ಡಿಕೆಶಿ ಇಡಿ ಕಚೇರಿಯಿಂದ ಬಂದು Paycm ಪೋಸ್ಟರ್ ಅಂಟಿಸೋದು ಹಾಸ್ಯಾಸ್ಪದ; ಸಚಿವ ಸುನಿಲ್ ಕುಮಾರ್
ಕಾಂಗ್ರೆಸ್ ಭ್ರಷ್ಟಾಚಾರದ ವಿರುದ್ಧ ಆಧಾರ ರಹಿತ ಆರೋಪ ಮಾಡುತ್ತಿದ್ದು, ಪೇಸಿಎಂ ಎಂಬುದು ಕಾಂಗ್ರೆಸ್ಸಿನ ಸುಳ್ಳಿನ ಸುರಿಮಳೆಯಾಗಿದೆ. ಪೋಸ್ಟರ್ ಅಂಟಿಸಿದ ಡಿಕೆಶ ಇಡಿ ಕಚೇರಿಗೆ ಹೋಗಿದ್ದು ಯಾಕೆ? ಈ ಪ್ರಶ್ನೆಗೆ ಸಿದ್ದರಾಮಯ್ಯ ಉತ್ತರ ಕೊಡಬೇಕು ಇಂಧನ ಸಚಿವ ಸುನಿಲ್ ಕುಮಾರ್ ಟಾಂಗ್.
ಉಡುಪಿ (ಸೆ.24) : ರಾಜ್ಯದಲ್ಲಿ ಅವಧಿಪೂರ್ವ ಚುನಾವಣೆ ಇಲ್ಲ, ನಿಗದಿತ ಸಮಯದಲ್ಲಿ ಚುನಾವಣೆ ನಡೆಯಲಿದೆ. ಬಿಜೆಪಿ ಮತ್ತೊಮ್ಮೆ ಸರ್ಕಾರವನ್ನು ರಚನೆ ಮಾಡುತ್ತದೆ, ಬೊಮ್ಮಾಯಿ ಅವರ ನೇತೃತ್ವದಲ್ಲಿ ಚುನಾವಣೆಗೆ ಹೋಗುತ್ತೇವೆ. ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಕೂಡ ಬಸವರಾಜ್ ಬೊಮ್ಮಾಯಿಯಾಗಲಿದ್ದಾರೆ ಎಂದು ಇಂಧನ ಸಚಿವ ಸುನೀಲ್ ಕುಮಾರ್ ಹೇಳಿದರು.
PayCM Posters: ಪರಿಷತ್‌ನಲ್ಲಿ ‘ಪೇಸಿಎಂ ಪೋಸ್ಟರ್’ ಕೋಲಾಹಲ
ಅವರು ಶನಿವಾರ ಉಡುಪಿ(Udupi)ಯ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು. ಬೊಮ್ಮಾಯಿಯವರು ಮುಂದಿನ ಚುನಾವಣೆಯ ನೇತೃತ್ವ ವಹಿಸುತ್ತಾರೆ ಎಂದು ಜೆಪಿ ನಡ್ಡ ಅವರೇ ಹೇಳಿದ್ದಾರೆ. ನಾವೆಲ್ಲರೂ ಅದಕ್ಕೆ ಸಹಮತ ವ್ಯಕ್ತಪಡಿಸಿದ್ದು, ನಮ್ಮಲ್ಲಿ ಗೊಂದಲ ಇಲ್ಲ. ನಾವು ಸಾಮೂಹಿಕ ನಾಯಕತ್ವದಲ್ಲೇ ಚುನಾವಣೆಗೆ ಹೋಗುತ್ತೇವೆ. ನಮ್ಮ ಇವತ್ತಿನ ಕ್ಯಾಪ್ಟನ್ ಬಸವರಾಜ ಬೊಮ್ಮಾಯಿ(Basavaraj Bommai). ಕ್ಯಾಪ್ಟನ್ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಹೋಗುತ್ತೇವೆ, ನವರಾತ್ರಿ(Navaratri) ನಂತರ ಸಚಿವ ಸಂಪುಟ ವಿಸ್ತರಣೆ ಆಗುತ್ತದೆ ಎಂದರು.
