದಿಕ್ಕುಲ್ಲಾ ಚೌದರಿ ಅಸಮಧಾನ ವ್ಯಕ್ತಪಡಿಸಿದ್ದಾರೆ. ಸಿದ್ದಿಕ್ಕುಲ್ಲಾ ಅಸಮಾಧಾನಕ್ಕೆ ಕಾರಣವಾಗಿರುವುದು ಪಂಚಾಯ್ ಚುನಾವಣೆಗೂ ಮುನ್ನ ಮಮತಾ ಬ್ಯಾನರ್ಜಿ ಬ್ಲಾಕ್ ಅಧ್ಯಕ್ಷರನ್ನು ಆಯ್ಕೆ ಮಾಡಿದೆ. ಈ ವೇಳೆ ಪಕ್ಷಕ್ಕಾಗಿ ದುಡಿದ ಸಿದ್ದಿಕ್ಕುಲ್ಲಾ ಅವರನ್ನು ಸಂಪರ್ಕಿಸದೆ ಅಝೀಜುಲ್ ಹಕ್ ಅವರನ್ನು ಬ್ಲಾಕ್ ಅಧಕ್ಷ್ಯರನ್ನಾಗಿ ನೇಮಕ ಮಾಡಿದ್ದಾರೆ. ಇದು ಸಿದ್ದಿಕ್ಕುಲ್ಲಾ ಅಸಮಧಾನಕ್ಕೆ ಕಾರಣಾಗಿದೆ.

ತಮ್ ಜಿಲ್ಲೆಯಲ್ಲಿ ಪಕ್ಷ ಸಂಘಟಿಸಿ, ಭಾರಿ ಅಂತರದ ಗೆಲುವಿಗೆ ಕಾರಣವಾಗಿದ್ದ ಸಿದ್ದಿಕ್ಕುಲ್ಲಾ ಅವರನ್ನು ಕಡೆಗಣಿಸಿ ಅಝೀಜುಲ್ ಹಕ್ ಅವರನ್ನು ಬ್ಲಾಕ್ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದು ಇದೀಗ ಎರಡು ಬಣವಾಗಿ ತಿರುಗಿದೆ. ಸಿದ್ದಿಕ್ಕುಲ್ಲಾ ತಮ್ಮ ಆಪ್ತ ಅಹಮ್ಮದ್ ಹುಸೇನ್ ಶೇಕ್ ಅವರನ್ನು ಬ್ಲಾಕ್ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲು ಕಸರತ್ತು ನಡೆಸಿದ್ದರು. ಆದರೆ ಸಿದ್ದಿಕ್ಕುಲ್ಲಾ ಲೆಕ್ಕಾಚಾರಕ್ಕೆ ಮಮತಾ ಬ್ಯಾನರ್ಜಿ(Mamata Banerjee) ಕೊಳ್ಳಿ ಇಟ್ಟಿದ್ದಾರೆ. ಇದು ಪಶ್ಚಿಮ ಬಂಗಾಳದ(West bengal) ತೃಣಮೂಲ ಕಾಂಗ್ರೆಸ್‌ನಲ್ಲಿ(TMC) ಮುಸ್ಲಿಂ ಬಣ ನಾಯಕರನ್ನು ಸೃಷ್ಟಿಸಿದೆ.

ಡಿಸೆಂಬರ್‌ನಲ್ಲಿ Mamata Banerjee ಬಂಧನ: ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ಭವಿಷ್ಯ

ಇದೀಗ ಸಿದ್ದಿಕ್ಕುಲ್ಲಾ ತಾವು ಕೂಡ ಪಕ್ಷದಲ್ಲಿ ಹಿರಿಯ ಹಾಗೂ ಸಮರ್ಥ ನಾಯಕರಾಗಿ ಗುರುತಿಸಿಕೊಂಡಿದ್ದೇನೆ. ಮಮತಾ ಬ್ಯಾನರ್ಜಿ ಹಾಗೂ ಅಭಿಷೇಕ್ ಬ್ಯಾನರ್ಜಿಗೆ(Abhishek banerjee) ಸರಿಸಮಾನ ನಾಯಕರಾಗಿ ಬೆಳೆದಿದ್ದೇನೆ ಎಂದು ಇದೀಗ ಪಕ್ಷದಲ್ಲಿ ಬಂಡಾಯದ ಬಾವುಟು ಹಾರಿಸಿದ್ದಾರೆ. 

