Karnataka Politics: ಕಾಂಗ್ರೆಸ್‌ ಸೇರುವ ಬಿಜೆಪಿಗರ ಪಟ್ಟಿ ಡಿಕೆಶಿ ಬಳಿ ಇದೆ: ಪರಂ

*   ಸಚಿವ ಸಂಪುಟ ಪುನಾರಚನೆ ಬಳಿಕ ರಾಜ್ಯ ರಾಜಕೀಯದಲ್ಲಿ ಬೆಳವಣಿಗೆ 
*   ಕಾಂಗ್ರೆಸ್‌ಗೆ ಸೇರಲು ಮುಂದಾದ ಮೂಲ ಬಿಜೆಪಿಗರು
*   ಮಾಧುಸ್ವಾಮಿ ಪರ ಪರಂ ಬ್ಯಾಟಿಂಗ್‌

DK Shivakumar Have List of BJP Leaders Who Join to Congress Says G Parameshwara grg

ತುಮಕೂರು(ಜ.26):  ಕಾಂಗ್ರೆಸ್‌(Congress) ಸೇರಲು ಬಿಜೆಪಿಯ ಹಲವು ಶಾಸಕರು, ಸಚಿವರ ತಯಾರಿದ್ದು ಯಾರು, ಯಾರು ಸೇರುತ್ತಾರೆ ಎಂಬ ಪಟ್ಟಿಕೆಪಿಸಿಸಿ ಅಧ್ಯಕ್ಷರ ಬಳಿ ಇದೆ ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌(Dr G Parameshwara) ಸ್ಫೋಟಕ ಹೇಳಿಕೆ ನೀಡಿದ್ದಾರೆ. ಜೊತೆಗೆ ಸಚಿವ ಸಂಪುಟ ಪುನಾರಚನೆ ಬಳಿಕ ರಾಜ್ಯ ರಾಜಕೀಯದಲ್ಲಿ ಬೆಳವಣಿಗೆ ಆಗಲಿದೆ. ಅದು ಯಾವ ರೀತಿಯ ಬೆಳವಣಿಗೆಯೂ ಆಗಬಹುದು ಎಂದು ಭವಿಷ್ಯ ನುಡಿದಿದ್ದಾರೆ. 

ಬಿಜೆಪಿಗೆ(BJP) ವಲಸೆ ಹೋದವರು, ಮೂಲ ಬಿಜೆಪಿಯವರು ಕಾಂಗ್ರೆಸ್‌ಗೆ ಸೇರಲು ಮುಂದಾಗಿದ್ದಾರೆ. ಸಚಿವ ಸ್ಥಾನ ಸಿಗದಿದ್ದಾಗ ಪಕ್ಷ ಬಿಡುವವರು ಇದ್ದಾರೆ. ಕಾಂಗ್ರೆಸ್‌ ಸೇರಲು ಬಿಜೆಪಿಯ ಹಲವು ಶಾಸಕರು, ಸಚಿವರು ತಯಾರಿದ್ದಾರೆ. ತುಮಕೂರು(Tumakuru) ಜಿಲ್ಲೆಯಲ್ಲೂ ಕೂಡ ಹಲವು ಬಿಜೆಪಿ ಶಾಸಕರು ಕಾಂಗ್ರೆಸ್‌ಗೆ ಬರಲಿದ್ದಾರೆ ಎಂದರು.

Karnataka BJP ಬಿಜೆಪಿಯಲ್ಲಿ ಮಹತ್ವದ ಬೆಳವಣಿಗೆ, ನಾಯಕರಿಗೆ ಕಟೀಲ್ ಖಡಕ್ ಎಚ್ಚರಿಕೆ ಸಂದೇಶ

ಸಚಿವ ಸಂಪುಟ ಪುನಾರಚನೆ(Cabinet Expansion) ಬಳಿಕ ರಾಜ್ಯ ರಾಜಕೀಯದಲ್ಲಿ(Politics) ಬೆಳವಣಿಗೆ ಆಗಲಿದೆ. ಅದು ಯಾವ ರೀತಿಯ ಬೆಳವಣಿಗೆಯೂ ಆಗಬಹುದು ಎಂದು ತಿಳಿಸಿದರು.

