Asianet Suvarna News Asianet Suvarna News

ರಾಜ್ಯದಲ್ಲಿ ಭಾರತ ಐಕ್ಯತಾ ಯಾತ್ರೆ ಯಶಸ್ವಿ, ನನ್ನ ಅವಧಿಯಲ್ಲಿ ನಡೆದಿದೆ ಎಂಬ ಹೆಮ್ಮೆ: ಡಿಕೆಶಿ

ರಾಹುಲ್‌ ಗಾಂಧಿ ನೇತೃತ್ವದ ಭಾರತ ಐಕ್ಯತಾ ಯಾತ್ರೆಯಿಂದ ನನಗಿಂತ ದೇಶಕ್ಕೆ, ರಾಜ್ಯಕ್ಕೆ, ಪಕ್ಷಕ್ಕೆ ಹಾಗೂ ನೊಂದ ಜನರಿಗೆ ಲಾಭ ಆಗಿದೆ. ರಾಹುಲ್‌ ಗಾಂಧಿಯವರ ನಡಿಗೆ ಜನಸಾಮಾನ್ಯರ ಕಡೆಗೆ ಆಗಿತ್ತು. ಪಕ್ಷದ ಅಧ್ಯಕ್ಷನಾಗಿ ನನ್ನ ಅವಧಿಯಲ್ಲಿ ಇಂತಹ ಯಾತ್ರೆ ನಡೆದಿದೆ ಎಂಬುದೇ ಹೆಮ್ಮೆ ಎಂದು ಡಿಕೆಶಿ ಹೇಳಿದ್ದಾರೆ.

DK shivakumar happy about bharat jodo yatra success in karnataka gow
Author
First Published Oct 25, 2022, 3:03 PM IST

ಬೆಂಗಳೂರು (ಅ.25): ರಾಹುಲ್‌ ಗಾಂಧಿ ನೇತೃತ್ವದ ಭಾರತ ಐಕ್ಯತಾ ಯಾತ್ರೆ ಅಥವಾ ಭಾರತ್ ಜೋಡೋ ಯಾತ್ರೆ ರಾಜ್ಯದ ಜನರ ಸಹಕಾರದಿಂದ ರಾಜ್ಯದಲ್ಲಿ ಯಶಸ್ವಿಯಾಗಿದೆ. ಯಾತ್ರೆಯಿಂದ ನನಗಿಂತ ದೇಶಕ್ಕೆ, ರಾಜ್ಯಕ್ಕೆ, ಪಕ್ಷಕ್ಕೆ ಹಾಗೂ ನೊಂದ ಜನರಿಗೆ ಲಾಭ ಆಗಿದೆ. ರಾಹುಲ್‌ ಗಾಂಧಿಯವರ ನಡಿಗೆ ಜನಸಾಮಾನ್ಯರ ಕಡೆಗೆ ಆಗಿತ್ತು. ಪಕ್ಷದ ಅಧ್ಯಕ್ಷನಾಗಿ ನನ್ನ ಅವಧಿಯಲ್ಲಿ ಇಂತಹ ಯಾತ್ರೆ ನಡೆದಿದೆ ಎಂಬುದೇ ಹೆಮ್ಮೆ. ಮೇಕೆದಾಟು ಪಾದಯಾತ್ರೆ, ಸ್ವಾತಂತ್ರ್ಯ ನಡಿಗೆ, ಐಕ್ಯತಾ ಯಾತ್ರೆ ಮತ್ತೊಮ್ಮೆ ಮಾಡಲಾಗುವುದಿಲ್ಲ. ಇದು ನನ್ನ ಸೌಭಾಗ್ಯ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ. ಸೋಮವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಯಾತ್ರೆಯ ಅಂತಿಮ ದಿನ ರಾಯಚೂರಿನಲ್ಲಿ 1 ಲಕ್ಷಕ್ಕೂ ಹೆಚ್ಚು ಜನರು ಸೇರಿದ್ದರು. ಇವರೆಲ್ಲರೂ ಎಲ್ಲಿಂದ ಬಂದರು ಎನ್ನುವಷ್ಟು ಆಶ್ಚರ್ಯವಾಗುವಂತೆ ಯಾತ್ರೆ ಯಶಸ್ವಿಯಾಗಿದೆ.  ಇಡೀ ದೇಶದ ರಾಜಕಾರಣ ವನ್ನು ಹೊಸ ದಿಕ್ಕಿಗೆ ತೆಗೆದುಕೊಂಡು ಹೋಗುವ ಆಂದೋಲನ ಇದು.  ಇದು ಕೇವಲ ಯಾತ್ರೆಯಲ್ಲ  ಇದರಿಂದ ಪಕ್ಷ ಹಾಗೂ ಜನರಿಗೆ ಲಾಭವಾಗಿದೆ ಎಂಬುದು ಸಮಾಧಾನದ ವಿಚಾರ ಎಂದರು.

