Asianet Suvarna News Asianet Suvarna News

ಸಿಡಿ ಕೇಸ್‌ ಸಿಬಿಐಗೆ ವಹಿಸುವಂತೆ ಡಿಕೆಶಿ ಒತ್ತಾಯಿಸಲಿ: ಕೆ.ಎಸ್‌.ಈಶ್ವರಪ್ಪ

ಸಿಡಿ ವಿಚಾರವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಒತ್ತಾಯಿಸಬೇಕು. ಇಲ್ಲವೇ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಆಗ್ರಹಿಸಿದ್ದಾರೆ.

DK Shivakumar should demand that CBI take over the CD case Says KS Eshwarappa gvd
Author
First Published Feb 2, 2023, 10:08 AM IST

ಬಳ್ಳಾರಿ (ಫೆ.02): ಸಿಡಿ ವಿಚಾರವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಒತ್ತಾಯಿಸಬೇಕು. ಇಲ್ಲವೇ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಆಗ್ರಹಿಸಿದ್ದಾರೆ. ರಮೇಶ್‌ ಜಾರಕಿಹೊಳಿ ಹಾಗೂ ಡಿ.ಕೆ.ಶಿವಕುಮಾರ್‌ ಅವರ ಸಿಡಿ ವಿಷಯ ಕುರಿತು ನಗದಲ್ಲಿ ಬುಧವಾರ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಡಿಕೆಶಿ ಬಗ್ಗೆ ಜಾರಕಿಹೊಳಿ ಅವರು ಆಡಿಯೋ ಬಿಡುಗಡೆ ಮಾಡಿ ಕಾಂಗ್ರೆಸ್‌ ಅಧ್ಯಕ್ಷನ ಪಾತ್ರ ಸ್ಪಷ್ಟಪಡಿಸಿದ್ದಾರೆ. 

ಸಿಬಿಐ ತನಿಖೆಯಾಗಲಿ ಎಂದು ರಮೇಶ್‌ ಜಾರಕಿಹೊಳಿಯೇ ಒತ್ತಾಯಿಸಿದ್ದಾರೆ. ಹೀಗಿರುವಾಗ ಎಲ್ಲದಕ್ಕೂ ಪ್ರತಿಕ್ರಿಯಿಸುವ ಡಿಕೆ ಶಿವಕುಮಾರ್‌ ಈ ವಿಚಾರಕ್ಕೆ ಯಾಕೆ ಮೌನವಾಗಿದ್ದಾರೆ. ಬರೀ ತಾವಷ್ಟೇ ಅಲ್ಲ; ಕಾಂಗ್ರೆಸ್‌ ನಾಯಕರು ಸಹ ಮಾತನಾಡದಂತೆ ಬಾಯಿ ಮುಚ್ಚಿಸಿದ್ದಾರೆ ಎಂದು ಟೀಕಿಸಿದರು. ಕಾಂಗ್ರೆಸ್‌ ಪಕ್ಷ ಡಿಕೆ ಶಿವಕುಮಾರ ಹಾಗೂ ಸಿದ್ದರಾಮಯ್ಯನವರ ಕಟ್ಟಿದ ಪಕ್ಷವಲ್ಲ. ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯಿರುವ ಪಕ್ಷ. ಸಿಡಿ ಕೇಸ್‌ ಬಗ್ಗೆ ಶಿವಕುಮಾರ್‌ ಉತ್ತರಿಸಬೇಕು. 

ರೈತರಿಗೆ ಕನ್ಯೆ ಕೊಡಲಿ, ಜನರ ಮನಸ್ಸು ಬದಲಾಗಲಿ: ಬಾಳೆಹಣ್ಣಿನ ಮೇಲೆ ಬರೆದು ರಥದ ಮೇಲೆ ಎಸೆದ ರೈತರು

ಇಲ್ಲದೇ ಹೋದರೆ ಕಾಂಗ್ರೆಸ್ಸಿನ ಮಾನ ಹೋಗುತ್ತದೆ ಎಂದ ಈಶ್ವರಪ್ಪ, ಸಿಡಿ ವಿಚಾರದಲ್ಲಿ ನಿಮ್ಮ ಪಾತ್ರವೇನು ಎಂಬುದನ್ನು ಡಿ.ಕೆ.ಶಿವಕುಮಾರ್‌ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರಲ್ಲದೆ, ನೂರು ರೂಪಾಯಿಗೆ ನೀಲಿ ಚಿತ್ರ ತೋರಿಸುವ ವ್ಯಕ್ತಿ ಇಂದು ಸಾವಿರಾರು ಕೋಟಿ ರು. ಹೇಗೆ ಸಂಪಾದನೆ ಮಾಡಿದ್ದಾರೆ. ಯಾವ ರೀತಿ ಅಷ್ಟೊಂದು ಹಣ ಸಂಪಾದನೆ ಮಾಡಲು ಸಾಧ್ಯವಾಯಿತು ಎಂಬುದನ್ನು ಹೇಳಲಿ ಎಂದು ಆಗ್ರಹಿಸಿದರು. ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಈಶ್ವರಪ್ಪ, ಕೋರ್ಚ್‌ ಪೊಲೀಸ್‌ ಇಲಾಖೆಯನ್ನು ದಾಖಲೆ ಕೇಳಿತ್ತು. ಅವರು ದಾಖಲೆ ಕೊಟ್ಟಿದ್ದಾರೆ. ಇದರಲ್ಲಿ ಕಾಂಗ್ರೆಸ್ಸಿನವರು ರಾಜಕಾರಣ ಮಾಡಿ ಯಶಸ್ವಿಯಾಗಲು ಯತ್ನಿಸಿದರು. ಆದರೆ, ಅದು ಸಾಧ್ಯವಾಗಲಿಲ್ಲ ಎಂದರು.

ಇನ್ಸ್‌ಪೆಕ್ಟರ್‌ ಹುದ್ದೆಗೆ ರಾಜೀನಾಮೆ ನೀಡಿ ರಾಜಕೀಯಕ್ಕೆ ಎಂಟ್ರಿಕೊಟ್ಟ ಮಹೇಂದ್ರ ನಾಯಕ್!

ಕಾಂಗ್ರೆಸ್‌ ಹಾಗೂ ಜೆಡಿಎಸ್‌ನವರು ಯಾತ್ರೆ ಹೆಸರಿನಲ್ಲಿ ಜಾತ್ರೆ ಮಾಡುತ್ತಿದ್ದಾರೆ. ಅವರ ಯಾತ್ರೆಗಳಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ. ಈ ಬಾರಿ ಪಕ್ಷದಿಂದ ಟಿಕೆಟ್‌ ನೀಡುವ ಕುರಿತು ಕೇಂದ್ರದಿಂದ ಸರ್ವೆ ನಡೆಸಲಾಗಿದೆ. ಸಾಮಾನ್ಯ ಕಾರ್ಯಕರ್ತರ ಅಭಿಪ್ರಾಯವನ್ನು ಸಹ ಸಂಗ್ರಹಿಸಲಾಗುತ್ತಿದೆ. ಎಲ್ಲರ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಟಿಕೆಟ್‌ ನೀಡಲಾಗುತ್ತಿದೆ ಎಂದು ಈಶ್ವರಪ್ಪ ತಿಳಿಸಿದರು.

Follow Us:
Download App:
  • android
  • ios