'ನಮ್ಮ ಪಕ್ಷದಲ್ಲಿದ್ದಾಗ ಬಿಜೆಪಿ ನಿರ್ನಾಮ ಮಾಡ್ಬೇಕು ಅಂದಿದ್ರು'; ಶೆಟ್ಟರ್ ಕಾಂಗ್ರೆಸ್ ನಿರ್ನಾಮ ಹೇಳಿಕೆಗೆ ಡಿಕೆಶಿ ತಿರುಗೇಟು!
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನಿರ್ನಾಮ ಮಾಡಲು ಹೇಳಿದ್ರು. ಇದೀಗ ಮತ್ತೆ ಬಿಜೆಪಿಗೆ ಪಕ್ಷಕ್ಕೆ ಹೋಗಿ ಕಾಂಗ್ರೆಸ್ ನಿರ್ನಾಮ ಮಾಡಲು ಹೇಳ್ತಿದ್ದಾರೆ ಎಂದು ಬಿಜೆಪಿಗೆ ಮರುಸೇರ್ಪಡೆಗೊಂಡ ಜಗದೀಶ ಶೆಟ್ಟರ್‌ಗೆ ಡಿಸಿಎಂ ಡಿಕೆ ಶಿವಕುಮಾರ ತಿರುಗೇಟು ನೀಡಿದರು.
ಬೆಂಗಳೂರು (ಜ.27) ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನಿರ್ನಾಮ ಮಾಡಲು ಹೇಳಿದ್ರು. ಇದೀಗ ಮತ್ತೆ ಬಿಜೆಪಿಗೆ ಪಕ್ಷಕ್ಕೆ ಹೋಗಿ ಕಾಂಗ್ರೆಸ್ ನಿರ್ನಾಮ ಮಾಡಲು ಹೇಳ್ತಿದ್ದಾರೆ ಎಂದು ಬಿಜೆಪಿಗೆ ಮರುಸೇರ್ಪಡೆಗೊಂಡ ಜಗದೀಶ ಶೆಟ್ಟರ್‌ಗೆ ಡಿಸಿಎಂ ಡಿಕೆ ಶಿವಕುಮಾರ ತಿರುಗೇಟು ನೀಡಿದರು.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ನಿರ್ನಾಮ ಮಾಡಬೇಕೆಂಬ ಶೆಟ್ಟರ್ ಹೇಳಿಕೆ ಸಂಬಂಧ ಮಾಧ್ಯಮ ಪ್ರತಿನಿಧಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ, ಕಳೆದ ವಿಧಾನಸಭಾ ಚುನಾವಣೇಲಿ ಟಿಕೆಟ್ ಸಿಗಲಿಲ್ಲವೆಂದು ಕಾಂಗ್ರೆಸ್ ಪಕ್ಷಕ್ಕೆ ಬಂದಾಗ ಇದೇ ಶೆಟ್ಟರ್ ಬಿಜೆಪಿ ಸೋಲಿಸಲು ಹೇಳಿದ್ರು. ಅವರಲ್ಲಿ ಒಂದು ಗಟ್ಟಿ ವ್ಯಕ್ತಿತ್ವ ಇಲ್ಲವೆಂಬುದು ಸಾಬೀತಾಗಿದೆ ಹೀಗಾಗಿ ಅವರ ಮಾತುಗಳಿಗೆ ಬೆಲೆಕೊಡಬೇಕಿಲ್ಲ ಎಂದರು.
'ನಾನು ಯಾರು ಗೊತ್ತಾ ಡಿಕೆಶಿ ಸಂಬಂಧಿ'; ಟೋಲ್ ಕಟ್ಟುವಂತೆ ಹೇಳಿದ ಮಹಿಳಾ ಸಿಬ್ಬಂದಿ ಮೇಲೆ ಪುಡಾರಿಯಿಂದ ಹಲ್ಲೆ!
