ಬಿಜೆಪಿ ಜತೆ ಮೈತ್ರಿ ಬಗ್ಗೆ ಗೊತ್ತಿಲ್ಲ: ಎಚ್.ಡಿ.ರೇವಣ್ಣ
ಚುನಾವಣೆಯಲ್ಲಿ ಜನರ ತೀರ್ಪಿಗೆ ತಲೆಬಾಗುತ್ತೇವೆ. ಮುಂದೆ ಜೆಡಿಎಸ್ ಪಕ್ಷವನ್ನು ಕಟ್ಟುತ್ತೇವೆ, ಬೆಳೆಸುತ್ತೇವೆ. ಇವತ್ತೇ ಮುಗಿದು ಹೋಗಲ್ಲ. ದೇವೇಗೌಡರು, ಕುಮಾರಣ್ಣ ಎಲ್ಲರೂ ಸೇರಿಕೊಂಡು ಮತ್ತೆ ಪಕ್ಷವನ್ನು ಬಲಿಷ್ಠಗೊಳಿಸುತ್ತೇವೆ ಎಂದ ಎಚ್.ಡಿ.ರೇವಣ್ಣ
ಸುಬ್ರಹ್ಮಣ್ಯ(ಜೂ.12): ದೇವೇಗೌಡರು ದೆಹಲಿಯಲ್ಲಿ ಬಿಜೆಪಿ ಜೊತೆ ಮೈತ್ರಿ ಮಾತುಕತೆ ನಡೆಸಿದ್ದಾರೆ ಎಂಬುದು ಮಾಧ್ಯಮಗಳಲ್ಲಿ ಬಂದಿರುವ ವಿಚಾರ. ಈ ಬಗ್ಗೆ ನನಗೇನೂ ಗೊತ್ತಿಲ್ಲ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಹೇಳಿದ್ದಾರೆ.
ಕುಕ್ಕೆ ಸುಬ್ರಹ್ಮಣ್ಯದಲ್ಲಿ ದೇವರ ದರ್ಶನ ಪಡೆದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದರು. ಚುನಾವಣೆಯಲ್ಲಿ ಜನರ ತೀರ್ಪಿಗೆ ತಲೆಬಾಗುತ್ತೇವೆ. ಮುಂದೆ ಜೆಡಿಎಸ್ ಪಕ್ಷವನ್ನು ಕಟ್ಟುತ್ತೇವೆ, ಬೆಳೆಸುತ್ತೇವೆ. ಇವತ್ತೇ ಮುಗಿದು ಹೋಗಲ್ಲ. ದೇವೇಗೌಡರು, ಕುಮಾರಣ್ಣ ಎಲ್ಲರೂ ಸೇರಿಕೊಂಡು ಮತ್ತೆ ಪಕ್ಷವನ್ನು ಬಲಿಷ್ಠಗೊಳಿಸುತ್ತೇವೆ ಎಂದರು. ಸಂಸದ ಪ್ರಜ್ವಲ್ ರೇವಣ್ಣ ಜೊತೆಗಿದ್ದರು.
KARNATAKA CRIME : ದೇವರಮನೆಗುಡ್ಡದಲ್ಲಿ ಬಂಟ್ವಾಳ ಮೂಲದ ಯುವಕನ ಶವ ಪತ್ತೆ
ಕುಕ್ಕೆಯಲ್ಲಿ ಭಕ್ತ ಸಾಗರ:
ವಾರದ ರಜೆ ಹಿನ್ನೆಲೆಯಲ್ಲಿ ಭಾನುವಾರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತರ ದಂಡೇ ಕಂಡು ಬಂತು. ಶನಿವಾರದಿಂದಲೇ ಕ್ಷೇತ್ರಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಲು ಆರಂಭಿಸಿದ್ದರು. ಪಾರ್ಕಿಂಗ್ ಪ್ರದೇಶ ವಾಹನಗಳಿಂದ ತುಂಬಿತ್ತು. ಕ್ಷೇತ್ರದ ವಸತಿಗೃಹಗಳು ಬಹುತೇಕ ಭರ್ತಿಯಾಗಿದ್ದವು. ಕ್ಷೇತ್ರದ ರಥಬೀದಿ, ಹೋರಾಂಗಣದಲ್ಲಿ ಭಕ್ತರು ತುಂಬಿದ್ದರು.