ಬೆಂಗಳೂರು, (ನ.25):  ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ನ. 23 ರಂದು ವಿಚಾರಣೆಗೆ ಬರುವಂತೆ  ಸಿಬಿಐ ನೊಟೀಸ್ ನೀಡಿದ್ದು, ಆದ್ರೆ, ಮನವಿ ಮೇರೆಗೆ ಇಂದು (ಬುಧವಾರ) ಬೆಂಗಳೂರಿನಲ್ಲಿರುವ ಸಿಬಿಐ ಕಚೇರಿಗೆ ತೆರಳಿದ್ದಾರೆ.

ಆದ್ರೆ, ಸಿಬಿಐ ಕಚೇರಿಗೆ ತೆರಳುವ ಮುನ್ನ ಡಿಕೆ ಶಿವಕುಮಾರ್ ಅವರು ಅಜ್ಜಯ್ಯನ ದರ್ಶನ ಪಡೆದುಕೊಂಡಿರುವುದು ವಿಶೇಷ.  ಬೆಂಗಳೂರಿನ ವಿಜಯನಗರ ಪೈಪ್ ಲೈನ್ ರಸ್ತೆಯಲ್ಲಿರುವ ಅಜ್ಜಯ್ಯನ  ಮಠಕ್ಕೆ ಭೇಟಿ ನೀಡಿ ಬಳಿಕ ಸಿಬಿಐ ವಿಚಾರಣೆಗೆ ತೆರಳಿದರು.

'ನನ್ನ ಮಗಳ ನಿಶ್ಚಿತಾರ್ಥ ದಿನವೇ ನೋಟಿಸ್, ನನ್ನೊಬ್ಬನಿಗೆ ಏಕೆ ತೊಂದ್ರೆ'?

ಡಿಕೆ ಶಿವಕುಮಾರ್ ಅವರು ಯವುದೇ ಕೆಲಸಕ್ಕೆ ತೆರಳುವ ಮುನ್ನ  ಅಜ್ಜಯ್ಯನ ದರ್ಶನ ಪಡೆದು ಮುಂದಿನ ಕೆಲಸಕ್ಕೆ ಹೋಗುವ ಅಭ್ಯಾಸ ಇದೆ. ಅದರಂತೆ ಸಿಬಿಐ ಕಚೇರಿಗೆ ವಿಚಾರಣೆಗೆ ತೆರಳುವ ಮುನ್ನ‌ ಅಜಯ್ಯನ ದರ್ಶನ ಪಡೆದುಕೊಂಡರು.

ಮಗಳ ನಿಶ್ಚಿತಾರ್ಥ ದಿನವೇ ಅಂದರೆ ನವೆಂಬರ್ 19ರಂದು ಸಿಬಿಐ ನೋಟಿಸ್ ನೀಡಿದ್ದು, ನ.23ಕ್ಕೆ ವಿಚಾರಣೆ ಬರುವಂತೆ ಸಿಬಿಐ ಹೇಳಿತ್ತು. ಆದ್ರೆ, ಡಿಕೆ ಶಿವಕುಮಾರ್ ಅವರು ಉತ್ತರ ಕರ್ನಾಟಕ ಪ್ರವಾಸ ಕೈಗೊಂಡಿದ್ದರಿಂದ ನ.25ರಂದು ಬರುವುದಾಗಿ ಮನವಿ ಮಾಡಿಕೊಂಡಿದ್ದರು.