ಪಿಎಫ್ಐ(PFI)ಯನ್ನು ಬಗ್ಗುಬಡಿಯುತ್ತೇವೆ:
ಪಿಎಫ್ಐ(PFI)ಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಬಗ್ಗು ಬಡಿಯುತ್ತದೆ. ಬಂಧಿತ ವ್ಯಕ್ತಿಗಳು ಭಾರತವನ್ನು ಇಸ್ಲಾಂ ರಾಷ್ಟ್ರ ಮಾಡುವ ಕನಸು ಕಂಡಿದ್ದಾರೆ. ಜಗತ್ತಿನ ಯಾವುದೇ ರಾಷ್ಟ್ರ ಭಾರತವನ್ನು ಇಸ್ಲಾಂ ರಾಷ್ಟ್ರ ಮಾಡಲು ಸಾಧ್ಯವಿಲ್ಲ ಎಂದು ಇಂಧನ ಸಚಿವ ಸುನೀಲ್ ಕುಮಾರ್ ಹೇಳಿದರು. ದೇಶಾದ್ಯಂತ ಪಿ.ಎಫ್.ಐ ಕಚೇರಿ ಮೇಲೆ ನಡೆದ ಎನ್ಐಎ ದಾಳಿಯ ಕುರಿತು ಪ್ರತಿಕ್ರಿಯಿಸಿದರು ಪ್ರವೀಣ್ ನೆಟ್ಟಾರು(Praveen Nettaru) ಹತ್ಯೆಯಾದಾಗ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯದಾಗಿ ಹೇಳಿದ್ದೆನು. ಕಾರ್ಯಕರ್ತರಿಗೆ ನ್ಯಾಯ ಕೊಡುವ ಭರವಸೆಯನ್ನ ನೀಡಿದ್ದೆವು, ಪ್ರಕರಣವನ್ನು ಎನ್ಐಎ(NIA) ಗೆ ಕೊಟ್ಟು ಸರ್ಕಾರ ಕೈ ಕಟ್ಟಿ ಕುಳಿತಿಲ್ಲ ಎಂದರು.
ಸಿದ್ದರಾಮಯ್ಯ(Siddaramaiah) ಕಾಲದಲ್ಲಿ SDPI, PFIಯನ್ನು ಪೋಷಿಸಿದ್ದರು. ಅವರ ಅವಧಿಯಲ್ಲಿ 18 ಹಿಂದೂಗಳ ಹತ್ಯೆಯಾಗಿತ್ತು. ಆರೋಪಿಗಳ ಕೇಸನ್ನು ಸಿದ್ದರಾಮಯ್ಯ ಸರ್ಕಾರ ವಾಪಸ್ ಪಡೆದಿತ್ತು. ಅಶಾಂತಿ ಸೃಷ್ಟಿಸಿರುವ ಅವರ ವಿರುದ್ಧ ಕಾಂಗ್ರೆಸ್(Congress) ಸ್ನೇಹ ಬೆಳೆಸಿತ್ತು. ಆದರೆ ಭಾರತದ ಭದ್ರತೆಯನ್ನು ಕಾಪಾಡುವುದು ಕೇಂದ್ರ ಮತ್ತು ರಾಜ್ಯ ಸರ್ಕಾರ ನಿಲುವಾಗಿದೆ ಎಂದರು.
