Asianet Suvarna News Asianet Suvarna News

ಒಕ್ಕಲಿಗರ ಸಾರಥ್ಯದ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಗೆಲುವು ಖಾಯಂ: ಡಿಕೆಶಿಗಿರುವ ಪ್ರಮುಖ ಸವಾಲು ಇದು

ಕಾಂಗ್ರೆಸ್ ಹೈಕಮಾಂಡ್ ಡಿಕೆ ಶಿವಕುಮಾರ್ ಅವರನ್ನ ಕೆಪಿಸಿಸಿ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಅಧಿಕೃತ ಆದೇಶ ಹೊರಡಿಸಿದೆ. ಡಿಕೆಶಿ ಕೆಪಿಸಿಸಿ ಅಧಕ್ಷರಾಗಿ ನೇಮಕ ಆಗುತ್ತಿದ್ದಂತೆ ಕರ್ನಾಟಕದಲ್ಲಿ ಜಾತಿ ಲೆಕ್ಕಾಚಾರ ಜೋರಾಗಿದೆ. 

Dk Shivakumar 10th vokkaliga Leader To Head Karnataka Congress chief
Author
Bengaluru, First Published Mar 11, 2020, 6:14 PM IST

ಬೆಂಗಳೂರು, [ಮಾ.11]: ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿ ಡಿಕೆ ಶಿವಕುಮಾರ್ ನೇಮಕಗೊಂಡಿದ್ದಾರೆ. ಈ ಮೂಲಕ ಕೆಪಿಸಿಸಿ ಸಾರಥ್ಯ ವಹಿಸುತ್ತಿರುವ ಒಕ್ಕಲಿಗ ಸಮುದಾಯದ 10ನೇ ನಾಯಕ ಡಿಕೆ ಶಿವಕುಮಾರ್. 

ಈ ಹಿಂದೆ ಕೆಪಿಸಿಸಿ ಅಧ್ಯಕ್ಷರಾಗಿ ಎಚ್.ಕೆ. ವೀರಣ್ಣಗೌಡರು 2 ಬಾರಿ ಕೆಪಿಸಿಸಿ ಅಧ್ಯಕ್ಷರಾಗಿರೋದನ್ನು ಪರಿಗಣಿಸಿದರಷ್ಟೇ. ಇದೀಗ ಕೆಪಿಸಿಸಿ ಸಾರಥ್ಯ ವಹಿಸಿದ ಡಿಕೆಶಿ ಒಕ್ಕಲಿಗ ನಾಯಕ.

ಡಜನ್ ಸವಾಲು ಗೆದ್ದರಷ್ಟೇ ನೂತನ ಕೆಪಿಸಿಸಿ ಅಧ್ಯಕ್ಷ ಡಿಕೆಶಿಗೆ ಕಾಂಗ್ರೆಸ್‌ನಲ್ಲಿ ಉಳಿಗಾಲ

ಸ್ವಾತಂತ್ರ್ಯ ನಂತರ ಒಕ್ಕಲಿಗರ ಸಾರಥ್ಯದಲ್ಲಿ ನಡೆದ ಎಲ್ಲಾ ಚುನಾವಣೆಯಲ್ಲೂ ಕಾಂಗ್ರೆಸ್ ಗೆಲುವು ಸಾಧಿಸಿರೋ ಅಂಕಿ ಅಂಶಗಳ ಚರ್ಚೆ ಶುರುವಾಗಿದೆ. ಸ್ವಾತಂತ್ರ್ಯ ನಂತರ ಒಕ್ಕಲಿಗ ಸಮುದಾಯದ ಮೂವರು ನಾಯಕರ ಸಾರಥ್ಯದಲ್ಲಿ  ಕಾಂಗ್ರೆಸ್ ಚುನಾವಣೆ ಎದುರಿಸಿದೆ. 

ಸ್ವಾತಂತ್ರ್ಯ ಬಳಿಕ ಒಕ್ಕಲಿಗ ಸಮುದಾಯದ 7 ನಾಯಕರು ಕೆಪಿಸಿಸಿ ಅಧ್ಯಕ್ಷರಾಗಿದ್ದರೂ ಚುನಾವಣೆ ಎದುರಿಸಿದವರು ಮೂವರು ಮಾತ್ರ. ಚುನಾವಣೆ ಇಲ್ಲದ ಕಾಲದಲ್ಲಿ ಕೆಪಿಸಿಸಿ ಸಾರಥ್ಯ ವಹಿಸಿದ್ದ ಒಕ್ಕಲಿಗ ಸಮುದಾಯದ ನಾಲ್ವರು.