ಇನ್ನು ಬಿಜೆಪಿ ಸಂಸದ ಬಿವೈ ರಾಘವೇಂದ್ರರನ್ನು ಹಾಡಿಹೊಗಳಿರುವ ಶಾಮನೂರು ಶಿವಶಂಕರಪ್ಪ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸಂಸದರನ್ನು ಗೆಲ್ಲಿಸಿ ಎಂದು ಕರೆಕೊಟ್ಟಿರುವ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಅವರು, ಹೌದಾಖ.. ನಾನು ನೋಡಿಲ್ಲ. ಅವರ ಹೇಳಿಕೆ ಬಗ್ಗೆ ಪರಿಶೀಲಿಸುತ್ತೇನೆ ಎಂದರು ಮುಂದುವರಿದು ಶಿವಮೊಗ್ಗದಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷ ಗೆಲ್ಲುತ್ತೆ ಇಷ್ಟು ಮಾತ್ರ ಹೇಳುತ್ತೇನೆ ಎಂದು ತಿರುಗೇಟು ನೀಡಿದರು.
ನಿಗಮ ಮಂಡಳಿ ವಿಚಾರ; ಮಾಧ್ಯಮದವರ ಮೇಲೆ ಅಸಮಾಧಾನ
ನಿಗಮ ಮಂಡಳಿ ವಿಚಾರ ಕೆಲ ಶಾಸಕರು ಅಸಮಾಧಾನಗೊಂಡಿರುವ ವಿಚಾರ ಸಂಬಂಧ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ, ನೀವು ಏನು ಹೇಳಿದರೂ ನಾವು ಕೇಳಲ್ಲ (ಮಾದ್ಯಮದವರಿಗೆ). ನೀವೇ ಬೇಕಾದಂತೆ ಸೃಷ್ಟಿ ಮಾಡಿಕೊಂಡು ಹೋಗೋದು ಸರಿಯಲ್ಲ. ನಾವು ಸುದೀರ್ಘವಾಗಿ ಚರ್ಚೆ ಮಾಡಿ ತೀರ್ಮಾನ ಮಾಡಿದ್ದೇವೆ. ಎಲ್ಲರಿಗೂ ಮಂತ್ರಿಯಾಗಬೇಕು ಅನ್ನೋ ಆಸೆ ಇರುತ್ತದೆ. ಕಾಂಗ್ರೆಸ್ ಪಕ್ಷದಲ್ಲಿ ನಾವು ಕೆಲವರನ್ನ ಗುರುತಿಸಿದ್ದೇವೆ. ಕೆಲವು ರೋಟೇಶನ್ ಆಗುತ್ತೆ. ಎರಡು ವರ್ಷ ಅಂತ ಮಾತ್ರ ನಾವು ಹೇಳಿದ್ದೇವೆಕ. ಎರಡು ವರ್ಷದ ನಂತರ ಬೇರೆಯವರಿಗೆ ಅವಕಾಶ ಮಾಡಿಕೊಡುತ್ತೇವೆ ಅಂತ ಹೇಳಿದ್ದೇವೆ. ಕಾಂಗ್ರೆಸ್ ಪಕ್ಷದ ಸೇವೆ ಮಾಡಬೇಕು ಅಂದುಕೊಂಡವರು ಏನ್ ಕೊಟ್ರು ಸೇವೆ ಮಾಡಬೇಕು. ಯಾರು ಏನು ಗಾಬರಿ ಪಡಬೇಕಾದ ಅವಶ್ಯಕತೆ ಇಲ್ಲ. ನೂರಾರು ಜನ ಕಾರ್ಯಕರ್ತರನ್ನು ಕೂಡ ನೇಮಕ ಮಾಡುವ ವ್ಯವಸ್ಥೆ ಮಾಡುತ್ತೇವೆ. ಈಗ 39 ಮಾಡುತ್ತೇವೆ ಮತ್ತೆ 39 ಮುಂದಿನ ಹಂತದಲ್ಲಿ ಮಾಡುತ್ತೇವೆ. ಜಿಲ್ಲಾಧ್ಯಕ್ಷರು ತಾಲೂಕು ಅಧ್ಯಕ್ಷರು ಬ್ಲಾಕ್ ಅಧ್ಯಕ್ಷರು ಹೀಗೆ ಕಾರ್ಯಕರ್ತರನ್ನ ನೇಮಕ ಮಾಡಬೇಕಿದೆ ಎಂದರು.