ಮಾಧುಸ್ವಾಮಿ ಪರ ಪರಂ ಬ್ಯಾಟಿಂಗ್‌

ತುಮಕೂರು: ಸಚಿವ ಮಾಧುಸ್ವಾಮಿ(Madhuswamy) ಅವರಿಗೆ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಕೈ ತಪ್ಪಿದ ಹಿನ್ನೆಲೆಯಲ್ಲಿ ಸಾಕಷ್ಟು ಚರ್ಚೆಗಳು ಆಗುತ್ತಿರುವ ಹಿನ್ನೆಲೆಯಲ್ಲಿ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್‌ ಅವರು ಮಾಧುಸ್ವಾಮಿ ಪರ ಬ್ಯಾಟ್‌ ಬೀಸಿದ್ದಾರೆ. 

ಸಚಿವ ಮಾಧುಸ್ವಾಮಿ ಸ್ವಲ್ಪ ಕೋಪಿಷ್ಠರಾದರೂ ಒಬ್ಬ ಸಮರ್ಥ ನಾಯಕ. ಬಿಜೆಪಿ ಸರ್ಕಾರದ(BJP Goverment) ಒಬ್ಬ ಕ್ರಿಯಾಶೀಲ ಸಚಿವ ಎಂದು ಪ್ರಶಂಸಿಸಿದ್ದಾರೆ. ತುಮಕೂರು ಜಿಲ್ಲೆಯಲ್ಲಿ ಉಸ್ತುವಾರಿಯಾಗಿ ಒಳ್ಳೆ ಕೆಲಸ ಮಾಡಿದ್ದಾರೆ. ಅವರನ್ನು ಜಿಲ್ಲೆಯ ಜವಾಬ್ದಾರಿಯಿಂದ ಮುಕ್ತಗೊಳಿಸಿದ್ದು ನಮಗೆ ನಿರಾಸೆಯಾಗಿದೆ. ಇದು ಬಿಜೆಪಿ ಸರ್ಕಾರದಿಂದ ತುಮಕೂರು ಜನತೆಗೆ ಮಾಡಿದ ಅನ್ಯಾಯ ಎಂದರು.

ಬಿಜೆಪಿ, ಜೆಡಿಎಸ್ ಶಾಸಕರು ಕಾಂಗ್ರೆಸ್ ಸಂಪರ್ಕದಲ್ಲಿ, ಈಶ್ವರಪ್ಪ ಹೇಳಿದ್ದಿಷ್ಟು

ಶಿವಮೊಗ್ಗ: ಜೆಡಿಎಸ್ ಮತ್ತು ಕಾಂಗ್ರೆಸ್‌ನಿಂದ ಬಂದ ಶಾಸಕರು ಆ ಪಕ್ಷದ ನಾಯಕರ ಜೊತೆ ಸಂಪರ್ಕದಲ್ಲಿದ್ದಾರೆ ಎಂಬ ಶಾಸಕ ಯತ್ನಾಳ್ ಹೇಳಿಕೆ ಅವರ ವೈಯುಕ್ತಿಕ ಅಭಿಪ್ರಾಯವೇ ಹೊರತು ಪಕ್ಷದ್ದಲ್ಲ. ಈ ರೀತಿಯ ಹೇಳಿಕೆಗೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ. ಎಸ್. ಈಶ್ವರಪ್ಪ(KS Eshwarappa) ಹೇಳಿದ್ದರು.

Karnataka Politics ಸಿದ್ದರಾಮಯ್ಯಗೆ ರಮೇಶ್ ಜಾರಕಿಹೊಳಿ ಸವಾಲ್!

