ಐದು ವರ್ಷದ ನಂತರ ನಮ್ಮ ಗ್ರಾಮ ನೆನಪಾಯ್ತಾ? ಶಾಸಕ ಹರ್ಷವರ್ಧನ್ ಬೆವರಿಳಿಸಿದ ಯುವಕರು!

: ಮತ ಯಾಚನೆಗೆ ಹೋದ ಶಾಸಕನಿಗೆ ಗ್ರಾಮಸ್ಥರಿಂದ ತೀವ್ರ ತರಾಟೆ. ಶಾಸಕ ಹರ್ಷವರ್ಧನ್‌ ಅವರನ್ನು ಯುವಕರು ತರಾಟೆಗೆ ತೆಗೆದುಕೊಂಡ ಪ್ರಸಂಗ ತಾಲೂಕಿನ ದೇವನೂರು ಗ್ರಾಮದಲ್ಲಿ ಸೋಮವಾರ ಜರಗಿತು.

Do you remember our village after five years youths outraged agains MLA Harshavardan at nanjanagudu rav

ನಂಜನಗೂಡು (ಏ.4) : ಮತ ಯಾಚನೆಗೆ ಹೋದ ಶಾಸಕನಿಗೆ ಗ್ರಾಮಸ್ಥರಿಂದ ತೀವ್ರ ತರಾಟೆ. ಶಾಸಕ ಹರ್ಷವರ್ಧನ್‌ ಅವರನ್ನು ಯುವಕರು ತರಾಟೆಗೆ ತೆಗೆದುಕೊಂಡ ಪ್ರಸಂಗ ತಾಲೂಕಿನ ದೇವನೂರು ಗ್ರಾಮದಲ್ಲಿ ಸೋಮವಾರ ಜರಗಿತು.

ನಿಮಗೆ 5 ವರ್ಷಗಳ ನಂತರ ನಮ್ಮ ಗ್ರಾಮ ನೆನಪಿಗೆ ಬಂತಾ? ನಾವು ಕೇಳಿದ ಬೇಡಿಕೆಗಳನ್ನ ಇಡೇರಿಸಲು ನಿಮ್ಮಂದ ಆಗಲಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.

ದೇವನೂರಿನ ಮಠದ ಎದುರು ದಿವಂಗತ ಆರ್‌. ಧ್ರುವನಾರಾಯಣ(R Dhruvanarayana) ಅವರು ಹೈಮಾಸ್ಕ್ ದೀಪ ಅಳವಡಿಸಿದ್ದರು. ಅದು ಕಳೆದ ಐದು ವರ್ಷಗಳಿಂದಲೂ ಕೆಟ್ಟು ಹೋಗಿ ಉರಿಯುತ್ತಿಲ್ಲ, ಅಲ್ಲದೆ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸುವಂತೆ ಮನವಿ ಸಲ್ಲಿಸಿದರು ಕೂಡ ನಿರ್ಮಾಣ ಮಾಡಲು ಮುಂದಾಗಿಲ್ಲ, ಮೊದಲು ಹೈ ಮಾಸ್‌್ಕ ದೀಪ ಸರಿಪಡಿಸಿ, ನಂತರ ನಾವು ನಿಮಗೆ ಮಾತನಾಡುತ್ತೇವೆ ಇಲ್ಲವಾದಲ್ಲಿ ನೋಟಾ ಆಯ್ಕೆಯನ್ನು ಮಾಡಿಕೊಂಡು ಗ್ರಾಮದಲ್ಲೂ ಕೂಡ ನೋಟ ಆಯ್ಕೆಗೆ ಮತ ನೀಡುವಂತೆ ಪ್ರಚಾರ ನಡೆಸಿ, ನಿಮ್ಮನ್ನು ತಿರಸ್ಕಾರ ಮಾಡುತ್ತೇವೆ ಎಂದು ತರಾಟೆಗೆ ತೆಗೆದುಕೊಂಡರು.

