ಸುಳ್ಳು ಹೇಳಿ ಟೋಪಿ ಹಾಕುತ್ತಿರುವ ಬಿಜೆಪಿಗೆ ಈಗ ನೀವು ಟೋಪಿ ಹಾಕಿ: ಡಿಕೆಶಿ
* ಕಾಂಗ್ರೆಸ್ ಅಭ್ಯರ್ಥಿ ಮಾನೆ ಪರ ಡಿಕೆಶಿ ಪ್ರಚಾರ
* ಬಿಜೆಪಿಗೆ ಯಾಕೆ ಮತ ಹಾಕಬೇಕು ಎಂದು ಅವರೇ ಹೇಳಲಿ
* ರಾಜ್ಯದ ರೈತರ ರಕ್ಷಣೆ ಮಾಡುವುದು ಸಿಎಂ ಜವಾಬ್ದಾರಿ
ಹಾನಗಲ್(ಅ.21): ಎರಡು ವರ್ಷಗಳಿಂದ ನಿಮಗೆ ಟೋಪಿ ಹಾಕುತ್ತಿರುವ ಬಿಜೆಪಿಗೆ(BJP) ಈಗ ನೀವು ಟೋಪಿ ಹಾಕಬೇಕು. ಕೇಂದ್ರ, ರಾಜ್ಯದಲ್ಲಿ(Karnataka)ಡಬಲ್ ಎಂಜಿನ್ ಸರ್ಕಾರ ತಂದರೆ ಇಂದ್ರ-ಚಂದ್ರನನ್ನು ತೋರಿಸುವುದಾಗಿ ಹೇಳಿ ಜನರಿಗೆ ಟೋಪಿ ಹಾಕಿದ ಬಿಜೆಪಿಗೆ ಈಗ ಜನ ಟೋಪಿ ಹಾಕಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ(DK Shivakumar) ಹೇಳಿದ್ದಾರೆ.
ಹಾನಗಲ್(Hanagal) ಉಪಚುನಾವಣೆಯಲ್ಲಿ(Byelection) ಪಕ್ಷದ ಅಭ್ಯರ್ಥಿ ಶ್ರೀನಿವಾಸ ಮಾನೆ(Shrinivas Mane) ಪರ ಪ್ರಚಾರ ಕೈಗೊಂಡ ಅವರು, ಬಿಜೆಪಿಯವರು ಯಾವ ಕಾರಣಕ್ಕೆ ತಮಗೆ ಮತ ನೀಡಿ ಎಂದು ಕೇಳುತ್ತಿದ್ದಾರೋ ನನಗೆ ಅರ್ಥವಾಗುತ್ತಿಲ್ಲ. ಯಾಕೆ ಮತ(Vote) ಹಾಕಬೇಕು ಎಂದು ಅವರೇ ಹೇಳಬೇಕು. ಅದನ್ನು ಬಿಟ್ಟು ಸಿದ್ದರಾಮಯ್ಯ(Siddaramaiah), ರಾಹುಲ್ ಗಾಂಧಿ(Rahul Gandhi) ಅವರ ಬಗ್ಗೆ ಮಾತನಾಡುತ್ತಿದ್ದಾರೆ ಎಂದರು.
2013ರಲ್ಲಿ 50 ಇದ್ದ ಪೆಟ್ರೋಲ್(Petrol) ಈಗ 110 ಆಗಿದೆ. ಇದು ಅಚ್ಛೇ ದಿನನಾ?(Achche Din) 2014ರಲ್ಲಿ ಅಡುಗೆ ಅನಿಲದ ಸಿಲಿಂಡರ್(Cylinder) 410 ಇತ್ತು. ಈಗ ಅದು 980 ಆಗಿದೆ. ಇದು ಅಚ್ಛೇ ದಿನಾನ? ಅಡುಗೆ ಎಣ್ಣೆ 99 ಇತ್ತು. ಈಗ 200 ಆಗಿದೆ. ಮೋದಿ(Narendra Modi) ಅವರು ಹೇಳಿದಂತೆ ಪಕೋಡಾ ಮಾರುವುದಾದರೂ ಹೇಗೆ? ಇದು ಈ ಚುನಾವಣೆಯ(Election) ಪ್ರಶ್ನೆ ಆಗಬೇಕು ಎಂದರು. ಕೋವಿಡ್(Covid19) ರೋಗ ತಂದು ಹಬ್ಬಿಸಿದರು. ಗಂಟೆ, ಜಾಗಟೆ ಬಾರಿಸಿ, ಚಪ್ಪಾಳೆ ಹೊಡೆದು ದೀಪ ಹಚ್ಚಿ ಎಂದರು. ಅದನ್ನು ನಾವೆಲ್ಲ ಮಾಡಿದ್ದೇವೆ. ಕೊರೋನಾ ಹೋಯಿತೇ? ಸಂಕಷ್ಟಕ್ಕೆ ಸರ್ಕಾರ(Government) ಪರಿಹಾರ ನೀಡಿತೆ? ಎಂದರು.