ಶಿವಮೊಗ್ಗದಲ್ಲಿ(Shivamogga) ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಮಾತನ್ನು ಯಾರಾದರೂ ಬಿಜೆಪಿ ಶಾಸಕರು ಹೇಳಿದ್ದಾರಾ? ಇದು ಯತ್ನಾಾಳ್ ಅವರ ವೈಯುಕ್ತಿಕ ಅಭಿಪ್ರಾಯ ಮಾತ್ರ ಎಂದರು.
ಇದೇ ರೀತಿ ಬಸನಗೌಡ ಪಾಟೀಲ್ ಯತ್ನಾಳ್(Basangouda Patil Yatnal) ಮತ್ತು ಎಂ.ಪಿ. ರೇಣುಕಾಚಾರ್ಯ ಅಥವಾ ಬೆಳಗಾವಿ ನಾಯಕರುಗಳ ಪರಸ್ಪರ  ಭೇಟಿ ಮತ್ತು ಚರ್ಚೆಯ ಬಗ್ಗೆ ವಿಶೇಷ ಅರ್ಥ ಬೇಕಾಗಿಲ್ಲ. ಮುಂದಿನ ಚುನಾವಣೆಯ ಕುರಿತು ಮಾತನಾಡಿದರಬಹುದು. ಯಾರು ಬೇಕಾದರೂ ಭೇಟಿಯಾಗಬಹುದು, ಚರ್ಚೆ ನಡೆಸಬಹುದು. ಈ ವಿಷಯದಲ್ಲಿ ಋಣಾತ್ಮಕವಾಗಿ ಯೋಚಿಸುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಸರ್ಕಾರದ ಬೊಕ್ಕಸದಲ್ಲಿ ಹಣವಿಲ್ಲ, ಸಾಲದಲ್ಲಿಯೇ ಮುಳುಗಿ ಸಾಲದಲ್ಲಿಯೇ ಏಳುತ್ತಿದೆ ಎಂಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತಿಗೆ ಟಾಂಗ್ ನೀಡಿದ ಸಚಿವ ಈಶ್ವರಪ್ಪ, ಸಿದ್ದರಾಮಯ್ಯ ಸಿಎಂ ಆಗಿದ್ದಾಗ ವಜ್ರ ವೈಡೂರ್ಯಗಳನ್ನು ರಸ್ತೆ ಮೇಲಿಟ್ಟು ಮಾಡಲಾಗುತ್ತಿತ್ತಾ? ಯಾರ ಮನೆಗೂ ಬೀಗವನ್ನೇ ಹಾಕದೆ ಇರಲಾಗುತ್ತಿತ್ತಾ? ಆಗ ರಾಜ್ಯವು ವಿಜಯನಗರದ ಸಾಮ್ರಾಜ್ಯದ ಒಂದು ಭಾಗವಾಗಿತ್ತಾ? ಎಂದು ಪ್ರಶ್ನಿಸಿದರು.

ತಾನು ಮುಖ್ಯಮಂತ್ರಿಯಾಗಿದ್ದಾಗ ಒಂದು ರುಪಾಯಿ ಕೂಡ ಸಾಲ ಮಾಡಿಲ್ಲ ಎಂದು ಸಿದ್ದರಾಮಯ್ಯ ಹೇಳಲಿ ನೋಡೋಣ ಎಂದು ಸವಾಲು ಹಾಕಿದ ಈಶ್ವರಪ್ಪ,  ಸರ್ಕಾರ ಎಂದಾಗ ಸಾಲ ಮಾಡುವುದು, ತೀರಿಸುವುದೂ ಎಲ್ಲವೂ ಇರುತ್ತದೆ. ಅರ್ಥ ಸಚಿವರಾದ ಸಿದ್ದರಾಮಯ್ಯನವರಿಗೆ ಇದೆಲ್ಲ ಗೊತ್ತೇ ಇರುತ್ತದೆ. ಈ ಬಗ್ಗೆ ಸಿದ್ದರಾಮಯ್ಯಗೆ ಪಾಠ ಮಾಡಲು ನಾನು ಎಲ್‌ಕೆಜಿ ಟೀಚರ್ ಅಲ್ಲ ಎಂದು ಹೇಳಿದರು.
 

Latest Videos
Follow Us:
Download App:
  • android
  • ios