ಯುವಕರು, ಮಹಿಳೆಯರು, ಮಕ್ಕಳು ಎಲ್ಲರೂ ಸಾಕಷ್ಟು ವಿಶ್ವಾಸ ತೋರಿಸಿದ್ದಾರೆ.  ಯುವಕರು, ಮಹಿಳೆಯರು, ಮಕ್ಕಳು ಎಲ್ಲರೂ ಸಾಕಷ್ಟು ವಿಶ್ವಾಸ ತೋರಿಸಿದ್ದಾರೆ.  ಬೆಳಿಗ್ಗೆ ಐದೂವರೆ ಗೆ ಎದ್ದು ರೆಡಿಯಾಗಿ ರಾಹುಲ್ ಗಾಂಧಿ ಪಾದಯಾತ್ರೆ ಆರಂಭ ಮಾಡ್ತಾ ಇದ್ರು.  ಪ್ರತಿದಿನ ರಾಹುಲ್ ಗಾಂಧಿ ನಡೆಯುತ್ತಿದ್ದರು. ಸಾಕಷ್ಟು ಸ್ಪೀಡಾಗಿ ನಡೀತಾ ಇದ್ರು. ನಾವೇ ಅದಕ್ಕೆ ಹೊಂದಿಕೊಂಡು ನಡೀತಾ ಇದ್ವಿ. ಅಧಿಕಾರಕ್ಕಾಗಿ ಅಥವಾ ಪದವಿಗಾಗಿ ರಾಹುಲ್ ಪಾದಯಾತ್ರೆ ಮಾಡಲಿಲ್ಲ. ಜನರು ಅವರಿಗೆ ತೋರುತ್ತಿರುವ ಪ್ರೀತಿಯ ಋಣ ತೀರಿಸಲು ಪಾದಯಾತ್ರೆ ಮಾಡ್ತಾ ಇದೀನಿ ಅಂದರು. ವಿವಿಧ ವರ್ಗಗಳ ಜನರ ಕಷ್ಟ ಸುಖ ಗಳನ್ನು ತಿಳಿದುಕೊಂಡರು. ಎಲ್ಲಾ ವರ್ಗದ ಸಮುದಾಯಗಳ ದೇವಸ್ಥಾನ ಗಳಿಗೂ ರಾಹುಲ್ ಭೇಟಿ ಕೊಟ್ಟರು. ರಾಹುಲ್ ಪಾದಯಾತ್ರೆ ಸಂಧರ್ಭದ ವಿವಿಧ ಘಟನಾವಳಿಗಳನ್ನು ಫೋಟೋ ಎಕ್ಸಿಬಿಷನ್, ಮತ್ತು ಡಾಕ್ಯುಮೆಂಟರಿ ಮಾಡುವ ಉದ್ದೇಶ ಇದೆ ಎಂದು ಇದೇ ವೇಳೆ ಡಿಕೆಶಿ ಹೇಳಿದ್ದಾರೆ.