ಹಾನಗಲ್ ಬೈಎಲೆಕ್ಷನ್: ಲಿಂಗಾಯತ ಮತ ಸೆಳೆಯಲು ತರಹೇವಾರಿ ತಾಲೀಮು
ಸ್ಥಳೀಯವಾಗಿ ಹೂ ಬೆಳೆದು ಅದನ್ನು ಗೋವಾಗೆ(Goa) ಮಾರುತ್ತಿದ್ದರು. ಆದರೆ ಇಂದು ನೀವು ಬೆಳೆದ ಹೂವು ಬೇಡ ಎಂದು ತಿರಸ್ಕರಿಸುತ್ತಿದ್ದಾರೆ. ಈ ವಿಚಾರವಾಗಿ ನನಗೆ ಮನವಿ ಪತ್ರವನ್ನು ಗ್ರಾಮಸ್ಥರೇ ನೀಡಿದ್ದಾರೆ. ಮುಖ್ಯಮಂತ್ರಿಗಳೇ ಇದು ನಿಮ್ಮ ತವರು ಜಿಲ್ಲೆ. ಈ ರಾಜ್ಯದ ರೈತನ(Farmers) ರಕ್ಷಣೆ ಮಾಡಬೇಕಾದ ಜವಾಬ್ದಾರಿ ನಿಮ್ಮದು. ಈ ರೈತರ ಕಷ್ಟನಿಮ್ಮ ಕಣ್ಣಿಗೆ ಕಾಣುತ್ತಿಲ್ಲವೆ ಎಂದು ಪ್ರಶ್ನಿಸಿದರು.
ಮಾಜಿ ಸಚಿವ ಎಚ್.ಕೆ. ಪಾಟೀಲ್ ಮಾತನಾಡಿ, ಹಣದಲ್ಲಿ ಇಲ್ಲಿನ ಮತದಾರರನ್ನು ಖರೀದಿ ಮಾಡುತ್ತೇನೆ ಎಂದರೆ ಅದು ಅವರ ಅಪ್ಪನಿಗೂ ಸಾಧ್ಯವಾಗುವುದಿಲ್ಲ. ಇಲ್ಲಿನವರು ಸ್ವಾಭಿಮಾನಿಗಳು. ಬೊಮ್ಮಾಯಿ(Basavaraj Bommai) ಅವರೆ ಇಲ್ಲಿ ಬಂದು ತಮ್ಮ ಮಾವನ ಮನೆ ಎಂದರಲ್ಲ? ಬೆಲೆಯೇರಿಕೆ ಇಳಿಸುತ್ತೇವೆ, ಹೊಸ ಯೋಜನೆ ತರುತ್ತೇವೆ ಎಂದರಾ? ಪಡಿತರ ಅಕ್ಕಿ ಕಡಿಮೆ ಮಾಡಿದಿರಲ್ಲ? ಅಕ್ಕಿಯನ್ನು ನಿಮ್ಮ ಅಪ್ಪನ ಮನೆಯಿಂದ ಕೊಡುತ್ತಿದ್ದೀರಾ? ಸಾರ್ವಜನಿಕ ಜೀವನದಲ್ಲಿ ಮೊದಲು ನೀವು ಮಾತನಾಡುವುದನ್ನು ಕಲಿತುಕೊಳ್ಳಿ. ನಿಮಗೆ ಮತ ಕೇಳಲು ಯಾವ ನೈತಿಕ ಹಕ್ಕಿದೆ ಎಂದು ಪ್ರಶ್ನಿಸಿದರು. ಮಾನೆಗೆ ನೀಡುವ ಮತ ಮುಂದೆ ಬಿಜೆಪಿಯ ಅವನತಿಗೆ ಕಾರಣವಾಗಲಿದೆ. ರಾಜ್ಯದಲ್ಲಿ ಕಾಂಗ್ರೆಸ್(Congress) ಸರ್ಕಾರವನ್ನು ತರಲಿದೆ ಎಂದರು.
ಅಭ್ಯರ್ಥಿ ಶ್ರೀನಿವಾಸ ಮಾನೆ, ಕಳೆದ ಎರಡೂವರೆ ವರ್ಷ ಬಿಜೆಪಿಯ ಆಡಳಿತದಲ್ಲಿ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರವಾಹ, ಕೊರೋನಾ ಸಂದರ್ಭದಲ್ಲಿ ಸರ್ಕಾರ ಕೈ ಹಿಡಿದಿಲ್ಲ. ಬೆಲೆಯೇರಿಕೆ ಮೂಲಕ ಪೆಟ್ಟು ನೀಡಲಾಗುತ್ತದೆ. ಜನವಿರೋಧಿ ನೀತಿ ಅನುಸರಿಸಿ ತುಳಿಯಲಾಗುತ್ತಿದೆ. ತಪ್ಪು ಮಾಡಿದ ಬಿಜೆಪಿಗೆ ಉಪ ಚುನಾವಣೆಯಲ್ಲಿ ಪಾಠ ಕಲಿಸುವ ಮೂಲಕ ದೇಶಕ್ಕೆ ಸಂದೇಶ ನೀಡಬೇಕಾಗಿದೆ ಎಂದು ಹೇಳಿದರು.
ಮಾಜಿ ಶಾಸಕ ಮನೋಹರ ತಹಶೀಲ್ದಾರ, ಅನಿರೀಕ್ಷಿತವಾಗಿ ಚುನಾವಣೆ ಬಂದಿದೆ. ಸಮರ್ಥವಾಗಿ ಚುನಾವಣೆ ಎದುರಿಸಬೇಕಾಗಿದೆ. ಈ ಭಾಗದಲ್ಲಿ ಮೊದಲು ನೀರಾವರಿ ಸೌಲಭ್ಯಕ್ಕಾಗಿ ಬಾಳಂಬಿಡ ಯೋಜನೆ ಆರಂಭಿಸಿದ್ದು ನಾವು. ಶ್ರೀನಿವಾಸ ಮಾನೆ ಅವರಿಗೆ ನನಗಿಂತ ಹೆಚ್ಚು ಬೆಂಬಲ ನೀಡಿ ಗೆಲ್ಲಿಸಿ ಎಂದರು. ಪ್ರಚಾರಕ್ಕೂ ಮುನ್ನ ಕೊಪ್ಪರಸಿಕೊಪ್ಪದಲ್ಲಿ ಪ್ರಮುಖರು ರೋಡ್ ಶೋ ನಡೆಸಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ ಇತರರು ಇದ್ದರು.