ಬಾದಾಮಿಯು ದೂರ ಎಂಬ ಕಾರಣಕ್ಕೆ ಕೋಲಾರದಿಂದ ಸ್ಪರ್ಧಿಸಲು ಮುಂದಾಗಿದ್ದ ಸಿದ್ದರಾಮಯ್ಯ ಅವರಿಗೆ ಇದೀಗ ಹೈಕಮಾಂಡೇ ಕೋಲಾರ ಸುರಕ್ಷಿತವಲ್ಲ ಎಂದು ಹೇಳಿರುವುದು ಅವರ ಇಮೇಜ್‌ಗೆ ಧಕ್ಕೆ ತರುವಂತಾಗಿದೆ. 

ಬೆಂಗಳೂರು(ಮಾ.19): ಚಾಮುಂಡಿ, ವರುಣ, ಬಾದಾಮಿ, ಕೋಲಾರ... ಹೀಗೆ ಕ್ಷೇತ್ರದಿಂದ ಕ್ಷೇತ್ರ ಬದಲಾವಣೆಗೆ ಅನಿವಾರ್ಯವಾಗಿ ಮುಂದಾಗುತ್ತಿರುವ ಕಾರಣ ಸಿದ್ದರಾಮಯ್ಯ ಅವರ ಇಮೇಜ್‌ಗೆ ಧಕ್ಕೆಯಾಗುತ್ತಿದೆಯೇ ಎಂಬ ಚರ್ಚೆ ಕಾಂಗ್ರೆಸ್‌ ವಲಯದಲ್ಲಿ ಆರಂಭವಾಗಿದೆ.

ಬಾದಾಮಿಯು ದೂರ ಎಂಬ ಕಾರಣಕ್ಕೆ ಕೋಲಾರದಿಂದ ಸ್ಪರ್ಧಿಸಲು ಮುಂದಾಗಿದ್ದ ಸಿದ್ದರಾಮಯ್ಯ ಅವರಿಗೆ ಇದೀಗ ಹೈಕಮಾಂಡೇ ಕೋಲಾರ ಸುರಕ್ಷಿತವಲ್ಲ ಎಂದು ಹೇಳಿರುವುದು ಅವರ ಇಮೇಜ್‌ಗೆ ಧಕ್ಕೆ ತರುವಂತಾಗಿದೆ ಎನ್ನಲಾಗುತ್ತಿದೆ.

ಸಿದ್ದರಾಮಯ್ಯಗೆ ಗೆಲುವಿನ ಗ್ಯಾರಂಟಿ ಇಲ್ಲ, ಇತರರನ್ನು ಹೇಗೆ ಗೆಲ್ಲಿಸುತ್ತಾರೆ: ಎಚ್‌.ಡಿ.ಕುಮಾರಸ್ವಾಮಿ

ರಾಜ್ಯದ ಅತ್ಯಂತ ಪ್ರಭಾವಿ ನಾಯಕರೆನಿಸಿದ, ಐದು ವರ್ಷಗಳ ಕಾಲ ಮುಖ್ಯಮಂತ್ರಿ ಹುದ್ದೆ ನಿರ್ವಹಿಸಿದ ಸಿದ್ದರಾಮಯ್ಯ ಅವರಿಗೆ ಸುರಕ್ಷಿತ ಕ್ಷೇತ್ರವೊಂದು ಇಲ್ಲ ಎಂಬ ಭಾವನೆ ಈ ಬೆಳವಣಿಗೆಯಿಂದ ಮೂಡುತ್ತಿದೆ. ಇದರಿಂದ ಅವರ ವರ್ಚಸ್ಸಿಗೆ ಧಕ್ಕೆಯಾಗುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.

ಇದೇ ವೇಳೆ ಸಿದ್ದರಾಮಯ್ಯ ಅವರ ವಿರುದ್ಧ ಪಕ್ಷದೊಳಗಿನ ಹಾಗೂ ಪಕ್ಷದೊರಗಿನ ಎಲ್ಲ ಶಕ್ತಿಗಳು ಒಗ್ಗೂಡುತ್ತಿದ್ದು, ಅವರು ಯಾವ ಕ್ಷೇತ್ರದಿಂದ ಸ್ಪರ್ಧಿಸುವ ನಿರ್ಧಾರ ಮಾಡಿದರೂ ಅಲ್ಲಿ ಅವರಿಗೆ ಹಿನ್ನೆಡೆ ಉಂಟು ಮಾಡಲು ಸಂಘಟಿತ ಪ್ರಯತ್ನ ಮಾಡುತ್ತವೆ. ಇದರಿಂದಾಗಿಯೇ ಸಿದ್ದರಾಮಯ್ಯ ಅವರಿಗೆ ಕ್ಷೇತ್ರ ಗೊಂದಲ ಉಂಟಾಗುತ್ತಿದೆ ಎಂಬ ವ್ಯಾಖ್ಯಾನವೂ ಇದೆ.