ರಾಜ್ಯಾದ್ಯಂತ ಇನ್ನು ಕಾಂಗ್ರೆಸ್‌ ಬಸ್‌ ಯಾತ್ರೆ: ರಾಜ್ಯದಲ್ಲಿ ಭಾರತ ಐಕ್ಯತಾ ಯಾತ್ರೆ ಯಶಸ್ವಿಯಾದ ಬೆನ್ನಲ್ಲೇ ರಾಜ್ಯಾದ್ಯಂತ ಎಲ್ಲಾ ನಾಯಕರು ಸೇರಿ ಸಾಮೂಹಿಕ ನಾಯಕತ್ವದಲ್ಲಿ ಬಸ್‌ ಯಾತ್ರೆ ನಡೆಸುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಸ್‌ ಯಾತ್ರೆ ವಿಚಾರವಾಗಿ ಮಂಗಳವಾರ ದೆಹಲಿಯಲ್ಲಿ ಸಭೆ ನಿಗದಿಯಾಗಿತ್ತು. ಆದರೆ, ನನಗೆ ಬರಲು ಆಗುವುದಿಲ್ಲ ಎಂದು ಹೇಳಿದ್ದೇನೆ. ಹೀಗಾಗಿ ಬುಧವಾರ ಹೋಗಿ ಹಿರಿಯ ನಾಯಕರೊಂದಿಗೆ ಕುಳಿತು ಚರ್ಚಿಸಿ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು. ಇದು ಕೇವಲ ನಾನೊಬ್ಬನೇ ತೀರ್ಮಾನಿಸುವ ವಿಚಾರವಲ್ಲ’ ಎಂದು ಹೇಳಿದರು.

 

ರಾಹುಲ್‌ ಟೀಕಾಕಾರರಿಗೆ ಯಾತ್ರೆ ಉತ್ತರ: ಸಿದ್ದರಾಮಯ್ಯ

‘ಪಕ್ಷದ ಹಿರಿಯ ನಾಯಕರು ಭಾರತ ಐಕ್ಯತಾ ಯಾತ್ರೆಯ ವೇಳೆ ಚರ್ಚೆ ನಡೆಸಿದ್ದು, ಯಾವ ವಿಚಾರದಲ್ಲಿ ಸುಧಾರಣೆ ಆಗಬೇಕು ಎಂಬ ಬಗ್ಗೆಯೂ ಚರ್ಚೆಯಾಗಿದೆ. ರಾಹುಲ್‌ ಗಾಂಧಿ ಅವರು ನಾಯಕರನ್ನು ಕೂರಿಸಿಕೊಂಡು ಹಲವು ವಿಚಾರದ ಬಗ್ಗೆ ಚರ್ಚೆ ಮಾಡಿದ್ದಾರೆ. ಎಲ್ಲ ನಾಯಕರ ಅಭಿಪ್ರಾಯವನ್ನೂ ಸಂಗ್ರಹಿಸಿದ್ದಾರೆ’ ಎಂದರು.

ಕರ್ನಾಟಕದಾದ್ಯಂತ ಇನ್ನು ಕಾಂಗ್ರೆಸ್‌ ಬಸ್‌ ಯಾತ್ರೆ: ಡಿ.ಕೆ.ಶಿವಕುಮಾರ್‌

‘ಬಸ್‌ ಯಾತ್ರೆಯಲ್ಲಿ ಎಲ್ಲರೂ ಇರುತ್ತಾರಾ?’ ಎಂಬ ಪ್ರಶ್ನೆಗೆ, ‘ನಾವೆಲ್ಲಾ ಸಾಮೂಹಿಕ ನಾಯಕತ್ವದಲ್ಲೇ ಮುಂದೆ ಸಾಗುತ್ತೇವೆ. ಒಟ್ಟಾರೆ ಐಕ್ಯತಾ ಯಾತ್ರೆಯ ಸಂದೇಶವನ್ನು ಇಲ್ಲಿಗೆ ಬಿಡುವುದಿಲ್ಲ. ಪ್ರತಿ ಮನೆ-ಮನೆಗೂ ತೆಗೆದುಕೊಂಡು ಹೋಗುತ್ತೇವೆ. ಈ ನಿಟ್ಟಿನಲ್ಲಿ ಯಾತ್ರೆ ನಡೆಸುವ ಬಗ್ಗೆ ಬುಧವಾರ ದೆಹಲಿಯಲ್ಲಿ ಹಿರಿಯ ನಾಯಕರೊಂದಿಗೆ ಚರ್ಚೆಯಾಗಲಿದೆ’ ಎಂದು ಮಾಹಿತಿ ನೀಡಿದರು.

Follow Us:
Download App:
  • android
  • ios