ಡಿಕೆಶಿ ED ಕಚೇರಿಯಿಂದ ಬಂದು ಪೇಸಿಎಂ(payCM) ಪೋಸ್ಟರ್ ಅಂಟಿಸೋದು ಹಾಸ್ಯಾಸ್ಪದ:
ಕಾಂಗ್ರೆಸ್(Congress) ಭ್ರಷ್ಟಾಚಾರ(Curruption)ದ ವಿರುದ್ಧ ಆಧಾರ ರಹಿತ ಆರೋಪ ಮಾಡುತ್ತಿದ್ದು, ಪೇ ಸಿಎಂ ಎಂಬುದು ಕಾಂಗ್ರೆಸ್ಸಿನ ಸುಳ್ಳಿನ ಸುರಿಮಳೆಯಾಗಿದೆ. ಪೋಸ್ಟರ್ ಅಂಟಿಸಿದ ಡಿಕೆಶಿ(D.K.Shivakumar) ಇಡಿ ಕಚೇರಿಗೆ ಹೋಗಿದ್ದು ಯಾಕೆ? ಈ ಪ್ರಶ್ನೆಗೆ ಸಿದ್ದರಾಮಯ್ಯ ಉತ್ತರ ಕೊಡಬೇಕು. ಭ್ರಷ್ಟಾಚಾರದ ಬಗ್ಗೆ ವಿಚಾರಣೆಗೆ ಒಳಗಾಗಿ ಪೇಟಿಎಂ ಪೋಸ್ಟರ್ ಅಳವಡಿಸುತ್ತಾರೆ. ಕಾಂಗ್ರೆಸಿಗೆ ಪೇಸಿಎಂ ಪೋಸ್ಟರ್ ಅಂಟಿಸಲು ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.
ಅರ್ಕಾವತಿ(Arkavati) ಇಂದಿರಾ ಕ್ಯಾಂಟೀನ್(Indira Canteen) ಹಾಸಿಗೆಯಲ್ಲಿ ಹಣ ನುಂಗಿದವರು ಕಾಂಗ್ರೆಸ್ಸಿಗರು, ಸಿದ್ದರಾಮಯ್ಯ ಭ್ರಷ್ಟಾಚಾರದ ಪಿತಾಮಹ. ಭ್ರಷ್ಟಾಚಾರದ ಉತ್ತುಂಗ ಏರಿಸಿದ ಕಾಂಗ್ರೆಸ್ಸಿಗರು ನಮ್ಮ ಕಾಮನ್ ಸಿಎಂ(Common man CM) ಬಗ್ಗೆ ಮಾತನಾಡುತ್ತಾರೆ. ಭ್ರಷ್ಟಾಚಾರ ನಡೆದಿದ್ದರೆ ನ್ಯಾಯಾಲಯ, ಮುಖ್ಯಮಂತ್ರಿಗಳು, ಲೋಕಾಯುಕ್ತಕ್ಕೆ ದೂರು ಕೊಡಲಿ. ಆದರೆ 10 ದಿನದ ಅಧಿವೇಶನದಲ್ಲಿ ಭ್ರಷ್ಟಾಚಾರದ ಬಗ್ಗೆ ಒಂದು ದಿನವು ಚರ್ಚೆ ನಡೆದಿಲ್ಲ ಎಂದರು.
ಪೇಸಿಎಂ ಪೋಸ್ಟರ್: ಸಿಸಿಟೀವಿ ದೃಶ್ಯ ಆಧರಿಸಿ ಐವರು ಕಾಂಗ್ರೆಸ್ ಕಾರ‍್ಯಕರ್ತರ ಸೆರೆ
ವಿದ್ಯುತ್ ನ ಬಿಲ್ ಏರಿಕೆ ವರ್ಷಕ್ಕೆ ಒಂದು ಬಾರಿ ನಡೆಯುತ್ತದೆ. ಕಲ್ಲಿದ್ದಲು ಬೆಲೆ ಏರಿಕೆಗೆ ಹೊಂದಾಣಿಕೆ ಮಾಡಿ ವಿದ್ಯುತ್ ದರ ನಿಗದಿಯಾಗುತ್ತದೆ. ಕಳೆದ 9 ವರ್ಷಗಳಿಂದ ಪ್ರತಿ ಮೂರು ತಿಂಗಳಿಗೊಮ್ಮೆ ಕಲ್ಲಿದ್ದಲು ದರ ನಿಗದಿಯಾಗುತ್ತದೆ. ಕಲ್ಲಿದ್ದಲು ಬೆಲೆ ಹೊಂದಾಣಿಕೆಗೋಸ್ಕರ ಬೆಲೆ ಏರಿಕೆ ಮಾಡಿದ್ದಾರೆ ಎಂದರು.