ನಿಗಮಮಂಡಳಿ ನೇಮಕ ವಿಚಾರದಲ್ಲಿ ತಮ್ಮ ಸಲಹೆ ಪಡೆದಿಲ್ಲ ಎಂಬ ಕೆಲ ಸಚಿವರ ಅಸಾಮಾಧಾನಕ್ಕೆ ಮುಖ್ಯಮಂತ್ರಿಗಳು ಈಗಾಗಲೇ ಉತ್ತರ ಕೊಟ್ಟಿದ್ದಾರೆ. ಎಲ್ಲಾ ಸಚಿವರು ನಮಗೆ ಲೆಟರ್ ಕೊಟ್ಟಿದ್ದಾರೆ. ಯಾರ್‍ಯಾರು ಬೇಕು ಅಂತ ಲಿಖಿತವಾಗಿ ಉತ್ತರ ಕೊಟ್ಟಿದ್ದಾರೆ. ನಾವು ಸೆಲೆಕ್ಷನ್ ಸಂದರ್ಭದಲ್ಲಿ ಕೆಲವು ಮಾತ್ರ ಕೊಟ್ಟಿದ್ದೇವೆ. ನಾವು ಎಲ್ಲರಿಗೂ ಅವಕಾಶ ಮಾಡಿಕೊಟ್ಟಿದ್ದೇವೆ ಅಂತ ನಾನು ಹೇಳಲ್ಲ. ಎಲ್ಲಾ ಕ್ಷೇತ್ರದಲ್ಲೂ ಇಬ್ಬರು ಮೂರು ಜನ ಆಕಾಂಕ್ಷಿಗಳಿದ್ದರು. ಕೆಲವರನ್ನ ಮಾಡಿದ್ದೇವೆ ಇನ್ನು ಕೆಲವರನ್ನ ಮಾಡುತ್ತೇವೆ. ಇನ್ನು ಬೇಕಾದಷ್ಟು ಸಾಕಷ್ಟು ಹುದ್ದೆಗಳನ್ನು ಸೃಷ್ಟಿಸಿದ್ದೇವೆ. ಒಂದೊಂದು ವಿಧಾನಸಭಾ ಕ್ಷೇತ್ರದಲ್ಲಿ ನೂರು ಜನ ಕಾರ್ಯಕರ್ತರನ್ನ ನೇಮಿಸಲು ವ್ಯವಸ್ಥೆ ಮಾಡುತ್ತೇವೆ. ಆಸ್ಪತ್ರೆ ಸಮಿತಿ, ಆಶ್ರಯ ಸಮಿತಿ ಹೀಗೆ ಹಲವು ಕಡೆ ನೇಮಿಸುವ ಅವಕಾಶವಿದೆ ಮಾಡುತ್ತಿದ್ದೇವೆ.
ಶೆಟ್ಟರ್ ಬಿಟ್ಟ ಪರಿಷತ್ ಸ್ಥಾನ ನಿಷ್ಠಾವಂತರಿಗೆ: ಡಿ.ಕೆ.ಶಿವಕುಮಾರ್
ಇನ್ನು ನೇಮಿಸಲು ಅವಕಾಶ ಇಲ್ಲದ ಅಧ್ಯಕ್ಷ ಹುದ್ದೆಗೆ ಶಾಸಕ ವಿಜಯಾನಂದ ಕಾಶಪ್ಪನವರ್ ನೇಮಕ ಮಾಡಿರುವ ವಿಚಾರವನ್ನು ಸರಿಪಡಿಸುತ್ತೇವೆ. ಹಿಂದೆ ಕೃಷ್ಣ ಅವರ ಕಾಲದಲ್ಲಿ ಮಾಡಿದ್ವಿ. ಈ ರೀತಿ ಸಣ್ಣ ಪುಟ್ಟ ಸಮಸ್ಯೆಗಳಿದ್ರೆ ಅದನ್ನ ಬಗೆಹರಿಸುತ್ತೇವೆ. ನರೇಂದ್ರ ಸ್ವಾಮಿ ಅವರದು ಕೋರ್ಟ್ ಅಲ್ಲಿದೆ. ಕೋರ್ಟ್‌ಲ್ಲಿ ಕ್ಲಿಯರ್ ಆದ ತಕ್ಷಣ ಮಾಡುತ್ತೇವೆ ಎಂದು ಭರವಸೆ ನೀಡಿದರು.