ನನ್ನ ಸಂಪರ್ಕದಲ್ಲಿ 21 ಟಿಎಂಸಿ ಶಾಸಕರು: ಮಿಥುನ್‌ ಚಕ್ರವರ್ತಿ
ತೃಣಮೂಲ ಕಾಂಗ್ರೆಸ್‌ನ 21 ಶಾಸಕರು ತಮ್ಮ ಸಂಪರ್ಕದಲ್ಲಿದ್ದಾರೆಂದು ನಟ ಹಾಗೂ ಬಿಜೆಪಿ ಮುಖಂಡ ಮಿಥುನ್‌ ಚಕ್ರವರ್ತಿ ಪುನಃ ಹೇಳಿಕೆ ನೀಡಿದ್ದಾರೆ. ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿದ ಮಿಥುನ್‌, ‘ಈ ಮೊದಲು ನಾನು ಇದೇ ಹೇಳಿಕೆ ನೀಡಿದ್ದೆ, ಅದರಂತೆ ನನ್ನ ಹೇಳಿಕೆಗೆ ನಾನು ಬದ್ಧನಾಗಿದ್ದೇನೆ. ಟಿಎಂಸಿ ನಾಯಕರನ್ನು ಬಿಜೆಪಿಯಲ್ಲಿ ಸೇರಿಸಿಕೊಳ್ಳಲು ಹಲವು ಆಕ್ಷೇಪಗಳಿವೆಯಾದರೂ ಶಾಸಕರು ನನ್ನ ಜೊತೆ ಸಂಪರ್ಕ ಹೊಂದಿದ್ದಾರೆ’ ಎಂದಿದ್ದಾರೆ. ಇತ್ತಿಚಿಗೆ ಮೋದಿ ಸರ್ಕಾರ ಕೇಂದ್ರೀಯ ತನಿಖಾ ಸಂಸ್ಥೆಗಳ ದುರ್ಬಳಿಕೆ ಮಾಡಿಕೊಳ್ಳುತ್ತಿದ್ದಾರೆಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಚಕ್ರವರ್ತಿ, ‘ನೀವು ಯಾವುದೇ ತಪ್ಪು ಮಾಡಿಲ್ಲ ಎಂದಲ್ಲಿ ಆರಾಮಾಗಿ ಮಲಗಿ. ಆದರೆ ನೀವು ತಪ್ಪು ಮಾಡಿದ್ದರೆ ಸ್ವತಃ ಪ್ರಧಾನಿ, ರಾಷ್ಟ್ರಪತಿ ನಿಮ್ಮನ್ನು ಉಳಿಸಲು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ.

ಮುಂದಿನ ಪ್ರಧಾನಿ ದೀದಿ ಹಾದಿಗೆ ಅಡ್ಡ ಬಂದರೆ ಕೊಲೆ, ಬಿಜೆಪಿ ಸಂಸದ ಮೋದಿಗೆ ಬೆದರಿಕೆ ಪತ್ರ!

6 ಆಪ್ತರ ಆಸ್ತಿ ವಿವರಕ್ಕೆ ಹೈಕೋರ್ಚ್‌ ಸೂಚನೆ: ಸಿಎಂ ದೀದಿಗೆ ಸಂಕಷ್ಟ
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಕುಟುಂಬಸ್ಥರ ಆಸ್ತಿಗಳ ಪ್ರಮಾಣ ಹೆಚ್ಚಾಗುತ್ತಿದೆ ಎಂಬ ದೂರಿನ ಬೆನ್ನಲ್ಲೇ ಎಲ್ಲಾ ಕುಟುಂಬ ಸದಸ್ಯರ ಆಸ್ತಿ ದಾಖಲೆಗಳನ್ನು ಸಲ್ಲಿಸುವಂತೆ ಕಲ್ಕತ್ತಾ ಹೈಕೋರ್ಚ್‌ ಸೂಚನೆ ನೀಡಿದೆ. ಮಮತಾ ಬ್ಯಾನರ್ಜಿ ಅವರ ಕುಟುಂಬಕ್ಕೆ ಸೇರಿದ 6 ಮಂದಿಯ ಆಸ್ತಿ ದಿನದಿಂದ ದಿನಕ್ಕೆ ಅಧಿಕವಾಗುತ್ತಿದೆ ಎಂದು ಆರೋಪಿಸಿ ಅರ್ಜಿತ್‌ ಮಜುಂದಾರ್‌ ಎಂಬ ವ್ಯಕ್ತಿ ಹೈಕೋರ್ಚ್‌ನಲ್ಲಿ ಪ್ರಕರಣ ದಾಖಲಿಸಿದ್ದರು. ಇದರ ಅನ್ವಯ ಮಮತಾ ಕುಟುಂಬದ 6 ಸದಸ್ಯರಿಗೆ ಸೇರಿದ ಎಲ್ಲಾ ಆಸ್ತಿಗಳ ದಾಖಲೆಯ ಅಫಿಡವಿಟ್‌ಗಳನ್ನು ಮುಂದಿನ 4 ವಾರಗಳ ಒಳಗೆ ಸಲ್ಲಿಸುವಂತೆ ಮುಖ್ಯನ್ಯಾಯಮೂರ್ತಿ ಪ್ರಕಾಶ್‌ ಶ್ರೀವಾಸ್ತವ ಮತ್ತು ನ್ಯಾರಾಜಶ್ರೀ ಭಾರದ್ವಾಜ್‌ ಅವರಿದ್ದ ಪೀಠ ಆದೇಶಿಸಿದೆ.

 

Follow Us:
Download App:
  • android
  • ios