ನಮ್ಮ ಪಕ್ಷದ ಬೆಂಬಲವಿಲ್ಲದೇ ಯಾವುದೇ ಪಕ್ಷ ಸರ್ಕಾರ ರಚನೆ ಮಾಡಲ್ಲ: ಜನಾರ್ದನ ರೆಡ್ಡಿ

ತಾಲೂಕಿನ ನಂಜನಹಳ್ಳಿ ಗ್ರಾಮದಲ್ಲೂ ಕೂಡ ಕಳೆದ ಐದು ವರ್ಷದಿಂದ ಗ್ರಾಮದತ್ತ ತಿರುಗಿಯೂ ನೋಡಿಲ್ಲ, ಈಗ ಚುನಾವಣೆಯ ಸಮಯದಲ್ಲಿ ಮಾತ್ರ ನಮ್ಮ ಗ್ರಾಮಕ್ಕೆ ಬರುತ್ತೀರಿ ಆಮೇಲೆ ಮರೆತು ಬಿಡುತ್ತೀರಿ ಎಂದು ತರಾಟೆಗೆ ತೆಗೆದುಕೊಂಡರು.

ದೇವನೂರಿನ ಯುವಕರನ್ನು ಸಮಾಧಾನ ಪಡಿಸಿ ಮಾತನಾಡಿದ ಶಾಸಕರು, ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣಕ್ಕೆ 16 ರಿಂದ 20 ಲಕ್ಷ ರು. ವರೆಗೆ ವೆಚ್ಚ ತಗಲುತ್ತದೆ. ಜುಬಿಲಿಯಂಟ್‌ ಕಾರ್ಖಾನೆಗೆ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡುವಂತೆ ಮನವಿ ಸಲ್ಲಿಸಲಾಗಿದ್ದು, ಆದರೆ ಕಾರ್ಖಾನೆಯ ಆರ್ಥಿಕ ಪರಿಸ್ಥಿತಿ ಸರಿಯಿಲ್ಲದ ಕಾರಣ ಅದು ಕುಂಠಿತಗೊಂಡಿತು. ಈಗ ಎಟಿ ಅಂಡ್‌ ಎಸ್‌ ಕಾರ್ಖಾನೆಗೆ ಘಟಕ ನಿರ್ಮಿಸುವಂತೆ ಮನವಿ ಸಲ್ಲಿಸಲಾಗಿದೆ ಅದು ಶೀಘ್ರದಲ್ಲೇ ನಿರ್ಮಾಣಗೊಳ್ಳಲಿದೆ. ಇನ್ನು ಹೈ ಮಾಸ್‌್ಕ ದೀಪ ಖಾಸಗಿಯಾಗಿದ್ದು, ಅದು ಗ್ರಾಪಂ ವ್ಯಾಪ್ತಿಗೆ ಬರುವುದಿಲ್ಲ. ಹೈ ಮಾಸ್ಕ್ ದೀಪಕ್ಕೆ ಅಗತ್ಯವಿರುವ ವಿದ್ಯುತ್‌ ಸಂಪರ್ಕ ಸರಿಪಡಿಸಲಾಗುವುದು ಎಂದು ಸಮಾಧಾನಪಡಿಸಿದರು.

ಕುಡುಕರಿಗಿದು ಸುಗ್ಗಿ ಕಾಲವಾದರೆ ಕಾರವಾರದಲ್ಲಿ ಉಲ್ಟಾ: ಹುಬ್ಬಳ್ಳಿಯಲ್ಲಿ ಮನೇಲಿ ಕುಕ್ಕರಿದ್ರೂ ರೇಡ್ ಆಗ್ತಾವು!

ನಂಜನಗೂಡು ತಾಲೂಕು ಬಿಜೆಪಿ ಅಧ್ಯಕ್ಷ ಮಹೇಶ್ ಮತ್ತು ನಗರಸಭೆ ಅಧ್ಯಕ್ಷ ಮಹದೇವ ಸ್ವಾಮಿ ಸೇರಿದಂತೆ ಇತರೆ ಮುಖಂಡರಿಗೂ ಗ್ರಾಮಸ್ಥರಿಂದ ಛೀಮಾರಿ.
ಪ್ರಚಾರದ ಮೊದಲ ದಿನವೇ ಶಾಸಕ ಹರ್ಷವರ್ಧನ್‌ಗೆ ಮುಜುಗರ.

Latest Videos
Follow Us:
Download App:
  • android
  • ios