ಕೊನೆಗೂ ಕೆಪಿಸಿಸಿ ಅಧ್ಯಕ್ಷ, ಕಾರ್ಯಾಧ್ಯಕ್ಷರ ನೇಮಕ: ಸಿದ್ದರಾಮಯ್ಯಗೆ ಮೇಲುಗೈ

 ಯಶೋಧರಾ ದಾಸಪ್ಪ (1948), ಎಚ್.ಕೆ. ವೀರಣ್ಣ ಗೌಡ (1953, 1959) ಎರಡು ಬಾರಿ ಅಧ್ಯಕ್ಷರಾಗಿದ್ದರು.  ಸಾಹುಕಾರ ಚನ್ನಯ್ಯ (1954), ವಿ. ವೆಂಕಟಪ್ಪ (1956). 1952ರಲ್ಲಿ ಕೆಂಗಲ್ ಹನುಮಂತಯ್ಯ, 1983ರಲ್ಲಿ ಕೆ. ಮಲ್ಲಣ್ಣ, 1999ರಲ್ಲಿ ಎಸ್.ಎಂ. ಕೃಷ್ಣ ನೇತೃತ್ವದಲ್ಲಿ ಕಾಂಗ್ರೆಸ್ ಚುನಾವಣೆ ಎದುರಿಸಿದೆ. 

ಕುಂಚಿಟಿಗ ಒಕ್ಕಲಿಗ ಸಮುದಾಯದ ಕೆ. ಮಲ್ಲಣ್ಣ ನಾಮಕಾವಸ್ಥೆಗಷ್ಟೇ ಕೆಪಿಸಿಸಿ ಅಧ್ಯಕ್ಷರಾಗಿದ್ದರು. ತದನಂತರ ಗುಂಡೂರಾವ್  ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿತರಾಗಿ ಕಾಂಗ್ರೆಸ್ ಗೆ ಸೋಲಾಯಿತು. 

ಡಿಕೆ ಶಿವಕುಮಾರ್‌ಗೆ ಕೆಪಿಸಿಸಿ ಒಲಿಯಲು ಈ ಲೆಕ್ಕಾಚಾರವೇ ಕಾರಣ..!

ಈ ಪೈಕಿ ಕೆಂಗಲ್ ಹನುಮಂತಯ್ಯ ಮತ್ತು ಎಸ್.ಎಂ. ಕೃಷ್ಣ ಅವರು ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತಂದರು. ಈಗ ಡಿಕೆಶಿಗಿರುವ ಪ್ರಮುಖ ಸವಾಲು ಎಂದರೆ ಚುನಾವಣೆ ತನಕ ಕೆಪಿಸಿಸಿ ಸಾರಥ್ಯ ಉಳಿಸಿಕೊಳ್ಳುವುದು ಮತ್ತು ಸಿಎಂ ಅಭ್ಯರ್ಥಿ ಎಂದು ಬಿಂಬಿತವಾಗುವುದು.

ಕೆಪಿಸಿಸಿ ಅಧ್ಯಕ್ಷರಾಗಿದ್ದ ಒಕ್ಕಲಿಗ ನಾಯಕರ ವಿವರ:
1939 - ಎಚ್.ಸಿ. ದಾಸಪ್ಪ
1946 - ಕೆ.ಸಿ ರೆಡ್ಡಿ
1948 - ಯಶೋಧರಾ ದಾಸಪ್ಪ
1950 - ಕೆಂಗಲ್ ಹನುಮಂತಯ್ಯ
1953 - ಎಚ್ಕೆ. ವೀರಣ್ಣಗೌಡ
1954 - ಸಾಹುಕಾರ ಚನ್ನಯ್ಯ
1956 - ವಿ. ವೆಂಕಟಪ್ಪ
1959 - ಎಚ್.ಕೆ. ವೀರಣ್ಣಗೌಡ
1982 - ಕೆ. ಮಲ್ಲಣ್ಣ
1999 - ಎಸ್.ಎಂ. ಕೃಷ್ಣ
2020 - ಡಿ.ಕೆ. ಶಿವಕುಮಾರ್

Follow Us:
Download App:
  • android
  • ios